‘ದೃಶ್ಯಂ 3’ ಬಾಕ್ಸ್ ಆಫೀಸ್ ಧಮಾಕಾ: ಭಾರತಕ್ಕಿಂತ ವಿದೇಶದಲ್ಲೇ ಅಬ್ಬರಿಸಿದ ಜಾರ್ಜ್‌ಕುಟ್ಟಿ, ಒಟ್ಟು ಗಳಿಕೆ ಎಷ್ಟು?

ಮೋಹನ್‌ಲಾಲ್ ಮತ್ತು ಜೀತು ಜೋಸೆಫ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಸ್ಪೆನ್ಸ್ ಥ್ರಿಲ್ಲರ್ ‘ದೃಶ್ಯಂ 3’ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಬಿಡುಗಡೆಯಾದ ಕೇವಲ 6 ದಿನಗಳಲ್ಲಿ ಸಿನಿಮಾ ವಿಶ್ವಾದ್ಯಂತ ಧೂಳೆಬ್ಬಿಸಿದೆ. ವಿಶೇಷವೆಂದರೆ, ಈ ಬಾರಿ ಜಾರ್ಜ್‌ಕುಟ್ಟಿಯ ಕಥೆಗೆ ಭಾರತಕ್ಕಿಂತ ವಿದೇಶಿ ಮಾರುಕಟ್ಟೆಯಲ್ಲಿ ಗಲ್ಫ್ ರಾಷ್ಟ್ರಗಳು ಮತ್ತು ಅಮೆರಿಕದ ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಕಲೆಕ್ಷನ್ ವಿಚಾರದಲ್ಲಿ ಅನಿವಾಸಿ ಭಾರತೀಯರು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ.

ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ನೀಡಿರುವ ಇತ್ತೀಚಿನ ವರದಿಗಳ ಪ್ರಕಾರ, ‘ದೃಶ್ಯಂ 3’ ಸಿನಿಮಾ ಕೇವಲ 6 ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 170.32 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಅತಿ ವೇಗವಾಗಿ 150 ಕೋಟಿ ಕ್ಲಬ್ ದಾಟಿದ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಚಿತ್ರಕ್ಕೆ ಆರಂಭದಲ್ಲಿ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ‘ದೃಶ್ಯಂ’ ಫ್ರಾಂಚೈಸಿ ಮೇಲಿರುವ ಕ್ರೇಜ್‌ನಿಂದಾಗಿ ಪ್ರೇಕ್ಷಕರು ಚಿತ್ರಮಂದಿರಗಳತ್ತ ಲಗ್ಗೆ ಇಡುತ್ತಿದ್ದಾರೆ.

ಕಲೆಕ್ಷನ್‌ನ ವಿಭಜನೆಯನ್ನು ಗಮನಿಸಿದರೆ, ಭಾರತದಲ್ಲಿ ಈ ಚಿತ್ರದ ಒಟ್ಟು ಗ್ರಾಸ್ ಗಳಿಕೆ ಸುಮಾರು 78 ಕೋಟಿ ರೂಪಾಯಿ ಆಗಿದೆ (ನೆಟ್ ಕಲೆಕ್ಷನ್ 68.60 ಕೋಟಿ ರೂ.). ಆದರೆ ವಿದೇಶಿ ಮಾರುಕಟ್ಟೆಯೊಂದರಲ್ಲೇ ಸಿನಿಮಾ ಭರ್ಜರಿಯಾಗಿ 90.70 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ ಭಾರತದ ಗಳಿಕೆಯನ್ನೇ ಮೀರಿಸಿದೆ. ಕರ್ನಾಟಕದಲ್ಲೂ ಈ ಚಿತ್ರ ಕನ್ನಡ ಹಾಗೂ ಮಲಯಾಳಂ ಎರಡೂ ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ವಾರಾಂತ್ಯದ ವೇಳೆಗೆ ಸಿನಿಮಾ ಸುಲಭವಾಗಿ 200 ಕೋಟಿ ರೂಪಾಯಿಯ ಗಡಿಯನ್ನು ದಾಟುವ ಮುನ್ಸೂಚನೆ ನೀಡಿದೆ.

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్