ವೃದ್ಧ ಪೋಷಕರಿಗಾಗಿ ಕೆನಡಾ ಉದ್ಯೋಗ ತೊರೆದು ಬೆಂಗಳೂರಿಗೆ ಮರಳಿದ ಟೆಕ್ ಎಕ್ಸಿಕ್ಯೂಟಿವ್

ಉತ್ತಮ ಭವಿಷ್ಯ, ಹೆಚ್ಚಿನ ಸಂಬಳ ಮತ್ತು ಐಷಾರಾಮಿ ಜೀವನಕ್ಕಾಗಿ ವಿದೇಶಕ್ಕೆ ತೆರಳುವವರ ಸಂಖ್ಯೆ ಹೆಚ್ಚುತ್ತಿರುವ ಈ ಕಾಲದಲ್ಲಿ, ಕಾರ್ಸೆಂಟ್ರಿಕ್ ಐಟಿ ಕಂಪನಿಯ ಎಂಜಿನಿಯರಿಂಗ್ ವಿಭಾಗದ ನಿರ್ದೇಶಕರಾಗಿರುವ ರಮೇಶ್ ಎನ್.ಎನ್. ತಮ್ಮ ವೃದ್ಧ ಪೋಷಕರನ್ನು ನೋಡಿಕೊಳ್ಳುವ ಸಲುವಾಗಿ ಕೆನಡಾದ ಉದ್ಯೋಗವನ್ನು ತೊರೆದು ಬೆಂಗಳೂರಿಗೆ ಮರಳಿದ್ದಾರೆ. ಅವರ ಈ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಸುಮಾರು ಆರು ವರ್ಷಗಳ ಹಿಂದೆ ಅವರು ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದರು. ವಿದೇಶದಲ್ಲಿ ಉತ್ತಮ ಉದ್ಯೋಗ ಮತ್ತು ಜೀವನಶೈಲಿ ಇದ್ದರೂ, ವಯಸ್ಸಾದ ಪೋಷಕರ ಜೊತೆಗೆ ಇರಬೇಕೆಂಬ ಮನಸ್ಸಿನ ಕರೆಗೆ ಸ್ಪಂದಿಸಿ ತವರಿಗೆ ಮರಳಲು ನಿರ್ಧರಿಸಿದರೆಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಲಿಂಕ್ಡ್‌ಇನ್‌ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿರುವ ರಮೇಶ್, ತವರಿಗೆ ಮರಳಿದ ನಂತರ ಜೀವನದಲ್ಲಿ ಕಂಡ ಬದಲಾವಣೆಗಳು, ಪೋಷಕರೊಂದಿಗೆ ಕಳೆಯುತ್ತಿರುವ ಅಮೂಲ್ಯ ಕ್ಷಣಗಳು ಮತ್ತು ಕುಟುಂಬದ ಮಹತ್ವವನ್ನು ವಿವರಿಸಿದ್ದಾರೆ. ಅವರ ಈ ಕಥೆ ಹಲವರಿಗೆ ಕುಟುಂಬದ ಜವಾಬ್ದಾರಿಯ ಮಹತ್ವವನ್ನು ನೆನಪಿಸಿದೆ.

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్