IAFನಿಂದ ವಿಶ್ವ ದಾಖಲೆ: ಲಡಾಖ್‌ನಲ್ಲಿ 13,629 ಅಡಿ ಎತ್ತರದಲ್ಲಿ IL-76MD ವಿಮಾನ ಲ್ಯಾಂಡಿಂಗ್..

mirrortvkannada.com
Date : 08 November 2026, 8:04 am Posted By : MIRROR TV KANNADA

IAFನಿಂದ ವಿಶ್ವ ದಾಖಲೆ: ಲಡಾಖ್‌ನಲ್ಲಿ 13,629 ಅಡಿ ಎತ್ತರದಲ್ಲಿ IL-76MD ವಿಮಾನ ಲ್ಯಾಂಡಿಂಗ್..

ಭಾರತೀಯ ವಾಯುಪಡೆಯ (IAF) IL-76MD ಭಾರೀ ಸರಕು ಸಾಗಣೆ ವಿಮಾನವು ಲಡಾಖ್‌ನ (Ladakh) 13,629 ಅಡಿ ಎತ್ತರದಲ್ಲಿರುವ ನ್ಯೋಮಾ ವಾಯುನೆಲೆಯಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ, ವಾಯುಯಾನ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ಬರೆದಿದೆ.
ಭಾರತೀಯ ವಾಯುಪಡೆಯು ತನ್ನ ಎಕ್ಸ್‌ ಪೋಸ್ಟ್‌ನಲ್ಲಿ ಈ ಸಾಧನೆಯನ್ನು ಪ್ರಕಟಿಸಿದೆ. ಇದರಲ್ಲಿ, ಅತಿ ಎತ್ತರದ ಪ್ರದೇಶದಲ್ಲಿರುವ ವಾಯುನೆಲೆಯಲ್ಲಿನ ವಿಮಾನದ ಛಾಯಾಚಿತ್ರಗಳು ಮತ್ತು ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಜಗತ್ತಿನಾದ್ಯಂತ IL-76MD ವಿಮಾನವೊಂದು ಇಳಿದಿರುವ ಅತ್ಯಂತ ಎತ್ತರದ ಸ್ಥಳ ಇದಾಗಿದೆ ಎಂದು ತಿಳಿಸಿದೆ.
‘13,629 ಅಡಿ. ವಾಯುಯಾನ ಇತಿಹಾಸದಲ್ಲಿ ಒಂದು ಹೊಸ ಎತ್ತರ’ ಎಂದು ಭಾರತೀಯ ವಾಯುಪಡೆಯು ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ. ಇದು ವಿಮಾನದ ಸಾಮರ್ಥ್ಯ ಮತ್ತು ಅದರ ಸಿಬ್ಬಂದಿಯ ಪರಿಣತಿಯನ್ನು ತೋರಿಸುವ ಒಂದು ಗಮನಾರ್ಹ ನಿದರ್ಶನವಾಗಿದೆ ಎಂದು ಐಎಎಫ್‌ ಬಣ್ಣಿಸಿದೆ.‌
ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ಸಿಬ್ಬಂದಿಯ ಕೌಶಲ, ನಿಖರತೆ ಮತ್ತು ವೃತ್ತಿಪರತೆಯನ್ನು ವಾಯುಪಡೆ ಶ್ಲಾಘಿಸಿದೆ. ಈ ಮಹತ್ವದ ಮೈಲಿಗಲ್ಲು ಭಾರತದ ಕಾರ್ಯತಂತ್ರದ ವೈಮಾನಿಕ ಸಾಗಣೆ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ತಿಳಿಸಿದೆ
ಪೂರ್ವ ಲಡಾಖ್‌ನಲ್ಲಿರುವ ನ್ಯೋಮಾ, ಚೀನಾದೊಂದಿಗಿನ ‘ಲೈನ್ ಆಫ್ ಆಕ್ಚುವಲ್ ಕಂಟ್ರೋಲ್’ (LAC) ಗೆ ಹತ್ತಿರದಲ್ಲಿರುವುದರಿಂದ ಆಯಕಟ್ಟಿನ ದೃಷ್ಟಿಯಿಂದ ಮಹತ್ವದ್ದಾಗಿದೆ. ಈ ವಾಯುನೆಲೆಯು ಅತ್ಯಂತ ಎತ್ತರದ ಪ್ರದೇಶದಲ್ಲಿರುವುದರಿಂದ, ಇಲ್ಲಿ ವಿಮಾನ ಕಾರ್ಯಾಚರಣೆಗಳನ್ನು ನಡೆಸುವುದು ಸವಾಲಿನ ಸಂಗತಿಯಾಗಿದೆ. ಇದಕ್ಕೆ ಎಚ್ಚರಿಕೆಯ ಯೋಜನೆ ಮತ್ತು ನಿಖರವಾದ ಅನುಷ್ಠಾನದ ಅಗತ್ಯವಿರುತ್ತದೆ.

IL-76MDಯು ರಷ್ಯಾ ಮೂಲದ ನಾಲ್ಕು ಎಂಜಿನ್‌ಗಳನ್ನು ಹೊಂದಿರುವ ಭಾರೀ ಸಾರಿಗೆ ವಿಮಾನವಾಗಿದೆ. ಇದನ್ನು ಸೈನಿಕರು, ಉಪಕರಣಗಳು ಮತ್ತು ಸರಕುಗಳನ್ನು ಸಾಗಿಸಲು ವಿನ್ಯಾಸಗೊಳಿಸಲಾಗಿದೆ. ಭಾರತೀಯ ವಾಯುಪಡೆಯು ಸಿಬ್ಬಂದಿ ಹಾಗೂ ಅಗತ್ಯ ಸಾಮಗ್ರಿಗಳನ್ನು ದೂರದ ಮತ್ತು ಆಯಕಟ್ಟಿನ ದೃಷ್ಟಿಯಿಂದ ಪ್ರಮುಖವಾದ ಸ್ಥಳಗಳಿಗೆ ಸಾಗಿಸುವ ಸಾಮರ್ಥ್ಯದಲ್ಲಿ ಈ ವಿಮಾನವು ಪ್ರಮುಖ ಪಾತ್ರ ವಹಿಸುತ್ತದೆ.

⬇ DOWNLOAD
×

Editor Reporter

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్