‘ನನ್ನ ಮಗಳು ನನ್ನನ್ನು ಅಪ್ಪ ಎಂದು ಕರೆಯುತ್ತಿಲ್ಲ’: ಅಚ್ಚರಿಯ ವಿಚಾರ ಬಿಚ್ಚಿಟ್ಟ ನಟ ರಾಮ್ ಚರಣ್

mirrortvkannada.com
Date : 24 June 2026, 6:04 pm Posted By : MIRROR TV KANNADA

‘ನನ್ನ ಮಗಳು ನನ್ನನ್ನು ಅಪ್ಪ ಎಂದು ಕರೆಯುತ್ತಿಲ್ಲ’: ಅಚ್ಚರಿಯ ವಿಚಾರ ಬಿಚ್ಚಿಟ್ಟ ನಟ ರಾಮ್ ಚರಣ್

ಟಾಲಿವುಡ್‌ನ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅವರ ಮುದ್ದಿನ ಮಗಳು ಕ್ಲಿನ್ ಕಾರಾ ಈಗ ತಂದೆಯನ್ನು 'ಅಪ್ಪ' (ನಾನ್ನ) ಎಂದು ಕರೆಯುವುದನ್ನು ಬಿಟ್ಟಿದ್ದಾಳಂತೆ! ಹೌದು, ಈ ಅಚ್ಚರಿಯ ಹಾಗೂ ಮುದ್ದಾದ ವಿಚಾರವನ್ನು ಸ್ವತಃ ರಾಮ್ ಚರಣ್ ಅವರೇ ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ತಮ್ಮ ಹೊಸ ಸಿನಿಮಾ 'ಪೆದ್ದಿ'ಯ ಸಕ್ಸಸ್ ಮೀಟ್ ವೇದಿಕೆಯಲ್ಲಿ ಬಹಿರಂಗಪಡಿಸಿದ್ದಾರೆ. ವೇದಿಕೆಯಲ್ಲಿ ಚರಣ್ ಹೇಳಿದ ಈ ಮಾತನ್ನು ಕೇಳಿ ಅಲ್ಲಿದ್ದ ತಂದೆ ಚಿರಂಜೀವಿ ಸೇರಿದಂತೆ ಅಭಿಮಾನಿಗಳು ನಸುನಕ್ಕಿದ್ದು, ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಚಿತ್ರದ ಬಿಡುಗಡೆಗೂ ಮುನ್ನ ಮಗಳು ಕ್ಲಿನ್ ಕಾರಾ ತಮ್ಮನ್ನು ಪ್ರೀತಿಯಿಂದ 'ನಾನ್ನ' ಎಂದೇ ಕರೆಯುತ್ತಿದ್ದಳು. ಆದರೆ ಬುಚ್ಚಿಬಾಬು ಸಾನಾ ನಿರ್ದೇಶನದ 'ಪೆದ್ದಿ' ಸಿನಿಮಾ ಬಿಡುಗಡೆಯಾದ ಬಳಿಕ ಆಕೆಯ ಬಾಯಲ್ಲಿ 'ನಾನ್ನ' ಎಂಬ ಪದವೇ ಬದಲಾಗಿದೆ ಎಂದು ಚರಣ್ ತಮಾಷೆಯಾಗಿ ಹೇಳಿದ್ದಾರೆ. ಮನೆಯಲ್ಲೂ ಎಲ್ಲರೂ ಚಿತ್ರದ ಗುಂಗಿನಲ್ಲಿರುವ ಕಾರಣ, ಮಗಳು ಕೂಡ ತಮ್ಮನ್ನು 'ಏಯ್ ಪೆದ್ದಿ' ಎಂದು ಕರೆಯಲು ಶುರುಮಾಡಿದ್ದಾಳಂತೆ. ತಾವು 'ಹಾಗೆ ಕರೆಯಬೇಡ, ನಾನು ನಿನ್ನ ಅಪ್ಪ' ಎಂದು ಬುದ್ಧಿ ಹೇಳಿದರೂ, ಆಕೆ ಈಗ ಕಾಂಪ್ರಮೈಸ್ ಆಗಿ 'ಪೆದ್ದಿ ನಾನ್ನ' ಎನ್ನುತ್ತಿದ್ದಾಳೆ ಎಂದು ನಟ ನಗುತ್ತಲೇ ವಿವರಿಸಿದ್ದಾರೆ.
ತಮ್ಮ ವೃತ್ತಿಜೀವನದಲ್ಲಿ 'ಪೆದ್ದಿ' ಸಿನಿಮಾ ತಮಗೆ ಹಿಂದೆಂದೂ ಸಿಗದಂತಹ ಯಶಸ್ಸು ಮತ್ತು ಪ್ರೀತಿಯನ್ನು ತಂದುಕೊಟ್ಟಿದೆ ಎಂದು ರಾಮ್ ಚರಣ್ ಭಾವುಕರಾಗಿ ನುಡಿದಿದ್ದಾರೆ. ಈ ಚಿತ್ರದ ಪಾತ್ರ ಜನರಿಗೆ ಎಷ್ಟು ಹತ್ತಿರವಾಗಿದೆ ಎಂದರೆ, ಪ್ರೇಕ್ಷಕರು ಮುಂದೊಂದು ದಿನ ರಾಮ್ ಚರಣ್ ಎಂಬ ನನ್ನ ನಿಜವಾದ ಹೆಸರನ್ನು ಮರೆತು ಕೇವಲ 'ಪೆದ್ದಿ' ಎಂದಷ್ಟೇ ನೆನಪಿಟ್ಟುಕೊಳ್ಳುತ್ತಾರೇನೋ ಎಂಬ ಭಯ ಕಾಡುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ, ಪುಟ್ಟ ಕ್ಲಿನ್ ಕಾರಾಳ ಈ ಮುದ್ದಾದ ಬದಲಾವಣೆ ಮೆಗಾ ಫ್ಯಾಮಿಲಿ ಅಭಿಮಾನಿಗಳ ಮನಸ್ಸು ಕದ್ದಿದೆ.

⬇ DOWNLOAD
×

ಟಾಲಿವುಡ್‌ನ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅವರ ಮುದ್ದಿನ ಮಗಳು ಕ್ಲಿನ್ ಕಾರಾ ಈಗ ತಂದೆಯನ್ನು ‘ಅಪ್ಪ’ (ನಾನ್ನ) ಎಂದು ಕರೆಯುವುದನ್ನು ಬಿಟ್ಟಿದ್ದಾಳಂತೆ! ಹೌದು, ಈ ಅಚ್ಚರಿಯ ಹಾಗೂ ಮುದ್ದಾದ ವಿಚಾರವನ್ನು ಸ್ವತಃ ರಾಮ್ ಚರಣ್ ಅವರೇ ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ತಮ್ಮ ಹೊಸ ಸಿನಿಮಾ ‘ಪೆದ್ದಿ’ಯ ಸಕ್ಸಸ್ ಮೀಟ್ ವೇದಿಕೆಯಲ್ಲಿ ಬಹಿರಂಗಪಡಿಸಿದ್ದಾರೆ. ವೇದಿಕೆಯಲ್ಲಿ ಚರಣ್ ಹೇಳಿದ ಈ ಮಾತನ್ನು ಕೇಳಿ ಅಲ್ಲಿದ್ದ ತಂದೆ ಚಿರಂಜೀವಿ ಸೇರಿದಂತೆ ಅಭಿಮಾನಿಗಳು ನಸುನಕ್ಕಿದ್ದು, ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಚಿತ್ರದ ಬಿಡುಗಡೆಗೂ ಮುನ್ನ ಮಗಳು ಕ್ಲಿನ್ ಕಾರಾ ತಮ್ಮನ್ನು ಪ್ರೀತಿಯಿಂದ ‘ನಾನ್ನ’ ಎಂದೇ ಕರೆಯುತ್ತಿದ್ದಳು. ಆದರೆ ಬುಚ್ಚಿಬಾಬು ಸಾನಾ ನಿರ್ದೇಶನದ ‘ಪೆದ್ದಿ’ ಸಿನಿಮಾ ಬಿಡುಗಡೆಯಾದ ಬಳಿಕ ಆಕೆಯ ಬಾಯಲ್ಲಿ ‘ನಾನ್ನ’ ಎಂಬ ಪದವೇ ಬದಲಾಗಿದೆ ಎಂದು ಚರಣ್ ತಮಾಷೆಯಾಗಿ ಹೇಳಿದ್ದಾರೆ. ಮನೆಯಲ್ಲೂ ಎಲ್ಲರೂ ಚಿತ್ರದ ಗುಂಗಿನಲ್ಲಿರುವ ಕಾರಣ, ಮಗಳು ಕೂಡ ತಮ್ಮನ್ನು ‘ಏಯ್ ಪೆದ್ದಿ’ ಎಂದು ಕರೆಯಲು ಶುರುಮಾಡಿದ್ದಾಳಂತೆ. ತಾವು ‘ಹಾಗೆ ಕರೆಯಬೇಡ, ನಾನು ನಿನ್ನ ಅಪ್ಪ’ ಎಂದು ಬುದ್ಧಿ ಹೇಳಿದರೂ, ಆಕೆ ಈಗ ಕಾಂಪ್ರಮೈಸ್ ಆಗಿ ‘ಪೆದ್ದಿ ನಾನ್ನ’ ಎನ್ನುತ್ತಿದ್ದಾಳೆ ಎಂದು ನಟ ನಗುತ್ತಲೇ ವಿವರಿಸಿದ್ದಾರೆ.

ತಮ್ಮ ವೃತ್ತಿಜೀವನದಲ್ಲಿ ‘ಪೆದ್ದಿ’ ಸಿನಿಮಾ ತಮಗೆ ಹಿಂದೆಂದೂ ಸಿಗದಂತಹ ಯಶಸ್ಸು ಮತ್ತು ಪ್ರೀತಿಯನ್ನು ತಂದುಕೊಟ್ಟಿದೆ ಎಂದು ರಾಮ್ ಚರಣ್ ಭಾವುಕರಾಗಿ ನುಡಿದಿದ್ದಾರೆ. ಈ ಚಿತ್ರದ ಪಾತ್ರ ಜನರಿಗೆ ಎಷ್ಟು ಹತ್ತಿರವಾಗಿದೆ ಎಂದರೆ, ಪ್ರೇಕ್ಷಕರು ಮುಂದೊಂದು ದಿನ ರಾಮ್ ಚರಣ್ ಎಂಬ ನನ್ನ ನಿಜವಾದ ಹೆಸರನ್ನು ಮರೆತು ಕೇವಲ ‘ಪೆದ್ದಿ’ ಎಂದಷ್ಟೇ ನೆನಪಿಟ್ಟುಕೊಳ್ಳುತ್ತಾರೇನೋ ಎಂಬ ಭಯ ಕಾಡುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ, ಪುಟ್ಟ ಕ್ಲಿನ್ ಕಾರಾಳ ಈ ಮುದ್ದಾದ ಬದಲಾವಣೆ ಮೆಗಾ ಫ್ಯಾಮಿಲಿ ಅಭಿಮಾನಿಗಳ ಮನಸ್ಸು ಕದ್ದಿದೆ.

Editor Reporter
mirrortvkannada.com

‘ನನ್ನ ಮಗಳು ನನ್ನನ್ನು ಅಪ್ಪ ಎಂದು ಕರೆಯುತ್ತಿಲ್ಲ’: ಅಚ್ಚರಿಯ ವಿಚಾರ ಬಿಚ್ಚಿಟ್ಟ ನಟ ರಾಮ್ ಚರಣ್

ಟಾಲಿವುಡ್‌ನ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅವರ ಮುದ್ದಿನ ಮಗಳು ಕ್ಲಿನ್ ಕಾರಾ ಈಗ ತಂದೆಯನ್ನು 'ಅಪ್ಪ' (ನಾನ್ನ) ಎಂದು ಕರೆಯುವುದನ್ನು ಬಿಟ್ಟಿದ್ದಾಳಂತೆ! ಹೌದು, ಈ ಅಚ್ಚರಿಯ ಹಾಗೂ ಮುದ್ದಾದ ವಿಚಾರವನ್ನು ಸ್ವತಃ ರಾಮ್ ಚರಣ್ ಅವರೇ ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ತಮ್ಮ ಹೊಸ ಸಿನಿಮಾ 'ಪೆದ್ದಿ'ಯ ಸಕ್ಸಸ್ ಮೀಟ್ ವೇದಿಕೆಯಲ್ಲಿ ಬಹಿರಂಗಪಡಿಸಿದ್ದಾರೆ. ವೇದಿಕೆಯಲ್ಲಿ ಚರಣ್ ಹೇಳಿದ ಈ ಮಾತನ್ನು ಕೇಳಿ ಅಲ್ಲಿದ್ದ ತಂದೆ ಚಿರಂಜೀವಿ ಸೇರಿದಂತೆ ಅಭಿಮಾನಿಗಳು ನಸುನಕ್ಕಿದ್ದು, ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಚಿತ್ರದ ಬಿಡುಗಡೆಗೂ ಮುನ್ನ ಮಗಳು ಕ್ಲಿನ್ ಕಾರಾ ತಮ್ಮನ್ನು ಪ್ರೀತಿಯಿಂದ 'ನಾನ್ನ' ಎಂದೇ ಕರೆಯುತ್ತಿದ್ದಳು. ಆದರೆ ಬುಚ್ಚಿಬಾಬು ಸಾನಾ ನಿರ್ದೇಶನದ 'ಪೆದ್ದಿ' ಸಿನಿಮಾ ಬಿಡುಗಡೆಯಾದ ಬಳಿಕ ಆಕೆಯ ಬಾಯಲ್ಲಿ 'ನಾನ್ನ' ಎಂಬ ಪದವೇ ಬದಲಾಗಿದೆ ಎಂದು ಚರಣ್ ತಮಾಷೆಯಾಗಿ ಹೇಳಿದ್ದಾರೆ. ಮನೆಯಲ್ಲೂ ಎಲ್ಲರೂ ಚಿತ್ರದ ಗುಂಗಿನಲ್ಲಿರುವ ಕಾರಣ, ಮಗಳು ಕೂಡ ತಮ್ಮನ್ನು 'ಏಯ್ ಪೆದ್ದಿ' ಎಂದು ಕರೆಯಲು ಶುರುಮಾಡಿದ್ದಾಳಂತೆ. ತಾವು 'ಹಾಗೆ ಕರೆಯಬೇಡ, ನಾನು ನಿನ್ನ ಅಪ್ಪ' ಎಂದು ಬುದ್ಧಿ ಹೇಳಿದರೂ, ಆಕೆ ಈಗ ಕಾಂಪ್ರಮೈಸ್ ಆಗಿ 'ಪೆದ್ದಿ ನಾನ್ನ' ಎನ್ನುತ್ತಿದ್ದಾಳೆ ಎಂದು ನಟ ನಗುತ್ತಲೇ ವಿವರಿಸಿದ್ದಾರೆ.
ತಮ್ಮ ವೃತ್ತಿಜೀವನದಲ್ಲಿ 'ಪೆದ್ದಿ' ಸಿನಿಮಾ ತಮಗೆ ಹಿಂದೆಂದೂ ಸಿಗದಂತಹ ಯಶಸ್ಸು ಮತ್ತು ಪ್ರೀತಿಯನ್ನು ತಂದುಕೊಟ್ಟಿದೆ ಎಂದು ರಾಮ್ ಚರಣ್ ಭಾವುಕರಾಗಿ ನುಡಿದಿದ್ದಾರೆ. ಈ ಚಿತ್ರದ ಪಾತ್ರ ಜನರಿಗೆ ಎಷ್ಟು ಹತ್ತಿರವಾಗಿದೆ ಎಂದರೆ, ಪ್ರೇಕ್ಷಕರು ಮುಂದೊಂದು ದಿನ ರಾಮ್ ಚರಣ್ ಎಂಬ ನನ್ನ ನಿಜವಾದ ಹೆಸರನ್ನು ಮರೆತು ಕೇವಲ 'ಪೆದ್ದಿ' ಎಂದಷ್ಟೇ ನೆನಪಿಟ್ಟುಕೊಳ್ಳುತ್ತಾರೇನೋ ಎಂಬ ಭಯ ಕಾಡುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ, ಪುಟ್ಟ ಕ್ಲಿನ್ ಕಾರಾಳ ಈ ಮುದ್ದಾದ ಬದಲಾವಣೆ ಮೆಗಾ ಫ್ಯಾಮಿಲಿ ಅಭಿಮಾನಿಗಳ ಮನಸ್ಸು ಕದ್ದಿದೆ.

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్