ಆಶಾ ಕಾರ್ಯಕರ್ತೆಯರಿಗೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ್ದ ಭರವಸೆ ಏನು..?

mirrortvkannada.com
Date : 26 November 2026, 11:26 pm Posted By : MIRROR TV KANNADA

ಆಶಾ ಕಾರ್ಯಕರ್ತೆಯರಿಗೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ್ದ ಭರವಸೆ ಏನು..?

ಕಾಂಗ್ರೆಸ್ ಪಕ್ಷವು ಆಶಾಕಾರ್ಯಕರ್ತೆಯರಿಗೆ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆ ಏನು ಎನ್ನುವುದು ಇದೀಗ ಗಂಭೀರ ಚರ್ಚೆಗೆ ಕಾರಣವಾಗಿದೆ. ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಸಂಸದ ತೇಜಸ್ವಿ ಸೂರ್ಯ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ, ಅಧಿಕಾರದಲ್ಲಿರುವವರಿಗೆ ಮಾತಿನ ಜವಾಬ್ದಾರಿ ಇರಬೇಕು, ಕೊಟ್ಟ ಭರವಸೆಯನ್ನು ಉಳಿಸಿಕೊಳ್ಳುವ ಬದ್ಧತೆಯೂ ಇರಬೇಕು. ಡಿ.ಕೆ ಶಿವಕುಮಾರ್ ಅವರೇ, ಆಶಾ ಕಾರ್ಯಕರ್ತೆಯರ ವಿಚಾರದಲ್ಲಿ ನೀವು ವಾದ ಮಾಡುವುದಕ್ಕೂ ಮುಂಚೆ ಈ ಪ್ರಶ್ನೆಗಳಿಗೆ ಉತ್ತರಿಸಿ.
1. ಕಾಂಗ್ರೆಸ್ ಕೊಟ್ಟ ಮಾತು ಎಲ್ಲಿ?
ಚುನಾವಣಾ ಪ್ರಣಾಳಿಕೆಯಲ್ಲಿ ₹8,000, ಅಧಿಕಾರಕ್ಕೆ ಬಂದ ಮೇಲೆ ₹10,000. ಇದು ಕಾಂಗ್ರೆಸ್ ಆಶಾ ಕಾರ್ಯಕರ್ತೆಯರಿಗೆ ನೀಡಿದ ಭರವಸೆ. ಈಗ ಆ ಭರವಸೆ ಈಡೇರಿದೆಯೇ? ಇಲ್ಲ, ಹಾಗಿದ್ದರೂ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಹೇಳುವ ಧೈರ್ಯ ಎಲ್ಲಿಂದ ಬಂತು? ನಿಮ್ಮದೇ ಭರವಸೆಯ ವಿಡಿಯೋ ಸಾಕ್ಷಿಯಾಗಿ ನಿಮ್ಮ ಮುಂದಿದೆ.

2. ಕೇಂದ್ರದ ನೆರವನ್ನು ನಿರಾಕರಿಸುವುದೇಕೆ?
ಮಾರ್ಚ್ 2025ರಲ್ಲಿ ಮೋದಿ ಸರ್ಕಾರವು ಕೇಂದ್ರದ ನಿಗದಿತ ಮಾಸಿಕ ಪ್ರೋತ್ಸಾಹಧನವನ್ನು ₹2,000ದಿಂದ ₹3,500ಕ್ಕೆ ಹೆಚ್ಚಿಸಿದೆ. ವಿಮಾ ಸೌಲಭ್ಯ, ಪಿಂಚಣಿ ಪ್ರೀಮಿಯಂಗೆ ಶೇ.50ರಷ್ಟು ನೆರವು ಹಾಗೂ ಆಯುಷ್ಮಾನ್ ಭಾರತ್ ಅಡಿಯಲ್ಲಿ ಕುಟುಂಬಕ್ಕೆ ₹5 ಲಕ್ಷದವರೆಗೆ ಆರೋಗ್ಯ ರಕ್ಷಣೆಯನ್ನೂ ಒದಗಿಸುತ್ತಿದೆ.
ಇನ್ನು ರಾಜ್ಯ ಸರ್ಕಾರದ ಲೆಕ್ಕ ಕೊಡಿ. 2013-2018ರ ಕಾಂಗ್ರೆಸ್ ಆಡಳಿತದಲ್ಲೂ ಆಶಾ ಕಾರ್ಯಕರ್ತೆಯರ ರಾಜ್ಯ ಗೌರವಧನ ಹೆಚ್ಚಳವಾಗಿಲ್ಲ. 2023ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ನಂತರವೂ ಹೆಚ್ಚುವರಿ ರಾಜ್ಯ ಗೌರವಧನ ನೀಡಿಲ್ಲ ಎಂಬುದು ನಮ್ಮ ಪ್ರಶ್ನೆ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ, ನಿಮ್ಮ ವೈಫಲ್ಯವನ್ನು ಕೇಂದ್ರದ ಮೇಲೆ ಹೊರಿಸುವುದರಿಂದ ನಿಮ್ಮ ಜವಾಬ್ದಾರಿ ಮುಗಿಯುವುದಿಲ್ಲ.
ಭರವಸೆ ಕೊಟ್ಟಿದ್ದು ನೀವು, ಕೇಳುತ್ತಿರುವುದು ಆಶಾ ಕಾರ್ಯಕರ್ತೆಯರು, ಉತ್ತರಿಸಬೇಕಿರುವುದು ನಿಮ್ಮ ಸರ್ಕಾರ. ಆಶಾ ಕಾರ್ಯಕರ್ತೆಯರ ಹೋರಾಟ ನಿಮಗೆ ಒತ್ತಡವಾಗಿರಬಹುದು. ಆದರೆ ಅವರಿಗೆ ಅದು ಬದುಕಿನ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟ. ಅವರ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ಸುಳ್ಳು ಹೇಳಿಕೆಗಳ ಮೂಲಕ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬೇಡಿ ಎಂದಿದ್ದಾರೆ.

⬇ DOWNLOAD
×

Editor Reporter

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్