ಜೆ.ಡಿ. ವ್ಯಾನ್ಸ್ ದಂಪತಿಗೆ ನಾಲ್ಕನೇ ಮಗು ಜನನ

ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಅವರ ಪತ್ನಿ ಉಷಾ ವ್ಯಾನ್ಸ್ ದಂಪತಿಗೆ ನಾಲ್ಕನೇ ಮಗು ಜನಿಸಿದೆ. ಈ ಸಂತಸದ ಸುದ್ದಿಯನ್ನು ಕುಟುಂಬ ಅಧಿಕೃತವಾಗಿ ಹಂಚಿಕೊಂಡಿದೆ.

ದಂಪತಿಗೆ ಗಂಡು ಮಗು ಜನಿಸಿದ್ದು, ಮಗುವಿಗೆ ಅಲೆಕ್ ನೀಲ್ ವ್ಯಾನ್ಸ್ ಎಂದು ಹೆಸರಿಡಲಾಗಿದೆ. ಮೇರಿಲ್ಯಾಂಡ್‌ನ ವಾಲ್ಟರ್ ರೀಡ್ ರಾಷ್ಟ್ರೀಯ ಮಿಲಿಟರಿ ವೈದ್ಯಕೀಯ ಕೇಂದ್ರದಲ್ಲಿ ಭಾನುವಾರ ಬೆಳಿಗ್ಗೆ ಮಗು ಜನಿಸಿದೆ.

ಉಷಾ ಮತ್ತು ಮಗುವಿನ ಆರೈಕೆ ಮಾಡಿದ ವಾಲ್ಟರ್ ರೀಡ್ ವೈದ್ಯಕೀಯ ಕೇಂದ್ರ ಹಾಗೂ ಶ್ವೇತಭವನದ ವೈದ್ಯಕೀಯ ತಂಡಕ್ಕೆ ವ್ಯಾನ್ಸ್ ದಂಪತಿ ಧನ್ಯವಾದ ತಿಳಿಸಿದ್ದಾರೆ. ವೈದ್ಯರು ಮತ್ತು ಸಿಬ್ಬಂದಿ ನೀಡಿದ ಸೇವೆಯನ್ನು ಅವರು ವಿಶೇಷವಾಗಿ ಮೆಚ್ಚಿದ್ದಾರೆ.

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్