ಬೃಹತ್ ಬಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ( ಜಿಬಿಎ) ಆಗಿ 5 ಪಾಲಿಕೆಗಳಾಗಿ ವಿಭಜಿಸಿದ್ದ ರಾಜ್ಯ ಸರ್ಕಾರ ಇದೀಗ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ಅನ್ನು 5 ಪೊಲೀಸ್ ಕಮಿಷನರೇಟ್ ಆಗಿ ವಿಭಾಗಿಸಿದೆ. ನಗರ ಪೊಲೀಸ್ ಆಯುಕ್ತರು ಸೇರಿದಂತೆ ಒಟ್ಟು 34 ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಮಾಡಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಹಾಲಿ ಸಿಮೀತ್ ಕುಮಾರ್ ಸಿಂಗ್ ಅವರನ್ನು ಆ ಸ್ಥಾನದಿಂದ ತೆರವುಗೊಳಿಸಲಾಗಿದೆ. ಅವರನ್ನು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ಎಡಿಜಿಪಿ (ADGP) ಆಗಿ ನೇಮಕ ಮಾಡಲಾಗಿದೆ. ಸದ್ಯ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಆರ್. ಹಿತೇಂದ್ರ ಅವರು ನೇಮಕ ಮಾಡಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ನಂತೆ ಕೇಂದ್ರ ಬೆಂಗಳೂರು ನಗರ, ಪೂರ್ವ ಬೆಂಗಳೂರು, ಪಶ್ಚಿಮ ಬೆಂಗಳೂರು, ಉತ್ತರ ಬೆಂಗಳೂರು ನಗರ ಹಾಗೂ ದಕ್ಷಿಣ ಬೆಂಗಳೂರು ನಗರ ಎಂದು ವಿಂಗಡಣೆ ಮಾಡಲಾಗಿದೆ. ಈ ಐದು ವಿಭಾಗಗಳಿಗೆ ಪೊಲೀಸ್ ಆಯುಕ್ತರನ್ನು ಸಹ ನೇಮಕ ಮಾಡಲಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಅಪರಾಧ ಚುಟುವಟಿಕೆ ತಡೆಯಲು, ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ತೀರ್ಮಾನಿಸಿದೆ.
ನೂತನ ನಗರ ಪೊಲೀಸ್ ಆಯುಕ್ತರ ನೇಮಕ
ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ಎಂ. ನಿಂಬಾಳ್ಕರ್ ಅವರನ್ನು ಸಂಚಾರ ವಿಭಾಗದ ಆಯುಕ್ತರನ್ನಾಗಿ ನೇಮಿಸಲಾಗಿದೆ. ಜೊತೆಗೆ ಅವರಿಗೆ 'ಆಂಟಿ-ರೌಡಿ ಸ್ಕ್ವಾಡ್' (Anti-Rowdy Squad) ನ ಹೆಚ್ಚುವರಿ ಜವಾಬ್ದಾರಿಯಾಗಿ ಸಹ ನೀಡಲಾಗಿದೆ.
* ಬೆಂಗಳೂರು ಕೇಂದ್ರ ಪೊಲೀಸ್ ಆಯುಕ್ತರಾಗಿ ಹಿಡಿಯ ಅಧಿಕಾರಿ ಲಾಭು ರಾಮ್ ನೇಮಕ* ಬೆಂಗಳೂರು ಪೂರ್ವ ಪೊಲೀಸ್ ಆಯುಕ್ತರಾಗಿ ಪಿ. ಎಸ್. ಹರ್ಷ,* ಬೆಂಗಳೂರು ಪಶ್ಚಿಮ ಪೊಲೀಸ್ ಆಯುಕ್ತರಾಗಿ ವಿಕಾಸ್ ಕುಮಾರ್ ವಿಕಾಸ್* ಬೆಂಗಳೂರು ಉತ್ತರ ಪೊಲೀಸ್ ಆಯುಕ್ತರಾಗಿ ಎಂ. ಬಿ. ಬೋರಲಿಂಗಯ್ಯ* ಬೆಂಗಳೂರು ದಕ್ಷಿಣ ಪೊಲೀಸ್ ಆಯುಕ್ತರಾಗಿ ಸಿ.ವಂಶಿ ಕೃಷ್ಣ ಅವರನ್ನು ಆಯಾ ವಿಭಾಗಗಳ ಪೊಲೀಸ್ ಆಯುಕ್ತರಾಗಿ (ಡಿಸಿಪಿ ಶ್ರೇಣಿಯಲ್ಲಿ) ನಿಯೋಜಿಸಲಾಗಿದೆ.








