ಎನ್‌ವಿಡಿಯಾ ಮುಂದಿನ ಸಿಇಒ ಸ್ಥಾನಕ್ಕೆ ಟಿಮ್ ಕುಕ್ ಹೆಸರು ಸೂಚಿಸಿದ ಟ್ರಂಪ್..

mirrortvkannada.com
Date : 13 November 2026, 6:56 am Posted By : MIRROR TV KANNADA

ಎನ್‌ವಿಡಿಯಾ ಮುಂದಿನ ಸಿಇಒ ಸ್ಥಾನಕ್ಕೆ ಟಿಮ್ ಕುಕ್ ಹೆಸರು ಸೂಚಿಸಿದ ಟ್ರಂಪ್..

ವಿಶ್ವದ ಅಗ್ರಗಣ್ಯ ಚಿಪ್ ತಯಾರಿಕಾ ಸಂಸ್ಥೆ ಎನ್‌ವಿಡಿಯಾದ (Nvidia) ಸಿಇಒ ಜೆನ್ಸನ್ ಹುವಾಂಗ್(Jensen Huang) ಅವರ ದಿಢೀರ್ ರಾಜೀನಾಮೆ ಬೆನ್ನಲ್ಲೇ, ಆ ಸ್ಥಾನಕ್ಕೆ ಆಪಲ್ (Apple) ಸಂಸ್ಥೆಯ ಮಾಜಿ ಸಿಇಒ ಟಿಮ್ ಕುಕ್(Tim Cook) ಅವರೇ ಅತ್ಯಂತ ಸೂಕ್ತ ವ್ಯಕ್ತಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ‘ಟ್ರೂತ್ ಸೋಶಿಯಲ್’ ನಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, “ಅದ್ಭುತವಾಗಿ ಕಾರ್ಯನಿರ್ವಹಿಸಿದ್ದ ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ಈಗ ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನವನ್ನು ತುಂಬಲು ಇರುವುದು ಒಬ್ಬರೇ ವ್ಯಕ್ತಿ – ಅವರೇ ಆಪಲ್ ಸಂಸ್ಥೆಯ ಟಿಮ್ ಕುಕ್. ಒಬ್ಬ ದಿಗ್ಗಜನ ಸ್ಥಾನವನ್ನು ಮತ್ತೊಬ್ಬ ದಿಗ್ಗಜ ತುಂಬಲಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ವಿಶೇಷವೆಂದರೆ, ಟಿಮ್ ಕುಕ್ ಅವರು ಕಳೆದ ಸೆಪ್ಟೆಂಬರ್ 1ರಂದಷ್ಟೇ ಆಪಲ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಹುದ್ದೆಯಿಂದ ಕೆಳಗಿಳಿದಿದ್ದರು. 15 ವರ್ಷಗಳ ಸುದೀರ್ಘ ಹಾಗೂ ಯಶಸ್ವಿ ಆಡಳಿತದ ನಂತರ ಅವರು ಈ ನಿರ್ಧಾರ ತೆಗೆದುಕೊಂಡಿದ್ದರೂ, ಕಂಪನಿಯನ್ನು ಸಂಪೂರ್ಣವಾಗಿ ತೊರೆದಿಲ್ಲ. ಪ್ರಸ್ತುತ ಅವರು ಆಪಲ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ (Executive Chairman) ಮುಂದುವರಿದಿದ್ದು, ಕಂಪನಿಯ ಪ್ರಮುಖ ನೀತಿ ನಿರೂಪಣೆ ಹಾಗೂ ಜಾಗತಿಕ ಸರ್ಕಾರಿ ಸಂಬಂಧಗಳನ್ನು ನಿರ್ವಹಿಸುತ್ತಿದ್ದಾರೆ.
2011ರಲ್ಲಿ ಸ್ಟೀವ್ ಜಾಬ್ಸ್ ಅವರಿಂದ ಆಪಲ್ ಚುಕ್ಕಾಣಿ ವಹಿಸಿಕೊಂಡಿದ್ದ ಟಿಮ್ ಕುಕ್, ತಮ್ಮ ನಾಯಕತ್ವದಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯವನ್ನು ಸುಮಾರು 350 ಬಿಲಿಯನ್ ಡಾಲರ್‌ನಿಂದ 4 ಟ್ರಿಲಿಯನ್ ಡಾಲರ್‌ಗಿಂತಲೂ ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ದ ಹೆಗ್ಗಳಿಕೆ ಹೊಂದಿದ್ದಾರೆ.

ಇದೀಗ ಸಿಇಒ ಜವಾಬ್ದಾರಿಯಿಂದ ಮುಕ್ತರಾಗಿರುವ ಟಿಮ್ ಕುಕ್ ಅವರನ್ನೇ ಎನ್‌ವಿಡಿಯಾ ಚುಕ್ಕಾಣಿ ಹಿಡಿಯುವಂತೆ ಅಮೆರಿಕ ಅಧ್ಯಕ್ಷರು ಬಹಿರಂಗವಾಗಿ ಸೂಚಿಸಿರುವುದು ಜಾಗತಿಕ ಟೆಕ್ ಮತ್ತು ಉದ್ಯಮ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.

⬇ DOWNLOAD
×

Editor Reporter

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్