ರಷ್ಯಾದಿಂದ ಕಚ್ಚಾತೈಲ ಮತ್ತು ಅನಿಲ ಖರೀದಿಸುವ ಭಾರತ, ಚೀನಾ ಸೇರಿದಂತೆ ಹಲವು ರಾಷ್ಟ್ರಗಳ ಮೇಲೆ ಶೇ.100ರಷ್ಟು ಆಮದು ಸುಂಕ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಧಿಕಾರ ನೀಡುವ ಮಹತ್ವದ ಮಸೂದೆಗೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅನುಮೋದನೆ ನೀಡಿದೆ.
‘ಲಿಂಡ್ಸೆ ಒ. ಗ್ರಹಾಂ ನಿರ್ಬಂಧಗಳ ಕಾಯ್ದೆ-2026’ ಹೆಸರಿನ ಈ ಮಸೂದೆಗೆ ಅಮೆರಿಕದ ಸೆನೆಟ್ ಈಗಾಗಲೇ ಅನುಮೋದನೆ ನೀಡಿತ್ತು. ಇದೀಗ ಕೆಳಮನೆಯಲ್ಲಿ 262-159 ಮತಗಳ ಅಂತರದಿಂದ ಮಸೂದೆ ಅಂಗೀಕಾರಗೊಂಡಿದ್ದು, ಮುಂದಿನ ಹಂತದಲ್ಲಿ ಅಧ್ಯಕ್ಷ ಟ್ರಂಪ್ ಅವರ ಸಹಿಗೆ ಕಳುಹಿಸಲಾಗಿದೆ.
ಟ್ರಂಪ್ ಸಹಿ ಮಾಡಿದ ಬಳಿಕ ಮಸೂದೆ ಕಾನೂನಾಗಿ ಜಾರಿಗೆ ಬರಲಿದೆ. ಉಕ್ರೇನ್‌ಗೆ ಬೆಂಬಲ ನೀಡುವ ನಿಟ್ಟಿನಲ್ಲಿ ರಷ್ಯಾ ವಿರುದ್ಧ ಅಮೆರಿಕ ಕೈಗೊಂಡಿರುವ ಪ್ರಮುಖ ಕ್ರಮಗಳಲ್ಲಿ ಇದೂ ಒಂದಾಗಿದೆ. ರಷ್ಯಾದ ಇಂಧನವನ್ನು ಖರೀದಿಸುವ ದೇಶಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಅಧಿಕಾರವನ್ನು ಈ ಮಸೂದೆ ಮೂಲಕ ಅಧ್ಯಕ್ಷರಿಗೆ ನೀಡಲಾಗುತ್ತದೆ.








