ಮೆಟ್ರೋ ಟಿಕೆಟ್‌ಗೆ ಹಣವಿಲ್ಲ ಎಂದ ಡಿಕೆಶಿ; ಸ್ವತಃ ಕಾರ್ಡ್ ಬಳಸಿ ಟಿಕೆಟ್ ಖರೀದಿಸಿದ ಮೋದಿ..

mirrortvkannada.com
Date : 14 November 2026, 11:12 pm Posted By : MIRROR TV KANNADA

ಮೆಟ್ರೋ ಟಿಕೆಟ್‌ಗೆ ಹಣವಿಲ್ಲ ಎಂದ ಡಿಕೆಶಿ; ಸ್ವತಃ ಕಾರ್ಡ್ ಬಳಸಿ ಟಿಕೆಟ್ ಖರೀದಿಸಿದ ಮೋದಿ..

ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನಾ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡುವಿನ ಆತ್ಮೀಯ ಮಾತುಕತೆಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮೆಟ್ರೋ ಟಿಕೆಟ್ ಕೌಂಟರ್‌ನಲ್ಲಿ ಇಬ್ಬರೂ ನಗುತ್ತಾ ಮಾತನಾಡುತ್ತಿರುವ ದೃಶ್ಯ ಸಾಕಷ್ಟು ಕುತೂಹಲ ಮೂಡಿಸಿತ್ತು. ಇದೀಗ ಆ ಸಂದರ್ಭದಲ್ಲಿ ಪ್ರಧಾನಿಯವರೊಂದಿಗೆ ನಡೆದ ಲಘು ಸಂಭಾಷಣೆಯ ವಿವರವನ್ನು ಸ್ವತಃ ಡಿ.ಕೆ. ಶಿವಕುಮಾರ್ ಹಂಚಿಕೊಂಡಿದ್ದಾರೆ.
ಮೆಟ್ರೋ ಪ್ರಯಾಣದ ವೇಳೆ ಪ್ರಧಾನಿ ಮೋದಿ ತೋರಿದ ಆತ್ಮೀಯತೆ, ಅವರೇ ಖರೀದಿಸಿದ ಸ್ಮಾರ್ಟ್ ಕಾರ್ಡ್, ಬೆಂಗಳೂರಿನ ಮೆಟ್ರೋ ವಿಸ್ತರಣೆ ಹಾಗೂ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡುವಂತೆ ಮಾಡಿದ ಮನವಿ ಸೇರಿದಂತೆ ಹಲವು ವಿಚಾರಗಳನ್ನು ಡಿಕೆಶಿ ಬಹಿರಂಗಪಡಿಸಿದ್ದಾರೆ.
 
ಮೋದಿಯವರೇ ಖರೀದಿಸಿದ ಮೆಟ್ರೋ ಸ್ಮಾರ್ಟ್ ಕಾರ್ಡ್!
ಮೆಟ್ರೋ ಟಿಕೆಟ್ ಖರೀದಿಸುವ ಸಂದರ್ಭದಲ್ಲಿ ತಮ್ಮ ಬಳಿ ಹಣ ಇರಲಿಲ್ಲ. ಹೀಗಾಗಿ, "ನನ್ನ ಟಿಕೆಟ್ ಕೂಡ ನೀವೇ ತೆಗೆದುಕೊಳ್ಳಿ" ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿದ್ದಾಗಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೇ ಸ್ಮಾರ್ಟ್ ಕಾರ್ಡ್ ಖರೀದಿಸಿದ್ದರು. ಆ ಕಾರ್ಡ್ ಅನ್ನು ಮಾಧ್ಯಮದವರಿಗೆ ತೋರಿಸುವ ಮೂಲಕ ಅಂದಿನ ಪ್ರಸಂಗವನ್ನು ಡಿಕೆಶಿ ನೆನಪಿಸಿಕೊಂಡಿದ್ದಾರೆ. ಮೆಟ್ರೋ ಪ್ರಯಾಣದ ಸಂದರ್ಭದಲ್ಲಿ ಪ್ರಧಾನಿ ತಮ್ಮೊಂದಿಗೆ ಆತ್ಮೀಯವಾಗಿ ನಡೆದುಕೊಂಡರು ಎಂದು ಹೇಳಿದ್ದಾರೆ.
ನೀರಿನ ಹಕ್ಕನ್ನು ರಕ್ಷಿಸುವ ಜವಾಬ್ದಾರಿ ನಮ್ಮದು
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ನೀರಿನ ವಿಚಾರದಲ್ಲಿ ತೊಂದರೆಯಾಗಲಿದೆ ಎಂಬ ಆತಂಕಕ್ಕೆ ಪ್ರತಿಕ್ರಿಯಿಸಿದ ಅವರು, ತಮಿಳುನಾಡಿಗೆ ಸಲ್ಲಬೇಕಾದ ನೀರಿನ ಹಕ್ಕನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅದೇ ಸಮಯದಲ್ಲಿ ಕರ್ನಾಟಕದ ಹಕ್ಕನ್ನೂ ರಕ್ಷಿಸಬೇಕಿದೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್ 177 ಟಿಎಂಸಿ ನೀರಿನ ಹಕ್ಕಿನ ಕುರಿತು ಸ್ಪಷ್ಟಪಡಿಸಿದೆ. ಅವರಿಗೆ ಸಲ್ಲಬೇಕಾದ ನೀರನ್ನು ಒದಗಿಸುವುದು ನಮ್ಮ ಕರ್ತವ್ಯ. ಅಣೆಕಟ್ಟು ನಿರ್ಮಿಸಿ ಅವರಿಗೂ ನೀರು ಕೊಡುತ್ತೇವೆ. ತಮಿಳುನಾಡಿನವರು ಬಂದು ಚರ್ಚೆ ನಡೆಸಲಿ. ಯೋಜನೆಯ ವಾಸ್ತವಾಂಶಗಳನ್ನು ವಿವರಿಸಲು ನಾನು ಸಿದ್ಧನಿದ್ದೇನೆ. ಈ ಕುರಿತು ಸಂಪೂರ್ಣ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಎಂದರು.
ಅನುಮತಿಗಾಗಿ ಕೇಂದ್ರದ ಮೇಲೆ ಒತ್ತಡ
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿಗಳನ್ನು ನೀಡುವಂತೆ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದೇನೆ. ಎಲ್ಲ ಪಕ್ಷಗಳೂ ಯೋಜನೆ ವಿಚಾರದಲ್ಲಿ ಒಪ್ಪಿಗೆ ಸೂಚಿಸಿವೆ. ಅಗತ್ಯ ದಾಖಲೆಗಳನ್ನು ಸಲ್ಲಿಸುವ ಕೆಲಸ ನಡೆಯುತ್ತಿದೆ. ಅನುಮತಿಗಳು ದೊರೆತರೆ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.‌
ರಾಜಕಾರಣದಲ್ಲಿ ಸ್ಪರ್ಧೆ, ಅಭಿವೃದ್ಧಿಯಲ್ಲಿ ಸಹಕಾರ
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅವರೊಂದಿಗಿನ ಒಡನಾಟದ ಬಗ್ಗೆ ಕೇಳಿದಾಗ, ರಾಜಕಾರಣ ಮಾಡುವಾಗ ಸ್ಪರ್ಧೆ ಮಾಡೋಣ. ಅಭಿವೃದ್ಧಿ ವಿಚಾರದಲ್ಲಿ ಸಹಕಾರ ನೀಡೋಣ. ರಾಜಕಾರಣದಲ್ಲಿ ನಾವು ರಾಜಕೀಯ ಮಾಡುತ್ತೇವೆ. ಆದರೆ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರದ ಸಹಕಾರ ಪಡೆಯುವುದು ನಮ್ಮ ಜವಾಬ್ದಾರಿ. ದೇಶದ ಹಿತಾಸಕ್ತಿ ವಿಚಾರದಲ್ಲಿ ನಾವು ಒಟ್ಟಾಗಿ ಕೆಲಸ ಮಾಡಬೇಕು.

ಕರ್ನಾಟಕ ಹೊರತಾಗಿ ದೇಶದ ಪ್ರಗತಿ ಅಸಾಧ್ಯ. ದೇಶದಲ್ಲಿ ಜಿಎಸ್ ಟಿ ಹಾಗೂ ತೆರಿಗೆ ಸಂಗ್ರಹದಲ್ಲಿ 2ನೇ ಸ್ಥಾನ, ನಮ್ಮ ರಾಜ್ಯ ಪ್ರತಿ ವರ್ಷ ಒಂದೂವರೆ ಲಕ್ಷ ಇಂಜಿನಿಯರ್ ಗಳನ್ನು ಸೃಷ್ಟಿಸುತ್ತಿದೆ. 13,900 ವೈದ್ಯರನ್ನು ತಯಾರು ಮಾಡುತ್ತಿದ್ದೇವೆ. ಕರ್ನಾಟಕ ಪ್ರಗತಿ ಸಾಧಿಸಿದರೆ ದೇಶ ಪ್ರಗತಿ ಸಾಧಿಸಲು ಸಾಧ್ಯ ಎಂದರು.

ಮೇಕೆದಾಟು ಯೋಜನೆಯಷ್ಟೇ ಅಲ್ಲದೆ, ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸಬೇಕು ಎಂಬ ಬೇಡಿಕೆಯನ್ನು ಕೇಂದ್ರದ ಮುಂದಿಟ್ಟಿದ್ದೇನೆ. ಮೆಟ್ರೊ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮಾನ ಪಾಲುದಾರಿಕೆ ಇರಬೇಕು ಎಂದು ಒತ್ತಾಯಿಸಿದ್ದೇನೆ. ಇದಕ್ಕಾಗಿ ತಾಂತ್ರಿಕ ಸಮಿತಿ ರಚಿಸುವಂತೆಯೂ ಮನವಿ ಮಾಡಿದ್ದೇನೆ. ಮೆಟ್ರೋ ಸಂಪರ್ಕವನ್ನು ಮುಂದಿನ ಹಂತಗಳಲ್ಲಿ 500 ಕಿ.ಮೀ.ವರೆಗೆ ವಿಸ್ತರಿಸುವ ಗುರಿ ಇದ್ದು, ಬಾಕಿ ಇರುವ ಪ್ರಸ್ತಾವನೆಗಳಿಗೂ ತ್ವರಿತ ಅನುಮೋದನೆ ನೀಡುವಂತೆ ಕೇಳಿದ್ದೇನೆ ಎಂದು ತಿಳಿಸಿದರು.
ಡಬಲ್ ಡೆಕ್ಕರ್ ಫ್ಲೈಓವರ್‌ಗೆ ಮನವರಿಕೆ
ಬೆಂಗಳೂರಿನ ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆಗೆ ಕೇಂದ್ರದ ವಿರೋಧ ವ್ಯಕ್ತಪಡಿಸುತ್ತಿದ್ದು, ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಪ್ರಧಾನಿಯವರಿಗೆ ಯೋಜನೆಯ ಅಗತ್ಯವನ್ನು ವಿವರಿಸಿದ್ದೇನೆ. ಬೆಂಗಳೂರಿನಲ್ಲಿ ರಸ್ತೆಗಳ ಪ್ರಮಾಣ ಕೇವಲ ಶೇ.8ರಷ್ಟಿದೆ. ಇತರ ನಗರಗಳಲ್ಲಿ ಇದು ಶೇ.18ರಿಂದ 20ರಷ್ಟಿದೆ. ಬೆಂಗಳೂರಿನಲ್ಲಿ ಪ್ರತಿ ಚದರ ಅಡಿಗೆ ಸುಮಾರು 50 ಸಾವಿರ ರೂ. ಪರಿಹಾರ ನೀಡಬೇಕಾದ ಪರಿಸ್ಥಿತಿ ಇದೆ.

ಇದನ್ನು ಸರ್ಕಾರವೊಂದರಿಂದಲೇ ಭರಿಸುವುದು ಕಷ್ಟ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ವೆಚ್ಚ ಹಂಚಿಕೊಳ್ಳುವ ಮೂಲಕ ಡಬಲ್ ಡೆಕ್ಕರ್ ಯೋಜನೆ ಜಾರಿಗೊಳಿಸಬೇಕಿದೆ ಎಂದು ಮನವರಿಕೆ ಮಾಡಿದ್ದೇನೆ. ಈ ಸಂಬಂಧ ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಬರುವುದಾಗಿಯೂ ತಿಳಿಸಿದ್ದೇನೆ. ಅದಕ್ಕೆ ಅವರು ಒಪ್ಪಿದ್ದಾರೆ. ನಾನು ರಾಜ್ಯದ ಪ್ರತಿನಿಧಿಯಾಗಿ ರಾಜ್ಯದ ಹಿತಕ್ಕಾಗಿ ನನ್ನ ಕೆಲಸ ಮಾಡುತ್ತಿರುವೆ ಯಾರು ಏನು ಬೇಕಾದರೂ ಊಹಿಸಿಕೊಳ್ಳಲಿ ಎಂದರು.
ರೈತರ ವಿದ್ಯುತ್ ಬಿಲ್ ಹೊರೆ ₹30 ಸಾವಿರ ಕೋಟಿಗೆ ಏರಿಕೆ
ಸುವರ್ಣಸೌಧದ ಅಧಿವೇಶನದಲ್ಲಿ ವಿದ್ಯುತ್ ಬಿಲ್ ಪಾವತಿ ಬಾಕಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, "ಇದು ಕೇವಲ ಸುವರ್ಣಸೌಧಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ. ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಬಿಲ್ ಹೊರೆ ಹಿಂದೆ ಸುಮಾರು ₹20 ಸಾವಿರ ಕೋಟಿ ಇದ್ದದ್ದು, ಈಗ ₹30 ಸಾವಿರ ಕೋಟಿಗೆ ಏರಿಕೆಯಾಗಿದೆ. ಬರಗಾಲದ ಹಿನ್ನೆಲೆಯಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಿದೆ. ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳಿಗೆ ನೀರು ಪೂರೈಕೆ ಸೇರಿದಂತೆ ಹಲವು ಕಾರಣಗಳಿಂದ ಬಿಲ್ ಮೊತ್ತ ಹೆಚ್ಚಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಸರ್ಕಾರ ಸರಿಪಡಿಸಲಿದೆ ಎಂದು ತಿಳಿಸಿದರು.
ಮೆಟ್ರೋ ಸಂಪರ್ಕ 500 ಕಿ.ಮೀ ವಿಸ್ತರಣೆ ಗುರಿ
ನಂತರ ಪಿಂಕ್ ಮೆಟ್ರೋದಲ್ಲಿ ಮಾಧ್ಯಮಗಳು ಕೆಂಪು ಮಾರ್ಗದ ಮೆಟ್ರೋ ರೈಲಿಗೆ ಸಾಕಷ್ಟು ಬೇಡಿಕೆ ಇದೆ ಎಂದು ಕೇಳಿದಾಗ, ಹೇಗಾದರೂ ಮಾಡಿ 2028ರ ವೇಳೆಗೆ ಮೆಟ್ರೋ ಸಂಪರ್ಕವನ್ನು 500 ಕಿ.ಮೀ ವಿಸ್ತರಣೆಗೆ ಮುಂದಾಗಬೇಕು" ಎಂದರು.

ಮೆಟ್ರೋ ಅಭಿವೃದ್ಧಿಗೆ ಏನೆಲ್ಲಾ ಯೋಜನೆ ರೂಪಿಸಲಾಗಿದೆ ಎಂದು ಕೇಳಿದಾಗ, "ಕೇಂದ್ರ ಮತ್ತು ರಾಜ್ಯದ ನಡುವೆ ಇರುವ 50:50 ವೆಚ್ಚ ಹಂಚಿಕೆ ನಿಯಮವನ್ನು ಸರಿಯಾಗಿ ಪಾಲಿಸಿದರೆ ಸಾಕು. ಯೋಜನೆಗಳಿಗೆ ತ್ವರಿತವಾಗಿ ಅನುಮೋದನೆ ನೀಡಬೇಕು. ಅನುಮತಿಗಾಗಿ ಹೆಚ್ಚು ಸಮಯ ಕಾಯುವಂತಾಗಬಾರದು. ವಿದೇಶಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದಕ್ಕಿಂತ ಕಡಿಮೆ ಬಡ್ಡಿದರದಲ್ಲಿ ಕೇಂದ್ರ ಸರಕಾರದ ಬ್ಯಾಂಕ್‌ಗಳಿಂದ ಸಾಲ ಸಿಗುವಂತಾಗಬೇಕು ಎಂದು ಮನವಿ ಮಾಡಿದ್ದೇನೆ ಎಂದರು.
ರಾಜ್ಯದ ಗ್ರಾನೈಟ್ ಕಲ್ಲು ಬಳಸಲು ಸೂಚನೆ
ನಮ್ಮ ರಾಜ್ಯದಲ್ಲೇ ಉತ್ತಮ ಗುಣಮಟ್ಟದ ಕಲ್ಲುಗಳು ಲಭ್ಯವಿರುವಾಗ ಹೊರಗಡೆಯಿಂದ ಕಲ್ಲು ತರಿಸುವ ಅಗತ್ಯವೇನಿದೆ? ಸ್ಥಳೀಯ ಕಲ್ಲು ಬಳಸಿದರೆ ಇಲ್ಲಿನ ಉದ್ಯಮಕ್ಕೂ ಕೆಲಸ ಸಿಗುತ್ತದೆ. ಕಲ್ಲು ಕತ್ತರಿಸುವುದರಿಂದ ಹಿಡಿದು ಸಂಸ್ಕರಣೆಯವರೆಗೆ ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಹೊರಗಡೆಯಿಂದ ಕಲ್ಲು ತಂದು ನಮ್ಮ ಉದ್ಯಮಕ್ಕೆ ಧಕ್ಕೆ ತರಬೇಡಿ ಎಂದು ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಿಗೆ ಹೇಳಿದ್ದೆ ಎಂದರು.

ಚಾಮರಾಜನಗರ, ತುಮಕೂರು, ಸಿರಾ, ಬಾದಾಮಿ, ಇಳಕಲ್‌, ಕನಕಪುರ, ಮಾಗಡಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗ್ರಾನೈಟ್‌ ಲಭ್ಯವಿದೆ. ಹಾಸನ ಗ್ರೀನ್‌, ತುಮಕೂರು ಬಾರ್ಪರಿ, ಬೆಂಗಳೂರು ಬ್ಲೂ, ಮಲ್ಟಿ ಕಲರ್‌, ಜುಬ್ರಾನಿ, ಕೊಳ್ಳೇಗಾಲ ಬ್ಲ್ಯಾಕ್‌, ಇಳಕಲ್‌ ರೆಡ್‌ ಸೇರಿದಂತೆ ವಿವಿಧ ಬಣ್ಣಗಳ ಕಲ್ಲುಗಳು ರಾಜ್ಯದಲ್ಲಿವೆ. ಇವುಗಳ ಗುಣಮಟ್ಟವೂ ಉತ್ತಮವಾಗಿದೆ ಎಂದು ವಿವರಿಸಿದರು.

⬇ DOWNLOAD
×

ಮೆಟ್ರೋ ಟಿಕೆಟ್ ಖರೀದಿಸುವ ಸಂದರ್ಭದಲ್ಲಿ ತಮ್ಮ ಬಳಿ ಹಣ ಇರಲಿಲ್ಲ. ಹೀಗಾಗಿ, “ನನ್ನ ಟಿಕೆಟ್ ಕೂಡ ನೀವೇ ತೆಗೆದುಕೊಳ್ಳಿ” ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿದ್ದಾಗಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೇ ಸ್ಮಾರ್ಟ್ ಕಾರ್ಡ್ ಖರೀದಿಸಿದ್ದರು. ಆ ಕಾರ್ಡ್ ಅನ್ನು ಮಾಧ್ಯಮದವರಿಗೆ ತೋರಿಸುವ ಮೂಲಕ ಅಂದಿನ ಪ್ರಸಂಗವನ್ನು ಡಿಕೆಶಿ ನೆನಪಿಸಿಕೊಂಡಿದ್ದಾರೆ. ಮೆಟ್ರೋ ಪ್ರಯಾಣದ ಸಂದರ್ಭದಲ್ಲಿ ಪ್ರಧಾನಿ ತಮ್ಮೊಂದಿಗೆ ಆತ್ಮೀಯವಾಗಿ ನಡೆದುಕೊಂಡರು ಎಂದು ಹೇಳಿದ್ದಾರೆ.

ನೀರಿನ ಹಕ್ಕನ್ನು ರಕ್ಷಿಸುವ ಜವಾಬ್ದಾರಿ ನಮ್ಮದು

ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ನೀರಿನ ವಿಚಾರದಲ್ಲಿ ತೊಂದರೆಯಾಗಲಿದೆ ಎಂಬ ಆತಂಕಕ್ಕೆ ಪ್ರತಿಕ್ರಿಯಿಸಿದ ಅವರು, ತಮಿಳುನಾಡಿಗೆ ಸಲ್ಲಬೇಕಾದ ನೀರಿನ ಹಕ್ಕನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅದೇ ಸಮಯದಲ್ಲಿ ಕರ್ನಾಟಕದ ಹಕ್ಕನ್ನೂ ರಕ್ಷಿಸಬೇಕಿದೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್ 177 ಟಿಎಂಸಿ ನೀರಿನ ಹಕ್ಕಿನ ಕುರಿತು ಸ್ಪಷ್ಟಪಡಿಸಿದೆ. ಅವರಿಗೆ ಸಲ್ಲಬೇಕಾದ ನೀರನ್ನು ಒದಗಿಸುವುದು ನಮ್ಮ ಕರ್ತವ್ಯ. ಅಣೆಕಟ್ಟು ನಿರ್ಮಿಸಿ ಅವರಿಗೂ ನೀರು ಕೊಡುತ್ತೇವೆ. ತಮಿಳುನಾಡಿನವರು ಬಂದು ಚರ್ಚೆ ನಡೆಸಲಿ. ಯೋಜನೆಯ ವಾಸ್ತವಾಂಶಗಳನ್ನು ವಿವರಿಸಲು ನಾನು ಸಿದ್ಧನಿದ್ದೇನೆ. ಈ ಕುರಿತು ಸಂಪೂರ್ಣ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಎಂದರು.

ಅನುಮತಿಗಾಗಿ ಕೇಂದ್ರದ ಮೇಲೆ ಒತ್ತಡ

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿಗಳನ್ನು ನೀಡುವಂತೆ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದೇನೆ. ಎಲ್ಲ ಪಕ್ಷಗಳೂ ಯೋಜನೆ ವಿಚಾರದಲ್ಲಿ ಒಪ್ಪಿಗೆ ಸೂಚಿಸಿವೆ. ಅಗತ್ಯ ದಾಖಲೆಗಳನ್ನು ಸಲ್ಲಿಸುವ ಕೆಲಸ ನಡೆಯುತ್ತಿದೆ. ಅನುಮತಿಗಳು ದೊರೆತರೆ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.‌

ರಾಜಕಾರಣದಲ್ಲಿ ಸ್ಪರ್ಧೆ, ಅಭಿವೃದ್ಧಿಯಲ್ಲಿ ಸಹಕಾರ

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅವರೊಂದಿಗಿನ ಒಡನಾಟದ ಬಗ್ಗೆ ಕೇಳಿದಾಗ, ರಾಜಕಾರಣ ಮಾಡುವಾಗ ಸ್ಪರ್ಧೆ ಮಾಡೋಣ. ಅಭಿವೃದ್ಧಿ ವಿಚಾರದಲ್ಲಿ ಸಹಕಾರ ನೀಡೋಣ. ರಾಜಕಾರಣದಲ್ಲಿ ನಾವು ರಾಜಕೀಯ ಮಾಡುತ್ತೇವೆ. ಆದರೆ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರದ ಸಹಕಾರ ಪಡೆಯುವುದು ನಮ್ಮ ಜವಾಬ್ದಾರಿ. ದೇಶದ ಹಿತಾಸಕ್ತಿ ವಿಚಾರದಲ್ಲಿ ನಾವು ಒಟ್ಟಾಗಿ ಕೆಲಸ ಮಾಡಬೇಕು.

ಕರ್ನಾಟಕ ಹೊರತಾಗಿ ದೇಶದ ಪ್ರಗತಿ ಅಸಾಧ್ಯ. ದೇಶದಲ್ಲಿ ಜಿಎಸ್ ಟಿ ಹಾಗೂ ತೆರಿಗೆ ಸಂಗ್ರಹದಲ್ಲಿ 2ನೇ ಸ್ಥಾನ, ನಮ್ಮ ರಾಜ್ಯ ಪ್ರತಿ ವರ್ಷ ಒಂದೂವರೆ ಲಕ್ಷ ಇಂಜಿನಿಯರ್ ಗಳನ್ನು ಸೃಷ್ಟಿಸುತ್ತಿದೆ. 13,900 ವೈದ್ಯರನ್ನು ತಯಾರು ಮಾಡುತ್ತಿದ್ದೇವೆ. ಕರ್ನಾಟಕ ಪ್ರಗತಿ ಸಾಧಿಸಿದರೆ ದೇಶ ಪ್ರಗತಿ ಸಾಧಿಸಲು ಸಾಧ್ಯ ಎಂದರು.

ಮೇಕೆದಾಟು ಯೋಜನೆಯಷ್ಟೇ ಅಲ್ಲದೆ, ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸಬೇಕು ಎಂಬ ಬೇಡಿಕೆಯನ್ನು ಕೇಂದ್ರದ ಮುಂದಿಟ್ಟಿದ್ದೇನೆ. ಮೆಟ್ರೊ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮಾನ ಪಾಲುದಾರಿಕೆ ಇರಬೇಕು ಎಂದು ಒತ್ತಾಯಿಸಿದ್ದೇನೆ. ಇದಕ್ಕಾಗಿ ತಾಂತ್ರಿಕ ಸಮಿತಿ ರಚಿಸುವಂತೆಯೂ ಮನವಿ ಮಾಡಿದ್ದೇನೆ. ಮೆಟ್ರೋ ಸಂಪರ್ಕವನ್ನು ಮುಂದಿನ ಹಂತಗಳಲ್ಲಿ 500 ಕಿ.ಮೀ.ವರೆಗೆ ವಿಸ್ತರಿಸುವ ಗುರಿ ಇದ್ದು, ಬಾಕಿ ಇರುವ ಪ್ರಸ್ತಾವನೆಗಳಿಗೂ ತ್ವರಿತ ಅನುಮೋದನೆ ನೀಡುವಂತೆ ಕೇಳಿದ್ದೇನೆ ಎಂದು ತಿಳಿಸಿದರು.

ಡಬಲ್ ಡೆಕ್ಕರ್ ಫ್ಲೈಓವರ್‌ಗೆ ಮನವರಿಕೆ

ಬೆಂಗಳೂರಿನ ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆಗೆ ಕೇಂದ್ರದ ವಿರೋಧ ವ್ಯಕ್ತಪಡಿಸುತ್ತಿದ್ದು, ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಪ್ರಧಾನಿಯವರಿಗೆ ಯೋಜನೆಯ ಅಗತ್ಯವನ್ನು ವಿವರಿಸಿದ್ದೇನೆ. ಬೆಂಗಳೂರಿನಲ್ಲಿ ರಸ್ತೆಗಳ ಪ್ರಮಾಣ ಕೇವಲ ಶೇ.8ರಷ್ಟಿದೆ. ಇತರ ನಗರಗಳಲ್ಲಿ ಇದು ಶೇ.18ರಿಂದ 20ರಷ್ಟಿದೆ. ಬೆಂಗಳೂರಿನಲ್ಲಿ ಪ್ರತಿ ಚದರ ಅಡಿಗೆ ಸುಮಾರು 50 ಸಾವಿರ ರೂ. ಪರಿಹಾರ ನೀಡಬೇಕಾದ ಪರಿಸ್ಥಿತಿ ಇದೆ.

ಇದನ್ನು ಸರ್ಕಾರವೊಂದರಿಂದಲೇ ಭರಿಸುವುದು ಕಷ್ಟ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ವೆಚ್ಚ ಹಂಚಿಕೊಳ್ಳುವ ಮೂಲಕ ಡಬಲ್ ಡೆಕ್ಕರ್ ಯೋಜನೆ ಜಾರಿಗೊಳಿಸಬೇಕಿದೆ ಎಂದು ಮನವರಿಕೆ ಮಾಡಿದ್ದೇನೆ. ಈ ಸಂಬಂಧ ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಬರುವುದಾಗಿಯೂ ತಿಳಿಸಿದ್ದೇನೆ. ಅದಕ್ಕೆ ಅವರು ಒಪ್ಪಿದ್ದಾರೆ. ನಾನು ರಾಜ್ಯದ ಪ್ರತಿನಿಧಿಯಾಗಿ ರಾಜ್ಯದ ಹಿತಕ್ಕಾಗಿ ನನ್ನ ಕೆಲಸ ಮಾಡುತ್ತಿರುವೆ ಯಾರು ಏನು ಬೇಕಾದರೂ ಊಹಿಸಿಕೊಳ್ಳಲಿ ಎಂದರು.

ರೈತರ ವಿದ್ಯುತ್ ಬಿಲ್ ಹೊರೆ ₹30 ಸಾವಿರ ಕೋಟಿಗೆ ಏರಿಕೆ

ಸುವರ್ಣಸೌಧದ ಅಧಿವೇಶನದಲ್ಲಿ ವಿದ್ಯುತ್ ಬಿಲ್ ಪಾವತಿ ಬಾಕಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, “ಇದು ಕೇವಲ ಸುವರ್ಣಸೌಧಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ. ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಬಿಲ್ ಹೊರೆ ಹಿಂದೆ ಸುಮಾರು ₹20 ಸಾವಿರ ಕೋಟಿ ಇದ್ದದ್ದು, ಈಗ ₹30 ಸಾವಿರ ಕೋಟಿಗೆ ಏರಿಕೆಯಾಗಿದೆ. ಬರಗಾಲದ ಹಿನ್ನೆಲೆಯಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಿದೆ. ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳಿಗೆ ನೀರು ಪೂರೈಕೆ ಸೇರಿದಂತೆ ಹಲವು ಕಾರಣಗಳಿಂದ ಬಿಲ್ ಮೊತ್ತ ಹೆಚ್ಚಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಸರ್ಕಾರ ಸರಿಪಡಿಸಲಿದೆ ಎಂದು ತಿಳಿಸಿದರು.

ಮೆಟ್ರೋ ಸಂಪರ್ಕ 500 ಕಿ.ಮೀ ವಿಸ್ತರಣೆ ಗುರಿ

ನಂತರ ಪಿಂಕ್ ಮೆಟ್ರೋದಲ್ಲಿ ಮಾಧ್ಯಮಗಳು ಕೆಂಪು ಮಾರ್ಗದ ಮೆಟ್ರೋ ರೈಲಿಗೆ ಸಾಕಷ್ಟು ಬೇಡಿಕೆ ಇದೆ ಎಂದು ಕೇಳಿದಾಗ, ಹೇಗಾದರೂ ಮಾಡಿ 2028ರ ವೇಳೆಗೆ ಮೆಟ್ರೋ ಸಂಪರ್ಕವನ್ನು 500 ಕಿ.ಮೀ ವಿಸ್ತರಣೆಗೆ ಮುಂದಾಗಬೇಕು” ಎಂದರು.

ಮೆಟ್ರೋ ಅಭಿವೃದ್ಧಿಗೆ ಏನೆಲ್ಲಾ ಯೋಜನೆ ರೂಪಿಸಲಾಗಿದೆ ಎಂದು ಕೇಳಿದಾಗ, “ಕೇಂದ್ರ ಮತ್ತು ರಾಜ್ಯದ ನಡುವೆ ಇರುವ 50:50 ವೆಚ್ಚ ಹಂಚಿಕೆ ನಿಯಮವನ್ನು ಸರಿಯಾಗಿ ಪಾಲಿಸಿದರೆ ಸಾಕು. ಯೋಜನೆಗಳಿಗೆ ತ್ವರಿತವಾಗಿ ಅನುಮೋದನೆ ನೀಡಬೇಕು. ಅನುಮತಿಗಾಗಿ ಹೆಚ್ಚು ಸಮಯ ಕಾಯುವಂತಾಗಬಾರದು. ವಿದೇಶಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದಕ್ಕಿಂತ ಕಡಿಮೆ ಬಡ್ಡಿದರದಲ್ಲಿ ಕೇಂದ್ರ ಸರಕಾರದ ಬ್ಯಾಂಕ್‌ಗಳಿಂದ ಸಾಲ ಸಿಗುವಂತಾಗಬೇಕು ಎಂದು ಮನವಿ ಮಾಡಿದ್ದೇನೆ ಎಂದರು.

ರಾಜ್ಯದ ಗ್ರಾನೈಟ್ ಕಲ್ಲು ಬಳಸಲು ಸೂಚನೆ

ನಮ್ಮ ರಾಜ್ಯದಲ್ಲೇ ಉತ್ತಮ ಗುಣಮಟ್ಟದ ಕಲ್ಲುಗಳು ಲಭ್ಯವಿರುವಾಗ ಹೊರಗಡೆಯಿಂದ ಕಲ್ಲು ತರಿಸುವ ಅಗತ್ಯವೇನಿದೆ? ಸ್ಥಳೀಯ ಕಲ್ಲು ಬಳಸಿದರೆ ಇಲ್ಲಿನ ಉದ್ಯಮಕ್ಕೂ ಕೆಲಸ ಸಿಗುತ್ತದೆ. ಕಲ್ಲು ಕತ್ತರಿಸುವುದರಿಂದ ಹಿಡಿದು ಸಂಸ್ಕರಣೆಯವರೆಗೆ ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಹೊರಗಡೆಯಿಂದ ಕಲ್ಲು ತಂದು ನಮ್ಮ ಉದ್ಯಮಕ್ಕೆ ಧಕ್ಕೆ ತರಬೇಡಿ ಎಂದು ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಿಗೆ ಹೇಳಿದ್ದೆ ಎಂದರು.

ಚಾಮರಾಜನಗರ, ತುಮಕೂರು, ಸಿರಾ, ಬಾದಾಮಿ, ಇಳಕಲ್‌, ಕನಕಪುರ, ಮಾಗಡಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗ್ರಾನೈಟ್‌ ಲಭ್ಯವಿದೆ. ಹಾಸನ ಗ್ರೀನ್‌, ತುಮಕೂರು ಬಾರ್ಪರಿ, ಬೆಂಗಳೂರು ಬ್ಲೂ, ಮಲ್ಟಿ ಕಲರ್‌, ಜುಬ್ರಾನಿ, ಕೊಳ್ಳೇಗಾಲ ಬ್ಲ್ಯಾಕ್‌, ಇಳಕಲ್‌ ರೆಡ್‌ ಸೇರಿದಂತೆ ವಿವಿಧ ಬಣ್ಣಗಳ ಕಲ್ಲುಗಳು ರಾಜ್ಯದಲ್ಲಿವೆ. ಇವುಗಳ ಗುಣಮಟ್ಟವೂ ಉತ್ತಮವಾಗಿದೆ ಎಂದು ವಿವರಿಸಿದರು.

Editor Reporter
mirrortvkannada.com

ಮೆಟ್ರೋ ಟಿಕೆಟ್‌ಗೆ ಹಣವಿಲ್ಲ ಎಂದ ಡಿಕೆಶಿ; ಸ್ವತಃ ಕಾರ್ಡ್ ಬಳಸಿ ಟಿಕೆಟ್ ಖರೀದಿಸಿದ ಮೋದಿ..

ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನಾ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡುವಿನ ಆತ್ಮೀಯ ಮಾತುಕತೆಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮೆಟ್ರೋ ಟಿಕೆಟ್ ಕೌಂಟರ್‌ನಲ್ಲಿ ಇಬ್ಬರೂ ನಗುತ್ತಾ ಮಾತನಾಡುತ್ತಿರುವ ದೃಶ್ಯ ಸಾಕಷ್ಟು ಕುತೂಹಲ ಮೂಡಿಸಿತ್ತು. ಇದೀಗ ಆ ಸಂದರ್ಭದಲ್ಲಿ ಪ್ರಧಾನಿಯವರೊಂದಿಗೆ ನಡೆದ ಲಘು ಸಂಭಾಷಣೆಯ ವಿವರವನ್ನು ಸ್ವತಃ ಡಿ.ಕೆ. ಶಿವಕುಮಾರ್ ಹಂಚಿಕೊಂಡಿದ್ದಾರೆ.
ಮೆಟ್ರೋ ಪ್ರಯಾಣದ ವೇಳೆ ಪ್ರಧಾನಿ ಮೋದಿ ತೋರಿದ ಆತ್ಮೀಯತೆ, ಅವರೇ ಖರೀದಿಸಿದ ಸ್ಮಾರ್ಟ್ ಕಾರ್ಡ್, ಬೆಂಗಳೂರಿನ ಮೆಟ್ರೋ ವಿಸ್ತರಣೆ ಹಾಗೂ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡುವಂತೆ ಮಾಡಿದ ಮನವಿ ಸೇರಿದಂತೆ ಹಲವು ವಿಚಾರಗಳನ್ನು ಡಿಕೆಶಿ ಬಹಿರಂಗಪಡಿಸಿದ್ದಾರೆ.
 
ಮೋದಿಯವರೇ ಖರೀದಿಸಿದ ಮೆಟ್ರೋ ಸ್ಮಾರ್ಟ್ ಕಾರ್ಡ್!
ಮೆಟ್ರೋ ಟಿಕೆಟ್ ಖರೀದಿಸುವ ಸಂದರ್ಭದಲ್ಲಿ ತಮ್ಮ ಬಳಿ ಹಣ ಇರಲಿಲ್ಲ. ಹೀಗಾಗಿ, "ನನ್ನ ಟಿಕೆಟ್ ಕೂಡ ನೀವೇ ತೆಗೆದುಕೊಳ್ಳಿ" ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿದ್ದಾಗಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೇ ಸ್ಮಾರ್ಟ್ ಕಾರ್ಡ್ ಖರೀದಿಸಿದ್ದರು. ಆ ಕಾರ್ಡ್ ಅನ್ನು ಮಾಧ್ಯಮದವರಿಗೆ ತೋರಿಸುವ ಮೂಲಕ ಅಂದಿನ ಪ್ರಸಂಗವನ್ನು ಡಿಕೆಶಿ ನೆನಪಿಸಿಕೊಂಡಿದ್ದಾರೆ. ಮೆಟ್ರೋ ಪ್ರಯಾಣದ ಸಂದರ್ಭದಲ್ಲಿ ಪ್ರಧಾನಿ ತಮ್ಮೊಂದಿಗೆ ಆತ್ಮೀಯವಾಗಿ ನಡೆದುಕೊಂಡರು ಎಂದು ಹೇಳಿದ್ದಾರೆ.
ನೀರಿನ ಹಕ್ಕನ್ನು ರಕ್ಷಿಸುವ ಜವಾಬ್ದಾರಿ ನಮ್ಮದು
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ನೀರಿನ ವಿಚಾರದಲ್ಲಿ ತೊಂದರೆಯಾಗಲಿದೆ ಎಂಬ ಆತಂಕಕ್ಕೆ ಪ್ರತಿಕ್ರಿಯಿಸಿದ ಅವರು, ತಮಿಳುನಾಡಿಗೆ ಸಲ್ಲಬೇಕಾದ ನೀರಿನ ಹಕ್ಕನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅದೇ ಸಮಯದಲ್ಲಿ ಕರ್ನಾಟಕದ ಹಕ್ಕನ್ನೂ ರಕ್ಷಿಸಬೇಕಿದೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್ 177 ಟಿಎಂಸಿ ನೀರಿನ ಹಕ್ಕಿನ ಕುರಿತು ಸ್ಪಷ್ಟಪಡಿಸಿದೆ. ಅವರಿಗೆ ಸಲ್ಲಬೇಕಾದ ನೀರನ್ನು ಒದಗಿಸುವುದು ನಮ್ಮ ಕರ್ತವ್ಯ. ಅಣೆಕಟ್ಟು ನಿರ್ಮಿಸಿ ಅವರಿಗೂ ನೀರು ಕೊಡುತ್ತೇವೆ. ತಮಿಳುನಾಡಿನವರು ಬಂದು ಚರ್ಚೆ ನಡೆಸಲಿ. ಯೋಜನೆಯ ವಾಸ್ತವಾಂಶಗಳನ್ನು ವಿವರಿಸಲು ನಾನು ಸಿದ್ಧನಿದ್ದೇನೆ. ಈ ಕುರಿತು ಸಂಪೂರ್ಣ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಎಂದರು.
ಅನುಮತಿಗಾಗಿ ಕೇಂದ್ರದ ಮೇಲೆ ಒತ್ತಡ
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿಗಳನ್ನು ನೀಡುವಂತೆ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದೇನೆ. ಎಲ್ಲ ಪಕ್ಷಗಳೂ ಯೋಜನೆ ವಿಚಾರದಲ್ಲಿ ಒಪ್ಪಿಗೆ ಸೂಚಿಸಿವೆ. ಅಗತ್ಯ ದಾಖಲೆಗಳನ್ನು ಸಲ್ಲಿಸುವ ಕೆಲಸ ನಡೆಯುತ್ತಿದೆ. ಅನುಮತಿಗಳು ದೊರೆತರೆ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.‌
ರಾಜಕಾರಣದಲ್ಲಿ ಸ್ಪರ್ಧೆ, ಅಭಿವೃದ್ಧಿಯಲ್ಲಿ ಸಹಕಾರ
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅವರೊಂದಿಗಿನ ಒಡನಾಟದ ಬಗ್ಗೆ ಕೇಳಿದಾಗ, ರಾಜಕಾರಣ ಮಾಡುವಾಗ ಸ್ಪರ್ಧೆ ಮಾಡೋಣ. ಅಭಿವೃದ್ಧಿ ವಿಚಾರದಲ್ಲಿ ಸಹಕಾರ ನೀಡೋಣ. ರಾಜಕಾರಣದಲ್ಲಿ ನಾವು ರಾಜಕೀಯ ಮಾಡುತ್ತೇವೆ. ಆದರೆ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರದ ಸಹಕಾರ ಪಡೆಯುವುದು ನಮ್ಮ ಜವಾಬ್ದಾರಿ. ದೇಶದ ಹಿತಾಸಕ್ತಿ ವಿಚಾರದಲ್ಲಿ ನಾವು ಒಟ್ಟಾಗಿ ಕೆಲಸ ಮಾಡಬೇಕು.

ಕರ್ನಾಟಕ ಹೊರತಾಗಿ ದೇಶದ ಪ್ರಗತಿ ಅಸಾಧ್ಯ. ದೇಶದಲ್ಲಿ ಜಿಎಸ್ ಟಿ ಹಾಗೂ ತೆರಿಗೆ ಸಂಗ್ರಹದಲ್ಲಿ 2ನೇ ಸ್ಥಾನ, ನಮ್ಮ ರಾಜ್ಯ ಪ್ರತಿ ವರ್ಷ ಒಂದೂವರೆ ಲಕ್ಷ ಇಂಜಿನಿಯರ್ ಗಳನ್ನು ಸೃಷ್ಟಿಸುತ್ತಿದೆ. 13,900 ವೈದ್ಯರನ್ನು ತಯಾರು ಮಾಡುತ್ತಿದ್ದೇವೆ. ಕರ್ನಾಟಕ ಪ್ರಗತಿ ಸಾಧಿಸಿದರೆ ದೇಶ ಪ್ರಗತಿ ಸಾಧಿಸಲು ಸಾಧ್ಯ ಎಂದರು.

ಮೇಕೆದಾಟು ಯೋಜನೆಯಷ್ಟೇ ಅಲ್ಲದೆ, ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸಬೇಕು ಎಂಬ ಬೇಡಿಕೆಯನ್ನು ಕೇಂದ್ರದ ಮುಂದಿಟ್ಟಿದ್ದೇನೆ. ಮೆಟ್ರೊ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮಾನ ಪಾಲುದಾರಿಕೆ ಇರಬೇಕು ಎಂದು ಒತ್ತಾಯಿಸಿದ್ದೇನೆ. ಇದಕ್ಕಾಗಿ ತಾಂತ್ರಿಕ ಸಮಿತಿ ರಚಿಸುವಂತೆಯೂ ಮನವಿ ಮಾಡಿದ್ದೇನೆ. ಮೆಟ್ರೋ ಸಂಪರ್ಕವನ್ನು ಮುಂದಿನ ಹಂತಗಳಲ್ಲಿ 500 ಕಿ.ಮೀ.ವರೆಗೆ ವಿಸ್ತರಿಸುವ ಗುರಿ ಇದ್ದು, ಬಾಕಿ ಇರುವ ಪ್ರಸ್ತಾವನೆಗಳಿಗೂ ತ್ವರಿತ ಅನುಮೋದನೆ ನೀಡುವಂತೆ ಕೇಳಿದ್ದೇನೆ ಎಂದು ತಿಳಿಸಿದರು.
ಡಬಲ್ ಡೆಕ್ಕರ್ ಫ್ಲೈಓವರ್‌ಗೆ ಮನವರಿಕೆ
ಬೆಂಗಳೂರಿನ ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆಗೆ ಕೇಂದ್ರದ ವಿರೋಧ ವ್ಯಕ್ತಪಡಿಸುತ್ತಿದ್ದು, ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಪ್ರಧಾನಿಯವರಿಗೆ ಯೋಜನೆಯ ಅಗತ್ಯವನ್ನು ವಿವರಿಸಿದ್ದೇನೆ. ಬೆಂಗಳೂರಿನಲ್ಲಿ ರಸ್ತೆಗಳ ಪ್ರಮಾಣ ಕೇವಲ ಶೇ.8ರಷ್ಟಿದೆ. ಇತರ ನಗರಗಳಲ್ಲಿ ಇದು ಶೇ.18ರಿಂದ 20ರಷ್ಟಿದೆ. ಬೆಂಗಳೂರಿನಲ್ಲಿ ಪ್ರತಿ ಚದರ ಅಡಿಗೆ ಸುಮಾರು 50 ಸಾವಿರ ರೂ. ಪರಿಹಾರ ನೀಡಬೇಕಾದ ಪರಿಸ್ಥಿತಿ ಇದೆ.

ಇದನ್ನು ಸರ್ಕಾರವೊಂದರಿಂದಲೇ ಭರಿಸುವುದು ಕಷ್ಟ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ವೆಚ್ಚ ಹಂಚಿಕೊಳ್ಳುವ ಮೂಲಕ ಡಬಲ್ ಡೆಕ್ಕರ್ ಯೋಜನೆ ಜಾರಿಗೊಳಿಸಬೇಕಿದೆ ಎಂದು ಮನವರಿಕೆ ಮಾಡಿದ್ದೇನೆ. ಈ ಸಂಬಂಧ ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಬರುವುದಾಗಿಯೂ ತಿಳಿಸಿದ್ದೇನೆ. ಅದಕ್ಕೆ ಅವರು ಒಪ್ಪಿದ್ದಾರೆ. ನಾನು ರಾಜ್ಯದ ಪ್ರತಿನಿಧಿಯಾಗಿ ರಾಜ್ಯದ ಹಿತಕ್ಕಾಗಿ ನನ್ನ ಕೆಲಸ ಮಾಡುತ್ತಿರುವೆ ಯಾರು ಏನು ಬೇಕಾದರೂ ಊಹಿಸಿಕೊಳ್ಳಲಿ ಎಂದರು.
ರೈತರ ವಿದ್ಯುತ್ ಬಿಲ್ ಹೊರೆ ₹30 ಸಾವಿರ ಕೋಟಿಗೆ ಏರಿಕೆ
ಸುವರ್ಣಸೌಧದ ಅಧಿವೇಶನದಲ್ಲಿ ವಿದ್ಯುತ್ ಬಿಲ್ ಪಾವತಿ ಬಾಕಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, "ಇದು ಕೇವಲ ಸುವರ್ಣಸೌಧಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ. ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಬಿಲ್ ಹೊರೆ ಹಿಂದೆ ಸುಮಾರು ₹20 ಸಾವಿರ ಕೋಟಿ ಇದ್ದದ್ದು, ಈಗ ₹30 ಸಾವಿರ ಕೋಟಿಗೆ ಏರಿಕೆಯಾಗಿದೆ. ಬರಗಾಲದ ಹಿನ್ನೆಲೆಯಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಿದೆ. ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳಿಗೆ ನೀರು ಪೂರೈಕೆ ಸೇರಿದಂತೆ ಹಲವು ಕಾರಣಗಳಿಂದ ಬಿಲ್ ಮೊತ್ತ ಹೆಚ್ಚಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಸರ್ಕಾರ ಸರಿಪಡಿಸಲಿದೆ ಎಂದು ತಿಳಿಸಿದರು.
ಮೆಟ್ರೋ ಸಂಪರ್ಕ 500 ಕಿ.ಮೀ ವಿಸ್ತರಣೆ ಗುರಿ
ನಂತರ ಪಿಂಕ್ ಮೆಟ್ರೋದಲ್ಲಿ ಮಾಧ್ಯಮಗಳು ಕೆಂಪು ಮಾರ್ಗದ ಮೆಟ್ರೋ ರೈಲಿಗೆ ಸಾಕಷ್ಟು ಬೇಡಿಕೆ ಇದೆ ಎಂದು ಕೇಳಿದಾಗ, ಹೇಗಾದರೂ ಮಾಡಿ 2028ರ ವೇಳೆಗೆ ಮೆಟ್ರೋ ಸಂಪರ್ಕವನ್ನು 500 ಕಿ.ಮೀ ವಿಸ್ತರಣೆಗೆ ಮುಂದಾಗಬೇಕು" ಎಂದರು.

ಮೆಟ್ರೋ ಅಭಿವೃದ್ಧಿಗೆ ಏನೆಲ್ಲಾ ಯೋಜನೆ ರೂಪಿಸಲಾಗಿದೆ ಎಂದು ಕೇಳಿದಾಗ, "ಕೇಂದ್ರ ಮತ್ತು ರಾಜ್ಯದ ನಡುವೆ ಇರುವ 50:50 ವೆಚ್ಚ ಹಂಚಿಕೆ ನಿಯಮವನ್ನು ಸರಿಯಾಗಿ ಪಾಲಿಸಿದರೆ ಸಾಕು. ಯೋಜನೆಗಳಿಗೆ ತ್ವರಿತವಾಗಿ ಅನುಮೋದನೆ ನೀಡಬೇಕು. ಅನುಮತಿಗಾಗಿ ಹೆಚ್ಚು ಸಮಯ ಕಾಯುವಂತಾಗಬಾರದು. ವಿದೇಶಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದಕ್ಕಿಂತ ಕಡಿಮೆ ಬಡ್ಡಿದರದಲ್ಲಿ ಕೇಂದ್ರ ಸರಕಾರದ ಬ್ಯಾಂಕ್‌ಗಳಿಂದ ಸಾಲ ಸಿಗುವಂತಾಗಬೇಕು ಎಂದು ಮನವಿ ಮಾಡಿದ್ದೇನೆ ಎಂದರು.
ರಾಜ್ಯದ ಗ್ರಾನೈಟ್ ಕಲ್ಲು ಬಳಸಲು ಸೂಚನೆ
ನಮ್ಮ ರಾಜ್ಯದಲ್ಲೇ ಉತ್ತಮ ಗುಣಮಟ್ಟದ ಕಲ್ಲುಗಳು ಲಭ್ಯವಿರುವಾಗ ಹೊರಗಡೆಯಿಂದ ಕಲ್ಲು ತರಿಸುವ ಅಗತ್ಯವೇನಿದೆ? ಸ್ಥಳೀಯ ಕಲ್ಲು ಬಳಸಿದರೆ ಇಲ್ಲಿನ ಉದ್ಯಮಕ್ಕೂ ಕೆಲಸ ಸಿಗುತ್ತದೆ. ಕಲ್ಲು ಕತ್ತರಿಸುವುದರಿಂದ ಹಿಡಿದು ಸಂಸ್ಕರಣೆಯವರೆಗೆ ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಹೊರಗಡೆಯಿಂದ ಕಲ್ಲು ತಂದು ನಮ್ಮ ಉದ್ಯಮಕ್ಕೆ ಧಕ್ಕೆ ತರಬೇಡಿ ಎಂದು ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಿಗೆ ಹೇಳಿದ್ದೆ ಎಂದರು.

ಚಾಮರಾಜನಗರ, ತುಮಕೂರು, ಸಿರಾ, ಬಾದಾಮಿ, ಇಳಕಲ್‌, ಕನಕಪುರ, ಮಾಗಡಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗ್ರಾನೈಟ್‌ ಲಭ್ಯವಿದೆ. ಹಾಸನ ಗ್ರೀನ್‌, ತುಮಕೂರು ಬಾರ್ಪರಿ, ಬೆಂಗಳೂರು ಬ್ಲೂ, ಮಲ್ಟಿ ಕಲರ್‌, ಜುಬ್ರಾನಿ, ಕೊಳ್ಳೇಗಾಲ ಬ್ಲ್ಯಾಕ್‌, ಇಳಕಲ್‌ ರೆಡ್‌ ಸೇರಿದಂತೆ ವಿವಿಧ ಬಣ್ಣಗಳ ಕಲ್ಲುಗಳು ರಾಜ್ಯದಲ್ಲಿವೆ. ಇವುಗಳ ಗುಣಮಟ್ಟವೂ ಉತ್ತಮವಾಗಿದೆ ಎಂದು ವಿವರಿಸಿದರು.

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్