ಸನ್‌ಸ್ಕ್ರೀನ್ ಬಳಕೆಯಿಂದ ವಿಟಮಿನ್ ಡಿ ಕೊರತೆ ಉಂಟಾಗುತ್ತದೆಯೇ? ಇಲ್ಲಿದೆ ವೈದ್ಯಕೀಯ ಸ್ಪಷ್ಟನೆ!

mirrortvkannada.com
Date : 06 May 2026, 3:34 pm Posted By : MIRROR TV KANNADA

ಸನ್‌ಸ್ಕ್ರೀನ್ ಬಳಕೆಯಿಂದ ವಿಟಮಿನ್ ಡಿ ಕೊರತೆ ಉಂಟಾಗುತ್ತದೆಯೇ? ಇಲ್ಲಿದೆ ವೈದ್ಯಕೀಯ ಸ್ಪಷ್ಟನೆ!

ಸನ್‌ಸ್ಕ್ರೀನ್ ಹಚ್ಚುವುದರಿಂದ ಚರ್ಮಕ್ಕೆ ಸೂರ್ಯನ ಕಿರಣಗಳು ತಗುಲದೆ ದೇಹದಲ್ಲಿ ವಿಟಮಿನ್ ಡಿ ಉತ್ಪತ್ತಿ ಕಡಿಮೆಯಾಗುತ್ತದೆ ಎಂಬ ಆತಂಕ ಅನೇಕರಲ್ಲಿದೆ. ಸೂರ್ಯನ ನೇರಳಾತೀತ ಬಿ (UVB) ಕಿರಣಗಳು ಚರ್ಮದ ಮೇಲೆ ಬಿದ್ದಾಗ ದೇಹವು ವಿಟಮಿನ್ ಡಿ ತಯಾರಿಸುತ್ತದೆ ಎಂಬುದು ನಿಜ. ಆದರೆ, ನಾವು ಬಳಸುವ ಸನ್‌ಸ್ಕ್ರೀನ್ ಲೋಷನ್‌ಗಳು ಈ ಕಿರಣಗಳನ್ನು ತಡೆಯುವುದರಿಂದ, ಇದು ಪರೋಕ್ಷವಾಗಿ ವಿಟಮಿನ್ ಡಿ ಕೊರತೆಗೆ ಕಾರಣವಾಗಬಹುದು ಎಂಬ ವಾದ ಕೇಳಿಬರುತ್ತಿತ್ತು. ಆದರೆ ವೈದ್ಯರು ಈ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.
ವೈದ್ಯಕೀಯ ಸಂಶೋಧನೆಗಳ ಪ್ರಕಾರ, ಪ್ರಾಯೋಗಿಕವಾಗಿ ಸನ್‌ಸ್ಕ್ರೀನ್ ಹಚ್ಚುವುದರಿಂದ ವಿಟಮಿನ್ ಡಿ ಮಟ್ಟದಲ್ಲಿ ಗಣನೀಯ ಕುಸಿತ ಉಂಟಾಗುವುದಿಲ್ಲ. ನಾವು ಎಷ್ಟೇ ಜಾಗರೂಕತೆಯಿಂದ ಸನ್‌ಸ್ಕ್ರೀನ್ ಹಚ್ಚಿದರೂ, ಅದು ಚರ್ಮದ ಮೇಲಿನ 100% ಕಿರಣಗಳನ್ನು ತಡೆಯಲು ಸಾಧ್ಯವಿಲ್ಲ. ದೇಹದ ಅಲ್ಪ ಭಾಗದ ಚರ್ಮವು ಸೂರ್ಯನ ಬೆಳಕಿಗೆ ತೆರೆದುಕೊಂಡರೂ ಸಾಕು, ದೇಹಕ್ಕೆ ಅಗತ್ಯವಿರುವ ವಿಟಮಿನ್ ಡಿ ಉತ್ಪತ್ತಿಯಾಗುತ್ತದೆ. ಹೀಗಾಗಿ, ಸನ್‌ಸ್ಕ್ರೀನ್ ಬಳಸುವುದರಿಂದ ಆರೋಗ್ಯದ ಮೇಲೆ ಅಂತಹ ದೊಡ್ಡ ಪರಿಣಾಮವೇನೂ ಬೀರದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಚರ್ಮದ ಕ್ಯಾನ್ಸರ್ ಮತ್ತು ಅಕಾಲಿಕ ವಯಸ್ಸಾದಂತೆ ಕಾಣುವ ಲಕ್ಷಣಗಳನ್ನು ತಡೆಯಲು ಸನ್‌ಸ್ಕ್ರೀನ್ ಅತ್ಯಗತ್ಯ. ವಿಟಮಿನ್ ಡಿ ಬಗ್ಗೆ ಚಿಂತೆ ಮಾಡುವವರು ದಿನಕ್ಕೆ ಕೇವಲ 10 ರಿಂದ 15 ನಿಮಿಷಗಳ ಕಾಲ ಮುಂಜಾನೆಯ ಎಳೆ ಬಿಸಿಲಿಗೆ ಮೈಯೊಡ್ಡಬಹುದು. ಒಂದು ವೇಳೆ ವಿಟಮಿನ್ ಡಿ ಕೊರತೆ ಅತಿಯಾಗಿದ್ದರೆ, ವೈದ್ಯರ ಸಲಹೆಯ ಮೇರೆಗೆ ಪೂರಕ ಆಹಾರ ಅಥವಾ ಮಾತ್ರೆಗಳನ್ನು ಸೇವಿಸುವುದು ಉತ್ತಮವೇ ಹೊರತು, ಸನ್‌ಸ್ಕ್ರೀನ್ ಹಚ್ಚುವುದನ್ನು ನಿಲ್ಲಿಸಿ ಚರ್ಮದ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು ಎಂದು ಚರ್ಮರೋಗ ತಜ್ಞರು ಸಲಹೆ ನೀಡಿದ್ದಾರೆ.

⬇ DOWNLOAD
×

Editor Reporter

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్