ಮಹಿಳಾ ಶಾಸಕಿಯರಿಗೆ ಸಿಹಿಸುದ್ದಿ! ಸಂಪುಟಕ್ಕೆ ಮಹಿಳಾ ಸಚಿವೆ ಸೇರ್ಪಡೆ: ಡಿ ಕೆ ಶಿವಕುಮಾರ್ ಮಹತ್ವದ ಘೋಷಣೆ..

mirrortvkannada.com
Date : 07 November 2026, 10:04 am Posted By : MIRROR TV KANNADA

ಮಹಿಳಾ ಶಾಸಕಿಯರಿಗೆ ಸಿಹಿಸುದ್ದಿ! ಸಂಪುಟಕ್ಕೆ ಮಹಿಳಾ ಸಚಿವೆ ಸೇರ್ಪಡೆ: ಡಿ ಕೆ ಶಿವಕುಮಾರ್ ಮಹತ್ವದ ಘೋಷಣೆ..

ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೂ ಮುನ್ನ ರಾಜ್ಯ ಸಚಿವ ಸಂಪುಟಕ್ಕೆ ಮಹಿಳಾ ಸಚಿವೆಯನ್ನು ಸೇರ್ಪಡೆಗೊಳಿಸುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ. ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಮಹಿಳಾ ಶಾಸಕರಲ್ಲಿ ಸಚಿವ ಸ್ಥಾನದ ನಿರೀಕ್ಷೆ ಹೆಚ್ಚಾಗಿದೆ. ಅಧಿವೇಶನಕ್ಕೂ ಮುನ್ನ ಸಂಪುಟ ಪುನಾರಚನೆ ಅಥವಾ ಹೊಸ ಸೇರ್ಪಡೆಯಾಗಲಿದೆಯೇ ಎಂಬ ಕುತೂಹಲವೂ ರಾಜ್ಯ ರಾಜಕೀಯದಲ್ಲಿ ಮೂಡಿದೆ. ಸಿಎಂ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಗೃಹ ಕಚೇರಿ ಕೃಷ್ಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮುಂದಿನ ಅಧಿವೇಶನಕ್ಕೂ ಮೊದಲೇ ಮಹಿಳೆಯೊಬ್ಬರನ್ನು ಸಚಿವರನ್ನಾಗಿ ನೇಮಕ ಮಾಡಲಾಗುವುದು. ಗೃಹಲಕ್ಷ್ಮಿ ಫಲಾನುಭವಿಗಳ ಪರಿಶೀಲನೆ ಸಂದರ್ಭದಲ್ಲಿ ಸರಿಯಾದ ಮಾಹಿತಿ ಅದರಲ್ಲೂ ವಿಶೇಷವಾಗಿ ನಿಮ್ಮದೇ ದೂರವಾಣಿ ಸಂಖ್ಯೆ ನಮೂದಿಸಿ. ನಮ್ಮ ಸಂದೇಶ ನಿಮಗೆ ತಲುಪಬೇಕು.
ಮತ್ತೆ ನಾವು 2028 ರಲ್ಲಿ ಅಧಿಕಾರಕ್ಕೆ
ಗೃಹ ಲಕ್ಷ್ಮಿ ಯೋಜನೆಯ ಹಣದಿಂದ ವ್ಯವಹಾರ, ಉದ್ಯಮಗಳಲ್ಲಿ ತೊಡಗಿಸಿಕೊಂಡವರು, ಮಕ್ಕಳ ಶಿಕ್ಷಣಕ್ಕೆ ಬಳಸಿಕೊಂಡಿರುವುದು ತಿಳಿದು ಸಂತೋಷವಾಯಿತು. ವಿದ್ಯೆ ಬಹುದೊಡ್ಡ ಆಸ್ತಿ. ಆದರೆ ಈ ಮೊತ್ತವನ್ನು ಎಂದಿಗೂ ಬಡ್ಡಿ ವ್ಯವಹಾರ ಅಥವಾ ಚೀಟಿ ವ್ಯವಹಾರಕ್ಕೆ ಬಳಸಿಕೊಳ್ಳಬೇಡಿ. ನಿಮ್ಮ ಆಶೀರ್ವಾದ ಇರಲಿ. ಮತ್ತೆ ನಾವು 2028 ರಲ್ಲಿ ಅಧಿಕಾರಕ್ಕೆ ಬರುತ್ತೇವೆ. ಈ ಬಗ್ಗೆ ನಿಮ್ಮ ಪತಿ, ನಿಮ್ಮ ಗೆಳತಿಯರಿಗೂ ಅರಿವು ಮೂಡಿಸಿ ಎಂದು ಹೇಳಿದರು.

ನನ್ನ ಮಗ ಕೊಪ್ಪಳದಲ್ಲಿ ಎಂಬಿಬಿಎಸ್ ಓದುತ್ತಿದ್ದಾನೆ. ಗೃಹಲಕ್ಷ್ಮಿ ಹಣದಿಂದ ಸುಮಾರು 59 ಸಾವಿರದಷ್ಟು ಫೀಸ್ ಕಟ್ಟಿದ್ದೇನೆ. ಶಕ್ತಿ ಯೋಜನೆ ಇರುವ ಕಾರಣಕ್ಕೆ ಆಗಾಗ್ಗೆ ಮಗನನ್ನು ನೋಡಿಕೊಂಡು ಬರಲು ಅನುಕೂಲವಾಗಿದೆ ಎಂದು ಚಿಕ್ಕಮಗಳೂರು ಜಿಲ್ಲೆಯ ಮಹಿಳೆಯೊಬ್ಬರು ಹೇಳಿದಾಗ ಇಡೀ ಸಭಾಂಗಣವೇ ಭಾವುಕತೆಯಲ್ಲಿ ಮಿಂದೆದ್ದಿತು.

ನಿಮ್ಮ ಮಗ ಎಷ್ಟು ಮಾರ್ಕ್ಸ್ ತಗೊಂಡಿದಾನೆ ತಾಯಿ ಎಂದು ಸಿಎಂ ಕೇಳಿದಾಗ, ಮಗ ಪಿಯುಸಿಯಲ್ಲಿ 98 ಪರ್ಸೆಂಟ್ ತಗೊಂಡಿದ್ದಾನೆ ಎಂದು ಹೇಳುವಾಗ ತಾಯಿಯ ಹುಮ್ಮಸ್ಸು ಇಮ್ಮಡಿಯಾಗಿತ್ತು. ಸಿಎಂ ಆಗಮಿಸಿದೊಡನೆ ಅವರ ವಂದನೆಗೆ ಉತ್ಸಾಹದಿಂದ ಪ್ರತಿವಂದನೆ ಸಲ್ಲಿಸಿದ ಮಹಿಳೆಯರು, ಗೃಹಲಕ್ಷ್ಮಿ ಯೋಜನೆಯಿಂದ ತಮಗಾದ ಅನುಕೂಲ, ತಮ್ಮ ಅನುಭವಗಳನ್ನು ಮುಕ್ತವಾಗಿ ತೆರೆದಿಟ್ಟರು. ತಮ್ಮ ಊರಿನ ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತರಲು ಮರೆಯಲಿಲ್ಲ.
ಗೃಹಲಕ್ಷ್ಮಿ ಯೋಜನೆ ನಿಲ್ಲಿಸೋದಿಲ್ಲ
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಹಿರಿಯ ಮಹಿಳೆಯೊಬ್ಬರು, "ಗೃಹಲಕ್ಷ್ಮಿಯ ಮೊತ್ತ ಹಿರಿಯ ಮಹಿಳೆಯರ ಔಷಧಿಗೆ, ಸ್ವಾಭಿಮಾನದ ಬದುಕಿಗೆ ನೆರವಾಗಿದೆ" ಎಂದು ಭಾವುಕರಾಗಿ ನುಡಿದರು. ಗೃಹಲಕ್ಷ್ಮಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಿದಂತೆ ಫಲಾನುಭವಿಗಳು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ, "ಈ ಯೋಜನೆ ನಿಲ್ಲಿಸಲಾಗದು ಎಂದು ಭರವಸೆ ನೀಡಿದರು.
ನೃತ್ಯ ಕಲಿಯಲು ಮಗಳನ್ನು ವಿದೇಶಕ್ಕೆ ಕಳಿಸಿದ್ದೇವೆ
ನಮ್ಮ ಮಗಳ ಹೆಸರು ಆಶಾ. ಪಿಯುಸಿ ಓದುತ್ತಿದ್ದಾಳೆ. ಜೊತೆಗೆ ಅವಳಿಗೆ ನೃತ್ಯದ ಮೇಲೆ ಸಾಕಷ್ಟು ಆಸಕ್ತಿ. ಮಗಳಿಗೆ ನೃತ್ಯ ಕಾರ್ಯಕ್ರಮ ನೀಡಲು ಮಲೇಷಿಯಾಗೆ ಕಳುಹಿಸಲು ಗೃಹಲಕ್ಷ್ಮಿ ಹಣ, ತಮ್ಮ ಉಳಿತಾಯದ ಹಣ ನೆರವಾಯಿತು. ಚನ್ನರಾಯಪಟ್ಟಣದಿಂದ ಮಲೆಷ್ಯಾವರೆಗೆ ಪ್ರಯಾಣ ಬೆಳೆಸಲು ನೆರವಾದ ಕಾಂಗ್ರೆಸ್ ಸರ್ಕಾರಕ್ಕೆ ಧನ್ಯವಾದಗಳು" ಎಂದು ತಾಯಿಯೊಬ್ಬರು ಹೇಳಿದಾಗ ಇಡೀ ಸಭಾಂಗಣವೇ ಕರಾಡತನದಲ್ಲಿ ಮುಳುಗಿತು.
ವ್ಯಾಪಾರ ವಿಸ್ತರಣೆಗೆ ದ್ವಿಚಕ್ರ ವಾಹನ
ತುಮಕೂರು ಜಿಲ್ಲೆಯ ತ್ರಿವೇಣಿ ಬಸವರಾಜ್ ತಮ್ಮ ಸಿರಿಧಾನ್ಯ, ರಾಗಿ ಉತ್ಪನ್ನಗಳ ಮಾರಾಟಕ್ಕೆ ಗೃಹಲಕ್ಷ್ಮಿ ನೆರವಾಗಿದ್ದನ್ನು ಹೆಮ್ಮೆಯಿಂದ ವಿವರಿಸಿದರು. ಗೃಹಲಕ್ಷ್ಮಿಯ ಹಣದೊಂದಿಗೆ ತಮ್ಮ ಉಳಿತಾಯದ ಹಣ ಸೇರಿಸಿ ದ್ವಿಚಕ್ರ ವಾಹನ ಖರೀದಿಸಿ, ವ್ಯಾಪಾರ ವಿಸ್ತರಿಸಲು ಅನುಕೂಲವಾಯಿತು. ತಾವು ತಯಾರಿಸಿದ ಚಕ್ಕುಲಿ, ಕೋಡುಬಳೆ ಮತ್ತಿತರ ಉತ್ಪನ್ನಗಳನ್ನು ಈಗ ಹೊರರಾಜ್ಯ, ಹೊರದೇಶಗಳಿಗೂ ಕಳುಹಿಸುತ್ತಿದ್ದೇನೆ ಎಂದು ತಿಳಿಸಿದರು.

ತರೀಕೆರೆಯ ಲಂಬಾಣಿ ಸಮಾಜದ ಮಹಿಳೆಯೊಬ್ಬರು, "ಗೃಹಲಕ್ಷ್ಮಿ ಯೋಜನೆಯ ಮೊತ್ತವು ಲಂಬಾಣಿ ಕಸೂತಿ ಉದ್ಯಮವನ್ನು ದೊಡ್ಡಮಟ್ಟದಲ್ಲಿ ಪ್ರಾರಂಭಿಸಲು ಅನುಕೂಲವಾಯಿತು" ಎಂದು ವಿವರಿಸಿದರು. ಶಕ್ತಿ ಯೋಜನೆಯಿಂದ ಮಕ್ಕಳಿಗೆ ಅನುಕೂಲವಾಗಿದ್ದನ್ನು ಸ್ಮರಿಸಿ, "ಮಕ್ಕಳು ಒಳ್ಳೆ ವಿದ್ಯಾಭ್ಯಾಸ ಮಾಡಲು ಕಾಂಗ್ರೆಸ್ ಸರ್ಕಾರವೇ ಕಾರಣ. ಎಲ್ಲರ ಹಾರೈಕೆ ನಮ್ಮಣ್ಣನ ಮೇಲಿದೆ" ಎಂದು ತುಂಬು ಹೃದಯದಿಂದ ಹಾರೈಸಿದರು.
ಮೊಮ್ಮಗಳಿಗೆ ಆಟಿಕೆ ತೊಟ್ಟಿಲು ಕೊಂಡ ಸಿಎಂ
ಕಲಬುರಗಿ ಜಿಲ್ಲೆಯ ಮಹಿಳೆ ಗೃಹಲಕ್ಷ್ಮಿ ಯೋಜನೆಯ ಮೊತ್ತವನ್ನೇ ಬಂಡವಾಳವಾಗಿಸಿಕೊಂಡು ಕರಕುಶಲ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದಾಗಿ ಹೆಮ್ಮೆಯಿಂದ ತಿಳಿಸಿ, ತಾವು ತಂದ ತೊಟ್ಟಿಲು, ದೀಪ ಮತ್ತಿತರ ವಸ್ತುಗಳನ್ನು ಪ್ರದರ್ಶಿಸಿದರು. ಆ ವಸ್ತುಗಳನ್ನು ಸಿಎಂ ಗೆ ಉಡುಗೊರೆ ನೀಡಿ, ಮಗುವಿಗೆ ಶುಭವಾಗಲಿ ಎಂದು ಹಾರೈಸಿದರು.

ತೊಟ್ಟಿಲು ನಂಗೆ ಕೊಡಮ್ಮ, ಮೊಮ್ಮಗಳಿಗೆ ಕೊಡ್ತೇನೆ. ಎಷ್ಟು ರೂಪಾಯಿ ಆಗುತ್ತೆ ಇದು ಎಂದು ಕೇಳಿ 500 ರೂಪಾಯಿ ನೀಡಿ ತೊಟ್ಟಿಲು ಕೊಂಡು ಕೊಂಡರು. ಕಲಬುರಗಿ ಅಫಜಲಪುರ ತಾಲ್ಲೂಕಿನ ಶ್ರೀದೇವಿ ಪಾಟೀಲ ಅವರು 'ಗೃಹಲಕ್ಷ್ಮಿಯಿಂದ ಬಡ ಹೆಣ್ಣುಮಕ್ಕಳಿಗೆ ಅನುಕೂಲವಾಗಿದೆ' ಎಂದರು. ತಮ್ಮ ಸಮಾಜ ಸೇವಾ ಕಾರ್ಯಗಳನ್ನು ವಿವರಿಸಿದ ಅವರು, 'ಅಂಗನವಾಡಿ ಮಕ್ಕಳಿಗೆ ಯುನಿಫಾರಂ ನೀಡಿರುವುದಾಗಿ ತಿಳಿಸಿದರು. ತಾಯಾಗಿ ನಿಮ್ಮ ಸರ್ಕಾರಕ್ಕೆ ಬೆಂಬಲ ನೀಡುತ್ತೇವೆ ಎಂದು ಭರವಸೆಯಿತ್ತರು.

⬇ DOWNLOAD
×

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಹಿರಿಯ ಮಹಿಳೆಯೊಬ್ಬರು, “ಗೃಹಲಕ್ಷ್ಮಿಯ ಮೊತ್ತ ಹಿರಿಯ ಮಹಿಳೆಯರ ಔಷಧಿಗೆ, ಸ್ವಾಭಿಮಾನದ ಬದುಕಿಗೆ ನೆರವಾಗಿದೆ” ಎಂದು ಭಾವುಕರಾಗಿ ನುಡಿದರು. ಗೃಹಲಕ್ಷ್ಮಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಿದಂತೆ ಫಲಾನುಭವಿಗಳು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ, “ಈ ಯೋಜನೆ ನಿಲ್ಲಿಸಲಾಗದು ಎಂದು ಭರವಸೆ ನೀಡಿದರು.

ನೃತ್ಯ ಕಲಿಯಲು ಮಗಳನ್ನು ವಿದೇಶಕ್ಕೆ ಕಳಿಸಿದ್ದೇವೆ

ನಮ್ಮ ಮಗಳ ಹೆಸರು ಆಶಾ. ಪಿಯುಸಿ ಓದುತ್ತಿದ್ದಾಳೆ. ಜೊತೆಗೆ ಅವಳಿಗೆ ನೃತ್ಯದ ಮೇಲೆ ಸಾಕಷ್ಟು ಆಸಕ್ತಿ. ಮಗಳಿಗೆ ನೃತ್ಯ ಕಾರ್ಯಕ್ರಮ ನೀಡಲು ಮಲೇಷಿಯಾಗೆ ಕಳುಹಿಸಲು ಗೃಹಲಕ್ಷ್ಮಿ ಹಣ, ತಮ್ಮ ಉಳಿತಾಯದ ಹಣ ನೆರವಾಯಿತು. ಚನ್ನರಾಯಪಟ್ಟಣದಿಂದ ಮಲೆಷ್ಯಾವರೆಗೆ ಪ್ರಯಾಣ ಬೆಳೆಸಲು ನೆರವಾದ ಕಾಂಗ್ರೆಸ್ ಸರ್ಕಾರಕ್ಕೆ ಧನ್ಯವಾದಗಳು” ಎಂದು ತಾಯಿಯೊಬ್ಬರು ಹೇಳಿದಾಗ ಇಡೀ ಸಭಾಂಗಣವೇ ಕರಾಡತನದಲ್ಲಿ ಮುಳುಗಿತು.

ವ್ಯಾಪಾರ ವಿಸ್ತರಣೆಗೆ ದ್ವಿಚಕ್ರ ವಾಹನ

ತುಮಕೂರು ಜಿಲ್ಲೆಯ ತ್ರಿವೇಣಿ ಬಸವರಾಜ್ ತಮ್ಮ ಸಿರಿಧಾನ್ಯ, ರಾಗಿ ಉತ್ಪನ್ನಗಳ ಮಾರಾಟಕ್ಕೆ ಗೃಹಲಕ್ಷ್ಮಿ ನೆರವಾಗಿದ್ದನ್ನು ಹೆಮ್ಮೆಯಿಂದ ವಿವರಿಸಿದರು. ಗೃಹಲಕ್ಷ್ಮಿಯ ಹಣದೊಂದಿಗೆ ತಮ್ಮ ಉಳಿತಾಯದ ಹಣ ಸೇರಿಸಿ ದ್ವಿಚಕ್ರ ವಾಹನ ಖರೀದಿಸಿ, ವ್ಯಾಪಾರ ವಿಸ್ತರಿಸಲು ಅನುಕೂಲವಾಯಿತು. ತಾವು ತಯಾರಿಸಿದ ಚಕ್ಕುಲಿ, ಕೋಡುಬಳೆ ಮತ್ತಿತರ ಉತ್ಪನ್ನಗಳನ್ನು ಈಗ ಹೊರರಾಜ್ಯ, ಹೊರದೇಶಗಳಿಗೂ ಕಳುಹಿಸುತ್ತಿದ್ದೇನೆ ಎಂದು ತಿಳಿಸಿದರು.

ತರೀಕೆರೆಯ ಲಂಬಾಣಿ ಸಮಾಜದ ಮಹಿಳೆಯೊಬ್ಬರು, “ಗೃಹಲಕ್ಷ್ಮಿ ಯೋಜನೆಯ ಮೊತ್ತವು ಲಂಬಾಣಿ ಕಸೂತಿ ಉದ್ಯಮವನ್ನು ದೊಡ್ಡಮಟ್ಟದಲ್ಲಿ ಪ್ರಾರಂಭಿಸಲು ಅನುಕೂಲವಾಯಿತು” ಎಂದು ವಿವರಿಸಿದರು. ಶಕ್ತಿ ಯೋಜನೆಯಿಂದ ಮಕ್ಕಳಿಗೆ ಅನುಕೂಲವಾಗಿದ್ದನ್ನು ಸ್ಮರಿಸಿ, “ಮಕ್ಕಳು ಒಳ್ಳೆ ವಿದ್ಯಾಭ್ಯಾಸ ಮಾಡಲು ಕಾಂಗ್ರೆಸ್ ಸರ್ಕಾರವೇ ಕಾರಣ. ಎಲ್ಲರ ಹಾರೈಕೆ ನಮ್ಮಣ್ಣನ ಮೇಲಿದೆ” ಎಂದು ತುಂಬು ಹೃದಯದಿಂದ ಹಾರೈಸಿದರು.

ಮೊಮ್ಮಗಳಿಗೆ ಆಟಿಕೆ ತೊಟ್ಟಿಲು ಕೊಂಡ ಸಿಎಂ

ಕಲಬುರಗಿ ಜಿಲ್ಲೆಯ ಮಹಿಳೆ ಗೃಹಲಕ್ಷ್ಮಿ ಯೋಜನೆಯ ಮೊತ್ತವನ್ನೇ ಬಂಡವಾಳವಾಗಿಸಿಕೊಂಡು ಕರಕುಶಲ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದಾಗಿ ಹೆಮ್ಮೆಯಿಂದ ತಿಳಿಸಿ, ತಾವು ತಂದ ತೊಟ್ಟಿಲು, ದೀಪ ಮತ್ತಿತರ ವಸ್ತುಗಳನ್ನು ಪ್ರದರ್ಶಿಸಿದರು. ಆ ವಸ್ತುಗಳನ್ನು ಸಿಎಂ ಗೆ ಉಡುಗೊರೆ ನೀಡಿ, ಮಗುವಿಗೆ ಶುಭವಾಗಲಿ ಎಂದು ಹಾರೈಸಿದರು.

ತೊಟ್ಟಿಲು ನಂಗೆ ಕೊಡಮ್ಮ, ಮೊಮ್ಮಗಳಿಗೆ ಕೊಡ್ತೇನೆ. ಎಷ್ಟು ರೂಪಾಯಿ ಆಗುತ್ತೆ ಇದು ಎಂದು ಕೇಳಿ 500 ರೂಪಾಯಿ ನೀಡಿ ತೊಟ್ಟಿಲು ಕೊಂಡು ಕೊಂಡರು. ಕಲಬುರಗಿ ಅಫಜಲಪುರ ತಾಲ್ಲೂಕಿನ ಶ್ರೀದೇವಿ ಪಾಟೀಲ ಅವರು ‘ಗೃಹಲಕ್ಷ್ಮಿಯಿಂದ ಬಡ ಹೆಣ್ಣುಮಕ್ಕಳಿಗೆ ಅನುಕೂಲವಾಗಿದೆ’ ಎಂದರು. ತಮ್ಮ ಸಮಾಜ ಸೇವಾ ಕಾರ್ಯಗಳನ್ನು ವಿವರಿಸಿದ ಅವರು, ‘ಅಂಗನವಾಡಿ ಮಕ್ಕಳಿಗೆ ಯುನಿಫಾರಂ ನೀಡಿರುವುದಾಗಿ ತಿಳಿಸಿದರು. ತಾಯಾಗಿ ನಿಮ್ಮ ಸರ್ಕಾರಕ್ಕೆ ಬೆಂಬಲ ನೀಡುತ್ತೇವೆ ಎಂದು ಭರವಸೆಯಿತ್ತರು.

Editor Reporter
mirrortvkannada.com

ಮಹಿಳಾ ಶಾಸಕಿಯರಿಗೆ ಸಿಹಿಸುದ್ದಿ! ಸಂಪುಟಕ್ಕೆ ಮಹಿಳಾ ಸಚಿವೆ ಸೇರ್ಪಡೆ: ಡಿ ಕೆ ಶಿವಕುಮಾರ್ ಮಹತ್ವದ ಘೋಷಣೆ..

ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೂ ಮುನ್ನ ರಾಜ್ಯ ಸಚಿವ ಸಂಪುಟಕ್ಕೆ ಮಹಿಳಾ ಸಚಿವೆಯನ್ನು ಸೇರ್ಪಡೆಗೊಳಿಸುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ. ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಮಹಿಳಾ ಶಾಸಕರಲ್ಲಿ ಸಚಿವ ಸ್ಥಾನದ ನಿರೀಕ್ಷೆ ಹೆಚ್ಚಾಗಿದೆ. ಅಧಿವೇಶನಕ್ಕೂ ಮುನ್ನ ಸಂಪುಟ ಪುನಾರಚನೆ ಅಥವಾ ಹೊಸ ಸೇರ್ಪಡೆಯಾಗಲಿದೆಯೇ ಎಂಬ ಕುತೂಹಲವೂ ರಾಜ್ಯ ರಾಜಕೀಯದಲ್ಲಿ ಮೂಡಿದೆ. ಸಿಎಂ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಗೃಹ ಕಚೇರಿ ಕೃಷ್ಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮುಂದಿನ ಅಧಿವೇಶನಕ್ಕೂ ಮೊದಲೇ ಮಹಿಳೆಯೊಬ್ಬರನ್ನು ಸಚಿವರನ್ನಾಗಿ ನೇಮಕ ಮಾಡಲಾಗುವುದು. ಗೃಹಲಕ್ಷ್ಮಿ ಫಲಾನುಭವಿಗಳ ಪರಿಶೀಲನೆ ಸಂದರ್ಭದಲ್ಲಿ ಸರಿಯಾದ ಮಾಹಿತಿ ಅದರಲ್ಲೂ ವಿಶೇಷವಾಗಿ ನಿಮ್ಮದೇ ದೂರವಾಣಿ ಸಂಖ್ಯೆ ನಮೂದಿಸಿ. ನಮ್ಮ ಸಂದೇಶ ನಿಮಗೆ ತಲುಪಬೇಕು.
ಮತ್ತೆ ನಾವು 2028 ರಲ್ಲಿ ಅಧಿಕಾರಕ್ಕೆ
ಗೃಹ ಲಕ್ಷ್ಮಿ ಯೋಜನೆಯ ಹಣದಿಂದ ವ್ಯವಹಾರ, ಉದ್ಯಮಗಳಲ್ಲಿ ತೊಡಗಿಸಿಕೊಂಡವರು, ಮಕ್ಕಳ ಶಿಕ್ಷಣಕ್ಕೆ ಬಳಸಿಕೊಂಡಿರುವುದು ತಿಳಿದು ಸಂತೋಷವಾಯಿತು. ವಿದ್ಯೆ ಬಹುದೊಡ್ಡ ಆಸ್ತಿ. ಆದರೆ ಈ ಮೊತ್ತವನ್ನು ಎಂದಿಗೂ ಬಡ್ಡಿ ವ್ಯವಹಾರ ಅಥವಾ ಚೀಟಿ ವ್ಯವಹಾರಕ್ಕೆ ಬಳಸಿಕೊಳ್ಳಬೇಡಿ. ನಿಮ್ಮ ಆಶೀರ್ವಾದ ಇರಲಿ. ಮತ್ತೆ ನಾವು 2028 ರಲ್ಲಿ ಅಧಿಕಾರಕ್ಕೆ ಬರುತ್ತೇವೆ. ಈ ಬಗ್ಗೆ ನಿಮ್ಮ ಪತಿ, ನಿಮ್ಮ ಗೆಳತಿಯರಿಗೂ ಅರಿವು ಮೂಡಿಸಿ ಎಂದು ಹೇಳಿದರು.

ನನ್ನ ಮಗ ಕೊಪ್ಪಳದಲ್ಲಿ ಎಂಬಿಬಿಎಸ್ ಓದುತ್ತಿದ್ದಾನೆ. ಗೃಹಲಕ್ಷ್ಮಿ ಹಣದಿಂದ ಸುಮಾರು 59 ಸಾವಿರದಷ್ಟು ಫೀಸ್ ಕಟ್ಟಿದ್ದೇನೆ. ಶಕ್ತಿ ಯೋಜನೆ ಇರುವ ಕಾರಣಕ್ಕೆ ಆಗಾಗ್ಗೆ ಮಗನನ್ನು ನೋಡಿಕೊಂಡು ಬರಲು ಅನುಕೂಲವಾಗಿದೆ ಎಂದು ಚಿಕ್ಕಮಗಳೂರು ಜಿಲ್ಲೆಯ ಮಹಿಳೆಯೊಬ್ಬರು ಹೇಳಿದಾಗ ಇಡೀ ಸಭಾಂಗಣವೇ ಭಾವುಕತೆಯಲ್ಲಿ ಮಿಂದೆದ್ದಿತು.

ನಿಮ್ಮ ಮಗ ಎಷ್ಟು ಮಾರ್ಕ್ಸ್ ತಗೊಂಡಿದಾನೆ ತಾಯಿ ಎಂದು ಸಿಎಂ ಕೇಳಿದಾಗ, ಮಗ ಪಿಯುಸಿಯಲ್ಲಿ 98 ಪರ್ಸೆಂಟ್ ತಗೊಂಡಿದ್ದಾನೆ ಎಂದು ಹೇಳುವಾಗ ತಾಯಿಯ ಹುಮ್ಮಸ್ಸು ಇಮ್ಮಡಿಯಾಗಿತ್ತು. ಸಿಎಂ ಆಗಮಿಸಿದೊಡನೆ ಅವರ ವಂದನೆಗೆ ಉತ್ಸಾಹದಿಂದ ಪ್ರತಿವಂದನೆ ಸಲ್ಲಿಸಿದ ಮಹಿಳೆಯರು, ಗೃಹಲಕ್ಷ್ಮಿ ಯೋಜನೆಯಿಂದ ತಮಗಾದ ಅನುಕೂಲ, ತಮ್ಮ ಅನುಭವಗಳನ್ನು ಮುಕ್ತವಾಗಿ ತೆರೆದಿಟ್ಟರು. ತಮ್ಮ ಊರಿನ ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತರಲು ಮರೆಯಲಿಲ್ಲ.
ಗೃಹಲಕ್ಷ್ಮಿ ಯೋಜನೆ ನಿಲ್ಲಿಸೋದಿಲ್ಲ
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಹಿರಿಯ ಮಹಿಳೆಯೊಬ್ಬರು, "ಗೃಹಲಕ್ಷ್ಮಿಯ ಮೊತ್ತ ಹಿರಿಯ ಮಹಿಳೆಯರ ಔಷಧಿಗೆ, ಸ್ವಾಭಿಮಾನದ ಬದುಕಿಗೆ ನೆರವಾಗಿದೆ" ಎಂದು ಭಾವುಕರಾಗಿ ನುಡಿದರು. ಗೃಹಲಕ್ಷ್ಮಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಿದಂತೆ ಫಲಾನುಭವಿಗಳು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ, "ಈ ಯೋಜನೆ ನಿಲ್ಲಿಸಲಾಗದು ಎಂದು ಭರವಸೆ ನೀಡಿದರು.
ನೃತ್ಯ ಕಲಿಯಲು ಮಗಳನ್ನು ವಿದೇಶಕ್ಕೆ ಕಳಿಸಿದ್ದೇವೆ
ನಮ್ಮ ಮಗಳ ಹೆಸರು ಆಶಾ. ಪಿಯುಸಿ ಓದುತ್ತಿದ್ದಾಳೆ. ಜೊತೆಗೆ ಅವಳಿಗೆ ನೃತ್ಯದ ಮೇಲೆ ಸಾಕಷ್ಟು ಆಸಕ್ತಿ. ಮಗಳಿಗೆ ನೃತ್ಯ ಕಾರ್ಯಕ್ರಮ ನೀಡಲು ಮಲೇಷಿಯಾಗೆ ಕಳುಹಿಸಲು ಗೃಹಲಕ್ಷ್ಮಿ ಹಣ, ತಮ್ಮ ಉಳಿತಾಯದ ಹಣ ನೆರವಾಯಿತು. ಚನ್ನರಾಯಪಟ್ಟಣದಿಂದ ಮಲೆಷ್ಯಾವರೆಗೆ ಪ್ರಯಾಣ ಬೆಳೆಸಲು ನೆರವಾದ ಕಾಂಗ್ರೆಸ್ ಸರ್ಕಾರಕ್ಕೆ ಧನ್ಯವಾದಗಳು" ಎಂದು ತಾಯಿಯೊಬ್ಬರು ಹೇಳಿದಾಗ ಇಡೀ ಸಭಾಂಗಣವೇ ಕರಾಡತನದಲ್ಲಿ ಮುಳುಗಿತು.
ವ್ಯಾಪಾರ ವಿಸ್ತರಣೆಗೆ ದ್ವಿಚಕ್ರ ವಾಹನ
ತುಮಕೂರು ಜಿಲ್ಲೆಯ ತ್ರಿವೇಣಿ ಬಸವರಾಜ್ ತಮ್ಮ ಸಿರಿಧಾನ್ಯ, ರಾಗಿ ಉತ್ಪನ್ನಗಳ ಮಾರಾಟಕ್ಕೆ ಗೃಹಲಕ್ಷ್ಮಿ ನೆರವಾಗಿದ್ದನ್ನು ಹೆಮ್ಮೆಯಿಂದ ವಿವರಿಸಿದರು. ಗೃಹಲಕ್ಷ್ಮಿಯ ಹಣದೊಂದಿಗೆ ತಮ್ಮ ಉಳಿತಾಯದ ಹಣ ಸೇರಿಸಿ ದ್ವಿಚಕ್ರ ವಾಹನ ಖರೀದಿಸಿ, ವ್ಯಾಪಾರ ವಿಸ್ತರಿಸಲು ಅನುಕೂಲವಾಯಿತು. ತಾವು ತಯಾರಿಸಿದ ಚಕ್ಕುಲಿ, ಕೋಡುಬಳೆ ಮತ್ತಿತರ ಉತ್ಪನ್ನಗಳನ್ನು ಈಗ ಹೊರರಾಜ್ಯ, ಹೊರದೇಶಗಳಿಗೂ ಕಳುಹಿಸುತ್ತಿದ್ದೇನೆ ಎಂದು ತಿಳಿಸಿದರು.

ತರೀಕೆರೆಯ ಲಂಬಾಣಿ ಸಮಾಜದ ಮಹಿಳೆಯೊಬ್ಬರು, "ಗೃಹಲಕ್ಷ್ಮಿ ಯೋಜನೆಯ ಮೊತ್ತವು ಲಂಬಾಣಿ ಕಸೂತಿ ಉದ್ಯಮವನ್ನು ದೊಡ್ಡಮಟ್ಟದಲ್ಲಿ ಪ್ರಾರಂಭಿಸಲು ಅನುಕೂಲವಾಯಿತು" ಎಂದು ವಿವರಿಸಿದರು. ಶಕ್ತಿ ಯೋಜನೆಯಿಂದ ಮಕ್ಕಳಿಗೆ ಅನುಕೂಲವಾಗಿದ್ದನ್ನು ಸ್ಮರಿಸಿ, "ಮಕ್ಕಳು ಒಳ್ಳೆ ವಿದ್ಯಾಭ್ಯಾಸ ಮಾಡಲು ಕಾಂಗ್ರೆಸ್ ಸರ್ಕಾರವೇ ಕಾರಣ. ಎಲ್ಲರ ಹಾರೈಕೆ ನಮ್ಮಣ್ಣನ ಮೇಲಿದೆ" ಎಂದು ತುಂಬು ಹೃದಯದಿಂದ ಹಾರೈಸಿದರು.
ಮೊಮ್ಮಗಳಿಗೆ ಆಟಿಕೆ ತೊಟ್ಟಿಲು ಕೊಂಡ ಸಿಎಂ
ಕಲಬುರಗಿ ಜಿಲ್ಲೆಯ ಮಹಿಳೆ ಗೃಹಲಕ್ಷ್ಮಿ ಯೋಜನೆಯ ಮೊತ್ತವನ್ನೇ ಬಂಡವಾಳವಾಗಿಸಿಕೊಂಡು ಕರಕುಶಲ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದಾಗಿ ಹೆಮ್ಮೆಯಿಂದ ತಿಳಿಸಿ, ತಾವು ತಂದ ತೊಟ್ಟಿಲು, ದೀಪ ಮತ್ತಿತರ ವಸ್ತುಗಳನ್ನು ಪ್ರದರ್ಶಿಸಿದರು. ಆ ವಸ್ತುಗಳನ್ನು ಸಿಎಂ ಗೆ ಉಡುಗೊರೆ ನೀಡಿ, ಮಗುವಿಗೆ ಶುಭವಾಗಲಿ ಎಂದು ಹಾರೈಸಿದರು.

ತೊಟ್ಟಿಲು ನಂಗೆ ಕೊಡಮ್ಮ, ಮೊಮ್ಮಗಳಿಗೆ ಕೊಡ್ತೇನೆ. ಎಷ್ಟು ರೂಪಾಯಿ ಆಗುತ್ತೆ ಇದು ಎಂದು ಕೇಳಿ 500 ರೂಪಾಯಿ ನೀಡಿ ತೊಟ್ಟಿಲು ಕೊಂಡು ಕೊಂಡರು. ಕಲಬುರಗಿ ಅಫಜಲಪುರ ತಾಲ್ಲೂಕಿನ ಶ್ರೀದೇವಿ ಪಾಟೀಲ ಅವರು 'ಗೃಹಲಕ್ಷ್ಮಿಯಿಂದ ಬಡ ಹೆಣ್ಣುಮಕ್ಕಳಿಗೆ ಅನುಕೂಲವಾಗಿದೆ' ಎಂದರು. ತಮ್ಮ ಸಮಾಜ ಸೇವಾ ಕಾರ್ಯಗಳನ್ನು ವಿವರಿಸಿದ ಅವರು, 'ಅಂಗನವಾಡಿ ಮಕ್ಕಳಿಗೆ ಯುನಿಫಾರಂ ನೀಡಿರುವುದಾಗಿ ತಿಳಿಸಿದರು. ತಾಯಾಗಿ ನಿಮ್ಮ ಸರ್ಕಾರಕ್ಕೆ ಬೆಂಬಲ ನೀಡುತ್ತೇವೆ ಎಂದು ಭರವಸೆಯಿತ್ತರು.

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్