ಕನ್ನಡಿಗರು ಯಾವತ್ತು ಗುಡ್‌ಬೈ ಎನ್ನಲ್ಲ, ಹೋಗಿ ಬರ್ತೀವಿ ಎನ್ನುವುದೇ ಒಂದು ಸುಂದರ ಎಮೋಷನ್‌: ಪೋಸ್ಟ್ ವೈರಲ್..

mirrortvkannada.com
Date : 20 November 2026, 10:55 pm Posted By : MIRROR TV KANNADA

ಕನ್ನಡಿಗರು ಯಾವತ್ತು ಗುಡ್‌ಬೈ ಎನ್ನಲ್ಲ, ಹೋಗಿ ಬರ್ತೀವಿ ಎನ್ನುವುದೇ ಒಂದು ಸುಂದರ ಎಮೋಷನ್‌: ಪೋಸ್ಟ್ ವೈರಲ್..

ಭಾಷೆ ಎಂಬುದು ಕೇವಲ ಮಾತನಾಡಲು ಬೇಕಾಗಿರುವ ಒಂದು ಮಾಧ್ಯಮವಲ್ಲ, ಅದು ಒಂದು ಸಂಸ್ಕೃತಿಯ ಜೀವಂತಿಕೆ ಮತ್ತು ಮನುಷ್ಯರ ನಡುವಿನ ಆತ್ಮೀಯ ಬಾಂಧವ್ಯದ ಪ್ರತೀಕ. ಕನ್ನಡಿಗರು ಬಳಸುವ ಪ್ರತಿಯೊಂದು ಪದಗಳಲ್ಲೂ ಭಾವನಾತ್ಮಕ ಅರ್ಥ ಇರುತ್ತದೆ. ಇದಕ್ಕೆ ಒಂದು ಉದಾಹರಣೆ ಎಂದರೆ ಹೋಗಿ ಬರ್ತೀನಿ ಎನ್ನುವ ಪದ.
ಕನ್ನಡಿಗರ ಮನೆಗಳಲ್ಲಿ ಯಾರೇ ಹೊರಗೆ ಹೋಗುವಾಗ ಅಥವಾ ಯಾರನ್ನಾದರೂ ಬೀಳ್ಕೊಡುವಾಗ ಎಂದಿಗೂ ಸರಿ ಹೋಗ್ತೀನಿ ಅಥವಾ ಹೋಗಿ ಎನ್ನುವ ಎಂದು ಹೇಳುವ ಪದ್ಧತಿಯೇ ಇಲ್ಲ. ಬದಲಾಗಿ, ತಲೆಮಾರುಗಳಿಂದಲೂ ನಮ್ಮ ಹಿರಿಯರು ನಮಗೆ ಕಲಿಸಿಕೊಟ್ಟಿರುವ ಸುಂದರ ಪದವೇ ಹೋಗಿ ಬರ್ತೀವಿ ಅಥವಾ ಹೋಗಿ ಬನ್ನಿ.

ಇದೀಗ ಈ ಪದಗಳ ಹಿಂದಿರುವ ಆಳವಾದ ಪ್ರೀತಿ ಮತ್ತು ಭಾವನಾತ್ಮಕ ಅರ್ಥವನ್ನ ವಿವರಿಸುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಲಕ್ಷಾಂತರ ನೆಟ್ಟಿಗರ ಮನಗೆದ್ದಿದೆ.
ಕನ್ನಡ ಭಾಷೆ ಸೊಗಡು ಸಾರುವ ಪೋಸ್ಟ್
ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದ್ದ ಬರಹವೊಂದರ ಸ್ಕ್ರೀನ್‌ಶಾಟ್ ಅನ್ನ, ಆರ್‌ ಬೆಂಗಳೂರು ಎನ್ನುವ ರೆಡ್ಡಿಟ್ ಪೇಜ್ (r/bangalore)ನಲ್ಲಿ 'ಹೋಗ್ ಬರ್ತೀನಿ ಎಂಬುದು ಒಂದು ಭಾವನೆ' ("Hog barthini" is an emotion) ಎಂಬ ಶೀರ್ಷಿಕೆಯಡಿ ಪೋಸ್ಟ್ ಮಾಡಲಾಗಿದೆ.

ಈ ಪೋಸ್ಟ್ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 1,600ಕ್ಕೂ ಹೆಚ್ಚು ಲೈಕ್ಸ್ ಹಾಗೂ ಸುಮಾರು 200ಕ್ಕೂ ಅಧಿಕ ಕಾಮೆಂಟ್‌ಗಳನ್ನು ಪಡೆದು ಟ್ರೆಂಡಿಂಗ್‌ನಲ್ಲಿದೆ.

"ಕನ್ನಡದಲ್ಲಿ ಗುಡ್‌ಬೈ ಎಂಬ ಶಾಶ್ವತ ಬೀಳ್ಕೊಡುಗೆಯ ಪದವಿಲ್ಲ. ಬದಲಿಗೆ ಹೋಗಿ ಬರ್ತೀನಿ ಎಂಬ ಸುಂದರ ಪದವಿದೆ. ಅಂದರೆ, ನಾನು ಈಗ ಹೋಗಿ ಮತ್ತೆ ಮರಳಿ ಬರುತ್ತೇನೆ ಎಂಬ ಅರ್ಥ. ಇದು ಕೇವಲ ಎರಡು ಪದಗಳಲ್ಲ, ಇದರಲ್ಲಿ ಅಡಗಿರುವ ಪ್ರೀತಿಯನ್ನ ನೋಡಿ.

ಅಗಲಿಕೆ ಎಂಬುದು ಎಂದಿಗೂ ಅಂತ್ಯವಲ್ಲ, ದೂರ ಎಂಬುದು ಕೇವಲ ತಾತ್ಕಾಲಿಕ ವಿರಾಮ ಅಷ್ಟೇ. ಹೊರಟು ಹೋದ ಪ್ರತಿಯೊಬ್ಬ ವ್ಯಕ್ತಿಯೂ ಮತ್ತೆ ಮರಳಿ ಬರುತ್ತಾರೆ ಎಂಬ ಭರವಸೆ ಮತ್ತು ಕಾಳಜಿ ಈ ಮಾತಿನಲ್ಲಿದೆ. ಇದು ನಿಜಕ್ಕೂ ಅತ್ಯಂತ ಕಾವ್ಯಾತ್ಮಕವಾಗಿದೆ" ಎಂದು ಆ ಬರಹದಲ್ಲಿ ಕನ್ನಡ ಭಾಷೆ ಸೊಗಡು ಹಾಗೂ ಅದರ ಹಿಂದಿನ ಮಮತೆಯನ್ನ ಈ ಪೋಸ್ಟ್‌ನಲ್ಲಿ ಬಣ್ಣಿಸಲಾಗಿದೆ.
ಕನ್ನಡ ಸಂಸ್ಕೃತಿಯಲ್ಲಿ ಅಡಗಿರುವ ಆತ್ಮೀಯತೆ ಮತ್ತು ಭರವಸೆ
ನಮ್ಮ ಕನ್ನಡ ಸಂಸ್ಕೃತಿಯಲ್ಲಿ ಯಾರಾದರೂ ಮನೆಯಿಂದ ಹೊರಡುವಾಗ ಆಕಸ್ಮಿಕವಾಗಿ 'ಹೋಗ್ತೀನಿ' ಎಂದು ಹೇಳಿದರೆ, ತಕ್ಷಣವೇ ಮನೆಯ ಅಮ್ಮಂದಿರು ಅಥವಾ ಅಜ್ಜಿಯಂದಿರು ತಿದ್ದಿ ಹಾಗೆಲ್ಲಾ ಹೇಳಬಾರದು, ಹೋಗಿ ಬರ್ತೀನಿ ಎಂದು ಹೇಳುವುದು ಪ್ರತಿ ಕನ್ನಡಿಗನ ಮನೆಯಲ್ಲೂ ಕಂಡು ಬರುವ ಸಾಮಾನ್ಯ ದೃಶ್ಯ.

ಅಂದರೆ ಈ ಮಾತಿನ ಅರ್ಥ, ಯಾರೂ ನಮ್ಮನ್ನ ಶಾಶ್ವತವಾಗಿ ಬಿಟ್ಟು ಹೋಗದಿರಲಿ, ಹೋದವರು ಸುರಕ್ಷಿತವಾಗಿ ಮರಳಿ ಬರಲಿ ಎಂಬ ಶುಭ ಹಾರೈಕೆ ಹಾಗೂ ಪ್ರೀತಿಯ ಭಾವ ಈ ಸಂಪ್ರದಾಯದ ಹಿಂದಿದೆ.
ವೈರಲ್ ಪೋಸ್ಟ್‌ಗೆ ನೆಟ್ಟಿಗರ ಭಾವುಕ
ರೆಡ್ಡಿಟ್‌ನಲ್ಲಿ ಈ ವೈರಲ್ ಪೋಸ್ಟ್ ನೋಡಿದ ಬಳಿಕ ಕನ್ನಡಿಗರು ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳ ಜನರೂ ತಮ್ಮ ಬಾಲ್ಯದ ನೆನಪುಗಳನ್ನ ಹಾಗೂ ತಮ್ಮ ಮಾತೃಭಾಷೆಯಲ್ಲೂ ಇರುವ ಇಂತಹದ್ದೇ ಸುಂದರ ಪದಗಳನ್ನ ಕಾಮೆಂಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಬಳಕೆದಾರರೊಬ್ಬರು, "ಬೆಳೆಯುವಾಗ ನಾನು ಎಷ್ಟು ಬಾರಿ ಈ ವಿಚಾರಕ್ಕೆ ಮನೆಯಲ್ಲಿ ತಿದ್ದಿಸಿಕೊಂಡಿದ್ದೇನೋ ಲೆಕ್ಕವೇ ಇಲ್ಲ. ಈಗ ಆ ಮಾತಿನ ಹಿಂದಿರುವ ಭಾವನೆಯ ಮಹತ್ವ ಅರ್ಥವಾಗಿದೆ, ನನ್ನ ಮಕ್ಕಳಿಗೂ ಇದನ್ನೇ ಕಲಿಸುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪೋಸ್ಟ್ ಹಾಕಿದ ವ್ಯಕ್ತಿ, "ನಾನು ಶಾಲೆಗೆ ಹೋಗುವಾಗ ಬೆಳಗ್ಗೆ ಆಕಸ್ಮಿಕವಾಗಿ 'ಸರಿ ಹೋಗ್ತೀನಿ ಅಮ್ಮ' ಎಂದರೆ ಸಾಕು, ಅಮ್ಮ ತಕ್ಷಣ ಬೈದು ಸರಿಪಡಿಸುತ್ತಿದ್ದರು" ಎಂದು ನೆನಪಿಸಿಕೊಂಡಿದ್ದಾರೆ.

ಮತ್ತೊಬ್ಬ ನೆಟ್ಟಿಗರು ತಮಾಷೆಯಾಗಿ, "ನೀವು ಯಾರೇ ಆಗಿರಿ, ಯಾರ ಮನೆಗೇ ಹೋಗಿರಿ, ಬರಿ 'ಹೋಗ್ತೀನಿ' ಅಂದರೆ ಅಮ್ಮ-ಅಜ್ಜಿಯರು ಮಾತ್ರ ಸುಮ್ಮನೆ ಬಿಡುವುದಿಲ್ಲ. 'ಹೋಗಿ ಬರ್ತೀನಿ' ಅನ್ನುವುದು ನಮ್ಮ ಮನೆಗಳ ಅಲಿಖಿತ ನಿಯಮ" ಎಂದು ಕಾಮೆಂಟ್ ಮಾಡಿದ್ದಾರೆ.
ಭಾಷೆ ಬೇರೆ, ಭಾವನೆ ಒಂದೇ
ಕೇವಲ ಕನ್ನಡ ಮಾತ್ರವಲ್ಲದೆ ಭಾರತದ ಬಹುತೇಕ ಪ್ರಾದೇಶಿಕ ಭಾಷೆಗಳಲ್ಲೂ ಇದೇ ಸಂಸ್ಕೃತಿ ಇದೆ ಎಂದು ಹಲವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ತಮಿಳಿನಲ್ಲಿ 'ಪೋಯಿಟ್ಟು ವರೇನ್', ಮಲಯಾಳಂನಲ್ಲಿ 'ಪೋಯಿಟ್ಟು ವರಾಂ', ತುಳುವಿನಲ್ಲಿ 'ಬರ್ಪೆ', ಮರಾಠಿಯಲ್ಲಿ 'ಯೇತೋ ಮಿ', ಬಂಗಾಳಿಯಲ್ಲಿ 'ಆಶ್ಚಿ', ಗುಜರಾತಿಯಲ್ಲಿ 'ಆವ್ಜೋ' ಹಾಗೂ ಹಿಂದಿಯಲ್ಲಿ 'ಆತಾ ಹೂಂ' ಅಥವಾ 'ಫಿರ್ ಮಿಲೆಂಗೆ' ಎಂದು ಹೇಳುವ ಪದ್ಧತಿಯನ್ನ ನೆಟ್ಟಿಗರು ಉಲ್ಲೇಖಿಸಿದ್ದಾರೆ.

ಬಂಗಾಳಿ ಮೂಲದ ಬಳಕೆದಾರರೊಬ್ಬರು, "ಭಾಷೆಗಳು ನಮ್ಮನ್ನ ಬೇರ್ಪಡಿಸಿದ್ದರೂ, ಭಾವನೆಗಳು ನಮ್ಮೆಲ್ಲರನ್ನೂ ಒಗ್ಗೂಡಿಸಿವೆ" ಎಂದು ಬರೆದಿರುವ ಕಾಮೆಂಟ್ ಎಲ್ಲರ ಗಮನ ಸೆಳೆದಿದೆ. ಇನ್ನೂ ಕೆಲವರು ಜಪಾನೀಸ್ ಭಾಷೆಯ 'ಇತ್ತೆಕಿಮಾಸ್' ಹಾಗೂ ಹಾಲಿವುಡ್‌ನ ಟರ್ಮಿನೇಟರ್ ಸಿನಿಮಾದ 'ಐ ವಿಲ್ ಬಿ ಬ್ಯಾಕ್' ಡೈಲಾಗ್ ಅನ್ನೂ ತಮಾಷೆಯಾಗಿ ಇದಕ್ಕೆ ಹೋಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

⬇ DOWNLOAD
×

ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದ್ದ ಬರಹವೊಂದರ ಸ್ಕ್ರೀನ್‌ಶಾಟ್ ಅನ್ನ, ಆರ್‌ ಬೆಂಗಳೂರು ಎನ್ನುವ ರೆಡ್ಡಿಟ್ ಪೇಜ್ (r/bangalore)ನಲ್ಲಿ ‘ಹೋಗ್ ಬರ್ತೀನಿ ಎಂಬುದು ಒಂದು ಭಾವನೆ’ (“Hog barthini” is an emotion) ಎಂಬ ಶೀರ್ಷಿಕೆಯಡಿ ಪೋಸ್ಟ್ ಮಾಡಲಾಗಿದೆ.

ಈ ಪೋಸ್ಟ್ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 1,600ಕ್ಕೂ ಹೆಚ್ಚು ಲೈಕ್ಸ್ ಹಾಗೂ ಸುಮಾರು 200ಕ್ಕೂ ಅಧಿಕ ಕಾಮೆಂಟ್‌ಗಳನ್ನು ಪಡೆದು ಟ್ರೆಂಡಿಂಗ್‌ನಲ್ಲಿದೆ.

“ಕನ್ನಡದಲ್ಲಿ ಗುಡ್‌ಬೈ ಎಂಬ ಶಾಶ್ವತ ಬೀಳ್ಕೊಡುಗೆಯ ಪದವಿಲ್ಲ. ಬದಲಿಗೆ ಹೋಗಿ ಬರ್ತೀನಿ ಎಂಬ ಸುಂದರ ಪದವಿದೆ. ಅಂದರೆ, ನಾನು ಈಗ ಹೋಗಿ ಮತ್ತೆ ಮರಳಿ ಬರುತ್ತೇನೆ ಎಂಬ ಅರ್ಥ. ಇದು ಕೇವಲ ಎರಡು ಪದಗಳಲ್ಲ, ಇದರಲ್ಲಿ ಅಡಗಿರುವ ಪ್ರೀತಿಯನ್ನ ನೋಡಿ.

ಅಗಲಿಕೆ ಎಂಬುದು ಎಂದಿಗೂ ಅಂತ್ಯವಲ್ಲ, ದೂರ ಎಂಬುದು ಕೇವಲ ತಾತ್ಕಾಲಿಕ ವಿರಾಮ ಅಷ್ಟೇ. ಹೊರಟು ಹೋದ ಪ್ರತಿಯೊಬ್ಬ ವ್ಯಕ್ತಿಯೂ ಮತ್ತೆ ಮರಳಿ ಬರುತ್ತಾರೆ ಎಂಬ ಭರವಸೆ ಮತ್ತು ಕಾಳಜಿ ಈ ಮಾತಿನಲ್ಲಿದೆ. ಇದು ನಿಜಕ್ಕೂ ಅತ್ಯಂತ ಕಾವ್ಯಾತ್ಮಕವಾಗಿದೆ” ಎಂದು ಆ ಬರಹದಲ್ಲಿ ಕನ್ನಡ ಭಾಷೆ ಸೊಗಡು ಹಾಗೂ ಅದರ ಹಿಂದಿನ ಮಮತೆಯನ್ನ ಈ ಪೋಸ್ಟ್‌ನಲ್ಲಿ ಬಣ್ಣಿಸಲಾಗಿದೆ.

ಕನ್ನಡ ಸಂಸ್ಕೃತಿಯಲ್ಲಿ ಅಡಗಿರುವ ಆತ್ಮೀಯತೆ ಮತ್ತು ಭರವಸೆ

ನಮ್ಮ ಕನ್ನಡ ಸಂಸ್ಕೃತಿಯಲ್ಲಿ ಯಾರಾದರೂ ಮನೆಯಿಂದ ಹೊರಡುವಾಗ ಆಕಸ್ಮಿಕವಾಗಿ ‘ಹೋಗ್ತೀನಿ’ ಎಂದು ಹೇಳಿದರೆ, ತಕ್ಷಣವೇ ಮನೆಯ ಅಮ್ಮಂದಿರು ಅಥವಾ ಅಜ್ಜಿಯಂದಿರು ತಿದ್ದಿ ಹಾಗೆಲ್ಲಾ ಹೇಳಬಾರದು, ಹೋಗಿ ಬರ್ತೀನಿ ಎಂದು ಹೇಳುವುದು ಪ್ರತಿ ಕನ್ನಡಿಗನ ಮನೆಯಲ್ಲೂ ಕಂಡು ಬರುವ ಸಾಮಾನ್ಯ ದೃಶ್ಯ.

ಅಂದರೆ ಈ ಮಾತಿನ ಅರ್ಥ, ಯಾರೂ ನಮ್ಮನ್ನ ಶಾಶ್ವತವಾಗಿ ಬಿಟ್ಟು ಹೋಗದಿರಲಿ, ಹೋದವರು ಸುರಕ್ಷಿತವಾಗಿ ಮರಳಿ ಬರಲಿ ಎಂಬ ಶುಭ ಹಾರೈಕೆ ಹಾಗೂ ಪ್ರೀತಿಯ ಭಾವ ಈ ಸಂಪ್ರದಾಯದ ಹಿಂದಿದೆ.

ವೈರಲ್ ಪೋಸ್ಟ್‌ಗೆ ನೆಟ್ಟಿಗರ ಭಾವುಕ

ರೆಡ್ಡಿಟ್‌ನಲ್ಲಿ ಈ ವೈರಲ್ ಪೋಸ್ಟ್ ನೋಡಿದ ಬಳಿಕ ಕನ್ನಡಿಗರು ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳ ಜನರೂ ತಮ್ಮ ಬಾಲ್ಯದ ನೆನಪುಗಳನ್ನ ಹಾಗೂ ತಮ್ಮ ಮಾತೃಭಾಷೆಯಲ್ಲೂ ಇರುವ ಇಂತಹದ್ದೇ ಸುಂದರ ಪದಗಳನ್ನ ಕಾಮೆಂಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಬಳಕೆದಾರರೊಬ್ಬರು, “ಬೆಳೆಯುವಾಗ ನಾನು ಎಷ್ಟು ಬಾರಿ ಈ ವಿಚಾರಕ್ಕೆ ಮನೆಯಲ್ಲಿ ತಿದ್ದಿಸಿಕೊಂಡಿದ್ದೇನೋ ಲೆಕ್ಕವೇ ಇಲ್ಲ. ಈಗ ಆ ಮಾತಿನ ಹಿಂದಿರುವ ಭಾವನೆಯ ಮಹತ್ವ ಅರ್ಥವಾಗಿದೆ, ನನ್ನ ಮಕ್ಕಳಿಗೂ ಇದನ್ನೇ ಕಲಿಸುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪೋಸ್ಟ್ ಹಾಕಿದ ವ್ಯಕ್ತಿ, “ನಾನು ಶಾಲೆಗೆ ಹೋಗುವಾಗ ಬೆಳಗ್ಗೆ ಆಕಸ್ಮಿಕವಾಗಿ ‘ಸರಿ ಹೋಗ್ತೀನಿ ಅಮ್ಮ’ ಎಂದರೆ ಸಾಕು, ಅಮ್ಮ ತಕ್ಷಣ ಬೈದು ಸರಿಪಡಿಸುತ್ತಿದ್ದರು” ಎಂದು ನೆನಪಿಸಿಕೊಂಡಿದ್ದಾರೆ.

ಮತ್ತೊಬ್ಬ ನೆಟ್ಟಿಗರು ತಮಾಷೆಯಾಗಿ, “ನೀವು ಯಾರೇ ಆಗಿರಿ, ಯಾರ ಮನೆಗೇ ಹೋಗಿರಿ, ಬರಿ ‘ಹೋಗ್ತೀನಿ’ ಅಂದರೆ ಅಮ್ಮ-ಅಜ್ಜಿಯರು ಮಾತ್ರ ಸುಮ್ಮನೆ ಬಿಡುವುದಿಲ್ಲ. ‘ಹೋಗಿ ಬರ್ತೀನಿ’ ಅನ್ನುವುದು ನಮ್ಮ ಮನೆಗಳ ಅಲಿಖಿತ ನಿಯಮ” ಎಂದು ಕಾಮೆಂಟ್ ಮಾಡಿದ್ದಾರೆ.

ಭಾಷೆ ಬೇರೆ, ಭಾವನೆ ಒಂದೇ

ಕೇವಲ ಕನ್ನಡ ಮಾತ್ರವಲ್ಲದೆ ಭಾರತದ ಬಹುತೇಕ ಪ್ರಾದೇಶಿಕ ಭಾಷೆಗಳಲ್ಲೂ ಇದೇ ಸಂಸ್ಕೃತಿ ಇದೆ ಎಂದು ಹಲವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ತಮಿಳಿನಲ್ಲಿ ‘ಪೋಯಿಟ್ಟು ವರೇನ್’, ಮಲಯಾಳಂನಲ್ಲಿ ‘ಪೋಯಿಟ್ಟು ವರಾಂ’, ತುಳುವಿನಲ್ಲಿ ‘ಬರ್ಪೆ’, ಮರಾಠಿಯಲ್ಲಿ ‘ಯೇತೋ ಮಿ’, ಬಂಗಾಳಿಯಲ್ಲಿ ‘ಆಶ್ಚಿ’, ಗುಜರಾತಿಯಲ್ಲಿ ‘ಆವ್ಜೋ’ ಹಾಗೂ ಹಿಂದಿಯಲ್ಲಿ ‘ಆತಾ ಹೂಂ’ ಅಥವಾ ‘ಫಿರ್ ಮಿಲೆಂಗೆ’ ಎಂದು ಹೇಳುವ ಪದ್ಧತಿಯನ್ನ ನೆಟ್ಟಿಗರು ಉಲ್ಲೇಖಿಸಿದ್ದಾರೆ.

ಬಂಗಾಳಿ ಮೂಲದ ಬಳಕೆದಾರರೊಬ್ಬರು, “ಭಾಷೆಗಳು ನಮ್ಮನ್ನ ಬೇರ್ಪಡಿಸಿದ್ದರೂ, ಭಾವನೆಗಳು ನಮ್ಮೆಲ್ಲರನ್ನೂ ಒಗ್ಗೂಡಿಸಿವೆ” ಎಂದು ಬರೆದಿರುವ ಕಾಮೆಂಟ್ ಎಲ್ಲರ ಗಮನ ಸೆಳೆದಿದೆ. ಇನ್ನೂ ಕೆಲವರು ಜಪಾನೀಸ್ ಭಾಷೆಯ ‘ಇತ್ತೆಕಿಮಾಸ್’ ಹಾಗೂ ಹಾಲಿವುಡ್‌ನ ಟರ್ಮಿನೇಟರ್ ಸಿನಿಮಾದ ‘ಐ ವಿಲ್ ಬಿ ಬ್ಯಾಕ್’ ಡೈಲಾಗ್ ಅನ್ನೂ ತಮಾಷೆಯಾಗಿ ಇದಕ್ಕೆ ಹೋಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Editor Reporter
mirrortvkannada.com

ಕನ್ನಡಿಗರು ಯಾವತ್ತು ಗುಡ್‌ಬೈ ಎನ್ನಲ್ಲ, ಹೋಗಿ ಬರ್ತೀವಿ ಎನ್ನುವುದೇ ಒಂದು ಸುಂದರ ಎಮೋಷನ್‌: ಪೋಸ್ಟ್ ವೈರಲ್..

ಭಾಷೆ ಎಂಬುದು ಕೇವಲ ಮಾತನಾಡಲು ಬೇಕಾಗಿರುವ ಒಂದು ಮಾಧ್ಯಮವಲ್ಲ, ಅದು ಒಂದು ಸಂಸ್ಕೃತಿಯ ಜೀವಂತಿಕೆ ಮತ್ತು ಮನುಷ್ಯರ ನಡುವಿನ ಆತ್ಮೀಯ ಬಾಂಧವ್ಯದ ಪ್ರತೀಕ. ಕನ್ನಡಿಗರು ಬಳಸುವ ಪ್ರತಿಯೊಂದು ಪದಗಳಲ್ಲೂ ಭಾವನಾತ್ಮಕ ಅರ್ಥ ಇರುತ್ತದೆ. ಇದಕ್ಕೆ ಒಂದು ಉದಾಹರಣೆ ಎಂದರೆ ಹೋಗಿ ಬರ್ತೀನಿ ಎನ್ನುವ ಪದ.
ಕನ್ನಡಿಗರ ಮನೆಗಳಲ್ಲಿ ಯಾರೇ ಹೊರಗೆ ಹೋಗುವಾಗ ಅಥವಾ ಯಾರನ್ನಾದರೂ ಬೀಳ್ಕೊಡುವಾಗ ಎಂದಿಗೂ ಸರಿ ಹೋಗ್ತೀನಿ ಅಥವಾ ಹೋಗಿ ಎನ್ನುವ ಎಂದು ಹೇಳುವ ಪದ್ಧತಿಯೇ ಇಲ್ಲ. ಬದಲಾಗಿ, ತಲೆಮಾರುಗಳಿಂದಲೂ ನಮ್ಮ ಹಿರಿಯರು ನಮಗೆ ಕಲಿಸಿಕೊಟ್ಟಿರುವ ಸುಂದರ ಪದವೇ ಹೋಗಿ ಬರ್ತೀವಿ ಅಥವಾ ಹೋಗಿ ಬನ್ನಿ.

ಇದೀಗ ಈ ಪದಗಳ ಹಿಂದಿರುವ ಆಳವಾದ ಪ್ರೀತಿ ಮತ್ತು ಭಾವನಾತ್ಮಕ ಅರ್ಥವನ್ನ ವಿವರಿಸುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಲಕ್ಷಾಂತರ ನೆಟ್ಟಿಗರ ಮನಗೆದ್ದಿದೆ.
ಕನ್ನಡ ಭಾಷೆ ಸೊಗಡು ಸಾರುವ ಪೋಸ್ಟ್
ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದ್ದ ಬರಹವೊಂದರ ಸ್ಕ್ರೀನ್‌ಶಾಟ್ ಅನ್ನ, ಆರ್‌ ಬೆಂಗಳೂರು ಎನ್ನುವ ರೆಡ್ಡಿಟ್ ಪೇಜ್ (r/bangalore)ನಲ್ಲಿ 'ಹೋಗ್ ಬರ್ತೀನಿ ಎಂಬುದು ಒಂದು ಭಾವನೆ' ("Hog barthini" is an emotion) ಎಂಬ ಶೀರ್ಷಿಕೆಯಡಿ ಪೋಸ್ಟ್ ಮಾಡಲಾಗಿದೆ.

ಈ ಪೋಸ್ಟ್ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 1,600ಕ್ಕೂ ಹೆಚ್ಚು ಲೈಕ್ಸ್ ಹಾಗೂ ಸುಮಾರು 200ಕ್ಕೂ ಅಧಿಕ ಕಾಮೆಂಟ್‌ಗಳನ್ನು ಪಡೆದು ಟ್ರೆಂಡಿಂಗ್‌ನಲ್ಲಿದೆ.

"ಕನ್ನಡದಲ್ಲಿ ಗುಡ್‌ಬೈ ಎಂಬ ಶಾಶ್ವತ ಬೀಳ್ಕೊಡುಗೆಯ ಪದವಿಲ್ಲ. ಬದಲಿಗೆ ಹೋಗಿ ಬರ್ತೀನಿ ಎಂಬ ಸುಂದರ ಪದವಿದೆ. ಅಂದರೆ, ನಾನು ಈಗ ಹೋಗಿ ಮತ್ತೆ ಮರಳಿ ಬರುತ್ತೇನೆ ಎಂಬ ಅರ್ಥ. ಇದು ಕೇವಲ ಎರಡು ಪದಗಳಲ್ಲ, ಇದರಲ್ಲಿ ಅಡಗಿರುವ ಪ್ರೀತಿಯನ್ನ ನೋಡಿ.

ಅಗಲಿಕೆ ಎಂಬುದು ಎಂದಿಗೂ ಅಂತ್ಯವಲ್ಲ, ದೂರ ಎಂಬುದು ಕೇವಲ ತಾತ್ಕಾಲಿಕ ವಿರಾಮ ಅಷ್ಟೇ. ಹೊರಟು ಹೋದ ಪ್ರತಿಯೊಬ್ಬ ವ್ಯಕ್ತಿಯೂ ಮತ್ತೆ ಮರಳಿ ಬರುತ್ತಾರೆ ಎಂಬ ಭರವಸೆ ಮತ್ತು ಕಾಳಜಿ ಈ ಮಾತಿನಲ್ಲಿದೆ. ಇದು ನಿಜಕ್ಕೂ ಅತ್ಯಂತ ಕಾವ್ಯಾತ್ಮಕವಾಗಿದೆ" ಎಂದು ಆ ಬರಹದಲ್ಲಿ ಕನ್ನಡ ಭಾಷೆ ಸೊಗಡು ಹಾಗೂ ಅದರ ಹಿಂದಿನ ಮಮತೆಯನ್ನ ಈ ಪೋಸ್ಟ್‌ನಲ್ಲಿ ಬಣ್ಣಿಸಲಾಗಿದೆ.
ಕನ್ನಡ ಸಂಸ್ಕೃತಿಯಲ್ಲಿ ಅಡಗಿರುವ ಆತ್ಮೀಯತೆ ಮತ್ತು ಭರವಸೆ
ನಮ್ಮ ಕನ್ನಡ ಸಂಸ್ಕೃತಿಯಲ್ಲಿ ಯಾರಾದರೂ ಮನೆಯಿಂದ ಹೊರಡುವಾಗ ಆಕಸ್ಮಿಕವಾಗಿ 'ಹೋಗ್ತೀನಿ' ಎಂದು ಹೇಳಿದರೆ, ತಕ್ಷಣವೇ ಮನೆಯ ಅಮ್ಮಂದಿರು ಅಥವಾ ಅಜ್ಜಿಯಂದಿರು ತಿದ್ದಿ ಹಾಗೆಲ್ಲಾ ಹೇಳಬಾರದು, ಹೋಗಿ ಬರ್ತೀನಿ ಎಂದು ಹೇಳುವುದು ಪ್ರತಿ ಕನ್ನಡಿಗನ ಮನೆಯಲ್ಲೂ ಕಂಡು ಬರುವ ಸಾಮಾನ್ಯ ದೃಶ್ಯ.

ಅಂದರೆ ಈ ಮಾತಿನ ಅರ್ಥ, ಯಾರೂ ನಮ್ಮನ್ನ ಶಾಶ್ವತವಾಗಿ ಬಿಟ್ಟು ಹೋಗದಿರಲಿ, ಹೋದವರು ಸುರಕ್ಷಿತವಾಗಿ ಮರಳಿ ಬರಲಿ ಎಂಬ ಶುಭ ಹಾರೈಕೆ ಹಾಗೂ ಪ್ರೀತಿಯ ಭಾವ ಈ ಸಂಪ್ರದಾಯದ ಹಿಂದಿದೆ.
ವೈರಲ್ ಪೋಸ್ಟ್‌ಗೆ ನೆಟ್ಟಿಗರ ಭಾವುಕ
ರೆಡ್ಡಿಟ್‌ನಲ್ಲಿ ಈ ವೈರಲ್ ಪೋಸ್ಟ್ ನೋಡಿದ ಬಳಿಕ ಕನ್ನಡಿಗರು ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳ ಜನರೂ ತಮ್ಮ ಬಾಲ್ಯದ ನೆನಪುಗಳನ್ನ ಹಾಗೂ ತಮ್ಮ ಮಾತೃಭಾಷೆಯಲ್ಲೂ ಇರುವ ಇಂತಹದ್ದೇ ಸುಂದರ ಪದಗಳನ್ನ ಕಾಮೆಂಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಬಳಕೆದಾರರೊಬ್ಬರು, "ಬೆಳೆಯುವಾಗ ನಾನು ಎಷ್ಟು ಬಾರಿ ಈ ವಿಚಾರಕ್ಕೆ ಮನೆಯಲ್ಲಿ ತಿದ್ದಿಸಿಕೊಂಡಿದ್ದೇನೋ ಲೆಕ್ಕವೇ ಇಲ್ಲ. ಈಗ ಆ ಮಾತಿನ ಹಿಂದಿರುವ ಭಾವನೆಯ ಮಹತ್ವ ಅರ್ಥವಾಗಿದೆ, ನನ್ನ ಮಕ್ಕಳಿಗೂ ಇದನ್ನೇ ಕಲಿಸುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪೋಸ್ಟ್ ಹಾಕಿದ ವ್ಯಕ್ತಿ, "ನಾನು ಶಾಲೆಗೆ ಹೋಗುವಾಗ ಬೆಳಗ್ಗೆ ಆಕಸ್ಮಿಕವಾಗಿ 'ಸರಿ ಹೋಗ್ತೀನಿ ಅಮ್ಮ' ಎಂದರೆ ಸಾಕು, ಅಮ್ಮ ತಕ್ಷಣ ಬೈದು ಸರಿಪಡಿಸುತ್ತಿದ್ದರು" ಎಂದು ನೆನಪಿಸಿಕೊಂಡಿದ್ದಾರೆ.

ಮತ್ತೊಬ್ಬ ನೆಟ್ಟಿಗರು ತಮಾಷೆಯಾಗಿ, "ನೀವು ಯಾರೇ ಆಗಿರಿ, ಯಾರ ಮನೆಗೇ ಹೋಗಿರಿ, ಬರಿ 'ಹೋಗ್ತೀನಿ' ಅಂದರೆ ಅಮ್ಮ-ಅಜ್ಜಿಯರು ಮಾತ್ರ ಸುಮ್ಮನೆ ಬಿಡುವುದಿಲ್ಲ. 'ಹೋಗಿ ಬರ್ತೀನಿ' ಅನ್ನುವುದು ನಮ್ಮ ಮನೆಗಳ ಅಲಿಖಿತ ನಿಯಮ" ಎಂದು ಕಾಮೆಂಟ್ ಮಾಡಿದ್ದಾರೆ.
ಭಾಷೆ ಬೇರೆ, ಭಾವನೆ ಒಂದೇ
ಕೇವಲ ಕನ್ನಡ ಮಾತ್ರವಲ್ಲದೆ ಭಾರತದ ಬಹುತೇಕ ಪ್ರಾದೇಶಿಕ ಭಾಷೆಗಳಲ್ಲೂ ಇದೇ ಸಂಸ್ಕೃತಿ ಇದೆ ಎಂದು ಹಲವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ತಮಿಳಿನಲ್ಲಿ 'ಪೋಯಿಟ್ಟು ವರೇನ್', ಮಲಯಾಳಂನಲ್ಲಿ 'ಪೋಯಿಟ್ಟು ವರಾಂ', ತುಳುವಿನಲ್ಲಿ 'ಬರ್ಪೆ', ಮರಾಠಿಯಲ್ಲಿ 'ಯೇತೋ ಮಿ', ಬಂಗಾಳಿಯಲ್ಲಿ 'ಆಶ್ಚಿ', ಗುಜರಾತಿಯಲ್ಲಿ 'ಆವ್ಜೋ' ಹಾಗೂ ಹಿಂದಿಯಲ್ಲಿ 'ಆತಾ ಹೂಂ' ಅಥವಾ 'ಫಿರ್ ಮಿಲೆಂಗೆ' ಎಂದು ಹೇಳುವ ಪದ್ಧತಿಯನ್ನ ನೆಟ್ಟಿಗರು ಉಲ್ಲೇಖಿಸಿದ್ದಾರೆ.

ಬಂಗಾಳಿ ಮೂಲದ ಬಳಕೆದಾರರೊಬ್ಬರು, "ಭಾಷೆಗಳು ನಮ್ಮನ್ನ ಬೇರ್ಪಡಿಸಿದ್ದರೂ, ಭಾವನೆಗಳು ನಮ್ಮೆಲ್ಲರನ್ನೂ ಒಗ್ಗೂಡಿಸಿವೆ" ಎಂದು ಬರೆದಿರುವ ಕಾಮೆಂಟ್ ಎಲ್ಲರ ಗಮನ ಸೆಳೆದಿದೆ. ಇನ್ನೂ ಕೆಲವರು ಜಪಾನೀಸ್ ಭಾಷೆಯ 'ಇತ್ತೆಕಿಮಾಸ್' ಹಾಗೂ ಹಾಲಿವುಡ್‌ನ ಟರ್ಮಿನೇಟರ್ ಸಿನಿಮಾದ 'ಐ ವಿಲ್ ಬಿ ಬ್ಯಾಕ್' ಡೈಲಾಗ್ ಅನ್ನೂ ತಮಾಷೆಯಾಗಿ ಇದಕ್ಕೆ ಹೋಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్