ಕಾವೇರಿ ನದಿ ನೀರು ವಿಚಾರದಲ್ಲಿ ಕರ್ನಾಟಕಕ್ಕೆ ಕಾನೂನು ಚೌಕಟ್ಟಿನೊಳಗೆ ಗೆಲುವು ಸಿಕ್ಕಿದೆ. ಕರ್ನಾಟಕ ಮತ್ತು ತಮಿಳುನಾಡು ಎರಡಕ್ಕೂ ನ್ಯಾಯ ಸಿಕ್ಕಿದೆ. ಈಗ ಈ ವಿಚಾರ ಯಾರ ಕೈಲೂ ಇಲ್ಲ. ದೇಶದ ಕಾನೂನು ಮತ್ತು ಸುಪ್ರೀಂ ಕೋರ್ಟ್‌ನ ಆದೇಶ ಪಾಲಿಸಲಿರುವ ಕರ್ನಾಟಕ ಯಾವ ತಕರಾರಿಗೂ ಹೋಗುವುದಿಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಕರ್ನಾಟಕವು ಮೇಕೆದಾಟು ಸೇರಿ ಏನೇ ಕಾವೇರಿ ಯೋಜನೆ ಕೈಗೊಳ್ಳಲು ಹೋದರೂ ಖ್ಯಾತೆ ತೆಗೆಯುವ ತಮಿಳುನಾಡು ಇದೀಗ ದನಿ ಕೆಳಭಾಗದಲ್ಲಿ ಯೋಜನೆ ಆರಂಭಿಸಲು ಮುಂದಾಗಿದ್ದು, ಅದಕ್ಕೆ ಕರ್ನಾಟಕ ಸಹಕರಿಸುವುದಾಗಿ ತಿಳಿಸಿದೆ. ಇದು ಕನ್ನಡಿಗರಿಗೆ ಅಚ್ಚರಿ ಮೂಡಿಸಿದೆ. ತಮಿಳುನಾಡು ಮೇಕೆದಾಟುಗೆ ಅಡ್ಡಿ ಪಡಿಸಿದಂತೆ ನಾವು ಮಾಡಲ್ಲ. ಎರಡು ರಾಜ್ಯಗಳಿಗೂ ಅನುಕೂಲ ಆಗಬೇಕು ಎಂಬುದು ಕರ್ನಾಟಕದ ಆಶಯವಾಗಿದೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯವು ಕಾನೂನು ಚೌಕಟ್ಟಿನೊಳಗೆ ಗೆಲುವು ಸಾಧಿಸಿದೆ. ಸುಪ್ರೀಂ ಕೋರ್ಟ್ ತಮಿಳುನಾಡಿಗೆ ನೀರು ಬಿಡುವಂತೆ ನೀಡಿದ ಕರ್ನಾಟಕಕ್ಕೆ ಸೂಚನೆ ನೀಡಿ ಆದೇಶಿಸಿದೆ. ಈ ಆದೇಶ ಕರ್ನಾಟಕ ಪಾಲಿಸಲಿದೆ. ಮುಖ್ಯವಾಗಿ ಕಾವೇರಿ ನದಿ ಕೆಳಭಾಗದಲ್ಲಿ ತಮಿಳುನಾಡು ಕೆಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ. ಇತ್ತ ನಾವು ಮೇಕೆದಾಟು ಯೋಜನೆಗೆ ಈಗಾಗಲೇ ನಿರ್ಧರಿಸಿದ್ದೇವೆ. ಅದರಿಂದ ಬೆಂಗಳೂರು ನಗರ ಸೇರಿ ರಾಜ್ಯ ವಿವಿಧ ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕರ್ನಾಟಕ ಕೋರ್ಟ್ ಆದೇಶ ಪಾಲಿಸುತ್ತೆ
ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದು, ಕರ್ನಾಟಕ ಯಾವುದೇ ಜಗಳಕ್ಕೆ ಹೋಗುವ ಅಗತ್ಯವಿಲ್ಲ. ಮೇಲ್ಮನವಿ ಸಲ್ಲಿಸುವುದಿಲ್ಲ. ನಾವು ಆದೇಶ ಪಾಲಿಸುತ್ತೇವೆ. ತಮಿಳುನಾಡು ನದಿಯ ಕೆಳಭಾಗದ ಯೋಜನೆಗಳನ್ನು ಬೆಂಬಲಿಸಲಿದ್ದೇವೆ ಎಂದು ಹೇಳಿದರು. ಈ ಮೂಲಕ ಸಮಸ್ಯೆ ಬಗೆಹರಿಸಲು ಮಹತ್ವದ ಹೆಜ್ಜೆ ಇಟ್ಟಿದ್ದಾರೆ ಎನ್ನಲಾಗಿದೆ.
ಈ ವಿಷಯದ ಕಾನೂನು ಹಿನ್ನೆಲೆಯನ್ನು ಪ್ರಸ್ತಾಪಿಸಿದ ಶಿವಕುಮಾರ್, ತಮಿಳುನಾಡಿನ ಡಿಎಂಕೆ (DMK) ಸರ್ಕಾರ ಅಧಿಕಾರದಲ್ಲಿದ್ದಾಗ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆಗ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿತ್ತು, ಆದರೆ ಆ ಅರ್ಜಿ ತಿರಸ್ಕೃತವಾಯಿತು. "ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ನಾವು ಕೇವಲ ಡಿಪಿಆರ್ (DPR) ಅನ್ನು ಅಪ್‌ಲೋಡ್ ಮಾಡಿದ್ದೇವೆ ಅಷ್ಟೇ. ಅರಣ್ಯ ಭೂಮಿಗೆ ಬದಲಾಗಿ ಪರ್ಯಾಯ ಭೂಮಿ ನೀಡಬೇಕಿದೆ. ಅದಕ್ಕಾಗಿ ನಾವು ಈಗಾಗಲೇ ಸಿದ್ಧತೆ ನಡೆಸುತ್ತಿದ್ದೇವೆ, ಅವರು ಹೇಳಿದ್ದರು. ಈ ವಿಷಯದಲ್ಲಿ ಪಕ್ಷಾತೀತವಾಗಿ ಇಡೀ ರಾಜ್ಯವೇ ಒಗ್ಗಟ್ಟಾಗಿದೆ, ಬೆಂಬಲ ನೀಡಲಿದೆ ಎಂದು ಹೇಳಿದರು.
ಕರ್ನಾಟಕದ ವಿವಿಧ ರಾಜ್ಯಗಳಿಗೆ ಅನುಕೂಲ
ಕಾವೇರಿ ನೀರು ಯೋಜನೆಗಳ ವಿಚಾರವಾಗಿ ರಾಜಕೀಯವಾಗಿ ಒಂದಿಬ್ಬರು ಅಸೂಯೆಯಿಂದ ಮಾತನಾಡಬಹುದು. ಇದರ ಹೊರತು ನಮ್ಮ ಸಹಕಾರ ಇದೆ. ಮೇಕೆದಾಟು ಯೋಜನೆಯಿಂದ ಬೆಂಗಳೂರಿಗೆ ಕುಡಿಯಲು ನೀರು, ಮಂಡ್ಯ, ಹಾಸನ, ತುಮಕೂರು ಮತ್ತು ಮೈಸೂರು ಜಿಲ್ಲೆಗಳಿಗೆ ನೇರ ಪ್ರಯೋಜನವಾಗಲಿದೆ ಎಂದು ಸಿಎಂ ಪುನರುಚ್ಚರಿಸಿದರು.
ಎರಡು ರಾಜ್ಯಗಳ ನಡುವೆ ನೀರಿನ ಸಮತೋಲನ ಕಾಪಾಡುವ ನಿಟ್ಟಿನಲ್ಲಿ, ಇಡೀ ರಾಜ್ಯದಲ್ಲಿ ಎಲ್ಲರೂ ಒಂದಾಗಿ ಧ್ವನಿ ಎತ್ತಿದ್ದಾರೆ. ಇತರ ರಾಜಕೀಯ ಪಕ್ಷಗಳ ನಮಗೆ ಸಹಕರಿಸಿದ್ದಾರೆ, ಸಹಕರಿಸುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುರಿತು ಮಾತನಾಡಿದ ಡಿಕೆ ಶಿವಕುಮಾರ್ ಅವರು, ದೇವೇಗೌಡರು ಪತ್ರ ಬರೆದಿದ್ದಾರೆ. ಅವರ ಪುತ್ರ ಕುಮಾರಸ್ವಾಮಿ ಅವರು ಬಹುಶಃ ಸಿಟ್ಟಿನಲ್ಲಿ ಏನೋ ಹೇಳಿರಬಹುದು ಎಂದು ಪ್ರತಿಕ್ರಿಯಿಸಿದರು. ನಾವು ಅದೆಲ್ಲ ಗಂಭೀರವಾಗಿ ಪರಿಗಣಿಸಬೇಕಿಲ್ಲ. ಈ ಕಾವೇರಿ ವಿಚಾರದಲ್ಲಿ ಮಹತ್ವದ ಕೆಲಸ ಆಗಬೇಕು ಎಂದು ದೇವೇಗೌಡರು ಹೇಳಿದ್ದಾರೆ. ಅದನ್ನು ಸಾಧಿಸಿಯೇ ತೀರುತ್ತೇನೆ ಎಂದರು.
ಕಾವೇರಿ ನೀರಿನ ಪ್ರಸ್ತಾವನೆಯನ್ನು ಪ್ರಧಾನಮಂತ್ರಿ ಗಮನಕ್ಕೂ ತಂದಿದ್ದೇವೆ. ಇದು ನನ್ನ ಸಮಸ್ಯೆಯಲ್ಲ. ಇದು ಇಡೀ ರಾಜ್ಯದ ಸಮಸ್ಯೆ. ಬೆಂಗಳೂರಿನಲ್ಲಿ ಕುಡಿಯುವ ನೀರಿಗಾಗಿ ಪ್ರಪಂಚದಾದ್ಯಂತದ ಜನರು ಇಲ್ಲಿಗೆ ಬರುತ್ತಿದ್ದಾರೆ. ನಗರವಾಸಿಗಳಿಗೆ ಕುಡಿಯುವ ನೀರು ಒದಗಿಸಲೇಬೇಕು. ಕಾವೇರಿ ಯೋಜನೆಗಳಿಂದ ಬೆಂಗಳೂರು ದಕ್ಷಿಣ ಜಿಲ್ಲೆ ಅಥವಾ ಬೇರೆ ಯಾವುದೇ ಜಿಲ್ಲೆಯ ಕೃಷಿ ಉದ್ದೇಶಕ್ಕಾಗಿ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಕಠಿಣ ಸಂದರ್ಭಗಳಲ್ಲಿ ಮಂಡ್ಯ, ಮೈಸೂರು, ತುಮಕೂರು ಪಾಲಿನ 66 ಟಿಎಂಸಿ (TMC) ನೀರು ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು.








