ಫಾರ್ಮ್​ಹೌಸ್ ಗೇಟ್ ತೆರೆಯುತ್ತಿದ್ದಂತೆ ಸ್ಫೋಟಗೊಂಡ ನಾಡಬಾಂಬ್: ವಕೀಲರಿಗೆ ಗಂಭೀರ ಗಾಯ

mirrortvkannada.com
Date : 26 June 2026, 9:43 am Posted By : MIRROR TV KANNADA

ಫಾರ್ಮ್​ಹೌಸ್ ಗೇಟ್ ತೆರೆಯುತ್ತಿದ್ದಂತೆ ಸ್ಫೋಟಗೊಂಡ ನಾಡಬಾಂಬ್: ವಕೀಲರಿಗೆ ಗಂಭೀರ ಗಾಯ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಬಳಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಫಾರ್ಮ್‌ಹೌಸ್‌ನ ಗೇಟ್ ಓಪನ್ ಮಾಡುತ್ತಿದ್ದಂತೆ ನಾಡಬಾಂಬ್ ಸ್ಫೋಟಗೊಂಡು ವಕೀಲರೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಹೊಸಕೋಟೆ ಬાર అసోಸಿಯೇಷನ್‌ನ ವಕೀಲರಾದ ಎಂ.ಆರ್. ಮಂಜುನಾಥ್ ಎಂಬುವವರೇ ದುರ್ಘಟನೆಗೆ ತುತ್ತಾದವರು. ಗಾಯಗೊಂಡ ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ರವಜಿಸಿ, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಮತ್ತು ಶ್ವಾನದಳದ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ದುಷ್ಕರ್ಮಿಗಳು ನಾಡಬಾಂಬ್ ಅನ್ನು ಗೇಟ್‌ಗೆ ಕಟ್ಟಿಟ್ಟಿರುವ ಶಂಕೆ ವ್ಯಕ್ತವಾಗಿದೆ. ವಕೀಲ ಮಂಜುನಾಥ್ ಅವರು ಗೇಟ್ ತಳ್ಳುತ್ತಿದ್ದಂತೆ ತೀವ್ರ ಸ್ವರೂಪದ ಸ್ಫೋಟ ಸಂಭವಿಸಿದೆ. ಈ ಸ್ಫೋಟದ ರಭಸಕ್ಕೆ ಗೇಟ್‌ನ ಕಬ್ಬಿಣದ ಸರಳುಗಳು ಮುರಿದು ಬಿದ್ದಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ವಕೀಲರ ವೃತ್ತಿ ಅಥವಾ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆಯಾ ಎಂಬ ಕೋನದಲ್ಲಿ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಘಟನೆಯು ಸುತ್ತಮುತ್ತಲಿನ ಜನರಲ್ಲಿ ಹಾಗೂ ವಕೀಲರ ವಲಯದಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

⬇ DOWNLOAD
×

Editor Reporter

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్