ದಾಖಲೆ ಬರೆದ ಹಾಸನಾಂಬ ಜಾತ್ರಾ ಮಹೋತ್ಸವ – 29.55 ಕೋಟಿ ರೂ. ಆದಾಯ ಸಂಗ್ರಹ..

mirrortvkannada.com
Date : 13 November 2026, 6:57 am Posted By : MIRROR TV KANNADA

ದಾಖಲೆ ಬರೆದ ಹಾಸನಾಂಬ ಜಾತ್ರಾ ಮಹೋತ್ಸವ – 29.55 ಕೋಟಿ ರೂ. ಆದಾಯ ಸಂಗ್ರಹ..

ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವ (Hasanamba Jatra Mahotsava) ಹೊಸ ದಾಖಲೆ ಬರೆದಿದೆ. ಒಟ್ಟು 30,06,000 ಭಕ್ತರು ದೇವಿ ದರ್ಶನ ಪಡೆದಿದ್ದು, ಎಲ್ಲಾ ಮೂಲಗಳಿಂದ ಒಟ್ಟು 29,55,27,852 ರೂ. ಆದಾಯ ಸಂಗ್ರಹವಾಗಿದೆ ಎಂದು ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಧಿಕಾರಿ ಜಗದೀಶ್ ಗಂಗಣ್ಣನವರ್ ತಿಳಿಸಿದ್ದಾರೆ.
2025ರಲ್ಲಿ 13 ದಿನಗಳಲ್ಲಿ 25 ಲಕ್ಷ 36 ಭಕ್ತರು ದರ್ಶನ ಪಡೆದಿದ್ದು, 1,000, 300 ರೂ. ವಿಶೇಷ ದರ್ಶನ ಟಿಕೆಟ್, ಲಾಡು ಪ್ರಸಾದ ಹಾಗೂ ಹುಂಡಿ ಕಾಣಿಕೆ ಸೇರಿ 25.59 ಕೋಟಿ ರೂ. ಸಂಗ್ರಹವಾಗಿತ್ತು. ಈ ಬಾರಿ ಅ.29 ರಂದು ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ತೆರೆದಿದ್ದು, ಅಂದು ಸಾರ್ವಜನಿಕರಿಗೆ ದರ್ಶನ ಇಲ್ಲದಿದ್ದರೂ, ಈ ವೇಳೆ ನೆರೆದಿದ್ದವರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಅ.29 ರಂದು 5,600 ಮಂದಿ ದೇವಿ ದರ್ಶನ ಪಡೆದಿದ್ದರು. ಅ.30 ರಿಂದ ನ.10 ರವರೆಗೆ ಒಟ್ಟು 12 ದಿನಗಳು ಕಾಲ ದೇಶ, ರಾಜ್ಯ, ಹೊರ ರಾಜ್ಯ, ಜಿಲ್ಲೆ, ಹೊರ ಜಿಲ್ಲೆಗಳಿಂದ 30,06,000 ಭಕ್ತರು ದೇವಿ ದರ್ಶನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಶ್ರೀ ಹಾಸನಾಂಬ ದೇವಿ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, 1,000 ರೂ.ನ ವಿಶೇಷ ದರ್ಶನ ಟಿಕೆಟ್ ಮಾರಾಟದಿಂದ 16,98,11,257 ರೂಪಾಯಿ, 300 ರೂ.ನ ವಿಶೇಷ ದರ್ಶನ ಟಿಕೆಟ್ ಮಾರಾಟದಿಂದ 7,24,14,000 ರೂಪಾಯಿ, ಲಾಡು ಮಾರಾಟದಿಂದ 1,35,99,156 ರೂಪಾಯಿ, ದೇಣಿಗೆಯಾಗಿ 5,91,228 ರೂ, ಇ-ಹುಂಡಿಯಿಂದ 13,13,264 ರೂ, ಜಾಹೀರಾತಿನಿಂದ 5,74,000 ರೂಪಾಯಿ ಸೇರಿ ಒಟ್ಟು 25,82,88,199 ರೂಪಾಯಿಗಳು ಸಂಗ್ರಹವಾಗಿದೆ ಎಂದರು
ಭಕ್ತರು ಕಾಣಿಕೆ ರೂಪದಲ್ಲಿ 3,71,63,933 ರೂಪಾಯಿ ಹುಂಡಿಯಲ್ಲಿ ಹಾಕಿದ್ದು ಎಲ್ಲಾ ಸೇರಿ ಒಟ್ಟು 29,55,27,852 ರೂಪಾಯಿ ಆದಾಯ ಸಂಗ್ರಹವಾಗಿದ್ದು, ಕಳೆದ ವರ್ಷಕ್ಕಿಂತ 4 ಕೋಟಿ ಹೆಚ್ಚಿನ ಆದಾಯ ಬಂದಿದೆ. 43.170 ಗ್ರಾಂ ಚಿನ್ನ ಹಾಗೂ 1.255 ಕೆಜಿ ಬೆಳ್ಳಿ ಕಾಣಿಕೆ ರೂಪದಲ್ಲಿ ಭಕ್ತರು ನೀಡಿದ್ದಾರೆ. ಹಾಸನಾಂಬ ದೇವಾಲಯದ ಬಳಿಯಿರುವ ತೇರಾಪಂಥ್ ಭವನದಲ್ಲಿ 500ಕ್ಕೂ ಹೆಚ್ಚು ಕಂದಾಯ ಇಲಾಖೆ ಸಿಬ್ಬಂದಿ, 50 ಸ್ಕೌಟ್ಸ್ ಅಂಡ್ ಗೈಡ್ಸ್ ಮಕ್ಕಳು ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದು, ವಿದೇಶಿ ಕರೆನ್ಸಿ, ಹಳೆಯ 500, 1000 ಸಾವಿರ ನೋಟುಗಳು, ನಕಲಿ ನೋಟುಗಳು, ಹುಂಡಿಯಲ್ಲಿ ಸಿಂಗಾಪೂರ್, ಓಮನ್, ಬಹ್ರೇನ್, ಅಮೆರಿಕ, ಯುಎಇ, ಚೈನಾ ಕರೆನ್ಸಿಗಳನ್ನು ಹಾಕಿದ್ದಾರೆ. ಹುಂಡಿಗೆ ಸಾವಿರಾರು ಬೇಡಿಕೆ ಪತ್ರಗಳನ್ನು ಹಾಕಿದ್ದು, ಬೇಡಿಕೆ ಪತ್ರಗಳನ್ನು ತೆರೆದು ಓದುವುದನ್ನು ಜಿಲ್ಲಾಡಳಿತ ನಿಷೇಧಿಸಿದ್ದರು. ಸಿದ್ದೇಶ್ವರಸ್ವಾಮಿ ದೇವಾಲಯದ ಹುಂಡಿಯಲ್ಲಿ 18,99,100 ಲಕ್ಷ ರೂ. ಸಂಗ್ರಹವಾಗಿದೆ.

⬇ DOWNLOAD
×

Editor Reporter

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్