ರಾಜ್ಯದಲ್ಲಿ ಹೊಸ ‘ಪ್ರಜಾಸೇವಾ ಆಯುಕ್ತಾಲಯ’ ಸ್ಥಾಪನೆಗೆ ಸರ್ಕಾರದ ಆದೇಶ; ಏನಿದು ಹೊಸ ವ್ಯವಸ್ಥೆ..?

mirrortvkannada.com
Date : 19 November 2026, 9:03 am Posted By : MIRROR TV KANNADA

ರಾಜ್ಯದಲ್ಲಿ ಹೊಸ ‘ಪ್ರಜಾಸೇವಾ ಆಯುಕ್ತಾಲಯ’ ಸ್ಥಾಪನೆಗೆ ಸರ್ಕಾರದ ಆದೇಶ; ಏನಿದು ಹೊಸ ವ್ಯವಸ್ಥೆ..?

ರಾಜ್ಯದಲ್ಲಿ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ತ್ವರಿತವಾಗಿ ತಲುಪಿಸುವುದು ಹಾಗೂ ಜನರ ದೂರುಗಳನ್ನು ಕಾಲಮಿತಿಯೊಳಗೆ ಪರಿಹರಿಸುವ ಉದ್ದೇಶದಿಂದ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಜಾಸೇವಾ ಇಲಾಖೆಯ ಅಡಿಯಲ್ಲಿ ಹೊಸದಾಗಿ 'ಪ್ರಜಾಸೇವಾ ಆಯುಕ್ತಾಲಯ' ಸ್ಥಾಪನೆಗೆ ಆದೇಶ ಹೊರಡಿಸಲಾಗಿದ್ದು, ಆಯುಕ್ತರು ಮತ್ತು ವಿಶೇಷ ಆಯುಕ್ತರ ಹುದ್ದೆಗಳನ್ನೂ ಸೃಜಿಸಲಾಗಿದೆ. ಹಾಗಾದರೆ ಈ ಹೊಸ ಆಯುಕ್ತಾಲಯದ ಕಾರ್ಯವೇನು? ಸಾರ್ವಜನಿಕರಿಗೆ ಇದರಿಂದ ಏನೆಲ್ಲ ಅನುಕೂಲವಾಗಲಿದೆ? ಯಾವೆಲ್ಲ ಸರ್ಕಾರಿ ಸೇವೆಗಳು ಇದರ ವ್ಯಾಪ್ತಿಗೆ ಬರಲಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ರಾಜ್ಯದಲ್ಲಿ ಸಾರ್ವಜನಿಕ ಸೇವೆಗಳ ತ್ವರಿತ ವಿತರಣೆ, ಸರ್ಕಾರಿ ಇಲಾಖೆಗಳ ಕಾರ್ಯನಿರ್ವಹಣೆಯಲ್ಲಿ ದಕ್ಷತೆ ಹೆಚ್ಚಿಸುವುದು ಹಾಗೂ ಜನರ ಕುಂದುಕೊರತೆಗಳನ್ನು ಕಾಲಮಿತಿಯೊಳಗೆ ಪರಿಹರಿಸುವ ಉದ್ದೇಶದಿಂದ ಸರ್ಕಾರ ಹೊಸದಾಗಿ 'ಪ್ರಜಾಸೇವಾ ಆಯುಕ್ತಾಲಯ' ಸ್ಥಾಪನೆಗೆ ಅಧಿಕೃತ ಆದೇಶ ಹೊರಡಿಸಿದೆ. ಪ್ರಜಾಸೇವಾ ಇಲಾಖೆಯ ಅಡಿಯಲ್ಲಿ ಈ ನೂತನ ಆಯುಕ್ತಾಲಯ ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕ ಸೇವೆಗಳನ್ನು ಮತ್ತಷ್ಟು ಪಾರದರ್ಶಕಗೊಳಿಸುವುದು ಹಾಗೂ ಆಡಳಿತ ವ್ಯವಸ್ಥೆಯನ್ನು ಸರಳಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಆಯುಕ್ತರ ಹುದ್ದೆ ಮರುಪದನಾಮೀಕರಣ
ಈವರೆಗೆ ಇದ್ದ 'ಅಪರ ನಿರ್ದೇಶಕರು, ಸಕಾಲ ಮಿಷನ್' ಹುದ್ದೆಯನ್ನು ಇನ್ನು ಮುಂದೆ 'ಆಯುಕ್ತರು, ಪ್ರಜಾಸೇವಾ ಇಲಾಖೆ' ಎಂದು ಮರುಪದನಾಮೀಕರಣ ಮಾಡಲಾಗಿದೆ. ಈ ಅಧಿಕಾರಿಯೇ ನೂತನ ಪ್ರಜಾಸೇವಾ ಆಯುಕ್ತಾಲಯದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.
ವಿಶೇಷ ಆಯುಕ್ತರ ಹೊಸ ಹುದ್ದೆ ಸೃಷ್ಟಿ
ಆಯುಕ್ತಾಲಯದ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸಲು 'ವಿಶೇಷ ಆಯುಕ್ತರು, ಪ್ರಜಾಸೇವಾ ಆಯುಕ್ತಾಲಯ' ಎಂಬ ಹೊಸ ಹುದ್ದೆಯನ್ನು ಸರ್ಕಾರ ಸೃಜಿಸಿದೆ. ಈ ಹುದ್ದೆಗೆ ಕಿರಿಯ ಶ್ರೇಣಿಯ ಐಎಎಸ್ ಅಥವಾ ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿಯನ್ನು ನೇಮಿಸಲು ನಿರ್ಧರಿಸಲಾಗಿದೆ.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನಾಲ್ಕು ಕೆಎಎಸ್ ಹುದ್ದೆಗಳ ಪೈಕಿ, ಯೋಜನಾ ನಿರ್ದೇಶಕರು-ಇ-ಕಚೇರಿ, IPGRS, CCMS ಹಾಗೂ ಆಡಳಿತಾಧಿಕಾರಿ-ಸಕಾಲ ಸಂಬಂಧಿತ ಎರಡು ಹುದ್ದೆಗಳನ್ನು ಪ್ರಜಾಸೇವಾ ಇಲಾಖೆಯಲ್ಲಿಯೇ ಉಳಿಸಿಕೊಳ್ಳಲಾಗಿದೆ. ಉಳಿದ ಎರಡು ಹುದ್ದೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆಗೆ ವರ್ಗಾಯಿಸಲಾಗಿದೆ. ಇದಲ್ಲದೆ, ಪ್ರಜಾಸೇವಾ ಇಲಾಖೆಯ ಆಡಳಿತಾತ್ಮಕ ಬಲವರ್ಧನೆಗಾಗಿ ಹೆಚ್ಚುವರಿಯಾಗಿ ಎರಡು ಕಿರಿಯ ಶ್ರೇಣಿಯ ಕೆಎಎಸ್ ಹುದ್ದೆಗಳನ್ನು ಹೊಸದಾಗಿ ಸೃಜಿಸಲಾಗಿದೆ.
ಯಾವೆಲ್ಲ ಸೇವೆಗಳು ನಿರ್ವಹಿಸಲಿದೆ?
2026ರ ಜೂನ್ 24ರಂದು ಸ್ಥಾಪನೆಯಾದ ಪ್ರಜಾಸೇವಾ ಇಲಾಖೆಯು ಹಲವು ಪ್ರಮುಖ ನಾಗರಿಕ ಸೇವೆಗಳು ಮತ್ತು ಆಡಳಿತ ಸುಧಾರಣಾ ಕಾರ್ಯಗಳನ್ನು ನಿರ್ವಹಿಸಲಿದೆ. ಅವುಗಳಲ್ಲಿ ಪ್ರಮುಖವಾಗಿ:
- ಸಕಾಲ ಸೇವೆಗಳ ಖಾತರಿಯ ವಿತರಣೆ- ಸಮಗ್ರ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ (IPGRS)- ಮಾಹಿತಿ ಹಕ್ಕು (RTI) ಆನ್‌ಲೈನ್ ವ್ಯವಸ್ಥೆ- ಸರ್ಕಾರಿ ಪ್ರಕ್ರಿಯೆಗಳ ಮರು ವಿನ್ಯಾಸ (Business Process Re-engineering)- ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳ ಅನುಷ್ಠಾನ- ಸಚಿವಾಲಯ ಕಚೇರಿ ಕೈಪಿಡಿ ನಿರ್ವಹಣೆ- ಇ-ಕಚೇರಿ (e-Office) ವ್ಯವಸ್ಥೆ- ನ್ಯಾಯಾಲಯ ಪ್ರಕರಣ ಮೇಲ್ವಿಚಾರಣಾ ವ್ಯವಸ್ಥೆ (CCMS)- ವಿದ್ಯುನ್ಮಾನ ನಾಗರಿಕ ಸೇವಾ ವಿತರಣೆ (EDCS)- ತರಬೇತಿ ಹಾಗೂ ಪ್ರಜಾಸೇವಾ ಅಭಿಯಾನ

ಜನರಿಗೆ ಏನು ಪ್ರಯೋಜನ?
ಹೊಸ ಆಯುಕ್ತಾಲಯ ಸ್ಥಾಪನೆಯಿಂದ ಸಾರ್ವಜನಿಕರು ಸರ್ಕಾರಿ ಸೇವೆಗಳನ್ನು ಪಡೆಯುವ ಪ್ರಕ್ರಿಯೆ ಮತ್ತಷ್ಟು ಸರಳವಾಗುವ ನಿರೀಕ್ಷೆಯಿದೆ. ಇಲಾಖೆಗಳ ನಡುವಿನ ಸಮನ್ವಯ ಹೆಚ್ಚಿಸುವುದು, ದೂರುಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದು ಹಾಗೂ ಸೇವೆಗಳಲ್ಲಿ ಪಾರದರ್ಶಕತೆ ತರಲು ಈ ವ್ಯವಸ್ಥೆ ನೆರವಾಗಲಿದೆ.

ಮುಖ್ಯಮಂತ್ರಿಯವರ ಅನುಮೋದನೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮತ್ತು ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಪ್ರಜಾಸೇವಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಈ ಆದೇಶ ಹೊರಡಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

⬇ DOWNLOAD
×

ರಾಜ್ಯದಲ್ಲಿ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ತ್ವರಿತವಾಗಿ ತಲುಪಿಸುವುದು ಹಾಗೂ ಜನರ ದೂರುಗಳನ್ನು ಕಾಲಮಿತಿಯೊಳಗೆ ಪರಿಹರಿಸುವ ಉದ್ದೇಶದಿಂದ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಜಾಸೇವಾ ಇಲಾಖೆಯ ಅಡಿಯಲ್ಲಿ ಹೊಸದಾಗಿ ‘ಪ್ರಜಾಸೇವಾ ಆಯುಕ್ತಾಲಯ’ ಸ್ಥಾಪನೆಗೆ ಆದೇಶ ಹೊರಡಿಸಲಾಗಿದ್ದು, ಆಯುಕ್ತರು ಮತ್ತು ವಿಶೇಷ ಆಯುಕ್ತರ ಹುದ್ದೆಗಳನ್ನೂ ಸೃಜಿಸಲಾಗಿದೆ. ಹಾಗಾದರೆ ಈ ಹೊಸ ಆಯುಕ್ತಾಲಯದ ಕಾರ್ಯವೇನು? ಸಾರ್ವಜನಿಕರಿಗೆ ಇದರಿಂದ ಏನೆಲ್ಲ ಅನುಕೂಲವಾಗಲಿದೆ? ಯಾವೆಲ್ಲ ಸರ್ಕಾರಿ ಸೇವೆಗಳು ಇದರ ವ್ಯಾಪ್ತಿಗೆ ಬರಲಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ರಾಜ್ಯದಲ್ಲಿ ಸಾರ್ವಜನಿಕ ಸೇವೆಗಳ ತ್ವರಿತ ವಿತರಣೆ, ಸರ್ಕಾರಿ ಇಲಾಖೆಗಳ ಕಾರ್ಯನಿರ್ವಹಣೆಯಲ್ಲಿ ದಕ್ಷತೆ ಹೆಚ್ಚಿಸುವುದು ಹಾಗೂ ಜನರ ಕುಂದುಕೊರತೆಗಳನ್ನು ಕಾಲಮಿತಿಯೊಳಗೆ ಪರಿಹರಿಸುವ ಉದ್ದೇಶದಿಂದ ಸರ್ಕಾರ ಹೊಸದಾಗಿ ‘ಪ್ರಜಾಸೇವಾ ಆಯುಕ್ತಾಲಯ’ ಸ್ಥಾಪನೆಗೆ ಅಧಿಕೃತ ಆದೇಶ ಹೊರಡಿಸಿದೆ. ಪ್ರಜಾಸೇವಾ ಇಲಾಖೆಯ ಅಡಿಯಲ್ಲಿ ಈ ನೂತನ ಆಯುಕ್ತಾಲಯ ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕ ಸೇವೆಗಳನ್ನು ಮತ್ತಷ್ಟು ಪಾರದರ್ಶಕಗೊಳಿಸುವುದು ಹಾಗೂ ಆಡಳಿತ ವ್ಯವಸ್ಥೆಯನ್ನು ಸರಳಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಆಯುಕ್ತರ ಹುದ್ದೆ ಮರುಪದನಾಮೀಕರಣ

ಈವರೆಗೆ ಇದ್ದ ‘ಅಪರ ನಿರ್ದೇಶಕರು, ಸಕಾಲ ಮಿಷನ್’ ಹುದ್ದೆಯನ್ನು ಇನ್ನು ಮುಂದೆ ‘ಆಯುಕ್ತರು, ಪ್ರಜಾಸೇವಾ ಇಲಾಖೆ’ ಎಂದು ಮರುಪದನಾಮೀಕರಣ ಮಾಡಲಾಗಿದೆ. ಈ ಅಧಿಕಾರಿಯೇ ನೂತನ ಪ್ರಜಾಸೇವಾ ಆಯುಕ್ತಾಲಯದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.

ವಿಶೇಷ ಆಯುಕ್ತರ ಹೊಸ ಹುದ್ದೆ ಸೃಷ್ಟಿ

ಆಯುಕ್ತಾಲಯದ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸಲು ‘ವಿಶೇಷ ಆಯುಕ್ತರು, ಪ್ರಜಾಸೇವಾ ಆಯುಕ್ತಾಲಯ’ ಎಂಬ ಹೊಸ ಹುದ್ದೆಯನ್ನು ಸರ್ಕಾರ ಸೃಜಿಸಿದೆ. ಈ ಹುದ್ದೆಗೆ ಕಿರಿಯ ಶ್ರೇಣಿಯ ಐಎಎಸ್ ಅಥವಾ ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿಯನ್ನು ನೇಮಿಸಲು ನಿರ್ಧರಿಸಲಾಗಿದೆ.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನಾಲ್ಕು ಕೆಎಎಸ್ ಹುದ್ದೆಗಳ ಪೈಕಿ, ಯೋಜನಾ ನಿರ್ದೇಶಕರು-ಇ-ಕಚೇರಿ, IPGRS, CCMS ಹಾಗೂ ಆಡಳಿತಾಧಿಕಾರಿ-ಸಕಾಲ ಸಂಬಂಧಿತ ಎರಡು ಹುದ್ದೆಗಳನ್ನು ಪ್ರಜಾಸೇವಾ ಇಲಾಖೆಯಲ್ಲಿಯೇ ಉಳಿಸಿಕೊಳ್ಳಲಾಗಿದೆ. ಉಳಿದ ಎರಡು ಹುದ್ದೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆಗೆ ವರ್ಗಾಯಿಸಲಾಗಿದೆ. ಇದಲ್ಲದೆ, ಪ್ರಜಾಸೇವಾ ಇಲಾಖೆಯ ಆಡಳಿತಾತ್ಮಕ ಬಲವರ್ಧನೆಗಾಗಿ ಹೆಚ್ಚುವರಿಯಾಗಿ ಎರಡು ಕಿರಿಯ ಶ್ರೇಣಿಯ ಕೆಎಎಸ್ ಹುದ್ದೆಗಳನ್ನು ಹೊಸದಾಗಿ ಸೃಜಿಸಲಾಗಿದೆ.

ಯಾವೆಲ್ಲ ಸೇವೆಗಳು ನಿರ್ವಹಿಸಲಿದೆ?

2026ರ ಜೂನ್ 24ರಂದು ಸ್ಥಾಪನೆಯಾದ ಪ್ರಜಾಸೇವಾ ಇಲಾಖೆಯು ಹಲವು ಪ್ರಮುಖ ನಾಗರಿಕ ಸೇವೆಗಳು ಮತ್ತು ಆಡಳಿತ ಸುಧಾರಣಾ ಕಾರ್ಯಗಳನ್ನು ನಿರ್ವಹಿಸಲಿದೆ. ಅವುಗಳಲ್ಲಿ ಪ್ರಮುಖವಾಗಿ:

– ಸಕಾಲ ಸೇವೆಗಳ ಖಾತರಿಯ ವಿತರಣೆ
– ಸಮಗ್ರ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ (IPGRS)
– ಮಾಹಿತಿ ಹಕ್ಕು (RTI) ಆನ್‌ಲೈನ್ ವ್ಯವಸ್ಥೆ
– ಸರ್ಕಾರಿ ಪ್ರಕ್ರಿಯೆಗಳ ಮರು ವಿನ್ಯಾಸ (Business Process Re-engineering)
– ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳ ಅನುಷ್ಠಾನ
– ಸಚಿವಾಲಯ ಕಚೇರಿ ಕೈಪಿಡಿ ನಿರ್ವಹಣೆ
– ಇ-ಕಚೇರಿ (e-Office) ವ್ಯವಸ್ಥೆ
– ನ್ಯಾಯಾಲಯ ಪ್ರಕರಣ ಮೇಲ್ವಿಚಾರಣಾ ವ್ಯವಸ್ಥೆ (CCMS)
– ವಿದ್ಯುನ್ಮಾನ ನಾಗರಿಕ ಸೇವಾ ವಿತರಣೆ (EDCS)
– ತರಬೇತಿ ಹಾಗೂ ಪ್ರಜಾಸೇವಾ ಅಭಿಯಾನ

ಜನರಿಗೆ ಏನು ಪ್ರಯೋಜನ?

ಹೊಸ ಆಯುಕ್ತಾಲಯ ಸ್ಥಾಪನೆಯಿಂದ ಸಾರ್ವಜನಿಕರು ಸರ್ಕಾರಿ ಸೇವೆಗಳನ್ನು ಪಡೆಯುವ ಪ್ರಕ್ರಿಯೆ ಮತ್ತಷ್ಟು ಸರಳವಾಗುವ ನಿರೀಕ್ಷೆಯಿದೆ. ಇಲಾಖೆಗಳ ನಡುವಿನ ಸಮನ್ವಯ ಹೆಚ್ಚಿಸುವುದು, ದೂರುಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದು ಹಾಗೂ ಸೇವೆಗಳಲ್ಲಿ ಪಾರದರ್ಶಕತೆ ತರಲು ಈ ವ್ಯವಸ್ಥೆ ನೆರವಾಗಲಿದೆ.

ಮುಖ್ಯಮಂತ್ರಿಯವರ ಅನುಮೋದನೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮತ್ತು ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಪ್ರಜಾಸೇವಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಈ ಆದೇಶ ಹೊರಡಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Editor Reporter
mirrortvkannada.com

ರಾಜ್ಯದಲ್ಲಿ ಹೊಸ ‘ಪ್ರಜಾಸೇವಾ ಆಯುಕ್ತಾಲಯ’ ಸ್ಥಾಪನೆಗೆ ಸರ್ಕಾರದ ಆದೇಶ; ಏನಿದು ಹೊಸ ವ್ಯವಸ್ಥೆ..?

ರಾಜ್ಯದಲ್ಲಿ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ತ್ವರಿತವಾಗಿ ತಲುಪಿಸುವುದು ಹಾಗೂ ಜನರ ದೂರುಗಳನ್ನು ಕಾಲಮಿತಿಯೊಳಗೆ ಪರಿಹರಿಸುವ ಉದ್ದೇಶದಿಂದ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಜಾಸೇವಾ ಇಲಾಖೆಯ ಅಡಿಯಲ್ಲಿ ಹೊಸದಾಗಿ 'ಪ್ರಜಾಸೇವಾ ಆಯುಕ್ತಾಲಯ' ಸ್ಥಾಪನೆಗೆ ಆದೇಶ ಹೊರಡಿಸಲಾಗಿದ್ದು, ಆಯುಕ್ತರು ಮತ್ತು ವಿಶೇಷ ಆಯುಕ್ತರ ಹುದ್ದೆಗಳನ್ನೂ ಸೃಜಿಸಲಾಗಿದೆ. ಹಾಗಾದರೆ ಈ ಹೊಸ ಆಯುಕ್ತಾಲಯದ ಕಾರ್ಯವೇನು? ಸಾರ್ವಜನಿಕರಿಗೆ ಇದರಿಂದ ಏನೆಲ್ಲ ಅನುಕೂಲವಾಗಲಿದೆ? ಯಾವೆಲ್ಲ ಸರ್ಕಾರಿ ಸೇವೆಗಳು ಇದರ ವ್ಯಾಪ್ತಿಗೆ ಬರಲಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ರಾಜ್ಯದಲ್ಲಿ ಸಾರ್ವಜನಿಕ ಸೇವೆಗಳ ತ್ವರಿತ ವಿತರಣೆ, ಸರ್ಕಾರಿ ಇಲಾಖೆಗಳ ಕಾರ್ಯನಿರ್ವಹಣೆಯಲ್ಲಿ ದಕ್ಷತೆ ಹೆಚ್ಚಿಸುವುದು ಹಾಗೂ ಜನರ ಕುಂದುಕೊರತೆಗಳನ್ನು ಕಾಲಮಿತಿಯೊಳಗೆ ಪರಿಹರಿಸುವ ಉದ್ದೇಶದಿಂದ ಸರ್ಕಾರ ಹೊಸದಾಗಿ 'ಪ್ರಜಾಸೇವಾ ಆಯುಕ್ತಾಲಯ' ಸ್ಥಾಪನೆಗೆ ಅಧಿಕೃತ ಆದೇಶ ಹೊರಡಿಸಿದೆ. ಪ್ರಜಾಸೇವಾ ಇಲಾಖೆಯ ಅಡಿಯಲ್ಲಿ ಈ ನೂತನ ಆಯುಕ್ತಾಲಯ ಕಾರ್ಯನಿರ್ವಹಿಸಲಿದ್ದು, ಸಾರ್ವಜನಿಕ ಸೇವೆಗಳನ್ನು ಮತ್ತಷ್ಟು ಪಾರದರ್ಶಕಗೊಳಿಸುವುದು ಹಾಗೂ ಆಡಳಿತ ವ್ಯವಸ್ಥೆಯನ್ನು ಸರಳಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಆಯುಕ್ತರ ಹುದ್ದೆ ಮರುಪದನಾಮೀಕರಣ
ಈವರೆಗೆ ಇದ್ದ 'ಅಪರ ನಿರ್ದೇಶಕರು, ಸಕಾಲ ಮಿಷನ್' ಹುದ್ದೆಯನ್ನು ಇನ್ನು ಮುಂದೆ 'ಆಯುಕ್ತರು, ಪ್ರಜಾಸೇವಾ ಇಲಾಖೆ' ಎಂದು ಮರುಪದನಾಮೀಕರಣ ಮಾಡಲಾಗಿದೆ. ಈ ಅಧಿಕಾರಿಯೇ ನೂತನ ಪ್ರಜಾಸೇವಾ ಆಯುಕ್ತಾಲಯದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.
ವಿಶೇಷ ಆಯುಕ್ತರ ಹೊಸ ಹುದ್ದೆ ಸೃಷ್ಟಿ
ಆಯುಕ್ತಾಲಯದ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸಲು 'ವಿಶೇಷ ಆಯುಕ್ತರು, ಪ್ರಜಾಸೇವಾ ಆಯುಕ್ತಾಲಯ' ಎಂಬ ಹೊಸ ಹುದ್ದೆಯನ್ನು ಸರ್ಕಾರ ಸೃಜಿಸಿದೆ. ಈ ಹುದ್ದೆಗೆ ಕಿರಿಯ ಶ್ರೇಣಿಯ ಐಎಎಸ್ ಅಥವಾ ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿಯನ್ನು ನೇಮಿಸಲು ನಿರ್ಧರಿಸಲಾಗಿದೆ.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನಾಲ್ಕು ಕೆಎಎಸ್ ಹುದ್ದೆಗಳ ಪೈಕಿ, ಯೋಜನಾ ನಿರ್ದೇಶಕರು-ಇ-ಕಚೇರಿ, IPGRS, CCMS ಹಾಗೂ ಆಡಳಿತಾಧಿಕಾರಿ-ಸಕಾಲ ಸಂಬಂಧಿತ ಎರಡು ಹುದ್ದೆಗಳನ್ನು ಪ್ರಜಾಸೇವಾ ಇಲಾಖೆಯಲ್ಲಿಯೇ ಉಳಿಸಿಕೊಳ್ಳಲಾಗಿದೆ. ಉಳಿದ ಎರಡು ಹುದ್ದೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆಗೆ ವರ್ಗಾಯಿಸಲಾಗಿದೆ. ಇದಲ್ಲದೆ, ಪ್ರಜಾಸೇವಾ ಇಲಾಖೆಯ ಆಡಳಿತಾತ್ಮಕ ಬಲವರ್ಧನೆಗಾಗಿ ಹೆಚ್ಚುವರಿಯಾಗಿ ಎರಡು ಕಿರಿಯ ಶ್ರೇಣಿಯ ಕೆಎಎಸ್ ಹುದ್ದೆಗಳನ್ನು ಹೊಸದಾಗಿ ಸೃಜಿಸಲಾಗಿದೆ.
ಯಾವೆಲ್ಲ ಸೇವೆಗಳು ನಿರ್ವಹಿಸಲಿದೆ?
2026ರ ಜೂನ್ 24ರಂದು ಸ್ಥಾಪನೆಯಾದ ಪ್ರಜಾಸೇವಾ ಇಲಾಖೆಯು ಹಲವು ಪ್ರಮುಖ ನಾಗರಿಕ ಸೇವೆಗಳು ಮತ್ತು ಆಡಳಿತ ಸುಧಾರಣಾ ಕಾರ್ಯಗಳನ್ನು ನಿರ್ವಹಿಸಲಿದೆ. ಅವುಗಳಲ್ಲಿ ಪ್ರಮುಖವಾಗಿ:
- ಸಕಾಲ ಸೇವೆಗಳ ಖಾತರಿಯ ವಿತರಣೆ- ಸಮಗ್ರ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ (IPGRS)- ಮಾಹಿತಿ ಹಕ್ಕು (RTI) ಆನ್‌ಲೈನ್ ವ್ಯವಸ್ಥೆ- ಸರ್ಕಾರಿ ಪ್ರಕ್ರಿಯೆಗಳ ಮರು ವಿನ್ಯಾಸ (Business Process Re-engineering)- ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳ ಅನುಷ್ಠಾನ- ಸಚಿವಾಲಯ ಕಚೇರಿ ಕೈಪಿಡಿ ನಿರ್ವಹಣೆ- ಇ-ಕಚೇರಿ (e-Office) ವ್ಯವಸ್ಥೆ- ನ್ಯಾಯಾಲಯ ಪ್ರಕರಣ ಮೇಲ್ವಿಚಾರಣಾ ವ್ಯವಸ್ಥೆ (CCMS)- ವಿದ್ಯುನ್ಮಾನ ನಾಗರಿಕ ಸೇವಾ ವಿತರಣೆ (EDCS)- ತರಬೇತಿ ಹಾಗೂ ಪ್ರಜಾಸೇವಾ ಅಭಿಯಾನ

ಜನರಿಗೆ ಏನು ಪ್ರಯೋಜನ?
ಹೊಸ ಆಯುಕ್ತಾಲಯ ಸ್ಥಾಪನೆಯಿಂದ ಸಾರ್ವಜನಿಕರು ಸರ್ಕಾರಿ ಸೇವೆಗಳನ್ನು ಪಡೆಯುವ ಪ್ರಕ್ರಿಯೆ ಮತ್ತಷ್ಟು ಸರಳವಾಗುವ ನಿರೀಕ್ಷೆಯಿದೆ. ಇಲಾಖೆಗಳ ನಡುವಿನ ಸಮನ್ವಯ ಹೆಚ್ಚಿಸುವುದು, ದೂರುಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವುದು ಹಾಗೂ ಸೇವೆಗಳಲ್ಲಿ ಪಾರದರ್ಶಕತೆ ತರಲು ಈ ವ್ಯವಸ್ಥೆ ನೆರವಾಗಲಿದೆ.

ಮುಖ್ಯಮಂತ್ರಿಯವರ ಅನುಮೋದನೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮತ್ತು ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಪ್ರಜಾಸೇವಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಈ ಆದೇಶ ಹೊರಡಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్