ನೀಟ್ ಪರೀಕ್ಷಾ ಸುಧಾರಣೆಗೆ ಕನ್ನಡಿಗ ನಂದನ್ ನೀಲೆಕಣಿ ನೇತೃತ್ವದ ಹೈ-ಪವರ್ ಟಾಸ್ಕ್ ಫೋರ್ಸ್

mirrortvkannada.com
Date : 27 July 2026, 10:35 am Posted By : MIRROR TV KANNADA

ನೀಟ್ ಪರೀಕ್ಷಾ ಸುಧಾರಣೆಗೆ ಕನ್ನಡಿಗ ನಂದನ್ ನೀಲೆಕಣಿ ನೇತೃತ್ವದ ಹೈ-ಪವರ್ ಟಾಸ್ಕ್ ಫೋರ್ಸ್

ದೇಶದ ಪರೀಕ್ಷಾ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕ, ಸುರಕ್ಷಿತ ಹಾಗೂ ತಂತ್ರಜ್ಞಾನ ಆಧಾರಿತವಾಗಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ನೀಟ್ ಪರೀಕ್ಷೆ ವಿವಾದದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಹೈ-ಪವರ್ ಟಾಸ್ಕ್ ಫೋರ್ಸ್ ರಚಿಸುವುದಾಗಿ ಘೋಷಿಸಿದ್ದು, ಇದರ ನೇತೃತ್ವವನ್ನು ಇನ್ಫೋಸಿಸ್ ಸಹ-ಸಂಸ್ಥಾಪಕ ಹಾಗೂ ಕನ್ನಡಿಗ ನಂದನ್ ನೀಲೆಕಣಿ ವಹಿಸಲಿದ್ದಾರೆ.

ಈ ಸಮಿತಿ ಪರೀಕ್ಷಾ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸುವುದು, ಭದ್ರತಾ ಕ್ರಮಗಳನ್ನು ಬಲಪಡಿಸುವುದು, ಪಾರದರ್ಶಕತೆ ಹೆಚ್ಚಿಸುವುದು ಹಾಗೂ ಅಗತ್ಯ ಸುಧಾರಣೆಗಳ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಸಲಿದೆ. ದೇಶದ ಪರೀಕ್ಷಾ ವ್ಯವಸ್ಥೆಯನ್ನು ಹೆಚ್ಚು ವಿಶ್ವಾಸಾರ್ಹ ಮತ್ತು ಪರಿಣಾಮಕಾರಿಯಾಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ನೀಟ್ ಪರೀಕ್ಷೆ ಅಕ್ರಮ ಪ್ರಕರಣದ ಬಳಿಕ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರೆ, ನಂತರ ಆ ಜವಾಬ್ದಾರಿಯನ್ನು ಹಿರಿಯ ಬಿಜೆಪಿ ನಾಯಕ ಹಾಗೂ ಸಂಸದ ಪ್ರಲ್ಹಾದ್ ಜೋಶಿ ಅವರಿಗೆ ನೀಡಲಾಗಿತ್ತು. ಇದೀಗ ನಂದನ್ ನೀಲೆಕಣಿ ನೇತೃತ್ವದಲ್ಲಿ ರಚನೆಯಾಗಿರುವ ಈ ಟಾಸ್ಕ್ ಫೋರ್ಸ್ ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

⬇ DOWNLOAD
×

Editor Reporter

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్