ಖಾಸಗಿ ವಲಯದಲ್ಲಿ 80% ಕನ್ನಡಿಗರಿಗೆ ಉದ್ಯೋಗ: ನೀವೇ ಕೊಟ್ಟ ಭರವಸೆ ಮೊದಲು ಈಡೇರಿಸಿ: ಕರವೇ ನಾರಾಯನಗೌಡ..

mirrortvkannada.com
Date : 07 November 2026, 8:32 am Posted By : MIRROR TV KANNADA

ಖಾಸಗಿ ವಲಯದಲ್ಲಿ 80% ಕನ್ನಡಿಗರಿಗೆ ಉದ್ಯೋಗ: ನೀವೇ ಕೊಟ್ಟ ಭರವಸೆ ಮೊದಲು ಈಡೇರಿಸಿ: ಕರವೇ ನಾರಾಯನಗೌಡ..

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ಬದ್ಧ ಎಂದು ಹೇಳಿಕೊಂಡು ಬಂದಿದೆ. ಇದೀಗ ಖಾಸಗಿ ಮತ್ತು ಸಾರ್ವಜನಿಕ ವಲಯದಲ್ಲಿ ಕನ್ನಡಿಗರಿಗೆ ಶೇ. 80ರಷ್ಟು ಉದ್ಯೋಗ ನೀಡಿಯೇ ತೀರುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಸರ್ಕಾರಕ್ಕೆ ಇದೀಗ ಅದನ್ನು ನೆರವೇರಿಸುವ ಸವಾಲು ಎದುರಾಗಿದೆ. ಈ ಸಂಬಂಧ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರು ಗಡುವು ನೀಡಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಖಾಸಗಿ, ಐಟಿ ಬಿಟಿ, ಕಾರ್ಪೋರೇಟ್ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದಿರುವ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಇದಾಗುತ್ತಿದ್ದಂತೆ ನೂರಾರು ಸಂಸ್ಥೆ/ಕಂಪನಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸದಸ್ಯ ನಿಯೋಗ ಭೇಟಿ ನೀಡಿ ಕನ್ನಡಿಗರಿಗೆ ನ್ಯಾಯಸಮ್ಮತ ಉದ್ಯೋಗಕ್ಕೆ ಒತ್ತಾಯಿಸಿದೆ. ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರ ತಾನು ಅಧಿಕಾರಕ್ಕೆ ಬರುವಾಗ ಪ್ರಣಾಳಿಕೆಯಲ್ಲಿ ಶೇ.80 ಕನ್ನಡಿಗರ ಉದ್ಯೋಗ ಭರವಸೆ ಸಹ ನೀಡಿತ್ತು. ಅದನ್ನೀಗ ಕರವೇ ನೆನಪಿಸಿ ಎಕ್ಸ್ ಪೋಸ್ಟ್ ಮಾಡಿದೆ.
ಸಂಪುಟ ಸಭೆಯಲ್ಲಿ ಶೇ.80ರಷ್ಟು ಹುದ್ದೆ ಭರವಸೆ ನಿರ್ಧಾರ ಕೈಗೊಳ್ಳಿ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ದಯಮಾಡಿ 2023ರಲ್ಲಿ ಚುನಾವಣೆ ಪೂರ್ವದಲ್ಲಿ ಹೊರಡಿಸಿದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸಿ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರು ಮನವಿ ಮಾಡಿದ್ದಾರೆ.

ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿ ಎಲ್ಲ ಹಂತದ ಉದ್ಯೋಗಾವಕಾಶಗಳಲ್ಲಿ ಶೇ.80ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ನೀಡುತ್ತೇವೆ ಎಂಬ ಭರವಸೆಯನ್ನು ನೀಡಿದ್ದಿರಿ. ನಾಲ್ಕು ವರ್ಷಗಳಾದರೂ ಅದು ಈಡೇರಿಲ್ಲ. ಇದಕ್ಕಿಂತ ದೊಡ್ಡ ಆದ್ಯತೆಯ ವಿಷಯ ಇನ್ನೊಂದಿರಲು ಸಾಧ್ಯವಿಲ್ಲ. ಯಾಕೆಂದರೆ ಇದು ಕನ್ನಡದ ಮಕ್ಕಳ ಭವಿಷ್ಯದ ಪ್ರಶ್ನೆ.

ನೀವು ಈ ಬೇಡಿಕೆಯನ್ನು ಈಡೇರಿಸಿದರೆ ಕರ್ನಾಟಕ ರಕ್ಷಣಾ ವೇದಿಕೆ ಅಭಿಯಾನ ನಡೆಸುವ ಅಗತ್ಯವೂ ಇರುವುದಿಲ್ಲ. ಕೂಡಲೇ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಇಟ್ಟು ನೀವೇ ನೀಡಿದ ಭರವಸೆಯನ್ನು ಈಡೇರಿಸಿಬಿಡಿ. ನಾವು ಲಕ್ಷಾಂತರ ಕನ್ನಡದ ಮಕ್ಕಳನ್ನು ಸೇರಿಸಿ ಇಡೀ ಸರ್ಕಾರಕ್ಕೆ ಒಂದು ಅಭಿನಂದನಾ ಸಭೆ ನಡೆಸುತ್ತೇವೆ ಎಂದಿದ್ದಾರೆ.

ನೀವು ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾಗಲೇ ಈ ಪ್ರಣಾಳಿಕೆ ರೂಪುಗೊಂಡಿದೆ. ನೀವು ಅಪಾರವಾದ ಕನ್ನಡ ಪ್ರೇಮ ಇಟ್ಟುಕೊಂಡವರು ಎಂಬುದು ನನಗೆ ಖಚಿತವಾಗಿ ಗೊತ್ತಿದೆ. ಈ ಕಾರಣದಿಂದಲೇ ನಿಮ್ಮ ಪ್ರಣಾಳಿಕೆಯಲ್ಲಿ ಈ ಅಂಶವನ್ನು ಸೇರಿಸಲಾಗಿತ್ತು ಎಂಬುದು ತಿಳಿದಿದೆ. ಚುನಾವಣೆಗೆ ಮುನ್ನ ಪ್ರಣಾಳಿಕೆಯಲ್ಲಿ ನೀವು ಕೊಟ್ಟ ಭರವಸೆಗಳೇ ನಿಮ್ಮ ಸರ್ಕಾರದ ಪ್ರಮುಖ ಧ್ಯೇಯವಾಕ್ಯಗಳಾಗಬೇಕು. ಕೊಟ್ಟ ಭರವಸೆಗಳನ್ನು ಈಡೇರಿಸುವುದು ಸಾಂವಿಧಾನಾತ್ಮಕ ಕರ್ತವ್ಯ ಮಾತ್ರವಲ್ಲ, ನೈತಿಕ ಕರ್ತವ್ಯವೂ ಕೂಡ ಹೌದು ಎಂದು ಸರ್ಕಾರಕ್ಕೆ ನೆನಪಿಸಿದರು.
4 ವರ್ಷವಾದರೂ ಈಡೇರದ ಬೇಡಿಕೆ
ನಾಲ್ಕು ವರ್ಷಗಳಾದರೂ ಈ ಬೇಡಿಕೆ ಈಡೇರಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಸರ್ಕಾರದ ಸಚಿವ ಸಂಪುಟ ಈ ಕಾಯ್ದೆಗೆ ಅನುಮೋದನೆ ನೀಡಿತ್ತು. ಆದರೆ ಮುಂದಿನ ಪ್ರಕ್ರಿಯೆ ನಡೆಯಲಿಲ್ಲ. ದಯಮಾಡಿ ಈ ಭರವಸೆ ಈಡೇರಿಸಿಬಿಡಿ, ಕರ್ನಾಟಕದ ಜನತೆಗೆ ಇದೇ ನೀವು ಕೊಡುವ ದೀಪಾವಳಿಯ ಕೊಡುಗೆಯಾಗುತ್ತದೆ.
80% ಕನ್ನಡಿಗರಿಗೆ ಉದ್ಯೋಗ ನೀತಿ ಯಾರು ವಿರೋಧಿಸಲ್ಲ
ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಶೇ.80 ರಷ್ಟು ಉದ್ಯೋಗ ಕೊಡುವ ವಿಷಯದಲ್ಲಿ ನಿಮಗೆ ಯಾರ ವಿರೋಧವೂ ಇರಲು ಸಾಧ್ಯವಿಲ್ಲ. ಸ್ವತಃ ನಿಮ್ಮ ಸಂಪುಟದ ಸದಸ್ಯರಾದ ಮಾನ್ಯ ಐಟಿಬಿಟಿ, ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಾಯ್ದೆ ಜಾರಿಗೆ ತರುವುದು ನಮ್ಮ ಬದ್ಧತೆ, ಅದನ್ನು ತಂದೇ ತರುತ್ತೇವೆ ಎಂದು ಇತ್ತೀಚಿಗೆ ಹೇಳಿದ್ದಾರೆ. ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರೂ ಕೂಡ ಇದೇ ಮಾತನ್ನು ಹೇಳಿದ್ದಾರೆ.

ವಿರೋಧ ಪಕ್ಷಗಳ ನಾಯಕರೂ ಕನ್ನಡಿರಿಗೆ ಉದ್ಯೋಗದಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಇದೇ ಮಾತುಗಳನ್ನು ಹಿಂದೆ ಹೇಳಿದ್ದಾರೆ. ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದ ಮಾನ್ಯ ಬಿ.ವೈ.ವಿಜಯೇಂದ್ರ ಅವರು ಕರವೇ 'ಆಗ್ರಹ ಅಭಿಯಾನ' ಬೆಂಬಲಿಸಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಶೇ. 80ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಕಾಯ್ದಿರಿಸುವ ವಿಷಯದಲ್ಲಿ ತಮ್ಮ ಪಕ್ಷ ಬದ್ಧವಾಗಿದೆ ಎಂದು ಹೇಳಿದ್ದರು.

ಇಷ್ಟೆಲ್ಲ ಅಭಿಪ್ರಾಯಗಳು ಬಂದ ಮೇಲೆ ಖಾಸಗಿ, ಸಾರ್ವಜನಿಕ ವಲಯದಲ್ಲಿ ಶೇ.80ರಷ್ಟು ಕನ್ನಡಿಗರಿಗೆ ಉದ್ಯೋಗ ನೀಡಲು ಯಾರಿಂದಲೂ ತಕರಾರು ಇರಲು ಸಾಧ್ಯವಿಲ್ಲ. ನಾನು ವಿರೋಧ ಪಕ್ಷದ ನಾಯಕರ ಬಳಿಗೆ ತೆರಳಿ ಅವರಿಗೆ ಕನ್ನಡಿಗರ ಪ್ರಾತಿನಿಧ್ಯದ ಕಾಯ್ದೆ ವಿಷಯದಲ್ಲಿ ಮನವಿ ಮಾಡುವ, ಮನವೊಲಿಸುವ ಕಾರ್ಯ ಮಾಡುತ್ತೇನೆ. ಅವರೂ ಸಹ ಖಂಡಿತವಾಗಿಯೂ ಇದನ್ನು ಬೆಂಬಲಿಸುತ್ತಾರೆ ಎಂದು ವಿವರಿಸಿದರು.
ಬ್ಲಾಕ್ ಮೇಲ್ ಕೂಗುಮಾರಿ ಉದ್ಯಮಿಗಳಿಗೆ ಮಣಿಯಬೇಡಿ!
ಕನ್ನಡಿಗರಿಗೆ ಉದ್ಯೋಗ ನೀಡಲು ಅಪಾರ ಸಂಖ್ಯೆಯಲ್ಲಿ ಬೆಂಬಲ ಇರುವಾಗ, ಯಾರೋ ಕೆಲವೇ ಕೆಲವು ಬೆರಳೆಣಿಕೆಯ, ಬ್ಲಾಕ್ ಮೇಲ್ ಕೂಗುಮಾರಿ ಉದ್ಯಮಿಗಳ ಒತ್ತಡಕ್ಕೆ ನೀವು ಮಣಿಯಕೂಡದು. ನಿಮ್ಮ ಹಠ, ಛಲವನ್ನು ನಾನು ಬಲ್ಲೆ. ಇಂಥ ಬ್ಲಾಕ್ ಮೇಲ್ ಗಳನ್ನು ನೀವು ಮೆಟ್ಟಿನಿಲ್ಲುವ ಶಕ್ತಿ, ಸ್ಥೈರ್ಯ ಹೊಂದಿದವರು.

ನಿಮ್ಮ (ಡಿಕೆ ಶಿವಕುಮಾರ್ ) ಕಾಲದಲ್ಲಿ ಈ ಕಾಯ್ದೆ ಜಾರಿಗೆ ಬಂದರೆ ಕನ್ನಡಿಗರು ನಿಮ್ಮನ್ನು ಹೃದಯದಲ್ಲಿ ಇಟ್ಟುಕೊಂಡು ಆರಾಧಿಸುತ್ತಾರೆ. ಇತಿಹಾಸದ ಪುಟಗಳಲ್ಲಿ ನಿಮ್ಮ ಹೆಸರು ಚಿರಸ್ಥಾಯಿಯಾಗುತ್ತದೆ. ಕನ್ನಡದ ಮಕ್ಕಳಿಗೆ ಅತಿದೊಡ್ಡ ಸಾಕ್ಷಿಗುಡ್ಡೆಯನ್ನು ನೀವು ಬಿಟ್ಟು ಹೋದಂತೆ ಆಗುತ್ತದೆ ಎಂದು ಅವರು ಒತ್ತಾಯಿಸಿದ್ದಾರೆ.

ನವೆಂಬರ್ 1ರಿಂದ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ 'ಆಗ್ರಹ ಅಭಿಯಾನ'ದ ಭಾಗವಾಗಿ ದೊಡ್ಡ ಸಂಸ್ಥೆಗಳಿಂದ ಹಿಡಿದು ಸಣ್ಣ ಸಂಸ್ಥೆಗಳವರೆಗೆ ಈವರೆಗೆ ಸುಮಾರು ಮುನ್ನೂರೈವತ್ತಕ್ಕೂ ಹೆಚ್ಚು ಸಂಸ್ಥೆಗಳನ್ನು ನಾವು ತಲುಪಿದ್ದೇವೆ. ಎಲ್ಲೂ ಕೂಡ ಒಂದೇ ಒಂದು ಕಹಿ ಘಟನೆ ನಡೆದಿಲ್ಲ. ಎಲ್ಲ ಕಡೆಯಲ್ಲೂ ನಮ್ಮ ಮುಖಂಡರು ಗೌರವಯುತವಾಗಿ ನಡೆದುಕೊಂಡಿದ್ದಾರೆ, ಖಾಸಗಿ ಸಂಸ್ಥೆಗಳ ಮುಖಂಡರೂ ಸಹ ನಮ್ಮನ್ನು ಪ್ರೀತಿ, ಗೌರವದಿಂದಲೇ ನಡೆಸಿಕೊಂಡಿದ್ದಾರೆ.

ಹಿಂದೆ ತಮ್ಮ ಸರ್ಕಾರದ ಕಾರ್ಮಿಕ ಇಲಾಖೆ ಇಂಥದ್ದೇ ಒಂದು ಸಮೀಕ್ಷೆ ನಡೆಸಲು ಮುಂದಾದಾಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಮೀಕ್ಷೆ ನಡೆಯದಂತೆ ತಡೆದವು ಎಂಬುದನ್ನು ನಾನು ಕೇಳಿದ್ದೇನೆ. ನಾವು ಈಗ ಸರ್ಕಾರಕ್ಕೆ ಶಕ್ತಿ ತುಂಬುವ ಕೆಲಸವನ್ನಷ್ಟೇ ಮಾಡುತ್ತಿದ್ದೇವೆ. ನಮ್ಮ ಸಮೀಕ್ಷೆಯಲ್ಲಿ ದೊರೆಯುವ ನೈಜ ಅಂಕಿ ಅಂಶಗಳನ್ನು ನಾವು ವರದಿಯ ರೂಪದಲ್ಲಿ ತಮಗೇ ಸಲ್ಲಿಸುತ್ತೇವೆ.

ಈಗ ನಮ್ಮ ಅಭಿಯಾನಕ್ಕೆ ಖಾಸಗಿ ಸಂಸ್ಥೆಗಳ ಮುಖ್ಯಸ್ಥರುಗಳು ಆಶಾದಾಯಕವಾಗಿ ಸ್ಪಂದಿಸುತ್ತಿರುವಾಗ, ಕನ್ನಡಿಗರ ಪ್ರಾತಿನಿಧ್ಯದ ಕಾಯ್ದೆಯನ್ನು ಜಾರಿಗೆ ತರಲು ಇದು ಸಕಾಲ. ದಯಮಾಡಿ ತಾವು ಈ ಕಾಯ್ದೆಯನ್ನು ಜಾರಿಗೊಳಿಸಿ ಎಂದು ಮತ್ತೊಮ್ಮೆ ವಿನಮ್ರವಾಗಿ ಮನವಿ ಮಾಡುತ್ತೇನೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಕಂಡುಬಂದ ಹಿನ್ನೆಲೆಯಲ್ಲಿ ಕರವೇ ತಂಡ ಅಲ್ಲಿಗೆ ಭೇಟಿ ನೀಡಿತ್ತು. ಈ ವೇಳೆ ನಾವು ಸಭೆ ಮಾಡಿದ್ದು, ಕೆಐಎಎಲ್, ಮೆಂಝಿಸ್ ಎವಿಯೇಷನ್ , ಡಿ ಹೆಚ್ ಎಲ್ ಎಕ್ಸ್ಪ್ರೆಸ್ , ಶಾಪರ್ ಶಾಪ್ , ಸ್ಟಾರ್ ಐರಲೈನ್ಸ್ , ತಾಜ್ ಸ್ಯಾಟ್ಸ್ ಇಂಡಿಯಾ ಕೆಟೆರೇರ್, ತಾಜ್ ಹೋಟೆಲ್ , ಹೆಚ್ ಎಂ ಎಸ್, ಟ್ರಾವೆಲ್ ಟೂರ್ (ಟಿ ಎಫ್ ಎಸ್ ), ಏರ್ ಇಂಡಿಯಾ ಸ್ಯಾಟ್ಸ್, ಬ್ಲೂ ಡಾರ್ಟ್ ಇಂಡಿಯಾ, ಡಬ್ಲ್ಯೂ ಯಫ್ ಎಸ್, ಏರ್ ಇಂಡಿಯಾ , ಟಿ ಆರ್ ಎಸ್ ಸಂಸ್ಥೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಪಾಲ್ಗೊಂಡಿದ್ದರು.

ಇಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆ ಇರುವುದಾಗಿ ಏರ್ ಪೋರ್ಟ್ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಮುಂದಿನ ಒಂದು ವರ್ಷ ಕಾಲಾವಕಾಶ ನೀಡಿ, ಅಷ್ಟರಲ್ಲಿ ಈ ಸಂಖ್ಯೆ ಹೆಚ್ಚಿಸುವ ಕೆಲಸ ಮಾಡುತ್ತೇವೆ. ಬಳಿಕ ನೀವೇ ಬಂದು ಕನ್ನಡಿಗರ ಉದ್ಯೋಗಿಗಳ ಸಂಖ್ಯೆಯನ್ನು ತಿಳಿಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರವೇ ಅಭಿಯಾನಕ್ಕೆ ಎಲ್ಲ ಅಧಿಕಾರಿಗಳು ಸ್ಪಂದಿಸಿದ್ದಾರೆ ಎಂದು ನಾರಾಯಣಗೌಡ ಅವರು ತಿಳಿಸಿದ್ದಾರೆ

⬇ DOWNLOAD
×

ವಿರೋಧ ಪಕ್ಷಗಳ ನಾಯಕರೂ ಕನ್ನಡಿರಿಗೆ ಉದ್ಯೋಗದಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಇದೇ ಮಾತುಗಳನ್ನು ಹಿಂದೆ ಹೇಳಿದ್ದಾರೆ. ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದ ಮಾನ್ಯ ಬಿ.ವೈ.ವಿಜಯೇಂದ್ರ ಅವರು ಕರವೇ ‘ಆಗ್ರಹ ಅಭಿಯಾನ’ ಬೆಂಬಲಿಸಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಶೇ. 80ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಕಾಯ್ದಿರಿಸುವ ವಿಷಯದಲ್ಲಿ ತಮ್ಮ ಪಕ್ಷ ಬದ್ಧವಾಗಿದೆ ಎಂದು ಹೇಳಿದ್ದರು.

ಇಷ್ಟೆಲ್ಲ ಅಭಿಪ್ರಾಯಗಳು ಬಂದ ಮೇಲೆ ಖಾಸಗಿ, ಸಾರ್ವಜನಿಕ ವಲಯದಲ್ಲಿ ಶೇ.80ರಷ್ಟು ಕನ್ನಡಿಗರಿಗೆ ಉದ್ಯೋಗ ನೀಡಲು ಯಾರಿಂದಲೂ ತಕರಾರು ಇರಲು ಸಾಧ್ಯವಿಲ್ಲ. ನಾನು ವಿರೋಧ ಪಕ್ಷದ ನಾಯಕರ ಬಳಿಗೆ ತೆರಳಿ ಅವರಿಗೆ ಕನ್ನಡಿಗರ ಪ್ರಾತಿನಿಧ್ಯದ ಕಾಯ್ದೆ ವಿಷಯದಲ್ಲಿ ಮನವಿ ಮಾಡುವ, ಮನವೊಲಿಸುವ ಕಾರ್ಯ ಮಾಡುತ್ತೇನೆ. ಅವರೂ ಸಹ ಖಂಡಿತವಾಗಿಯೂ ಇದನ್ನು ಬೆಂಬಲಿಸುತ್ತಾರೆ ಎಂದು ವಿವರಿಸಿದರು.

ಬ್ಲಾಕ್ ಮೇಲ್ ಕೂಗುಮಾರಿ ಉದ್ಯಮಿಗಳಿಗೆ ಮಣಿಯಬೇಡಿ!

ಕನ್ನಡಿಗರಿಗೆ ಉದ್ಯೋಗ ನೀಡಲು ಅಪಾರ ಸಂಖ್ಯೆಯಲ್ಲಿ ಬೆಂಬಲ ಇರುವಾಗ, ಯಾರೋ ಕೆಲವೇ ಕೆಲವು ಬೆರಳೆಣಿಕೆಯ, ಬ್ಲಾಕ್ ಮೇಲ್ ಕೂಗುಮಾರಿ ಉದ್ಯಮಿಗಳ ಒತ್ತಡಕ್ಕೆ ನೀವು ಮಣಿಯಕೂಡದು. ನಿಮ್ಮ ಹಠ, ಛಲವನ್ನು ನಾನು ಬಲ್ಲೆ. ಇಂಥ ಬ್ಲಾಕ್ ಮೇಲ್ ಗಳನ್ನು ನೀವು ಮೆಟ್ಟಿನಿಲ್ಲುವ ಶಕ್ತಿ, ಸ್ಥೈರ್ಯ ಹೊಂದಿದವರು.

ನಿಮ್ಮ (ಡಿಕೆ ಶಿವಕುಮಾರ್ ) ಕಾಲದಲ್ಲಿ ಈ ಕಾಯ್ದೆ ಜಾರಿಗೆ ಬಂದರೆ ಕನ್ನಡಿಗರು ನಿಮ್ಮನ್ನು ಹೃದಯದಲ್ಲಿ ಇಟ್ಟುಕೊಂಡು ಆರಾಧಿಸುತ್ತಾರೆ. ಇತಿಹಾಸದ ಪುಟಗಳಲ್ಲಿ ನಿಮ್ಮ ಹೆಸರು ಚಿರಸ್ಥಾಯಿಯಾಗುತ್ತದೆ. ಕನ್ನಡದ ಮಕ್ಕಳಿಗೆ ಅತಿದೊಡ್ಡ ಸಾಕ್ಷಿಗುಡ್ಡೆಯನ್ನು ನೀವು ಬಿಟ್ಟು ಹೋದಂತೆ ಆಗುತ್ತದೆ ಎಂದು ಅವರು ಒತ್ತಾಯಿಸಿದ್ದಾರೆ.

ನವೆಂಬರ್ 1ರಿಂದ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ‘ಆಗ್ರಹ ಅಭಿಯಾನ’ದ ಭಾಗವಾಗಿ ದೊಡ್ಡ ಸಂಸ್ಥೆಗಳಿಂದ ಹಿಡಿದು ಸಣ್ಣ ಸಂಸ್ಥೆಗಳವರೆಗೆ ಈವರೆಗೆ ಸುಮಾರು ಮುನ್ನೂರೈವತ್ತಕ್ಕೂ ಹೆಚ್ಚು ಸಂಸ್ಥೆಗಳನ್ನು ನಾವು ತಲುಪಿದ್ದೇವೆ. ಎಲ್ಲೂ ಕೂಡ ಒಂದೇ ಒಂದು ಕಹಿ ಘಟನೆ ನಡೆದಿಲ್ಲ. ಎಲ್ಲ ಕಡೆಯಲ್ಲೂ ನಮ್ಮ ಮುಖಂಡರು ಗೌರವಯುತವಾಗಿ ನಡೆದುಕೊಂಡಿದ್ದಾರೆ, ಖಾಸಗಿ ಸಂಸ್ಥೆಗಳ ಮುಖಂಡರೂ ಸಹ ನಮ್ಮನ್ನು ಪ್ರೀತಿ, ಗೌರವದಿಂದಲೇ ನಡೆಸಿಕೊಂಡಿದ್ದಾರೆ.

ಹಿಂದೆ ತಮ್ಮ ಸರ್ಕಾರದ ಕಾರ್ಮಿಕ ಇಲಾಖೆ ಇಂಥದ್ದೇ ಒಂದು ಸಮೀಕ್ಷೆ ನಡೆಸಲು ಮುಂದಾದಾಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಮೀಕ್ಷೆ ನಡೆಯದಂತೆ ತಡೆದವು ಎಂಬುದನ್ನು ನಾನು ಕೇಳಿದ್ದೇನೆ. ನಾವು ಈಗ ಸರ್ಕಾರಕ್ಕೆ ಶಕ್ತಿ ತುಂಬುವ ಕೆಲಸವನ್ನಷ್ಟೇ ಮಾಡುತ್ತಿದ್ದೇವೆ. ನಮ್ಮ ಸಮೀಕ್ಷೆಯಲ್ಲಿ ದೊರೆಯುವ ನೈಜ ಅಂಕಿ ಅಂಶಗಳನ್ನು ನಾವು ವರದಿಯ ರೂಪದಲ್ಲಿ ತಮಗೇ ಸಲ್ಲಿಸುತ್ತೇವೆ.

ಈಗ ನಮ್ಮ ಅಭಿಯಾನಕ್ಕೆ ಖಾಸಗಿ ಸಂಸ್ಥೆಗಳ ಮುಖ್ಯಸ್ಥರುಗಳು ಆಶಾದಾಯಕವಾಗಿ ಸ್ಪಂದಿಸುತ್ತಿರುವಾಗ, ಕನ್ನಡಿಗರ ಪ್ರಾತಿನಿಧ್ಯದ ಕಾಯ್ದೆಯನ್ನು ಜಾರಿಗೆ ತರಲು ಇದು ಸಕಾಲ. ದಯಮಾಡಿ ತಾವು ಈ ಕಾಯ್ದೆಯನ್ನು ಜಾರಿಗೊಳಿಸಿ ಎಂದು ಮತ್ತೊಮ್ಮೆ ವಿನಮ್ರವಾಗಿ ಮನವಿ ಮಾಡುತ್ತೇನೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಕಂಡುಬಂದ ಹಿನ್ನೆಲೆಯಲ್ಲಿ ಕರವೇ ತಂಡ ಅಲ್ಲಿಗೆ ಭೇಟಿ ನೀಡಿತ್ತು. ಈ ವೇಳೆ ನಾವು ಸಭೆ ಮಾಡಿದ್ದು, ಕೆಐಎಎಲ್, ಮೆಂಝಿಸ್ ಎವಿಯೇಷನ್ , ಡಿ ಹೆಚ್ ಎಲ್ ಎಕ್ಸ್ಪ್ರೆಸ್ , ಶಾಪರ್ ಶಾಪ್ , ಸ್ಟಾರ್ ಐರಲೈನ್ಸ್ , ತಾಜ್ ಸ್ಯಾಟ್ಸ್ ಇಂಡಿಯಾ ಕೆಟೆರೇರ್, ತಾಜ್ ಹೋಟೆಲ್ , ಹೆಚ್ ಎಂ ಎಸ್, ಟ್ರಾವೆಲ್ ಟೂರ್ (ಟಿ ಎಫ್ ಎಸ್ ), ಏರ್ ಇಂಡಿಯಾ ಸ್ಯಾಟ್ಸ್, ಬ್ಲೂ ಡಾರ್ಟ್ ಇಂಡಿಯಾ, ಡಬ್ಲ್ಯೂ ಯಫ್ ಎಸ್, ಏರ್ ಇಂಡಿಯಾ , ಟಿ ಆರ್ ಎಸ್ ಸಂಸ್ಥೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಪಾಲ್ಗೊಂಡಿದ್ದರು.

ಇಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆ ಇರುವುದಾಗಿ ಏರ್ ಪೋರ್ಟ್ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಮುಂದಿನ ಒಂದು ವರ್ಷ ಕಾಲಾವಕಾಶ ನೀಡಿ, ಅಷ್ಟರಲ್ಲಿ ಈ ಸಂಖ್ಯೆ ಹೆಚ್ಚಿಸುವ ಕೆಲಸ ಮಾಡುತ್ತೇವೆ. ಬಳಿಕ ನೀವೇ ಬಂದು ಕನ್ನಡಿಗರ ಉದ್ಯೋಗಿಗಳ ಸಂಖ್ಯೆಯನ್ನು ತಿಳಿಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರವೇ ಅಭಿಯಾನಕ್ಕೆ ಎಲ್ಲ ಅಧಿಕಾರಿಗಳು ಸ್ಪಂದಿಸಿದ್ದಾರೆ ಎಂದು ನಾರಾಯಣಗೌಡ ಅವರು ತಿಳಿಸಿದ್ದಾರೆ

Editor Reporter
mirrortvkannada.com

ಖಾಸಗಿ ವಲಯದಲ್ಲಿ 80% ಕನ್ನಡಿಗರಿಗೆ ಉದ್ಯೋಗ: ನೀವೇ ಕೊಟ್ಟ ಭರವಸೆ ಮೊದಲು ಈಡೇರಿಸಿ: ಕರವೇ ನಾರಾಯನಗೌಡ..

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ಬದ್ಧ ಎಂದು ಹೇಳಿಕೊಂಡು ಬಂದಿದೆ. ಇದೀಗ ಖಾಸಗಿ ಮತ್ತು ಸಾರ್ವಜನಿಕ ವಲಯದಲ್ಲಿ ಕನ್ನಡಿಗರಿಗೆ ಶೇ. 80ರಷ್ಟು ಉದ್ಯೋಗ ನೀಡಿಯೇ ತೀರುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಸರ್ಕಾರಕ್ಕೆ ಇದೀಗ ಅದನ್ನು ನೆರವೇರಿಸುವ ಸವಾಲು ಎದುರಾಗಿದೆ. ಈ ಸಂಬಂಧ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರು ಗಡುವು ನೀಡಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಖಾಸಗಿ, ಐಟಿ ಬಿಟಿ, ಕಾರ್ಪೋರೇಟ್ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದಿರುವ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಇದಾಗುತ್ತಿದ್ದಂತೆ ನೂರಾರು ಸಂಸ್ಥೆ/ಕಂಪನಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸದಸ್ಯ ನಿಯೋಗ ಭೇಟಿ ನೀಡಿ ಕನ್ನಡಿಗರಿಗೆ ನ್ಯಾಯಸಮ್ಮತ ಉದ್ಯೋಗಕ್ಕೆ ಒತ್ತಾಯಿಸಿದೆ. ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರ ತಾನು ಅಧಿಕಾರಕ್ಕೆ ಬರುವಾಗ ಪ್ರಣಾಳಿಕೆಯಲ್ಲಿ ಶೇ.80 ಕನ್ನಡಿಗರ ಉದ್ಯೋಗ ಭರವಸೆ ಸಹ ನೀಡಿತ್ತು. ಅದನ್ನೀಗ ಕರವೇ ನೆನಪಿಸಿ ಎಕ್ಸ್ ಪೋಸ್ಟ್ ಮಾಡಿದೆ.
ಸಂಪುಟ ಸಭೆಯಲ್ಲಿ ಶೇ.80ರಷ್ಟು ಹುದ್ದೆ ಭರವಸೆ ನಿರ್ಧಾರ ಕೈಗೊಳ್ಳಿ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ದಯಮಾಡಿ 2023ರಲ್ಲಿ ಚುನಾವಣೆ ಪೂರ್ವದಲ್ಲಿ ಹೊರಡಿಸಿದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸಿ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರು ಮನವಿ ಮಾಡಿದ್ದಾರೆ.

ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿ ಎಲ್ಲ ಹಂತದ ಉದ್ಯೋಗಾವಕಾಶಗಳಲ್ಲಿ ಶೇ.80ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ನೀಡುತ್ತೇವೆ ಎಂಬ ಭರವಸೆಯನ್ನು ನೀಡಿದ್ದಿರಿ. ನಾಲ್ಕು ವರ್ಷಗಳಾದರೂ ಅದು ಈಡೇರಿಲ್ಲ. ಇದಕ್ಕಿಂತ ದೊಡ್ಡ ಆದ್ಯತೆಯ ವಿಷಯ ಇನ್ನೊಂದಿರಲು ಸಾಧ್ಯವಿಲ್ಲ. ಯಾಕೆಂದರೆ ಇದು ಕನ್ನಡದ ಮಕ್ಕಳ ಭವಿಷ್ಯದ ಪ್ರಶ್ನೆ.

ನೀವು ಈ ಬೇಡಿಕೆಯನ್ನು ಈಡೇರಿಸಿದರೆ ಕರ್ನಾಟಕ ರಕ್ಷಣಾ ವೇದಿಕೆ ಅಭಿಯಾನ ನಡೆಸುವ ಅಗತ್ಯವೂ ಇರುವುದಿಲ್ಲ. ಕೂಡಲೇ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಇಟ್ಟು ನೀವೇ ನೀಡಿದ ಭರವಸೆಯನ್ನು ಈಡೇರಿಸಿಬಿಡಿ. ನಾವು ಲಕ್ಷಾಂತರ ಕನ್ನಡದ ಮಕ್ಕಳನ್ನು ಸೇರಿಸಿ ಇಡೀ ಸರ್ಕಾರಕ್ಕೆ ಒಂದು ಅಭಿನಂದನಾ ಸಭೆ ನಡೆಸುತ್ತೇವೆ ಎಂದಿದ್ದಾರೆ.

ನೀವು ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾಗಲೇ ಈ ಪ್ರಣಾಳಿಕೆ ರೂಪುಗೊಂಡಿದೆ. ನೀವು ಅಪಾರವಾದ ಕನ್ನಡ ಪ್ರೇಮ ಇಟ್ಟುಕೊಂಡವರು ಎಂಬುದು ನನಗೆ ಖಚಿತವಾಗಿ ಗೊತ್ತಿದೆ. ಈ ಕಾರಣದಿಂದಲೇ ನಿಮ್ಮ ಪ್ರಣಾಳಿಕೆಯಲ್ಲಿ ಈ ಅಂಶವನ್ನು ಸೇರಿಸಲಾಗಿತ್ತು ಎಂಬುದು ತಿಳಿದಿದೆ. ಚುನಾವಣೆಗೆ ಮುನ್ನ ಪ್ರಣಾಳಿಕೆಯಲ್ಲಿ ನೀವು ಕೊಟ್ಟ ಭರವಸೆಗಳೇ ನಿಮ್ಮ ಸರ್ಕಾರದ ಪ್ರಮುಖ ಧ್ಯೇಯವಾಕ್ಯಗಳಾಗಬೇಕು. ಕೊಟ್ಟ ಭರವಸೆಗಳನ್ನು ಈಡೇರಿಸುವುದು ಸಾಂವಿಧಾನಾತ್ಮಕ ಕರ್ತವ್ಯ ಮಾತ್ರವಲ್ಲ, ನೈತಿಕ ಕರ್ತವ್ಯವೂ ಕೂಡ ಹೌದು ಎಂದು ಸರ್ಕಾರಕ್ಕೆ ನೆನಪಿಸಿದರು.
4 ವರ್ಷವಾದರೂ ಈಡೇರದ ಬೇಡಿಕೆ
ನಾಲ್ಕು ವರ್ಷಗಳಾದರೂ ಈ ಬೇಡಿಕೆ ಈಡೇರಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಸರ್ಕಾರದ ಸಚಿವ ಸಂಪುಟ ಈ ಕಾಯ್ದೆಗೆ ಅನುಮೋದನೆ ನೀಡಿತ್ತು. ಆದರೆ ಮುಂದಿನ ಪ್ರಕ್ರಿಯೆ ನಡೆಯಲಿಲ್ಲ. ದಯಮಾಡಿ ಈ ಭರವಸೆ ಈಡೇರಿಸಿಬಿಡಿ, ಕರ್ನಾಟಕದ ಜನತೆಗೆ ಇದೇ ನೀವು ಕೊಡುವ ದೀಪಾವಳಿಯ ಕೊಡುಗೆಯಾಗುತ್ತದೆ.
80% ಕನ್ನಡಿಗರಿಗೆ ಉದ್ಯೋಗ ನೀತಿ ಯಾರು ವಿರೋಧಿಸಲ್ಲ
ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಶೇ.80 ರಷ್ಟು ಉದ್ಯೋಗ ಕೊಡುವ ವಿಷಯದಲ್ಲಿ ನಿಮಗೆ ಯಾರ ವಿರೋಧವೂ ಇರಲು ಸಾಧ್ಯವಿಲ್ಲ. ಸ್ವತಃ ನಿಮ್ಮ ಸಂಪುಟದ ಸದಸ್ಯರಾದ ಮಾನ್ಯ ಐಟಿಬಿಟಿ, ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಾಯ್ದೆ ಜಾರಿಗೆ ತರುವುದು ನಮ್ಮ ಬದ್ಧತೆ, ಅದನ್ನು ತಂದೇ ತರುತ್ತೇವೆ ಎಂದು ಇತ್ತೀಚಿಗೆ ಹೇಳಿದ್ದಾರೆ. ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರೂ ಕೂಡ ಇದೇ ಮಾತನ್ನು ಹೇಳಿದ್ದಾರೆ.

ವಿರೋಧ ಪಕ್ಷಗಳ ನಾಯಕರೂ ಕನ್ನಡಿರಿಗೆ ಉದ್ಯೋಗದಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಇದೇ ಮಾತುಗಳನ್ನು ಹಿಂದೆ ಹೇಳಿದ್ದಾರೆ. ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದ ಮಾನ್ಯ ಬಿ.ವೈ.ವಿಜಯೇಂದ್ರ ಅವರು ಕರವೇ 'ಆಗ್ರಹ ಅಭಿಯಾನ' ಬೆಂಬಲಿಸಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಶೇ. 80ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಕಾಯ್ದಿರಿಸುವ ವಿಷಯದಲ್ಲಿ ತಮ್ಮ ಪಕ್ಷ ಬದ್ಧವಾಗಿದೆ ಎಂದು ಹೇಳಿದ್ದರು.

ಇಷ್ಟೆಲ್ಲ ಅಭಿಪ್ರಾಯಗಳು ಬಂದ ಮೇಲೆ ಖಾಸಗಿ, ಸಾರ್ವಜನಿಕ ವಲಯದಲ್ಲಿ ಶೇ.80ರಷ್ಟು ಕನ್ನಡಿಗರಿಗೆ ಉದ್ಯೋಗ ನೀಡಲು ಯಾರಿಂದಲೂ ತಕರಾರು ಇರಲು ಸಾಧ್ಯವಿಲ್ಲ. ನಾನು ವಿರೋಧ ಪಕ್ಷದ ನಾಯಕರ ಬಳಿಗೆ ತೆರಳಿ ಅವರಿಗೆ ಕನ್ನಡಿಗರ ಪ್ರಾತಿನಿಧ್ಯದ ಕಾಯ್ದೆ ವಿಷಯದಲ್ಲಿ ಮನವಿ ಮಾಡುವ, ಮನವೊಲಿಸುವ ಕಾರ್ಯ ಮಾಡುತ್ತೇನೆ. ಅವರೂ ಸಹ ಖಂಡಿತವಾಗಿಯೂ ಇದನ್ನು ಬೆಂಬಲಿಸುತ್ತಾರೆ ಎಂದು ವಿವರಿಸಿದರು.
ಬ್ಲಾಕ್ ಮೇಲ್ ಕೂಗುಮಾರಿ ಉದ್ಯಮಿಗಳಿಗೆ ಮಣಿಯಬೇಡಿ!
ಕನ್ನಡಿಗರಿಗೆ ಉದ್ಯೋಗ ನೀಡಲು ಅಪಾರ ಸಂಖ್ಯೆಯಲ್ಲಿ ಬೆಂಬಲ ಇರುವಾಗ, ಯಾರೋ ಕೆಲವೇ ಕೆಲವು ಬೆರಳೆಣಿಕೆಯ, ಬ್ಲಾಕ್ ಮೇಲ್ ಕೂಗುಮಾರಿ ಉದ್ಯಮಿಗಳ ಒತ್ತಡಕ್ಕೆ ನೀವು ಮಣಿಯಕೂಡದು. ನಿಮ್ಮ ಹಠ, ಛಲವನ್ನು ನಾನು ಬಲ್ಲೆ. ಇಂಥ ಬ್ಲಾಕ್ ಮೇಲ್ ಗಳನ್ನು ನೀವು ಮೆಟ್ಟಿನಿಲ್ಲುವ ಶಕ್ತಿ, ಸ್ಥೈರ್ಯ ಹೊಂದಿದವರು.

ನಿಮ್ಮ (ಡಿಕೆ ಶಿವಕುಮಾರ್ ) ಕಾಲದಲ್ಲಿ ಈ ಕಾಯ್ದೆ ಜಾರಿಗೆ ಬಂದರೆ ಕನ್ನಡಿಗರು ನಿಮ್ಮನ್ನು ಹೃದಯದಲ್ಲಿ ಇಟ್ಟುಕೊಂಡು ಆರಾಧಿಸುತ್ತಾರೆ. ಇತಿಹಾಸದ ಪುಟಗಳಲ್ಲಿ ನಿಮ್ಮ ಹೆಸರು ಚಿರಸ್ಥಾಯಿಯಾಗುತ್ತದೆ. ಕನ್ನಡದ ಮಕ್ಕಳಿಗೆ ಅತಿದೊಡ್ಡ ಸಾಕ್ಷಿಗುಡ್ಡೆಯನ್ನು ನೀವು ಬಿಟ್ಟು ಹೋದಂತೆ ಆಗುತ್ತದೆ ಎಂದು ಅವರು ಒತ್ತಾಯಿಸಿದ್ದಾರೆ.

ನವೆಂಬರ್ 1ರಿಂದ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ 'ಆಗ್ರಹ ಅಭಿಯಾನ'ದ ಭಾಗವಾಗಿ ದೊಡ್ಡ ಸಂಸ್ಥೆಗಳಿಂದ ಹಿಡಿದು ಸಣ್ಣ ಸಂಸ್ಥೆಗಳವರೆಗೆ ಈವರೆಗೆ ಸುಮಾರು ಮುನ್ನೂರೈವತ್ತಕ್ಕೂ ಹೆಚ್ಚು ಸಂಸ್ಥೆಗಳನ್ನು ನಾವು ತಲುಪಿದ್ದೇವೆ. ಎಲ್ಲೂ ಕೂಡ ಒಂದೇ ಒಂದು ಕಹಿ ಘಟನೆ ನಡೆದಿಲ್ಲ. ಎಲ್ಲ ಕಡೆಯಲ್ಲೂ ನಮ್ಮ ಮುಖಂಡರು ಗೌರವಯುತವಾಗಿ ನಡೆದುಕೊಂಡಿದ್ದಾರೆ, ಖಾಸಗಿ ಸಂಸ್ಥೆಗಳ ಮುಖಂಡರೂ ಸಹ ನಮ್ಮನ್ನು ಪ್ರೀತಿ, ಗೌರವದಿಂದಲೇ ನಡೆಸಿಕೊಂಡಿದ್ದಾರೆ.

ಹಿಂದೆ ತಮ್ಮ ಸರ್ಕಾರದ ಕಾರ್ಮಿಕ ಇಲಾಖೆ ಇಂಥದ್ದೇ ಒಂದು ಸಮೀಕ್ಷೆ ನಡೆಸಲು ಮುಂದಾದಾಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಮೀಕ್ಷೆ ನಡೆಯದಂತೆ ತಡೆದವು ಎಂಬುದನ್ನು ನಾನು ಕೇಳಿದ್ದೇನೆ. ನಾವು ಈಗ ಸರ್ಕಾರಕ್ಕೆ ಶಕ್ತಿ ತುಂಬುವ ಕೆಲಸವನ್ನಷ್ಟೇ ಮಾಡುತ್ತಿದ್ದೇವೆ. ನಮ್ಮ ಸಮೀಕ್ಷೆಯಲ್ಲಿ ದೊರೆಯುವ ನೈಜ ಅಂಕಿ ಅಂಶಗಳನ್ನು ನಾವು ವರದಿಯ ರೂಪದಲ್ಲಿ ತಮಗೇ ಸಲ್ಲಿಸುತ್ತೇವೆ.

ಈಗ ನಮ್ಮ ಅಭಿಯಾನಕ್ಕೆ ಖಾಸಗಿ ಸಂಸ್ಥೆಗಳ ಮುಖ್ಯಸ್ಥರುಗಳು ಆಶಾದಾಯಕವಾಗಿ ಸ್ಪಂದಿಸುತ್ತಿರುವಾಗ, ಕನ್ನಡಿಗರ ಪ್ರಾತಿನಿಧ್ಯದ ಕಾಯ್ದೆಯನ್ನು ಜಾರಿಗೆ ತರಲು ಇದು ಸಕಾಲ. ದಯಮಾಡಿ ತಾವು ಈ ಕಾಯ್ದೆಯನ್ನು ಜಾರಿಗೊಳಿಸಿ ಎಂದು ಮತ್ತೊಮ್ಮೆ ವಿನಮ್ರವಾಗಿ ಮನವಿ ಮಾಡುತ್ತೇನೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಕಂಡುಬಂದ ಹಿನ್ನೆಲೆಯಲ್ಲಿ ಕರವೇ ತಂಡ ಅಲ್ಲಿಗೆ ಭೇಟಿ ನೀಡಿತ್ತು. ಈ ವೇಳೆ ನಾವು ಸಭೆ ಮಾಡಿದ್ದು, ಕೆಐಎಎಲ್, ಮೆಂಝಿಸ್ ಎವಿಯೇಷನ್ , ಡಿ ಹೆಚ್ ಎಲ್ ಎಕ್ಸ್ಪ್ರೆಸ್ , ಶಾಪರ್ ಶಾಪ್ , ಸ್ಟಾರ್ ಐರಲೈನ್ಸ್ , ತಾಜ್ ಸ್ಯಾಟ್ಸ್ ಇಂಡಿಯಾ ಕೆಟೆರೇರ್, ತಾಜ್ ಹೋಟೆಲ್ , ಹೆಚ್ ಎಂ ಎಸ್, ಟ್ರಾವೆಲ್ ಟೂರ್ (ಟಿ ಎಫ್ ಎಸ್ ), ಏರ್ ಇಂಡಿಯಾ ಸ್ಯಾಟ್ಸ್, ಬ್ಲೂ ಡಾರ್ಟ್ ಇಂಡಿಯಾ, ಡಬ್ಲ್ಯೂ ಯಫ್ ಎಸ್, ಏರ್ ಇಂಡಿಯಾ , ಟಿ ಆರ್ ಎಸ್ ಸಂಸ್ಥೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಪಾಲ್ಗೊಂಡಿದ್ದರು.

ಇಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆ ಇರುವುದಾಗಿ ಏರ್ ಪೋರ್ಟ್ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಮುಂದಿನ ಒಂದು ವರ್ಷ ಕಾಲಾವಕಾಶ ನೀಡಿ, ಅಷ್ಟರಲ್ಲಿ ಈ ಸಂಖ್ಯೆ ಹೆಚ್ಚಿಸುವ ಕೆಲಸ ಮಾಡುತ್ತೇವೆ. ಬಳಿಕ ನೀವೇ ಬಂದು ಕನ್ನಡಿಗರ ಉದ್ಯೋಗಿಗಳ ಸಂಖ್ಯೆಯನ್ನು ತಿಳಿಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರವೇ ಅಭಿಯಾನಕ್ಕೆ ಎಲ್ಲ ಅಧಿಕಾರಿಗಳು ಸ್ಪಂದಿಸಿದ್ದಾರೆ ಎಂದು ನಾರಾಯಣಗೌಡ ಅವರು ತಿಳಿಸಿದ್ದಾರೆ

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్