ದಾಂಪತ್ಯ ಜೀವನದಲ್ಲಿ ಬಿರುಗಾಳಿ: ಮದುವೆಯಾಗಿ ನಾಲ್ಕೇ ವರ್ಷಕ್ಕೆ ನಟಿ ಮೌನಿ ರಾಯ್ ಸಂಸಾರದಲ್ಲಿ ಬಿರುಕು!

ಬಾಲಿವುಡ್‌ನ ಖ್ಯಾತ ನಟಿ ಮೌನಿ ರಾಯ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಇದೀಗ ಸಿನಿಮಾ ರಂಗದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಉದ್ಯಮಿ ಸೂರಜ್ ನಂಬಿಯಾರ್ ಅವರೊಂದಿಗೆ ಅದ್ಧೂರಿಯಾಗಿ ಹಸೆಮಣೆ ಏರಿದ್ದ ಈ ಜೋಡಿಯ ಸಂಸಾರದಲ್ಲಿ ಕೇವಲ ನಾಲ್ಕೇ ವರ್ಷಕ್ಕೆ ಭಿನ್ನಾಭಿಪ್ರಾಯಗಳು ಭುಗಿಲೆದ್ದಿವೆ ಎಂಬ ಮಾತುಗಳು ಬಿ-ಟೌನ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿವೆ. ಯಾವಾಗ್ಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಈ ಕ್ಯೂಟ್ ಕಪಲ್ ನಡುವೆ ಇದೀಗ ಎಲ್ಲವೂ ಸರಿಯಿಲ್ಲ ಎಂಬ ವದಂತಿಗಳು ಹರಿದಾಡುತ್ತಿವೆ.

2022ರ ಜನವರಿಯಲ್ಲಿ ಗೋವಾದಲ್ಲಿ ಮಲಯಾಳಿ ಹಾಗೂ ಬಂಗಾಳಿ ಸಂಪ್ರದಾಯದಂತೆ ಅತ್ಯಂತ ವಿಜೃಂಭಣೆಯಿಂದ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಮದುವೆಯಾದಾಗಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಪ್ರೇಮಭರಿತ ಫೋಟೋಗಳನ್ನು ಹಾಗೂ ಪ್ರವಾಸದ ಖುಷಿಯ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದ ಇವರ ನಡುವೆ ಇದ್ದಕ್ಕಿದ್ದಂತೆ ಕಂದಕ ಸೃಷ್ಟಿಯಾಗಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಇವರಿಬ್ಬರೂ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಳ್ಳದಿರುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಕೆಲವು ದಿಢೀರ್ ಬದಲಾವಣೆಗಳು ಈ ಬಿರುಕಿನ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿವೆ.

ಸದ್ಯ ಈ ವಿಚಾರವಾಗಿ ಮೌನಿ ರಾಯ್ ಆಗಲಿ ಅಥವಾ ಅವರ ಪತಿ ಸೂರಜ್ ನಂಬಿಯಾರ್ ಆಗಲಿ ಯಾವುದೇ ಅಧಿಕೃತ ಸ್ಪಷ್ಟನೆಯನ್ನು ನೀಡಿಲ್ಲ. ತಮ್ಮ ನೆಚ್ಚಿನ ನಟಿಯ ಸುಂದರ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿರುವ ಸುದ್ದಿ ಕೇಳಿ ಅಭಿಮಾನಿಗಳು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಈ ಸುದ್ದಿ ಕೇವಲ ಗಾಳಿಸುದ್ದಿಯಾಗಿರಲಿ, ಇಬ್ಬರ ನಡುವಿನ ಸಣ್ಣಪುಟ್ಟ ಮುನಿಸು ಅಥವಾ ಭಿನ್ನಾಭಿಪ್ರಾಯಗಳು ಶೀಘ್ರವೇ ಬಗೆಹರಿದು ಜೋಡಿ ಮತ್ತೆ ಮೊದಲಿನಂತೆ ಖುಷಿಯಾಗಿರಲಿ ಎಂದು ಆಪ್ತರು ಹಾಗೂ ಅಭಿಮಾನಿಗಳು ಆಶಿಸುತ್ತಿದ್ದಾರೆ.

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్