ಕೆನಡಾದಲ್ಲಿ ಭಾರತೀಯ ಮೂಲದ ಯುವತಿ ಹತ್ಯೆ, ಲಿವ್‌ ಇನ್‌ ಪ್ರಿಯಕರ ಬಂಧನ

mirrortvkannada.com
Date : 26 July 2026, 10:14 am Posted By : MIRROR TV KANNADA

ಕೆನಡಾದಲ್ಲಿ ಭಾರತೀಯ ಮೂಲದ ಯುವತಿ ಹತ್ಯೆ, ಲಿವ್‌ ಇನ್‌ ಪ್ರಿಯಕರ ಬಂಧನ

ಕೆನಡಾದ ಎಡ್ಮಂಟನ್‌ನಲ್ಲಿ ಭಾರತೀಯ ಮೂಲದ 23 ವರ್ಷದ ಯುವತಿ ದಮನ್‌ಪ್ರೀತ್ ಕೌರ್ ಹತ್ಯೆ ಪ್ರಕರಣದಲ್ಲಿ ಆಕೆಯ ಲಿವ್‌ ಇನ್‌ ಪ್ರಿಯಕರ ರಿತೀಶ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪಂಜಾಬ್‌ನ ಲುಧಿಯಾನ ಜಿಲ್ಲೆಯ ಸಮ್ರಾಲಾ ಮೂಲದ ದಮನ್‌ಪ್ರೀತ್ ಕೌರ್ ಕೆನಡಾದಲ್ಲಿ ವಾಸವಾಗಿದ್ದು, ಈ ಘಟನೆ ಭಾರತೀಯ ಸಮುದಾಯದಲ್ಲಿ ಆಘಾತ ಮೂಡಿಸಿದೆ.

ಮಾಹಿತಿಯ ಪ್ರಕಾರ, ಜುಲೈ 9ರಂದು ರಿತೀಶ್ ಕುಮಾರ್ ದಮನ್‌ಪ್ರೀತ್ ಕೌರ್ ಅವರ ಕತ್ತು ಹಿಸುಕಿ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದ ಯುವತಿಯನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೂರು ದಿನಗಳ ಬಳಿಕ ಆಕೆ ಮೃತಪಟ್ಟಿದ್ದರು.

ತನಿಖೆ ನಡೆಸಿದ ಪೊಲೀಸರು ಜುಲೈ 14ರಂದು ಇದನ್ನು ಕೊಲೆ ಪ್ರಕರಣವೆಂದು ಘೋಷಿಸಿದರು. ಜುಲೈ 22ರಂದು ಆರೋಪಿಯನ್ನು ಬಂಧಿಸಿದ ಬಳಿಕ, ಜುಲೈ 23ರಂದು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಅಧಿಕೃತವಾಗಿ ಬಹಿರಂಗಪಡಿಸಿದರು. ತನಿಖೆಯ ಹಿತದೃಷ್ಟಿಯಿಂದ ಈ ಮಾಹಿತಿಯನ್ನು ಇದುವರೆಗೆ ಗೌಪ್ಯವಾಗಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

⬇ DOWNLOAD
×

Editor Reporter

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్