ಚೆನ್ನಮ್ಮ ದೇವೇಗೌಡರ ನಿಧನದಿಂದ ಮುಂದೂಡಿಕೆ ಆಗಿದ್ದ ಬಿಡದಿ ಟೌನ್ಶಿಪ್ (Bidadi Township) ವಿರೋಧಿಸಿ ಜೆಡಿಎಸ್ ಪಾದಯಾತ್ರೆಗೆ (JDS Padayatra) ಹೊಸ ದಿನಾಂಕ ನಿಗದಿ ಮಾಡಲಾಗಿದೆ. ಹೊಸ ದಿನಾಂಕವನ್ನ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಘೋಷಣೆ ಮಾಡಿದ್ದಾರೆ.
ದೋಸ್ತಿ ಪಕ್ಷ ಬಿಜೆಪಿಯನ್ನ ದೂರವಿಟ್ಟು ಪಾದಯಾತ್ರೆ ಮಾಡಲು ಜೆಡಿಎಸ್ ತೀರ್ಮಾನ ಮಾಡಿದೆ. ಆಗಸ್ಟ್ 9,10,11ರಂದು ಪಾದಯಾತ್ರೆ ನಡೆಯಲಿದೆ. ಇದನ್ನೂ ಓದಿ:
ಆಗಸ್ಟ್ 9ರಂದು ಭೈರಮಂಗಲದಿಂದ ಪಾದಯಾತ್ರೆ ಶುರುವಾಗಲಿದ್ದು, ಆಗಸ್ಟ್ 11 ರಂದು ಫ್ರೀಡಂ ಪಾರ್ಕ್ಗೆ ಪಾದಯಾತ್ರೆ ತಲುಪಲಿದೆ. ಅಂದೇ ಬೃಹತ್ ಸಮಾವೇಶವನ್ನ ಜೆಡಿಎಸ್ ಹಮ್ಮಿಕೊಂಡಿದೆ. ಪಾದಯಾತ್ರೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಚಾಲನೆ ನೀಡಲಿದ್ದು, 3 ದಿನಗಳ ಪಾದಯಾತ್ರೆಯಲ್ಲಿ ಒಂದು ದಿನ ಮಾಜಿ ಪ್ರಧಾನಿ ದೇವೇಗೌಡರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ – ಪ್ರಚೋದನಾಕಾರಿ ವಿಷಯ ಹಂಚಿದ ಯೂಟ್ಯೂಬರ್, ಇನ್ಫ್ಲುಯೆನ್ಸರ್ಗಳ ವಿರುದ್ಧ ಕ್ರಮಕ್ಕೆ ದೆಹಲಿ ಪೊಲೀಸ್ ಸಜ್ಜು
ಪಾದಯಾತ್ರೆ ಮುಗಿದ ಬಳಿಕ ಆಗಸ್ಟ್ 14ರಂದು ವಿಧಾನಸೌಧ ಚಲೋ ಜೆಡಿಎಸ್ ನಡೆಸಲಿದೆ. ಫ್ರೀಡಂ ಪಾರ್ಕ್ನಿಂದ ವಿಧಾನಸೌಧಕ್ಕೆ ವಿಧಾನಸೌಧ ಚಲೋ ನಡೆಯಲಿದೆ.









