40,421 ರೂ. ಇದ್ದ ಕ್ಯಾನ್ಸರ್‌ ಔಷಧಿ ದರ 2,720 ರೂ.ಗೆ ಇಳಿಕೆ; ಪರಿಷ್ಕೃತ ಪಟ್ಟಿ ಪ್ರಕಟಿಸಿದ ಕೇಂದ್ರ..

mirrortvkannada.com
Date : 09 November 2026, 9:18 pm Posted By : MIRROR TV KANNADA

40,421 ರೂ. ಇದ್ದ ಕ್ಯಾನ್ಸರ್‌ ಔಷಧಿ ದರ 2,720 ರೂ.ಗೆ ಇಳಿಕೆ; ಪರಿಷ್ಕೃತ ಪಟ್ಟಿ ಪ್ರಕಟಿಸಿದ ಕೇಂದ್ರ..

ಕ್ಯಾನ್ಸರ್‌ ಔಷಧಿಗಳ ಬೆಲೆಯಲ್ಲಿ ಭಾರಿ ಇಳಿಕೆ ಮಾಡಲಾಗಿದೆ. ಸಾವಿರಕ್ಕೂ ಹೆಚ್ಚು ಔಷಧಿಗಳ ಪರಿಷ್ಕೃತ ದರ ಪಟ್ಟಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಇಂದಿನಿಂದಲೇ ಭಾರತದಾದ್ಯಂತ 1,364 ಬಗೆಯ ಕ್ಯಾನ್ಸರ್ ವಿರೋಧಿ ಔಷಧಿಗಳ ಪರಿಷ್ಕೃತ MRP ಜಾರಿಗೆ ಬಂದಿದ್ದು, ಇದರಿಂದ ರೋಗಿಗಳಿಗೆ ಕ್ಯಾನ್ಸರ್ ಚಿಕಿತ್ಸೆ ಹೆಚ್ಚು ಕೈಗೆಟುಕುವಂತಾಗಲಿದೆ. ಅಗತ್ಯ ಚಿಕಿತ್ಸೆಗಳನ್ನು ಹೆಚ್ಚು ಸುಲಭವಾಗಿ ಲಭ್ಯವಾಗಿಸುವ ಉದ್ದೇಶದಿಂದ, 137 ಕ್ಯಾನ್ಸರ್ ಔಷಧಿಗಳ ಮೇಲಿನ ವ್ಯಾಪಾರ ಲಾಭಾಂಶಕ್ಕೆ (trade margins) ಮಿತಿ ವಿಧಿಸಲು ‘ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ’ (NPPA) ತೆಗೆದುಕೊಂಡ ನಿರ್ಧಾರದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಪರಿಷ್ಕೃತ MRPಗಿಂತ ಹೆಚ್ಚಿನ ಹಣವನ್ನು ರೋಗಿಗಳಿಂದ ವಸೂಲಿ ಮಾಡುವ ಔಷಧಿ ವ್ಯಾಪಾರಿಗಳು ಮತ್ತು ಆಸ್ಪತ್ರೆ ಔಷಧಾಲಯಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಈ ನಿರ್ಧಾರವು ಕ್ಯಾನ್ಸರ್ ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಸಹಕಾರಿಯಾಗಲಿದೆ.

NPPA (ಎನ್‌ಪಿಪಿಎ)ಯು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಔಷಧೀಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಆಯ್ದ ಕ್ಯಾನ್ಸರ್ ಔಷಧಗಳಿಗೆ ವ್ಯಾಪಾರ ಲಾಭಾಂಶದ (ಟ್ರೇಡ್ ಮಾರ್ಜಿನ್) ಮಿತಿಗಳನ್ನು ನಿಗದಿಪಡಿಸಿದೆ, ಇದರ ಪರಿಣಾಮವಾಗಿ ಹಲವಾರು ಔಷಧೀಯ ರೂಪಕಗಳ ಬೆಲೆಗಳಲ್ಲಿ ಗಣನೀಯ ಇಳಿಕೆಯಾಗಿದೆ.

ಒಟ್ಟು 85 ಔಷಧಿ ಕಂಪನಿಗಳು 121 ಔಷಧಿಗಳಿಗೆ ಸಂಬಂಧಿಸಿದ 1,364 ಕ್ಯಾನ್ಸರ್ ವಿರೋಧಿ ಔಷಧಿ ರೂಪಕಗಳ (anti-cancer formulations) ಪರಿಷ್ಕೃತ MRP ವರದಿ ಮಾಡಿವೆ. ಇವುಗಳಲ್ಲಿ, 679 ಬ್ರಾಂಡ್‌ಗಳು ತಮ್ಮ ಔಷಧಗಳ ಬೆಲೆಯನ್ನು ಶೇಕಡಾ 50 ಕ್ಕಿಂತ ಹೆಚ್ಚು ಕಡಿಮೆ ಮಾಡಿವೆ. ದಾಖಲಾದ ಗರಿಷ್ಠ ಬೆಲೆ ಕಡಿತವು ಶೇಕಡಾ 96.45 ರಷ್ಟಿದೆ.

ಕ್ಯಾನ್ಸರ್‌ಗೆ ಬಳಸುವ ಹಲವಾರು ಪ್ರಮುಖ ಔಷಧಿಗಳ ಎಂಆರ್‌ಪಿಯಲ್ಲಿ ಗಮನಾರ್ಹ ಇಳಿಕೆಯಾಗಿದೆ. ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುವ ‘ಆರ್‌ಪಿಜಿ ಲೈಫ್ ಸೈನ್ಸಸ್’ (RPG Life Sciences) ಸಂಸ್ಥೆಯ ‘ಪಾಲ್ಬೋಪ್ರೊ’ (Palbopro – Palbociclib 125 mg) ಕ್ಯಾಪ್ಸುಲ್‌ಗಳ ಬೆಲೆಯನ್ನು 40,421.33 ರೂ.ನಿಂದ 2,720 ರೂ.ಗೆ ಇಳಿಸಲಾಗಿದೆ. ಅದೇ ರೀತಿ, ಪ್ರಾಸ್ಟೇಟ್ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುವ ‘ಆರ್ವಿನ್‌ಕೇರ್ ಫಾರ್ಮಾ’ (Arvincare Pharma) ಸಂಸ್ಥೆಯ ‘ಅಬಿರಾನ್’ (Abiron – Abiraterone Acetate 250 mg) ಮಾತ್ರೆಗಳ ಬೆಲೆಯು 41,250 ರೂ.ನಿಂದ 3,218.23 ರೂ.ಗೆ ಇಳಿದಿದೆ.

⬇ DOWNLOAD
×

Editor Reporter

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్