ಕನ್ನಡ ಚಿತ್ರರಂಗದಲ್ಲಿ ಇದುವರೆಗೆ ಗ್ಲಾಮರಸ್ ಹಾಗೂ ಟ್ರೆಡಿಷನಲ್ ಪಾತ್ರಗಳ ಮೂಲಕ ಗಮನ ಸೆಳೆದಿರುವ ನಟಿ ಪಾವನಾ ಗೌಡ ಇದೀಗ ವಿಭಿನ್ನ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಇದೇ ಮೊದಲ ಬಾರಿಗೆ ರಗಡ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ನಟನೆಯ ಮತ್ತೊಂದು ಮುಖವನ್ನು ಪರಿಚಯಿಸಲು ಸಿದ್ಧರಾಗಿದ್ದಾರೆ.
ಪಾವನಾ ಗೌಡ ಅವರ ಹೊಸ ಪಾತ್ರದಲ್ಲಿ ಡಿಫರೆಂಟ್ ಲುಕ್ ಹಾಗೂ ಖಡಕ್ ಮ್ಯಾನರಿಸಂ ಇರಲಿದೆ ಎನ್ನಲಾಗಿದೆ. ಈ ಪಾತ್ರಕ್ಕಾಗಿ ನಟಿ ತಮ್ಮ ಲುಕ್ ಹಾಗೂ ಬಾಡಿ ಲ್ಯಾಂಗ್ವೇಜ್‌ನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದು, ಪಾತ್ರಕ್ಕೆ ತಕ್ಕಂತೆ ತಯಾರಿ ನಡೆಸುತ್ತಿದ್ದಾರೆ.
ಈ ಹೊಸ ಪ್ರಯತ್ನದ ಮೂಲಕ ಪಾವನಾ ಗೌಡ ತಮ್ಮ ಅಭಿನಯ ಸಾಮರ್ಥ್ಯದ ಮತ್ತೊಂದು ಆಯಾಮವನ್ನು ಪ್ರೇಕ್ಷಕರಿಗೆ ತೋರಿಸಲು ಮುಂದಾಗಿದ್ದಾರೆ. ಅವರ ರಗಡ್ ಲುಕ್ ಮತ್ತು ಪಾತ್ರ ಸಿನಿಮಾದಲ್ಲಿ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದ್ದು, ಚಿತ್ರದ ಕುರಿತು ಹೆಚ್ಚಿನ ಅಪ್‌ಡೇಟ್‌ಗಳಿಗಾಗಿ ಸಿನಿಪ್ರಿಯರು ಕಾಯುತ್ತಿದ್ದಾರೆ.








