ಗುಮ್ಮಟ ನಗರಿಯಲ್ಲಿ ಕೈಗಾರಿಕಾ ಕ್ರಾಂತಿ: ₹1,600 ಕೋಟಿ ಬೃಹತ್ ಹೂಡಿಕೆಯಲ್ಲಿ ರಿಲಯನ್ಸ್ ‘ಕ್ಯಾಂಪಾ ಕೋಲಾ’ ಘಟಕ..

mirrortvkannada.com
Date : 17 November 2026, 7:22 am Posted By : MIRROR TV KANNADA

ಗುಮ್ಮಟ ನಗರಿಯಲ್ಲಿ ಕೈಗಾರಿಕಾ ಕ್ರಾಂತಿ: ₹1,600 ಕೋಟಿ ಬೃಹತ್ ಹೂಡಿಕೆಯಲ್ಲಿ ರಿಲಯನ್ಸ್ ‘ಕ್ಯಾಂಪಾ ಕೋಲಾ’ ಘಟಕ..

ಉತ್ತರ ಕರ್ನಾಟಕದ ಪ್ರಮುಖ ಪ್ರವಾಸಿ ತಾಣ, ಬಸವನಾಡಿನಲ್ಲಿ ಭಾರೀ ಹೂಡಿಕೆ ಹರಿದು ಬಂದಿದೆ. ವಿಜಯಪುರದ ಹೊರವಲಯದಲ್ಲಿರುವ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ 109 ಎಕರೆ ವಿಸ್ತಾರದಲ್ಲಿ, 1,600 ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ ನಿರ್ಮಾಣವಾಗಲಿರುವ ರಿಲಯನ್ಸ್ ಸಮೂಹದ ಕ್ಯಾಂಪಾ ಕೋಲಾ ತಂಪು ಪಾನೀಯ ತಯಾರಿಕಾ ಘಟಕಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಇದೇ ವೇಳೆ ಮಾತನಾಡಿದ ಅವರು, 'ಕ್ಯಾಂಪಾ ಕೋಲಾ ಘಟಕದ ಸ್ಥಾಪನೆಯೊಂದಿಗೆ ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕಾ ಬೆಳವಣಿಗೆಗೆ ಹೊಸ ವೇಗ ದೊರೆಯಲಿದೆ. ಮುಂದಿನ ದಿನಗಳಲ್ಲಿ ವಿಂಗ್ಸ್ ವಿಟೇರಾ, ಹಿಂದೂಸ್ಥಾನ್ ಕೋಕಾ-ಕೋಲಾ, ಹೈಟೆಕ್ ಫೈಬ್ಸ್, ಬ್ಯಾಟರಿ ಉತ್ಪಾದನಾ ಕ್ಷೇತ್ರದ ಸರ್ವರ್ ಟೆಕ್ ಪವರ್ ಸಿಸ್ಟಂ, ಮೆಟಾಗ್ರೂಪ್ ಹಾಗೂ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಹೆಸರು ಮಾಡಿರುವ ಟೋನ್ಬೋ ಇಮೇಜಿಂಗ್ ಸೇರಿದಂತೆ ಹಲವು ಕಂಪನಿಗಳೊಂದಿಗೆ ಹೂಡಿಕೆ ಸಂಬಂಧ ಮಾತುಕತೆ ನಡೆಸಲಾಗಿದೆ. ಹಲವು ಕಂಪನಿಗಳು ಈಗಾಗಲೇ ಹೂಡಿಕೆ ಒಪ್ಪಂದಗಳಿಗೂ ಸಹಿ ಹಾಕಿವೆ ಎಂದು ಹೇಳಿದರು.l

ಬಾರಾಮತಿ ಮಾದರಿಯಲ್ಲಿ ಕ್ಷೇತ್ರ ಅಭಿವೃದ್ಧಿ
'ನೆರೆಯ ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಅವರು ತಮ್ಮ ಸ್ವಕ್ಷೇತ್ರ ಬಾರಾಮತಿಯಲ್ಲಿ ನೀರಾವರಿ ಸೌಕರ್ಯ, ಹೈನುಗಾರಿಕೆ ಉದ್ಯಮ ಮತ್ತು ಕೈಗಾರಿಕೆ ಈ ಮೂರನ್ನೂ ಸಮಾನವಾಗಿ ಬೆಳೆಸಿದ್ದಾರೆ. ಅವರಿಂದ ನಾವು ಪಾಠ ಕಲಿಯಬೇಕಿದೆ. ಮುಂಬರುವ ವರ್ಷಗಳಲ್ಲಿ ವಿಜಯಪುರ ಜಿಲ್ಲೆ ಕೂಡ ಬಾರಾಮತಿಯಂತೆಯೇ ಅಭಿವೃದ್ಧಿ ಹೊಂದಲಿದೆ. ಜಿಲ್ಲೆಯಲ್ಲಿ ಹೂಡಿಕೆ ಮಾಡುವ ಸಂಬಂಧ ಹತ್ತಾರು ದಿಗ್ಗಜ ಕಂಪನಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಒಟ್ಟಿನಲ್ಲಿ ಜಿಲ್ಲೆಗೆ ಬೃಹತ್ ಕೈಗಾರಿಕೆಗಳನ್ನು ತರಲಾಗುವುದು' ಎಂದರು.
3,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ
ಮುಳವಾಡದಲ್ಲಿ ಕೈಗಾರಿಕೆಗಳಿಗೆಂದು 2009ರಲ್ಲೇ ಮೂರ್ನಾಲ್ಕು ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ಇದುವರೆಗೂ ಇಲ್ಲಿಗೆ ಒಂದೇ ಒಂದು ಕೈಗಾರಿಕೆಯೂ ಬಂದಿರಲಿಲ್ಲ. ನಾನು ಕೈಗಾರಿಕಾ ಸಚಿವನಾದ ಮೇಲೆ ಕಳೆದ ಮೂರು ವರ್ಷಗಳಿಂದ ಇದನ್ನು ಸವಾಲಾಗಿ ಸ್ವೀಕರಿಸಿ, ಹೂಡಿಕೆದಾರರನ್ನು ವಿಜಯಪುರ ಜಿಲ್ಲೆಗೆ ಬರುವಂತೆ ಮಾಡಿದ ಪ್ರಯತ್ನ ಈಗ ಫಲ ಕೊಟ್ಟಿದೆ. ಕ್ಯಾಂಪಾಕೋಲಾ ಘಟಕದಿಂದ 2,000 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ. ಜತೆಗೆ ಪರೋಕ್ಷವಾಗಿ 3,000ಕ್ಕೂ ಹೆಚ್ಚು ಜನರಿಗೆ ಕೆಲಸ ಸಿಗಲಿದೆ ಎಂದು ಅವರು ಹೇಳಿದರು.

ವಿಜಯಪುರ ಜಿಲ್ಲೆಯಲ್ಲಿ ಹಿಂದೆ ನೀರಿನ ಸೌಕರ್ಯವಿಲ್ಲ ಎನ್ನುವ ಕಾರಣಕ್ಕೆ ಕೈಗಾರಿಕೆಗಳು ಬರುತ್ತಿರಲಿಲ್ಲ. ಆದರೆ ಈಗ ಜಿಲ್ಲೆಯಲ್ಲಿ ಈ ಸೌಲಭ್ಯ ಚೆನ್ನಾಗಿದ್ದು, ಕೆರೆಕಟ್ಟೆಗಳಿಗೆಲ್ಲ ನೀರು ತುಂಬಿಸಲಾಗುತ್ತಿದೆ. ಇದರ ಜತೆಗೆ ಜಿಲ್ಲೆಯು ದಾಳಿಂಬೆ, ನಿಂಬೆ ಮತ್ತು ದ್ರಾಕ್ಷಿಯಂತಹ ತೋಟಗಾರಿಕೆ ಬೆಳೆಗಳ ತೊಟ್ಟಿಲಾಗಿದೆ. ರಿಲಯನ್ಸ್ ಕಂಪನಿಯು ಇದನ್ನು ಪರಿಗಣಿಸಿ, ಆಹಾರ ಸಂಸ್ಕರಣೆ ಮತ್ತು ತನ್ನ ವಿಸ್ತರಣೆಯನ್ನು ಆರಂಭಿಸಬೇಕು. ಕೈಗಾರಿಕೆಗಳಿಗೆ ಯಾವ ಬೆಳೆ ಬೇಕೋ ಅದನ್ನು ಬೆಳೆಯಲು ನಮ್ಮ ರೈತರು ಸಿದ್ಧರಿದ್ದಾರೆ. ಹೀಗಾಗಿ, ಕಚ್ಚಾವಸ್ತುವಿನ ಕೊರತೆಯ ಸಮಸ್ಯೆ ಎದುರಾಗುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.
ಘಟಕದಲ್ಲಿ ಕನ್ನಡಿಗರಿಗೆ ಉದ್ಯೋಗವಕಾಶ
ರಿಲಯನ್ಸ್ ಕಂಪನಿಯು ಇಲ್ಲಿ ಮೊದಲು ಭೂಮಿಯನ್ನು ಕಳೆದುಕೊಂಡಿರುವ ಸಂತ್ರಸ್ತ ರೈತ ಕುಟುಂಬಗಳ ಸದಸ್ಯರಿಗೆ ಉದ್ಯೋಗ ಕೊಡಬೇಕು. ಬಳಿಕ, 25 ಕಿ.ಮೀ. ಸುತ್ತಮುತ್ತ ಇರುವ ಅರ್ಹರಿಗೆ ಮತ್ತು ನಂತರ ವಿಜಯಪುರ ಜಿಲ್ಲೆಯ ಪ್ರತಿಭಾವಂತರನ್ನು ಆಯ್ಕೆ ಮಾಡಿಕೊಂಡು, ಖಾಯಂ ಉದ್ಯೋಗಿಗಳಾಗಿ ನೇಮಿಸಿಕೊಳ್ಳಬೇಕು. ಸಿ ಮತ್ತು ಡಿ ವರ್ಗಗಳ ಹುದ್ದೆಗಳಲ್ಲಿ ನೂರಕ್ಕೆ ನೂರರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೇ ಕೊಡಬೇಕು. ಇದನ್ನು ಕಂಪನಿ ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಹೂಡಿಕೆದಾರರೆಲ್ಲರೂ ಬರೀ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಾಗವನ್ನೇ ಬಯಸುತ್ತಾರೆ. ಆದರೆ ರಾಜಧಾನಿಯಿಂದ ಹೊರಗಿರುವ ಪ್ರದೇಶಗಳಲ್ಲಿ ಕೈಗಾರಿಕೆಗಳು ಬೆಳೆಯುವುದು ಅಗತ್ಯ. ರಾಜ್ಯದಲ್ಲಿ ಕೈಗಾರಿಕೆಗಳನ್ನು ಬೆಳೆಸುವ ಬಗ್ಗೆ ಕೇಂದ್ರ ಸರಕಾರಕ್ಕೆ ಆಸಕ್ತಿ ಇಲ್ಲ. ಉದ್ಯಮಿಗಳು ಸಾಮಾನ್ಯವಾಗಿ ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತಿನಲ್ಲಿ ತಮಗೆ ಕೊಡಮಾಡಲು ಮುಂದೆ ಬಂದಿರುವ ಸೌಕರ್ಯಗಳ ಪಟ್ಟಿ ಹಿಡಿದುಕೊಂಡೇ ನಮ್ಮ ಬಳಿಗೆ ಬರುತ್ತಾರೆ. ಆದರೆ, ನಮ್ಮಲ್ಲಿ ಭೂಮಿಯ ಲಭ್ಯತೆ ಉಳಿದ ರಾಜ್ಯಗಳಷ್ಟು ಸುಲಭವಾಗಿಲ್ಲ. ಆದರೂ ನಾವು ಇದನ್ನೆಲ್ಲ ಬಗೆಹರಿಸಿ, ಉದ್ಯಮಿಗಳ ಆದ್ಯತೆಗಳಿಗೂ ಸ್ಪಂದಿಸುತ್ತಿದ್ದೇವೆ ಎಂದು ವಿವರಿಸಿದರು.
ವಿಜಯಪುರ ಭವಿಷ್ಯದ ಕೈಗಾರಿಕೆಗಳ ತೊಟ್ಟಿಲು
ವಿಜಯಪುರ ಜಿಲ್ಲೆಯನ್ನು ನೀರಾವರಿ, ತೋಟಗಾರಿಕೆ ಮತ್ತು ಕೈಗಾರಿಕೆಗಳ ತೊಟ್ಟಿಲನ್ನಾಗಿ ಮಾಡಲಾಗುವುದು. ಇವುಗಳಲ್ಲಿ ಮೊದಲ ಎರಡೂ ಕ್ಷೇತ್ರಗಳು ಸಮೃದ್ಧವಾಗಿವೆ. ಮೂರನೇ ವಲಯದತ್ತ ಈಗ ಗಮನ ಹರಿಸಲಾಗಿದೆ. ಹೀಗಾಗಿ 444 ಕೋಟಿ ರೂ. ಹೂಡಿಕೆಯ ಟೆರ್ರಾ ಸರ್ಕ್ಯೂಟ್ಸ್, 90 ಕೋಟಿ ಹೂಡಿಕೆಯ ಜೆನಿತ್ ಎನರ್ಜಿ ಸೊಲ್ಯೂಷನ್ಸ್, 250 ಕೋಟಿ ರೂ. ಬಂಡವಾಳದ ಹೈಟೆಕ್ ಪೈಪ್ಸ್, 300 ಕೋಟಿ ರೂ. ಹೂಡಿಕೆಯ ಹಿಂದೂಸ್ತಾನ್ ಕೋಕೋಕೋಲಾ ಬಿವರೇಜಸ್, 300 ಕೋಟಿ ರೂ. ವೆಚ್ಚದ ಸರ್ವೋಟೆಕ್ ಪವರ್ ಸಿಸ್ಟಮ್ಸ್, 350 ಕೋಟಿ ರೂ. ಹೂಡಿಕೆಯ ವಿಂಗ್ ವಿಟೇರಾ ಮುಂತಾದ 20ಕ್ಕೂ ಹೆಚ್ಚು ಕಂಪನಿಗಳು ಜಿಲ್ಲೆಗೆ ಬರುತ್ತಿವೆ.

ಇವೆಲ್ಲಕ್ಕೂ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಕೊಡಲಾಗುವುದು. ಕನಿಷ್ಠ ಪಕ್ಷ ಜಿಲ್ಲೆಯ 10 ಸಾವಿರ ಜನರಿಗಾದರೂ ಇಲ್ಲಿ ಕೆಲಸ ಕೊಡಿಸಬೇಕು ಎನ್ನುವುದು ನನ್ನ ಆಸೆಯಾಗಿದೆ. ಸದ್ಯದಲ್ಲೇ ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯ ತಯಾರಿಕಾ ಘಟಕವು ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಲಿದೆ. ಇವೆಲ್ಲಕ್ಕಿಂತ ಮೊದಲು ಭೂಮಿ ಕಳೆದುಕೊಂಡಿರುವ ಸಂತ್ರಸ್ತರಿಗೆ ನಾವು ಕಾನೂನಿನ ಆಚೆಗೂ ಹೋಗಿ ಸೂಕ್ತ ಪರಿಹಾರ ಕೊಡುವುದಕ್ಕೆ ಬದ್ಧರಾಗಿದ್ದೇವೆ ಎಂದು ತಿಳಿಸಿದರು.

⬇ DOWNLOAD
×

ಇದೇ ವೇಳೆ ಮಾತನಾಡಿದ ಅವರು, ‘ಕ್ಯಾಂಪಾ ಕೋಲಾ ಘಟಕದ ಸ್ಥಾಪನೆಯೊಂದಿಗೆ ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕಾ ಬೆಳವಣಿಗೆಗೆ ಹೊಸ ವೇಗ ದೊರೆಯಲಿದೆ. ಮುಂದಿನ ದಿನಗಳಲ್ಲಿ ವಿಂಗ್ಸ್ ವಿಟೇರಾ, ಹಿಂದೂಸ್ಥಾನ್ ಕೋಕಾ-ಕೋಲಾ, ಹೈಟೆಕ್ ಫೈಬ್ಸ್, ಬ್ಯಾಟರಿ ಉತ್ಪಾದನಾ ಕ್ಷೇತ್ರದ ಸರ್ವರ್ ಟೆಕ್ ಪವರ್ ಸಿಸ್ಟಂ, ಮೆಟಾಗ್ರೂಪ್ ಹಾಗೂ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಹೆಸರು ಮಾಡಿರುವ ಟೋನ್ಬೋ ಇಮೇಜಿಂಗ್ ಸೇರಿದಂತೆ ಹಲವು ಕಂಪನಿಗಳೊಂದಿಗೆ ಹೂಡಿಕೆ ಸಂಬಂಧ ಮಾತುಕತೆ ನಡೆಸಲಾಗಿದೆ. ಹಲವು ಕಂಪನಿಗಳು ಈಗಾಗಲೇ ಹೂಡಿಕೆ ಒಪ್ಪಂದಗಳಿಗೂ ಸಹಿ ಹಾಕಿವೆ ಎಂದು ಹೇಳಿದರು.l

ಬಾರಾಮತಿ ಮಾದರಿಯಲ್ಲಿ ಕ್ಷೇತ್ರ ಅಭಿವೃದ್ಧಿ

‘ನೆರೆಯ ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಅವರು ತಮ್ಮ ಸ್ವಕ್ಷೇತ್ರ ಬಾರಾಮತಿಯಲ್ಲಿ ನೀರಾವರಿ ಸೌಕರ್ಯ, ಹೈನುಗಾರಿಕೆ ಉದ್ಯಮ ಮತ್ತು ಕೈಗಾರಿಕೆ ಈ ಮೂರನ್ನೂ ಸಮಾನವಾಗಿ ಬೆಳೆಸಿದ್ದಾರೆ. ಅವರಿಂದ ನಾವು ಪಾಠ ಕಲಿಯಬೇಕಿದೆ. ಮುಂಬರುವ ವರ್ಷಗಳಲ್ಲಿ ವಿಜಯಪುರ ಜಿಲ್ಲೆ ಕೂಡ ಬಾರಾಮತಿಯಂತೆಯೇ ಅಭಿವೃದ್ಧಿ ಹೊಂದಲಿದೆ. ಜಿಲ್ಲೆಯಲ್ಲಿ ಹೂಡಿಕೆ ಮಾಡುವ ಸಂಬಂಧ ಹತ್ತಾರು ದಿಗ್ಗಜ ಕಂಪನಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಒಟ್ಟಿನಲ್ಲಿ ಜಿಲ್ಲೆಗೆ ಬೃಹತ್ ಕೈಗಾರಿಕೆಗಳನ್ನು ತರಲಾಗುವುದು’ ಎಂದರು.

3,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ

ಮುಳವಾಡದಲ್ಲಿ ಕೈಗಾರಿಕೆಗಳಿಗೆಂದು 2009ರಲ್ಲೇ ಮೂರ್ನಾಲ್ಕು ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ಇದುವರೆಗೂ ಇಲ್ಲಿಗೆ ಒಂದೇ ಒಂದು ಕೈಗಾರಿಕೆಯೂ ಬಂದಿರಲಿಲ್ಲ. ನಾನು ಕೈಗಾರಿಕಾ ಸಚಿವನಾದ ಮೇಲೆ ಕಳೆದ ಮೂರು ವರ್ಷಗಳಿಂದ ಇದನ್ನು ಸವಾಲಾಗಿ ಸ್ವೀಕರಿಸಿ, ಹೂಡಿಕೆದಾರರನ್ನು ವಿಜಯಪುರ ಜಿಲ್ಲೆಗೆ ಬರುವಂತೆ ಮಾಡಿದ ಪ್ರಯತ್ನ ಈಗ ಫಲ ಕೊಟ್ಟಿದೆ. ಕ್ಯಾಂಪಾಕೋಲಾ ಘಟಕದಿಂದ 2,000 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ. ಜತೆಗೆ ಪರೋಕ್ಷವಾಗಿ 3,000ಕ್ಕೂ ಹೆಚ್ಚು ಜನರಿಗೆ ಕೆಲಸ ಸಿಗಲಿದೆ ಎಂದು ಅವರು ಹೇಳಿದರು.

ವಿಜಯಪುರ ಜಿಲ್ಲೆಯಲ್ಲಿ ಹಿಂದೆ ನೀರಿನ ಸೌಕರ್ಯವಿಲ್ಲ ಎನ್ನುವ ಕಾರಣಕ್ಕೆ ಕೈಗಾರಿಕೆಗಳು ಬರುತ್ತಿರಲಿಲ್ಲ. ಆದರೆ ಈಗ ಜಿಲ್ಲೆಯಲ್ಲಿ ಈ ಸೌಲಭ್ಯ ಚೆನ್ನಾಗಿದ್ದು, ಕೆರೆಕಟ್ಟೆಗಳಿಗೆಲ್ಲ ನೀರು ತುಂಬಿಸಲಾಗುತ್ತಿದೆ. ಇದರ ಜತೆಗೆ ಜಿಲ್ಲೆಯು ದಾಳಿಂಬೆ, ನಿಂಬೆ ಮತ್ತು ದ್ರಾಕ್ಷಿಯಂತಹ ತೋಟಗಾರಿಕೆ ಬೆಳೆಗಳ ತೊಟ್ಟಿಲಾಗಿದೆ. ರಿಲಯನ್ಸ್ ಕಂಪನಿಯು ಇದನ್ನು ಪರಿಗಣಿಸಿ, ಆಹಾರ ಸಂಸ್ಕರಣೆ ಮತ್ತು ತನ್ನ ವಿಸ್ತರಣೆಯನ್ನು ಆರಂಭಿಸಬೇಕು. ಕೈಗಾರಿಕೆಗಳಿಗೆ ಯಾವ ಬೆಳೆ ಬೇಕೋ ಅದನ್ನು ಬೆಳೆಯಲು ನಮ್ಮ ರೈತರು ಸಿದ್ಧರಿದ್ದಾರೆ. ಹೀಗಾಗಿ, ಕಚ್ಚಾವಸ್ತುವಿನ ಕೊರತೆಯ ಸಮಸ್ಯೆ ಎದುರಾಗುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.

ಘಟಕದಲ್ಲಿ ಕನ್ನಡಿಗರಿಗೆ ಉದ್ಯೋಗವಕಾಶ

ರಿಲಯನ್ಸ್ ಕಂಪನಿಯು ಇಲ್ಲಿ ಮೊದಲು ಭೂಮಿಯನ್ನು ಕಳೆದುಕೊಂಡಿರುವ ಸಂತ್ರಸ್ತ ರೈತ ಕುಟುಂಬಗಳ ಸದಸ್ಯರಿಗೆ ಉದ್ಯೋಗ ಕೊಡಬೇಕು. ಬಳಿಕ, 25 ಕಿ.ಮೀ. ಸುತ್ತಮುತ್ತ ಇರುವ ಅರ್ಹರಿಗೆ ಮತ್ತು ನಂತರ ವಿಜಯಪುರ ಜಿಲ್ಲೆಯ ಪ್ರತಿಭಾವಂತರನ್ನು ಆಯ್ಕೆ ಮಾಡಿಕೊಂಡು, ಖಾಯಂ ಉದ್ಯೋಗಿಗಳಾಗಿ ನೇಮಿಸಿಕೊಳ್ಳಬೇಕು. ಸಿ ಮತ್ತು ಡಿ ವರ್ಗಗಳ ಹುದ್ದೆಗಳಲ್ಲಿ ನೂರಕ್ಕೆ ನೂರರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೇ ಕೊಡಬೇಕು. ಇದನ್ನು ಕಂಪನಿ ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಹೂಡಿಕೆದಾರರೆಲ್ಲರೂ ಬರೀ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಾಗವನ್ನೇ ಬಯಸುತ್ತಾರೆ. ಆದರೆ ರಾಜಧಾನಿಯಿಂದ ಹೊರಗಿರುವ ಪ್ರದೇಶಗಳಲ್ಲಿ ಕೈಗಾರಿಕೆಗಳು ಬೆಳೆಯುವುದು ಅಗತ್ಯ. ರಾಜ್ಯದಲ್ಲಿ ಕೈಗಾರಿಕೆಗಳನ್ನು ಬೆಳೆಸುವ ಬಗ್ಗೆ ಕೇಂದ್ರ ಸರಕಾರಕ್ಕೆ ಆಸಕ್ತಿ ಇಲ್ಲ. ಉದ್ಯಮಿಗಳು ಸಾಮಾನ್ಯವಾಗಿ ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತಿನಲ್ಲಿ ತಮಗೆ ಕೊಡಮಾಡಲು ಮುಂದೆ ಬಂದಿರುವ ಸೌಕರ್ಯಗಳ ಪಟ್ಟಿ ಹಿಡಿದುಕೊಂಡೇ ನಮ್ಮ ಬಳಿಗೆ ಬರುತ್ತಾರೆ. ಆದರೆ, ನಮ್ಮಲ್ಲಿ ಭೂಮಿಯ ಲಭ್ಯತೆ ಉಳಿದ ರಾಜ್ಯಗಳಷ್ಟು ಸುಲಭವಾಗಿಲ್ಲ. ಆದರೂ ನಾವು ಇದನ್ನೆಲ್ಲ ಬಗೆಹರಿಸಿ, ಉದ್ಯಮಿಗಳ ಆದ್ಯತೆಗಳಿಗೂ ಸ್ಪಂದಿಸುತ್ತಿದ್ದೇವೆ ಎಂದು ವಿವರಿಸಿದರು.

ವಿಜಯಪುರ ಭವಿಷ್ಯದ ಕೈಗಾರಿಕೆಗಳ ತೊಟ್ಟಿಲು

ವಿಜಯಪುರ ಜಿಲ್ಲೆಯನ್ನು ನೀರಾವರಿ, ತೋಟಗಾರಿಕೆ ಮತ್ತು ಕೈಗಾರಿಕೆಗಳ ತೊಟ್ಟಿಲನ್ನಾಗಿ ಮಾಡಲಾಗುವುದು. ಇವುಗಳಲ್ಲಿ ಮೊದಲ ಎರಡೂ ಕ್ಷೇತ್ರಗಳು ಸಮೃದ್ಧವಾಗಿವೆ. ಮೂರನೇ ವಲಯದತ್ತ ಈಗ ಗಮನ ಹರಿಸಲಾಗಿದೆ. ಹೀಗಾಗಿ 444 ಕೋಟಿ ರೂ. ಹೂಡಿಕೆಯ ಟೆರ್ರಾ ಸರ್ಕ್ಯೂಟ್ಸ್, 90 ಕೋಟಿ ಹೂಡಿಕೆಯ ಜೆನಿತ್ ಎನರ್ಜಿ ಸೊಲ್ಯೂಷನ್ಸ್, 250 ಕೋಟಿ ರೂ. ಬಂಡವಾಳದ ಹೈಟೆಕ್ ಪೈಪ್ಸ್, 300 ಕೋಟಿ ರೂ. ಹೂಡಿಕೆಯ ಹಿಂದೂಸ್ತಾನ್ ಕೋಕೋಕೋಲಾ ಬಿವರೇಜಸ್, 300 ಕೋಟಿ ರೂ. ವೆಚ್ಚದ ಸರ್ವೋಟೆಕ್ ಪವರ್ ಸಿಸ್ಟಮ್ಸ್, 350 ಕೋಟಿ ರೂ. ಹೂಡಿಕೆಯ ವಿಂಗ್ ವಿಟೇರಾ ಮುಂತಾದ 20ಕ್ಕೂ ಹೆಚ್ಚು ಕಂಪನಿಗಳು ಜಿಲ್ಲೆಗೆ ಬರುತ್ತಿವೆ.

ಇವೆಲ್ಲಕ್ಕೂ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಕೊಡಲಾಗುವುದು. ಕನಿಷ್ಠ ಪಕ್ಷ ಜಿಲ್ಲೆಯ 10 ಸಾವಿರ ಜನರಿಗಾದರೂ ಇಲ್ಲಿ ಕೆಲಸ ಕೊಡಿಸಬೇಕು ಎನ್ನುವುದು ನನ್ನ ಆಸೆಯಾಗಿದೆ. ಸದ್ಯದಲ್ಲೇ ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯ ತಯಾರಿಕಾ ಘಟಕವು ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಲಿದೆ. ಇವೆಲ್ಲಕ್ಕಿಂತ ಮೊದಲು ಭೂಮಿ ಕಳೆದುಕೊಂಡಿರುವ ಸಂತ್ರಸ್ತರಿಗೆ ನಾವು ಕಾನೂನಿನ ಆಚೆಗೂ ಹೋಗಿ ಸೂಕ್ತ ಪರಿಹಾರ ಕೊಡುವುದಕ್ಕೆ ಬದ್ಧರಾಗಿದ್ದೇವೆ ಎಂದು ತಿಳಿಸಿದರು.

Editor Reporter
mirrortvkannada.com

ಗುಮ್ಮಟ ನಗರಿಯಲ್ಲಿ ಕೈಗಾರಿಕಾ ಕ್ರಾಂತಿ: ₹1,600 ಕೋಟಿ ಬೃಹತ್ ಹೂಡಿಕೆಯಲ್ಲಿ ರಿಲಯನ್ಸ್ ‘ಕ್ಯಾಂಪಾ ಕೋಲಾ’ ಘಟಕ..

ಉತ್ತರ ಕರ್ನಾಟಕದ ಪ್ರಮುಖ ಪ್ರವಾಸಿ ತಾಣ, ಬಸವನಾಡಿನಲ್ಲಿ ಭಾರೀ ಹೂಡಿಕೆ ಹರಿದು ಬಂದಿದೆ. ವಿಜಯಪುರದ ಹೊರವಲಯದಲ್ಲಿರುವ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ 109 ಎಕರೆ ವಿಸ್ತಾರದಲ್ಲಿ, 1,600 ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ ನಿರ್ಮಾಣವಾಗಲಿರುವ ರಿಲಯನ್ಸ್ ಸಮೂಹದ ಕ್ಯಾಂಪಾ ಕೋಲಾ ತಂಪು ಪಾನೀಯ ತಯಾರಿಕಾ ಘಟಕಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಇದೇ ವೇಳೆ ಮಾತನಾಡಿದ ಅವರು, 'ಕ್ಯಾಂಪಾ ಕೋಲಾ ಘಟಕದ ಸ್ಥಾಪನೆಯೊಂದಿಗೆ ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕಾ ಬೆಳವಣಿಗೆಗೆ ಹೊಸ ವೇಗ ದೊರೆಯಲಿದೆ. ಮುಂದಿನ ದಿನಗಳಲ್ಲಿ ವಿಂಗ್ಸ್ ವಿಟೇರಾ, ಹಿಂದೂಸ್ಥಾನ್ ಕೋಕಾ-ಕೋಲಾ, ಹೈಟೆಕ್ ಫೈಬ್ಸ್, ಬ್ಯಾಟರಿ ಉತ್ಪಾದನಾ ಕ್ಷೇತ್ರದ ಸರ್ವರ್ ಟೆಕ್ ಪವರ್ ಸಿಸ್ಟಂ, ಮೆಟಾಗ್ರೂಪ್ ಹಾಗೂ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಹೆಸರು ಮಾಡಿರುವ ಟೋನ್ಬೋ ಇಮೇಜಿಂಗ್ ಸೇರಿದಂತೆ ಹಲವು ಕಂಪನಿಗಳೊಂದಿಗೆ ಹೂಡಿಕೆ ಸಂಬಂಧ ಮಾತುಕತೆ ನಡೆಸಲಾಗಿದೆ. ಹಲವು ಕಂಪನಿಗಳು ಈಗಾಗಲೇ ಹೂಡಿಕೆ ಒಪ್ಪಂದಗಳಿಗೂ ಸಹಿ ಹಾಕಿವೆ ಎಂದು ಹೇಳಿದರು.l

ಬಾರಾಮತಿ ಮಾದರಿಯಲ್ಲಿ ಕ್ಷೇತ್ರ ಅಭಿವೃದ್ಧಿ
'ನೆರೆಯ ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಅವರು ತಮ್ಮ ಸ್ವಕ್ಷೇತ್ರ ಬಾರಾಮತಿಯಲ್ಲಿ ನೀರಾವರಿ ಸೌಕರ್ಯ, ಹೈನುಗಾರಿಕೆ ಉದ್ಯಮ ಮತ್ತು ಕೈಗಾರಿಕೆ ಈ ಮೂರನ್ನೂ ಸಮಾನವಾಗಿ ಬೆಳೆಸಿದ್ದಾರೆ. ಅವರಿಂದ ನಾವು ಪಾಠ ಕಲಿಯಬೇಕಿದೆ. ಮುಂಬರುವ ವರ್ಷಗಳಲ್ಲಿ ವಿಜಯಪುರ ಜಿಲ್ಲೆ ಕೂಡ ಬಾರಾಮತಿಯಂತೆಯೇ ಅಭಿವೃದ್ಧಿ ಹೊಂದಲಿದೆ. ಜಿಲ್ಲೆಯಲ್ಲಿ ಹೂಡಿಕೆ ಮಾಡುವ ಸಂಬಂಧ ಹತ್ತಾರು ದಿಗ್ಗಜ ಕಂಪನಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಒಟ್ಟಿನಲ್ಲಿ ಜಿಲ್ಲೆಗೆ ಬೃಹತ್ ಕೈಗಾರಿಕೆಗಳನ್ನು ತರಲಾಗುವುದು' ಎಂದರು.
3,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ
ಮುಳವಾಡದಲ್ಲಿ ಕೈಗಾರಿಕೆಗಳಿಗೆಂದು 2009ರಲ್ಲೇ ಮೂರ್ನಾಲ್ಕು ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ಇದುವರೆಗೂ ಇಲ್ಲಿಗೆ ಒಂದೇ ಒಂದು ಕೈಗಾರಿಕೆಯೂ ಬಂದಿರಲಿಲ್ಲ. ನಾನು ಕೈಗಾರಿಕಾ ಸಚಿವನಾದ ಮೇಲೆ ಕಳೆದ ಮೂರು ವರ್ಷಗಳಿಂದ ಇದನ್ನು ಸವಾಲಾಗಿ ಸ್ವೀಕರಿಸಿ, ಹೂಡಿಕೆದಾರರನ್ನು ವಿಜಯಪುರ ಜಿಲ್ಲೆಗೆ ಬರುವಂತೆ ಮಾಡಿದ ಪ್ರಯತ್ನ ಈಗ ಫಲ ಕೊಟ್ಟಿದೆ. ಕ್ಯಾಂಪಾಕೋಲಾ ಘಟಕದಿಂದ 2,000 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ. ಜತೆಗೆ ಪರೋಕ್ಷವಾಗಿ 3,000ಕ್ಕೂ ಹೆಚ್ಚು ಜನರಿಗೆ ಕೆಲಸ ಸಿಗಲಿದೆ ಎಂದು ಅವರು ಹೇಳಿದರು.

ವಿಜಯಪುರ ಜಿಲ್ಲೆಯಲ್ಲಿ ಹಿಂದೆ ನೀರಿನ ಸೌಕರ್ಯವಿಲ್ಲ ಎನ್ನುವ ಕಾರಣಕ್ಕೆ ಕೈಗಾರಿಕೆಗಳು ಬರುತ್ತಿರಲಿಲ್ಲ. ಆದರೆ ಈಗ ಜಿಲ್ಲೆಯಲ್ಲಿ ಈ ಸೌಲಭ್ಯ ಚೆನ್ನಾಗಿದ್ದು, ಕೆರೆಕಟ್ಟೆಗಳಿಗೆಲ್ಲ ನೀರು ತುಂಬಿಸಲಾಗುತ್ತಿದೆ. ಇದರ ಜತೆಗೆ ಜಿಲ್ಲೆಯು ದಾಳಿಂಬೆ, ನಿಂಬೆ ಮತ್ತು ದ್ರಾಕ್ಷಿಯಂತಹ ತೋಟಗಾರಿಕೆ ಬೆಳೆಗಳ ತೊಟ್ಟಿಲಾಗಿದೆ. ರಿಲಯನ್ಸ್ ಕಂಪನಿಯು ಇದನ್ನು ಪರಿಗಣಿಸಿ, ಆಹಾರ ಸಂಸ್ಕರಣೆ ಮತ್ತು ತನ್ನ ವಿಸ್ತರಣೆಯನ್ನು ಆರಂಭಿಸಬೇಕು. ಕೈಗಾರಿಕೆಗಳಿಗೆ ಯಾವ ಬೆಳೆ ಬೇಕೋ ಅದನ್ನು ಬೆಳೆಯಲು ನಮ್ಮ ರೈತರು ಸಿದ್ಧರಿದ್ದಾರೆ. ಹೀಗಾಗಿ, ಕಚ್ಚಾವಸ್ತುವಿನ ಕೊರತೆಯ ಸಮಸ್ಯೆ ಎದುರಾಗುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.
ಘಟಕದಲ್ಲಿ ಕನ್ನಡಿಗರಿಗೆ ಉದ್ಯೋಗವಕಾಶ
ರಿಲಯನ್ಸ್ ಕಂಪನಿಯು ಇಲ್ಲಿ ಮೊದಲು ಭೂಮಿಯನ್ನು ಕಳೆದುಕೊಂಡಿರುವ ಸಂತ್ರಸ್ತ ರೈತ ಕುಟುಂಬಗಳ ಸದಸ್ಯರಿಗೆ ಉದ್ಯೋಗ ಕೊಡಬೇಕು. ಬಳಿಕ, 25 ಕಿ.ಮೀ. ಸುತ್ತಮುತ್ತ ಇರುವ ಅರ್ಹರಿಗೆ ಮತ್ತು ನಂತರ ವಿಜಯಪುರ ಜಿಲ್ಲೆಯ ಪ್ರತಿಭಾವಂತರನ್ನು ಆಯ್ಕೆ ಮಾಡಿಕೊಂಡು, ಖಾಯಂ ಉದ್ಯೋಗಿಗಳಾಗಿ ನೇಮಿಸಿಕೊಳ್ಳಬೇಕು. ಸಿ ಮತ್ತು ಡಿ ವರ್ಗಗಳ ಹುದ್ದೆಗಳಲ್ಲಿ ನೂರಕ್ಕೆ ನೂರರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೇ ಕೊಡಬೇಕು. ಇದನ್ನು ಕಂಪನಿ ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಹೂಡಿಕೆದಾರರೆಲ್ಲರೂ ಬರೀ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಾಗವನ್ನೇ ಬಯಸುತ್ತಾರೆ. ಆದರೆ ರಾಜಧಾನಿಯಿಂದ ಹೊರಗಿರುವ ಪ್ರದೇಶಗಳಲ್ಲಿ ಕೈಗಾರಿಕೆಗಳು ಬೆಳೆಯುವುದು ಅಗತ್ಯ. ರಾಜ್ಯದಲ್ಲಿ ಕೈಗಾರಿಕೆಗಳನ್ನು ಬೆಳೆಸುವ ಬಗ್ಗೆ ಕೇಂದ್ರ ಸರಕಾರಕ್ಕೆ ಆಸಕ್ತಿ ಇಲ್ಲ. ಉದ್ಯಮಿಗಳು ಸಾಮಾನ್ಯವಾಗಿ ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತಿನಲ್ಲಿ ತಮಗೆ ಕೊಡಮಾಡಲು ಮುಂದೆ ಬಂದಿರುವ ಸೌಕರ್ಯಗಳ ಪಟ್ಟಿ ಹಿಡಿದುಕೊಂಡೇ ನಮ್ಮ ಬಳಿಗೆ ಬರುತ್ತಾರೆ. ಆದರೆ, ನಮ್ಮಲ್ಲಿ ಭೂಮಿಯ ಲಭ್ಯತೆ ಉಳಿದ ರಾಜ್ಯಗಳಷ್ಟು ಸುಲಭವಾಗಿಲ್ಲ. ಆದರೂ ನಾವು ಇದನ್ನೆಲ್ಲ ಬಗೆಹರಿಸಿ, ಉದ್ಯಮಿಗಳ ಆದ್ಯತೆಗಳಿಗೂ ಸ್ಪಂದಿಸುತ್ತಿದ್ದೇವೆ ಎಂದು ವಿವರಿಸಿದರು.
ವಿಜಯಪುರ ಭವಿಷ್ಯದ ಕೈಗಾರಿಕೆಗಳ ತೊಟ್ಟಿಲು
ವಿಜಯಪುರ ಜಿಲ್ಲೆಯನ್ನು ನೀರಾವರಿ, ತೋಟಗಾರಿಕೆ ಮತ್ತು ಕೈಗಾರಿಕೆಗಳ ತೊಟ್ಟಿಲನ್ನಾಗಿ ಮಾಡಲಾಗುವುದು. ಇವುಗಳಲ್ಲಿ ಮೊದಲ ಎರಡೂ ಕ್ಷೇತ್ರಗಳು ಸಮೃದ್ಧವಾಗಿವೆ. ಮೂರನೇ ವಲಯದತ್ತ ಈಗ ಗಮನ ಹರಿಸಲಾಗಿದೆ. ಹೀಗಾಗಿ 444 ಕೋಟಿ ರೂ. ಹೂಡಿಕೆಯ ಟೆರ್ರಾ ಸರ್ಕ್ಯೂಟ್ಸ್, 90 ಕೋಟಿ ಹೂಡಿಕೆಯ ಜೆನಿತ್ ಎನರ್ಜಿ ಸೊಲ್ಯೂಷನ್ಸ್, 250 ಕೋಟಿ ರೂ. ಬಂಡವಾಳದ ಹೈಟೆಕ್ ಪೈಪ್ಸ್, 300 ಕೋಟಿ ರೂ. ಹೂಡಿಕೆಯ ಹಿಂದೂಸ್ತಾನ್ ಕೋಕೋಕೋಲಾ ಬಿವರೇಜಸ್, 300 ಕೋಟಿ ರೂ. ವೆಚ್ಚದ ಸರ್ವೋಟೆಕ್ ಪವರ್ ಸಿಸ್ಟಮ್ಸ್, 350 ಕೋಟಿ ರೂ. ಹೂಡಿಕೆಯ ವಿಂಗ್ ವಿಟೇರಾ ಮುಂತಾದ 20ಕ್ಕೂ ಹೆಚ್ಚು ಕಂಪನಿಗಳು ಜಿಲ್ಲೆಗೆ ಬರುತ್ತಿವೆ.

ಇವೆಲ್ಲಕ್ಕೂ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಕೊಡಲಾಗುವುದು. ಕನಿಷ್ಠ ಪಕ್ಷ ಜಿಲ್ಲೆಯ 10 ಸಾವಿರ ಜನರಿಗಾದರೂ ಇಲ್ಲಿ ಕೆಲಸ ಕೊಡಿಸಬೇಕು ಎನ್ನುವುದು ನನ್ನ ಆಸೆಯಾಗಿದೆ. ಸದ್ಯದಲ್ಲೇ ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯ ತಯಾರಿಕಾ ಘಟಕವು ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಲಿದೆ. ಇವೆಲ್ಲಕ್ಕಿಂತ ಮೊದಲು ಭೂಮಿ ಕಳೆದುಕೊಂಡಿರುವ ಸಂತ್ರಸ್ತರಿಗೆ ನಾವು ಕಾನೂನಿನ ಆಚೆಗೂ ಹೋಗಿ ಸೂಕ್ತ ಪರಿಹಾರ ಕೊಡುವುದಕ್ಕೆ ಬದ್ಧರಾಗಿದ್ದೇವೆ ಎಂದು ತಿಳಿಸಿದರು.

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్