114 ರಫೇಲ್ ಜೆಟ್‌ ಖರೀದಿಗೆ ವಿನಂತಿ ಪತ್ರ ಅಂತಿಮಗೊಳಿಸಿದ ಭಾರತ: ಶೀಘ್ರದಲ್ಲೇ ಫ್ರಾನ್ಸ್‌ಗೆ ರವಾನೆ

ಭಾರತೀಯ ವಾಯುಪಡೆಯನ್ನು (IAF) ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬೃಹತ್ ಹೆಜ್ಜೆಯಿಟ್ಟಿದೆ. ಬಹು ನಿರೀಕ್ಷಿತ 114 ಮಲ್ಟಿ-ರೋಲ್ ಫೈಟರ್ ಏರ್‌ಕ್ರಾಫ್ಟ್ (MRFA) ಯೋಜನೆಯಡಿ ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ವಿನಂತಿ ಪತ್ರವನ್ನು (LoR – Letter of Request) ಭಾರತೀಯ ರಕ್ಷಣಾ ಇಲಾಖೆ ಅಂತಿಮಗೊಳಿಸಿದೆ. ಈ ಪ್ರಮುಖ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಅಧಿಕೃತವಾಗಿ ಫ್ರಾನ್ಸ್ ಸರ್ಕಾರಕ್ಕೆ ಕಳುಹಿಸಲು ಭಾರತ ನಿರ್ಧರಿಸಿದ್ದು, ರಕ್ಷಣಾ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ವಾಯುಪಡೆಯಲ್ಲಿ ಹಳೆಯದಾಗುತ್ತಿರುವ ಯುದ್ಧ ವಿಮಾನಗಳ ಬದಲಿಗೆ ಅತ್ಯಾಧುನಿಕ ತಂತ್ರಜ್ಞಾನದ ಫೈಟರ್ ಜೆಟ್‌ಗಳನ್ನು ಸೇರ್ಪಡೆಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಹಿಂದೆ ಖರೀದಿಸಲಾದ 36 ರಫೇಲ್ ವಿಮಾನಗಳ ಯಶಸ್ವಿ ಕಾರ್ಯಾಚರಣೆಯ ನಂತರ, ಭಾರತ ಮತ್ತೊಮ್ಮೆ ಫ್ರಾನ್ಸ್‌ನ ದಸ್ಸಾಲ್ಟ್ ಏವಿಯೇಷನ್ ಸಂಸ್ಥೆಯತ್ತ ಒಲವು ತೋರಿದೆ. ಈ ಭಾರಿ ‘ಮೇಕ್ ಇನ್ ಇಂಡಿಯಾ’ ತತ್ವದಡಿ ಭಾರತದಲ್ಲೇ ಹೆಚ್ಚಿನ ಸಂಖ್ಯೆಯ ವಿಮಾನಗಳನ್ನು ಜಂಟಿಯಾಗಿ ಉತ್ಪಾದಿಸುವ ಮತ್ತು ತಂತ್ರಜ್ಞಾನ ವರ್ಗಾವಣೆ ಮಾಡುವ ಕುರಿತು ಮಾತುಕತೆಗಳು ನಡೆಯಲಿವೆ ಎಂದು ವರದಿಯಾಗಿದೆ.

ಚೀನಾ ಮತ್ತು ಪಾಕಿಸ್ತಾನದ ಗಡಿಗಳಲ್ಲಿ ಸವಾಲುಗಳು ಹೆಚ್ಚುತ್ತಿರುವ ಬೆನ್ನಲ್ಲೇ ಈ ರಕ್ಷಣಾ ಒಪ್ಪಂದ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ. ಈ 114 ಹೊಸ ರಫೇಲ್ ಜೆಟ್‌ಗಳ ಸೇರ್ಪಡೆಯಿಂದ ಭಾರತದ ವೈಮಾನಿಕ ದಾಳಿ ಸಾಮರ್ಥ್ಯ ಮತ್ತು ರಕ್ಷಣಾ ವ್ಯೂಹ ದುಪ್ಪಟ್ಟಾಗಲಿದೆ. ಮುಂಬರುವ ದಿನಗಳಲ್ಲಿ ಫ್ರಾನ್ಸ್ ಸರ್ಕಾರದ ಪ್ರತಿಕ್ರಿಯೆಯ ನಂತರ, ಉಭಯ ದೇಶಗಳ ನಡುವೆ ಅಧಿಕೃತ ಬೆಲೆ ಹಾಗೂ ತಾಂತ್ರಿಕ ಅಂಶಗಳ ಕುರಿತು ಅಂತಿಮ ಹಂತದ ಚರ್ಚೆಗಳು ಆರಂಭವಾಗಲಿವೆ.

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్