ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಅರಣ್ಯದಲ್ಲಿ ಗುಂಡಿನ ಸದ್ದು; ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು ನಾಪತ್ತೆ..

mirrortvkannada.com
Date : 12 November 2026, 5:04 am Posted By : MIRROR TV KANNADA

ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಅರಣ್ಯದಲ್ಲಿ ಗುಂಡಿನ ಸದ್ದು; ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು ನಾಪತ್ತೆ..

ಜಮ್ಮು-ಕಾಶ್ಮೀರದ (Jammu Kashmir) ಕಿಶ್ತ್ವಾರ್ (Kishtwar) ಜಿಲ್ಲೆಯ ಮಾರ್ವಾಹ್‌ನ ದೆಹರ್ನಾ ಅರಣ್ಯ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಗುಂಡಿನ ಸದ್ದು ಕೇಳಿಬಂದಿದ್ದು, ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು (SPOs) ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ನಾಪತ್ತೆಯಾಗಿರುವ ಸಿಬ್ಬಂದಿಯನ್ನು ರಿಷಿಪಾಲ್ ಮತ್ತು ಬಾಬಿ ಚಂದ್ ಎಂದು ಗುರುತಿಸಲಾಗಿದೆ. ಇವರು ವಿಶೇಷ ಕಾರ್ಯಾಚರಣೆ ತಂಡದ ಭಾಗವಾಗಿದ್ದರು. ಅಪ್ಪರ್ ರಿಡ್ಜ್ ದೆಹರ್ನಾದ ಇಂದರ್‌ವಾನ್ ಪ್ರದೇಶದ ಬಸ್ನಾನ್‌ನಲ್ಲಿ ನಿಯೋಜಿಸಲಾಗಿದ್ದ ಸೇನೆಯ 17ನೇ ರಾಷ್ಟ್ರೀಯ ರೈಫಲ್ಸ್ ತಂಡದ ಸಿಬ್ಬಂದಿಯ ಕರ್ತವ್ಯ ಬದಲಾವಣೆಗಾಗಿ ಈ ಇಬ್ಬರು ಅಧಿಕಾರಿಗಳು ಕಿಯಾರ್ ದಚನ್‌ನಿಂದ ಪ್ರಯಾಣಿಸುತ್ತಿದ್ದರು.

ಬುಧವಾರ ಮಧ್ಯಾಹ್ನ ಸುಮಾರು 3:30ರ ವೇಳೆಗೆ ಇಬ್ಬರು ಸಿಬ್ಬಂದಿ ಪ್ರಯಾಣಿಸುತ್ತಿದ್ದಾಗ ಅರಣ್ಯ ಪ್ರದೇಶದಲ್ಲಿ ಗುಂಡಿನ ಸದ್ದು ಕೇಳಿಬಂದಿದೆ. ಇದೇ ಸಮಯದಲ್ಲಿ ಮಾರ್ವಾಹ್ ಪ್ರದೇಶದಲ್ಲಿ ಏರ್‌ಟೆಲ್ ಮೊಬೈಲ್ ನೆಟ್‌ವರ್ಕ್ ಸೇವೆಯಲ್ಲೂ ವ್ಯತ್ಯಯ ಉಂಟಾಗಿದೆ. ಸಂಜೆ ಸುಮಾರು 7 ಗಂಟೆಗೆ ಎಸ್‌ಹೆಚ್‌ಒ (ಸ್ಟೇಷನ್ ಹೌಸ್ ಆಫೀಸರ್) ನೇತೃತ್ವದಲ್ಲಿ ಎಸ್‌ಒಜಿ ತಂಡವೊಂದು ಅಗತ್ಯ ಕ್ರಮ ಕೈಗೊಳ್ಳಲು ಘಟನಾ ಪ್ರದೇಶದತ್ತ ತೆರಳಿದೆ. ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

⬇ DOWNLOAD
×

Editor Reporter

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్