RSSಗೂ ನೋಂದಣಿ ಕಡ್ಡಾಯ ಮಾಡಿಸುತ್ತೇನೆ! ಮುಂದಿನ ಟಾರ್ಗೆಟ್‌ ಸಂಘ ಪರಿವಾರ ಎಂದ ಪ್ರಿಯಾಂಕ್‌ ಖರ್ಗೆ..

mirrortvkannada.com
Date : 13 November 2026, 9:52 pm Posted By : MIRROR TV KANNADA

RSSಗೂ ನೋಂದಣಿ ಕಡ್ಡಾಯ ಮಾಡಿಸುತ್ತೇನೆ! ಮುಂದಿನ ಟಾರ್ಗೆಟ್‌ ಸಂಘ ಪರಿವಾರ ಎಂದ ಪ್ರಿಯಾಂಕ್‌ ಖರ್ಗೆ..

ಆರೆಸ್ಸೆಸ್ ಇನ್ನೂ ನೋಂದಾಯಿತ ಸಂಘಟನೆಯಾಗಿಲ್ಲ. ದಲಿತ ಸಂಘಟನೆಗಳಾದ ಡಿ.ಎಸ್‌.ಎಸ್‌.ಗಳಿಗೆ ನೋಂದಣಿ ಇರುವಾಗ ಆರೆಸ್ಸೆಸ್‌ಗೂ ಮುಂದಿನ ದಿನಗಳಲ್ಲಿ ನೋಂದಣಿ ಮಾಡಿಸಲಿದ್ದೇನೆ ಎಂದು ಗೃಹ, ಐಟಿಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಶುಕ್ರವಾರ 2023-24ನೇ ಸಾಲಿನ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಅಂದಾಜು ₹31 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, 1949ರಲ್ಲಿ ಮನುವಾದಿ ಸಂಘಟನೆಗಳು ನಮಗೆ ಸಂವಿಧಾನ ಬೇಡ, ಮನುಸ್ಮೃತಿ ಬೇಕು ಎಂದು 150 ಬಾರಿ ಪ್ರತಿಭಟನೆ ನಡೆಸಿದ್ದವು. ಆರೆಸ್ಸೆಸ್‌ನ ಮುಖವಾಣಿ 'ಆರ್ಗನೈಸರ್' ಪತ್ರಿಕೆಯಲ್ಲಿ ರಾಷ್ಟ್ರಧ್ವಜ ಮತ್ತು ಸಂವಿಧಾನವನ್ನು ಒಪ್ಪುವುದಿಲ್ಲ ಎಂಬ ನಿಲುವು ವ್ಯಕ್ತಪಡಿಸಲಾಗಿತ್ತು.
ಕೋಮು ದ್ವೇಷ ಬಿತ್ತುವವರೇ ನಿಜವಾದ ದೇಶದ್ರೋಹಿಗಳು
ಸಮಾಜದಲ್ಲಿ ಧರ್ಮ ಮತ್ತು ಜಾತಿಗಳ ನಡುವೆ ದ್ವೇಷದ ವಿಷಬೀಜ ಬಿತ್ತುವವರೇ ನಿಜವಾದ ದೇಶದ್ರೋಹಿಗಳು. ಸಂವಿಧಾನವೇ ಸ್ವತಂತ್ರ ಭಾರತದ ಶ್ರೇಷ್ಠ ಶಕ್ತಿ. ಇದರಲ್ಲಿ ಯಾರಿಗೂ ಜಗ್ಗುವುದಿಲ್ಲ, ಬಗ್ಗುವುದೂ ಇಲ್ಲ. ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ನನ್ನ ಹೋರಾಟ ನಿರಂತರವಾಗಿರಲಿದೆ ಎಂದು ಗೃಹ, ಐಟಿಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಆರೆಸ್ಸೆಸ್‌ನವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರೇ? ಕ್ವಿಟ್ ಇಂಡಿಯಾ ಚಳವಳಿ ಅಥವಾ ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಂಡಿದ್ದರೇ? ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡಿದ ವ್ಯಕ್ತಿಯ ಪುತ್ಥಳಿಗೆ ಪೂಜೆ ಸಲ್ಲಿಸಿ, ಆತನನ್ನು ದೇಶಪ್ರೇಮಿ ಎಂದು ಕರೆಯುತ್ತಾರೆ. ಹಾಗಾದರೆ ಗಾಂಧೀಜಿ ದೇಶದ್ರೋಹಿಯೇ ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದರು.

ಸ್ವತಂತ್ರ ಭಾರತದಲ್ಲಿ ಸಂವಿಧಾನವೇ ಅತ್ಯುನ್ನತವಾಗಿದೆ. ಸಮಾಜದಲ್ಲಿ ವಿಷಬೀಜ ಬಿತ್ತಿ, ಧರ್ಮ ಮತ್ತು ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸುವವರೇ ನಿಜವಾದ ದೇಶದ್ರೋಹಿಗಳು ಎಂಬ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಇಂದು ದೇಶದಲ್ಲಿ ಯಾರು ಸಮಾಜದಲ್ಲಿ ದ್ವೇಷ ಬಿತ್ತುತ್ತಿದ್ದಾರೆ ಎಂಬುದನ್ನು ಜನರು ಮನಗಾಣಬೇಕು ಎಂದರು.

ಭಗವಾನ್ ಗೌತಮ ಬುದ್ಧರ ಕಾಲದಿಂದ 2,500 ವರ್ಷಗಳು, ಬಸವಣ್ಣನವರ ಕಾಲದಿಂದ ಸುಮಾರು 900 ವರ್ಷಗಳು ಹಾಗೂ ಸಂವಿಧಾನ ಜಾರಿಗೆ ಬಂದು 75 ವರ್ಷಗಳು ಕಳೆದಿವೆ. ಆದರೂ ಸಮಾಜದಲ್ಲಿ ಸಮಾನತೆ ಮತ್ತು ಸಾಮಾಜಿಕ ಬದಲಾವಣೆಯ ಕುರಿತು ಮಾತನಾಡುವ ಪರಿಸ್ಥಿತಿ ಮುಂದುವರಿದಿದೆ. ಸಮಾನತೆ ಮತ್ತು ಸ್ವಾಭಿಮಾನದ ಸಮಾಜ ನಿರ್ಮಾಣವಾಗಬೇಕಾದರೆ ಮಹನೀಯರ ಪ್ರತಿಮೆಗಳನ್ನು ಸ್ಥಾಪಿಸುವುದಷ್ಟೇ ಸಾಲದು, ಅವರ ತತ್ವ, ಆದರ್ಶ ಮತ್ತು ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ನಾನು ಹಾರ, ಶಾಲು, ತುರಾಯಿ ಸ್ವೀಕರಿಸುವುದಿಲ್ಲ
ನಾನು ಹಾರ, ಶಾಲು, ತುರಾಯಿ ಸ್ವೀಕರಿಸುವುದಿಲ್ಲ. ಅದರ ಬದಲಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವಂತೆ ಮನವಿ ಮಾಡುತ್ತೇನೆ. ಅವುಗಳನ್ನು ಸಂಗ್ರಹಿಸಿ ಅರಿವು ಕೇಂದ್ರಗಳಿಗೆ ನೀಡಲಾಗುತ್ತದೆ. ವ್ಯಕ್ತಿಪೂಜೆ ಬಿಟ್ಟು ಪುಸ್ತಕ ಓದುವ, ವೈಜ್ಞಾನಿಕ ಮತ್ತು ಸಾಮಾಜಿಕ ಚಿಂತನೆ ಬೆಳೆಸುವ ಸಂಸ್ಕೃತಿ ಬೆಳೆಸಬೇಕು ಎಂದು ಹೇಳಿದರು.

ಜೆಸಿಬಿ ಮೂಲಕ ಹಾರ ಹಾಕುವುದು, ಎಲ್ಲೆಡೆ ದೊಡ್ಡ ದೊಡ್ಡ ಪೋಸ್ಟರ್‌ಗಳನ್ನು ಹಾಕುವುದು ಮುಖ್ಯವಲ್ಲ. ಮಹನೀಯರ ವಿಚಾರಗಳನ್ನು ಅರಿತುಕೊಂಡು ಅವರ ಆದರ್ಶಗಳನ್ನು ಪಾಲಿಸುವುದು ಮುಖ್ಯ. ಶಿಕ್ಷಣ ಪಡೆದವರು ಪ್ರಶ್ನಿಸಬೇಕು, ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಬಿಜೆಪಿಯವರಿಗೆ ನನ್ನ ಸೂಟು, ಬೂಟು ಸಮಸ್ಯೆಯಲ್ಲ; ಅವರಿಗೆ ನನ್ನ ಘರ್ಜನೆಯೇ ದೊಡ್ಡ ಸಮಸ್ಯೆಯಾಗಿದೆ ಎಂದು ವ್ಯಂಗ್ಯವಾಡಿದರು.

ವಿಶ್ವದ ನಾಲ್ಕನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕೇಂದ್ರವನ್ನು ದಲಿತ ವ್ಯಕ್ತಿಯೊಬ್ಬರು ಮುನ್ನಡೆಸುತ್ತಿದ್ದಾರೆ ಎಂಬುದನ್ನು ಕೆಲವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಲಿತರು ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಬಾರದೇ? ಜನಪ್ರತಿನಿಧಿಗಳಾಗಬಾರದೇ? ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಸತ್ತಿನ ನೂತನ ಕಟ್ಟಡದ ಉದ್ಘಾಟನೆಗೆ ಆಹ್ವಾನಿಸದಿರುವುದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಸ್ವಚ್ಛಗೊಳಿಸುವಂತಹ ಘಟನೆಗಳು ಯಾವ ಮನಸ್ಥಿತಿಯನ್ನು ತೋರಿಸುತ್ತವೆ ಎಂದು ಪ್ರಶ್ನಿಸಿದರು.
ಮಹಿಳೆಯರಿಗೆ ಆಸ್ತಿ ಹಕ್ಕು
ಡಾ.ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ. ಸ್ವತಂತ್ರ ಭಾರತದ ಸಚಿವ ಸಂಪುಟದಲ್ಲಿ ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರದ ಆಳವಾದ ಜ್ಞಾನ ಹೊಂದಿದ್ದ ಏಕೈಕ ವ್ಯಕ್ತಿ ಅಂಬೇಡ್ಕರ್ ಒಬ್ಬರಾಗಿದ್ದರು. ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವರ 'ದಿ ಪ್ರಾಬ್ಲಂ ಆಫ್ ದಿ ರೂಪೀ' ಕೃತಿ ಸೇರಿದಂತೆ ಅವರ ಆರ್ಥಿಕ ಚಿಂತನೆಗಳು ಮಹತ್ವದ ಕೊಡುಗೆ ನೀಡಿವೆ. ಕಾರ್ಮಿಕ ಕಾನೂನುಗಳು, ಕನಿಷ್ಠ ವೇತನ, ಭವಿಷ್ಯ ನಿಧಿ ಸೇರಿದಂತೆ ಅನೇಕ ಕಾರ್ಮಿಕ ಹಿತದ ಕಾಯ್ದೆಗಳ ರೂಪಿಸುವಿಕೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಮಹಿಳೆಯರಿಗೆ ಆಸ್ತಿ ಹಕ್ಕು ಹಾಗೂ ಸಮಾನ ಅವಕಾಶಗಳ ವಿಚಾರದಲ್ಲಿಯೂ ಅವರ ಕೊಡುಗೆ ಸ್ಮರಣೀಯವಾಗಿದೆ ಎಂದರು.

ಸಂವಿಧಾನ ಸಿದ್ಧವಾಗಿದ್ದು ಸುಲಭವಾಗಿ ಅಲ್ಲ. ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ಅವರು ವಿವಿಧ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, 2 ವರ್ಷ, 11 ತಿಂಗಳು, 18 ದಿನಗಳ ಪರಿಶ್ರಮದ ಬಳಿಕ ಸಂವಿಧಾನ ಜಾರಿಗೆ ಬಂತು. ಸ್ವಾತಂತ್ರ್ಯ ಪೂರ್ವದಲ್ಲಿ ಎಲ್ಲರಿಗೂ ಸಮಾನ ಮತದಾನದ ಹಕ್ಕು ಇರಲಿಲ್ಲ. ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ಸೇರಿದಂತೆ ಸಮಾನ ಹಕ್ಕುಗಳನ್ನು ನೀಡಿದೆ ಎಂದು ವಿವರಿಸಿದರು.

ಯುವಕರು ವಾಟ್ಸ್‌ಆ್ಯಪ್ ವಿಶ್ವವಿದ್ಯಾಲಯದ ಮಾಹಿತಿಯನ್ನೇ ನಂಬಿ ಚರ್ಚೆ ಮಾಡಬಾರದು. ಪುಸ್ತಕಗಳನ್ನು ಓದಿ, ಇತಿಹಾಸ ಮತ್ತು ಅಂಕಿ-ಅಂಶಗಳನ್ನು ಅಧ್ಯಯನ ಮಾಡಿ ಮಾತನಾಡಬೇಕು. "ಕೆಲವರು ಚಲುವಾದಿಗಳಾಗಿ ಬೆಳೆದು ಮನುವಾದಿಗಳಾಗುತ್ತಿರುವುದು ಆತಂಕಕಾರಿ ಸಂಗತಿ. ಯಾವುದೇ ವಿಚಾರದ ಬಗ್ಗೆ ಆಳವಾದ ಅಧ್ಯಯನ ನಡೆಸಿ ಮಾತನಾಡಿದರೆ ಅದಕ್ಕೆ ಉತ್ತರ ನೀಡಲು ನಾವು ಸಿದ್ಧರಿದ್ದೇವೆ ಎಂದರು.
ಇತಿಹಾಸದ ವಿಚಾರದಲ್ಲಿ ದಾಖಲೆ ಮತ್ತು ಅಧ್ಯಯನ ಮುಖ್ಯ
ಸದನದಲ್ಲಿ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿದೆ ಎಂದು ಬಿಜೆಪಿಗರು ಹೇಳಿದ್ದರು. ಇದರ ತಿರುಗೇಟಿಗಾಗಿ ಅಂಬೇಡ್ಕರ್ ಅವರು ತಮ್ಮ ಸೋಲಿಗೆ ಆರೆಸ್ಸೆಸ್‌ನ ವೀರ ಸಾವರ್ಕರ್ ಕಾರಣ ಎಂದು ಹೇಳಿದ್ದರೆಂಬ ವಿಚಾರವನ್ನು ದಾಖಲೆ ಸಮೇತ ಸದನದಲ್ಲಿ ಪ್ರಸ್ತಾಪಿಸಿದ್ದೇನೆ. ಅದನ್ನು ಸುಳ್ಳು ಎಂದು ಹೇಳಿದವರಿಗೆ ರಾಷ್ಟ್ರೀಯ ದಾಖಲೆ ಸಂಗ್ರಹಾಗಾರದಲ್ಲಿರುವ ಪತ್ರದ ಕುರಿತು ತಿಳಿಸಿದ್ದೇನೆ. ಅದನ್ನ ಸ್ವತಃ ಮೋದಿಯವರೇ ಡಿಜಿಟಲೀಕರಣ ಮಾಡಿದ್ದಾರೆ. ಇತಿಹಾಸದ ವಿಚಾರಗಳನ್ನು ಮಾತನಾಡುವಾಗ ದಾಖಲೆ ಮತ್ತು ಅಧ್ಯಯನ ಮುಖ್ಯ ಎಂದು ಹೇಳಿದರು.

ಬಿಜೆಪಿ ನಾಯಕ ಸುನೀಲ್ ಕುಮಾರ್ ಅವರು 'ಕಾನ್ವೆಂಟ್ ದಲಿತ' ಎಂಬ ರೀತಿಯಲ್ಲಿ ಟೀಕೆ ಮಾಡುತ್ತಾರೆ. ಮತ್ತೊಬ್ಬರು ತಮ್ಮ ತಂದೆ ಒಂದು ಲೋಟ ಹಾಲು ಹೆಚ್ಚಾಗಿ ನೀಡಿದ್ದಾರೆ ಎಂದು ಹೇಳುತ್ತಾರೆ. ನಮ್ಮ ತಂದೆ ನಮಗೆ ಹೆಚ್ಚು ಹಾಲು ನೀಡಿದ್ದರೆ ಇವರಿಗೇಕೆ ಇಷ್ಟೊಂದು ಅಸಮಾಧಾನ ಎಂದು ಪ್ರಶ್ನಿಸಿದರು.

ಕೇಂದ್ರ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಅವರ ಹೆಸರನ್ನು ಉಲ್ಲೇಖಿಸಿದ ರೀತಿಯೂ ಅವಮಾನಕರವಾಗಿತ್ತು. ಇಂತಹ ಮನುವಾದಿ ಮನಸ್ಥಿತಿಗಳು ದೇಶವನ್ನು ಆಳಲು ಮುಂದಾಗಿರುವಾಗ ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಧ್ವನಿ ಎತ್ತುವುದು ಅಗತ್ಯ. ನಾನು ಯಾರಿಗೂ ಹೆದರುವುದಿಲ್ಲ. ಜನರ ಆಶೀರ್ವಾದ ಇರುವವರೆಗೆ ಇಂತಹ ಎಷ್ಟೇ ಸವಾಲುಗಳು ಎದುರಾದರೂ ಒಂದು ಹೆಜ್ಜೆಯೂ ಹಿಂದೆ ಇಡುವುದಿಲ್ಲ ಎಂದು ಹೇಳಿದರು.

⬇ DOWNLOAD
×

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಶುಕ್ರವಾರ 2023-24ನೇ ಸಾಲಿನ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಅಂದಾಜು ₹31 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, 1949ರಲ್ಲಿ ಮನುವಾದಿ ಸಂಘಟನೆಗಳು ನಮಗೆ ಸಂವಿಧಾನ ಬೇಡ, ಮನುಸ್ಮೃತಿ ಬೇಕು ಎಂದು 150 ಬಾರಿ ಪ್ರತಿಭಟನೆ ನಡೆಸಿದ್ದವು. ಆರೆಸ್ಸೆಸ್‌ನ ಮುಖವಾಣಿ ‘ಆರ್ಗನೈಸರ್’ ಪತ್ರಿಕೆಯಲ್ಲಿ ರಾಷ್ಟ್ರಧ್ವಜ ಮತ್ತು ಸಂವಿಧಾನವನ್ನು ಒಪ್ಪುವುದಿಲ್ಲ ಎಂಬ ನಿಲುವು ವ್ಯಕ್ತಪಡಿಸಲಾಗಿತ್ತು.

ಕೋಮು ದ್ವೇಷ ಬಿತ್ತುವವರೇ ನಿಜವಾದ ದೇಶದ್ರೋಹಿಗಳು

ಸಮಾಜದಲ್ಲಿ ಧರ್ಮ ಮತ್ತು ಜಾತಿಗಳ ನಡುವೆ ದ್ವೇಷದ ವಿಷಬೀಜ ಬಿತ್ತುವವರೇ ನಿಜವಾದ ದೇಶದ್ರೋಹಿಗಳು. ಸಂವಿಧಾನವೇ ಸ್ವತಂತ್ರ ಭಾರತದ ಶ್ರೇಷ್ಠ ಶಕ್ತಿ. ಇದರಲ್ಲಿ ಯಾರಿಗೂ ಜಗ್ಗುವುದಿಲ್ಲ, ಬಗ್ಗುವುದೂ ಇಲ್ಲ. ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ನನ್ನ ಹೋರಾಟ ನಿರಂತರವಾಗಿರಲಿದೆ ಎಂದು ಗೃಹ, ಐಟಿಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಆರೆಸ್ಸೆಸ್‌ನವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರೇ? ಕ್ವಿಟ್ ಇಂಡಿಯಾ ಚಳವಳಿ ಅಥವಾ ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಂಡಿದ್ದರೇ? ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡಿದ ವ್ಯಕ್ತಿಯ ಪುತ್ಥಳಿಗೆ ಪೂಜೆ ಸಲ್ಲಿಸಿ, ಆತನನ್ನು ದೇಶಪ್ರೇಮಿ ಎಂದು ಕರೆಯುತ್ತಾರೆ. ಹಾಗಾದರೆ ಗಾಂಧೀಜಿ ದೇಶದ್ರೋಹಿಯೇ ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದರು.

ಸ್ವತಂತ್ರ ಭಾರತದಲ್ಲಿ ಸಂವಿಧಾನವೇ ಅತ್ಯುನ್ನತವಾಗಿದೆ. ಸಮಾಜದಲ್ಲಿ ವಿಷಬೀಜ ಬಿತ್ತಿ, ಧರ್ಮ ಮತ್ತು ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸುವವರೇ ನಿಜವಾದ ದೇಶದ್ರೋಹಿಗಳು ಎಂಬ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಇಂದು ದೇಶದಲ್ಲಿ ಯಾರು ಸಮಾಜದಲ್ಲಿ ದ್ವೇಷ ಬಿತ್ತುತ್ತಿದ್ದಾರೆ ಎಂಬುದನ್ನು ಜನರು ಮನಗಾಣಬೇಕು ಎಂದರು.

ಭಗವಾನ್ ಗೌತಮ ಬುದ್ಧರ ಕಾಲದಿಂದ 2,500 ವರ್ಷಗಳು, ಬಸವಣ್ಣನವರ ಕಾಲದಿಂದ ಸುಮಾರು 900 ವರ್ಷಗಳು ಹಾಗೂ ಸಂವಿಧಾನ ಜಾರಿಗೆ ಬಂದು 75 ವರ್ಷಗಳು ಕಳೆದಿವೆ. ಆದರೂ ಸಮಾಜದಲ್ಲಿ ಸಮಾನತೆ ಮತ್ತು ಸಾಮಾಜಿಕ ಬದಲಾವಣೆಯ ಕುರಿತು ಮಾತನಾಡುವ ಪರಿಸ್ಥಿತಿ ಮುಂದುವರಿದಿದೆ. ಸಮಾನತೆ ಮತ್ತು ಸ್ವಾಭಿಮಾನದ ಸಮಾಜ ನಿರ್ಮಾಣವಾಗಬೇಕಾದರೆ ಮಹನೀಯರ ಪ್ರತಿಮೆಗಳನ್ನು ಸ್ಥಾಪಿಸುವುದಷ್ಟೇ ಸಾಲದು, ಅವರ ತತ್ವ, ಆದರ್ಶ ಮತ್ತು ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ನಾನು ಹಾರ, ಶಾಲು, ತುರಾಯಿ ಸ್ವೀಕರಿಸುವುದಿಲ್ಲ

ನಾನು ಹಾರ, ಶಾಲು, ತುರಾಯಿ ಸ್ವೀಕರಿಸುವುದಿಲ್ಲ. ಅದರ ಬದಲಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವಂತೆ ಮನವಿ ಮಾಡುತ್ತೇನೆ. ಅವುಗಳನ್ನು ಸಂಗ್ರಹಿಸಿ ಅರಿವು ಕೇಂದ್ರಗಳಿಗೆ ನೀಡಲಾಗುತ್ತದೆ. ವ್ಯಕ್ತಿಪೂಜೆ ಬಿಟ್ಟು ಪುಸ್ತಕ ಓದುವ, ವೈಜ್ಞಾನಿಕ ಮತ್ತು ಸಾಮಾಜಿಕ ಚಿಂತನೆ ಬೆಳೆಸುವ ಸಂಸ್ಕೃತಿ ಬೆಳೆಸಬೇಕು ಎಂದು ಹೇಳಿದರು.

ಜೆಸಿಬಿ ಮೂಲಕ ಹಾರ ಹಾಕುವುದು, ಎಲ್ಲೆಡೆ ದೊಡ್ಡ ದೊಡ್ಡ ಪೋಸ್ಟರ್‌ಗಳನ್ನು ಹಾಕುವುದು ಮುಖ್ಯವಲ್ಲ. ಮಹನೀಯರ ವಿಚಾರಗಳನ್ನು ಅರಿತುಕೊಂಡು ಅವರ ಆದರ್ಶಗಳನ್ನು ಪಾಲಿಸುವುದು ಮುಖ್ಯ. ಶಿಕ್ಷಣ ಪಡೆದವರು ಪ್ರಶ್ನಿಸಬೇಕು, ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಬಿಜೆಪಿಯವರಿಗೆ ನನ್ನ ಸೂಟು, ಬೂಟು ಸಮಸ್ಯೆಯಲ್ಲ; ಅವರಿಗೆ ನನ್ನ ಘರ್ಜನೆಯೇ ದೊಡ್ಡ ಸಮಸ್ಯೆಯಾಗಿದೆ ಎಂದು ವ್ಯಂಗ್ಯವಾಡಿದರು.

ವಿಶ್ವದ ನಾಲ್ಕನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕೇಂದ್ರವನ್ನು ದಲಿತ ವ್ಯಕ್ತಿಯೊಬ್ಬರು ಮುನ್ನಡೆಸುತ್ತಿದ್ದಾರೆ ಎಂಬುದನ್ನು ಕೆಲವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಲಿತರು ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಬಾರದೇ? ಜನಪ್ರತಿನಿಧಿಗಳಾಗಬಾರದೇ? ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಸತ್ತಿನ ನೂತನ ಕಟ್ಟಡದ ಉದ್ಘಾಟನೆಗೆ ಆಹ್ವಾನಿಸದಿರುವುದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಸ್ವಚ್ಛಗೊಳಿಸುವಂತಹ ಘಟನೆಗಳು ಯಾವ ಮನಸ್ಥಿತಿಯನ್ನು ತೋರಿಸುತ್ತವೆ ಎಂದು ಪ್ರಶ್ನಿಸಿದರು.

ಮಹಿಳೆಯರಿಗೆ ಆಸ್ತಿ ಹಕ್ಕು

ಡಾ.ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ. ಸ್ವತಂತ್ರ ಭಾರತದ ಸಚಿವ ಸಂಪುಟದಲ್ಲಿ ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರದ ಆಳವಾದ ಜ್ಞಾನ ಹೊಂದಿದ್ದ ಏಕೈಕ ವ್ಯಕ್ತಿ ಅಂಬೇಡ್ಕರ್ ಒಬ್ಬರಾಗಿದ್ದರು. ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವರ ‘ದಿ ಪ್ರಾಬ್ಲಂ ಆಫ್ ದಿ ರೂಪೀ’ ಕೃತಿ ಸೇರಿದಂತೆ ಅವರ ಆರ್ಥಿಕ ಚಿಂತನೆಗಳು ಮಹತ್ವದ ಕೊಡುಗೆ ನೀಡಿವೆ. ಕಾರ್ಮಿಕ ಕಾನೂನುಗಳು, ಕನಿಷ್ಠ ವೇತನ, ಭವಿಷ್ಯ ನಿಧಿ ಸೇರಿದಂತೆ ಅನೇಕ ಕಾರ್ಮಿಕ ಹಿತದ ಕಾಯ್ದೆಗಳ ರೂಪಿಸುವಿಕೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಮಹಿಳೆಯರಿಗೆ ಆಸ್ತಿ ಹಕ್ಕು ಹಾಗೂ ಸಮಾನ ಅವಕಾಶಗಳ ವಿಚಾರದಲ್ಲಿಯೂ ಅವರ ಕೊಡುಗೆ ಸ್ಮರಣೀಯವಾಗಿದೆ ಎಂದರು.

ಸಂವಿಧಾನ ಸಿದ್ಧವಾಗಿದ್ದು ಸುಲಭವಾಗಿ ಅಲ್ಲ. ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ಅವರು ವಿವಿಧ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, 2 ವರ್ಷ, 11 ತಿಂಗಳು, 18 ದಿನಗಳ ಪರಿಶ್ರಮದ ಬಳಿಕ ಸಂವಿಧಾನ ಜಾರಿಗೆ ಬಂತು. ಸ್ವಾತಂತ್ರ್ಯ ಪೂರ್ವದಲ್ಲಿ ಎಲ್ಲರಿಗೂ ಸಮಾನ ಮತದಾನದ ಹಕ್ಕು ಇರಲಿಲ್ಲ. ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ಸೇರಿದಂತೆ ಸಮಾನ ಹಕ್ಕುಗಳನ್ನು ನೀಡಿದೆ ಎಂದು ವಿವರಿಸಿದರು.

ಯುವಕರು ವಾಟ್ಸ್‌ಆ್ಯಪ್ ವಿಶ್ವವಿದ್ಯಾಲಯದ ಮಾಹಿತಿಯನ್ನೇ ನಂಬಿ ಚರ್ಚೆ ಮಾಡಬಾರದು. ಪುಸ್ತಕಗಳನ್ನು ಓದಿ, ಇತಿಹಾಸ ಮತ್ತು ಅಂಕಿ-ಅಂಶಗಳನ್ನು ಅಧ್ಯಯನ ಮಾಡಿ ಮಾತನಾಡಬೇಕು. “ಕೆಲವರು ಚಲುವಾದಿಗಳಾಗಿ ಬೆಳೆದು ಮನುವಾದಿಗಳಾಗುತ್ತಿರುವುದು ಆತಂಕಕಾರಿ ಸಂಗತಿ. ಯಾವುದೇ ವಿಚಾರದ ಬಗ್ಗೆ ಆಳವಾದ ಅಧ್ಯಯನ ನಡೆಸಿ ಮಾತನಾಡಿದರೆ ಅದಕ್ಕೆ ಉತ್ತರ ನೀಡಲು ನಾವು ಸಿದ್ಧರಿದ್ದೇವೆ ಎಂದರು.

ಇತಿಹಾಸದ ವಿಚಾರದಲ್ಲಿ ದಾಖಲೆ ಮತ್ತು ಅಧ್ಯಯನ ಮುಖ್ಯ

ಸದನದಲ್ಲಿ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿದೆ ಎಂದು ಬಿಜೆಪಿಗರು ಹೇಳಿದ್ದರು. ಇದರ ತಿರುಗೇಟಿಗಾಗಿ ಅಂಬೇಡ್ಕರ್ ಅವರು ತಮ್ಮ ಸೋಲಿಗೆ ಆರೆಸ್ಸೆಸ್‌ನ ವೀರ ಸಾವರ್ಕರ್ ಕಾರಣ ಎಂದು ಹೇಳಿದ್ದರೆಂಬ ವಿಚಾರವನ್ನು ದಾಖಲೆ ಸಮೇತ ಸದನದಲ್ಲಿ ಪ್ರಸ್ತಾಪಿಸಿದ್ದೇನೆ. ಅದನ್ನು ಸುಳ್ಳು ಎಂದು ಹೇಳಿದವರಿಗೆ ರಾಷ್ಟ್ರೀಯ ದಾಖಲೆ ಸಂಗ್ರಹಾಗಾರದಲ್ಲಿರುವ ಪತ್ರದ ಕುರಿತು ತಿಳಿಸಿದ್ದೇನೆ. ಅದನ್ನ ಸ್ವತಃ ಮೋದಿಯವರೇ ಡಿಜಿಟಲೀಕರಣ ಮಾಡಿದ್ದಾರೆ. ಇತಿಹಾಸದ ವಿಚಾರಗಳನ್ನು ಮಾತನಾಡುವಾಗ ದಾಖಲೆ ಮತ್ತು ಅಧ್ಯಯನ ಮುಖ್ಯ ಎಂದು ಹೇಳಿದರು.

ಬಿಜೆಪಿ ನಾಯಕ ಸುನೀಲ್ ಕುಮಾರ್ ಅವರು ‘ಕಾನ್ವೆಂಟ್ ದಲಿತ’ ಎಂಬ ರೀತಿಯಲ್ಲಿ ಟೀಕೆ ಮಾಡುತ್ತಾರೆ. ಮತ್ತೊಬ್ಬರು ತಮ್ಮ ತಂದೆ ಒಂದು ಲೋಟ ಹಾಲು ಹೆಚ್ಚಾಗಿ ನೀಡಿದ್ದಾರೆ ಎಂದು ಹೇಳುತ್ತಾರೆ. ನಮ್ಮ ತಂದೆ ನಮಗೆ ಹೆಚ್ಚು ಹಾಲು ನೀಡಿದ್ದರೆ ಇವರಿಗೇಕೆ ಇಷ್ಟೊಂದು ಅಸಮಾಧಾನ ಎಂದು ಪ್ರಶ್ನಿಸಿದರು.

ಕೇಂದ್ರ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಅವರ ಹೆಸರನ್ನು ಉಲ್ಲೇಖಿಸಿದ ರೀತಿಯೂ ಅವಮಾನಕರವಾಗಿತ್ತು. ಇಂತಹ ಮನುವಾದಿ ಮನಸ್ಥಿತಿಗಳು ದೇಶವನ್ನು ಆಳಲು ಮುಂದಾಗಿರುವಾಗ ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಧ್ವನಿ ಎತ್ತುವುದು ಅಗತ್ಯ. ನಾನು ಯಾರಿಗೂ ಹೆದರುವುದಿಲ್ಲ. ಜನರ ಆಶೀರ್ವಾದ ಇರುವವರೆಗೆ ಇಂತಹ ಎಷ್ಟೇ ಸವಾಲುಗಳು ಎದುರಾದರೂ ಒಂದು ಹೆಜ್ಜೆಯೂ ಹಿಂದೆ ಇಡುವುದಿಲ್ಲ ಎಂದು ಹೇಳಿದರು.

Editor Reporter
mirrortvkannada.com

RSSಗೂ ನೋಂದಣಿ ಕಡ್ಡಾಯ ಮಾಡಿಸುತ್ತೇನೆ! ಮುಂದಿನ ಟಾರ್ಗೆಟ್‌ ಸಂಘ ಪರಿವಾರ ಎಂದ ಪ್ರಿಯಾಂಕ್‌ ಖರ್ಗೆ..

ಆರೆಸ್ಸೆಸ್ ಇನ್ನೂ ನೋಂದಾಯಿತ ಸಂಘಟನೆಯಾಗಿಲ್ಲ. ದಲಿತ ಸಂಘಟನೆಗಳಾದ ಡಿ.ಎಸ್‌.ಎಸ್‌.ಗಳಿಗೆ ನೋಂದಣಿ ಇರುವಾಗ ಆರೆಸ್ಸೆಸ್‌ಗೂ ಮುಂದಿನ ದಿನಗಳಲ್ಲಿ ನೋಂದಣಿ ಮಾಡಿಸಲಿದ್ದೇನೆ ಎಂದು ಗೃಹ, ಐಟಿಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಶುಕ್ರವಾರ 2023-24ನೇ ಸಾಲಿನ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಅಂದಾಜು ₹31 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, 1949ರಲ್ಲಿ ಮನುವಾದಿ ಸಂಘಟನೆಗಳು ನಮಗೆ ಸಂವಿಧಾನ ಬೇಡ, ಮನುಸ್ಮೃತಿ ಬೇಕು ಎಂದು 150 ಬಾರಿ ಪ್ರತಿಭಟನೆ ನಡೆಸಿದ್ದವು. ಆರೆಸ್ಸೆಸ್‌ನ ಮುಖವಾಣಿ 'ಆರ್ಗನೈಸರ್' ಪತ್ರಿಕೆಯಲ್ಲಿ ರಾಷ್ಟ್ರಧ್ವಜ ಮತ್ತು ಸಂವಿಧಾನವನ್ನು ಒಪ್ಪುವುದಿಲ್ಲ ಎಂಬ ನಿಲುವು ವ್ಯಕ್ತಪಡಿಸಲಾಗಿತ್ತು.
ಕೋಮು ದ್ವೇಷ ಬಿತ್ತುವವರೇ ನಿಜವಾದ ದೇಶದ್ರೋಹಿಗಳು
ಸಮಾಜದಲ್ಲಿ ಧರ್ಮ ಮತ್ತು ಜಾತಿಗಳ ನಡುವೆ ದ್ವೇಷದ ವಿಷಬೀಜ ಬಿತ್ತುವವರೇ ನಿಜವಾದ ದೇಶದ್ರೋಹಿಗಳು. ಸಂವಿಧಾನವೇ ಸ್ವತಂತ್ರ ಭಾರತದ ಶ್ರೇಷ್ಠ ಶಕ್ತಿ. ಇದರಲ್ಲಿ ಯಾರಿಗೂ ಜಗ್ಗುವುದಿಲ್ಲ, ಬಗ್ಗುವುದೂ ಇಲ್ಲ. ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ನನ್ನ ಹೋರಾಟ ನಿರಂತರವಾಗಿರಲಿದೆ ಎಂದು ಗೃಹ, ಐಟಿಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಆರೆಸ್ಸೆಸ್‌ನವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರೇ? ಕ್ವಿಟ್ ಇಂಡಿಯಾ ಚಳವಳಿ ಅಥವಾ ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಂಡಿದ್ದರೇ? ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡಿದ ವ್ಯಕ್ತಿಯ ಪುತ್ಥಳಿಗೆ ಪೂಜೆ ಸಲ್ಲಿಸಿ, ಆತನನ್ನು ದೇಶಪ್ರೇಮಿ ಎಂದು ಕರೆಯುತ್ತಾರೆ. ಹಾಗಾದರೆ ಗಾಂಧೀಜಿ ದೇಶದ್ರೋಹಿಯೇ ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದರು.

ಸ್ವತಂತ್ರ ಭಾರತದಲ್ಲಿ ಸಂವಿಧಾನವೇ ಅತ್ಯುನ್ನತವಾಗಿದೆ. ಸಮಾಜದಲ್ಲಿ ವಿಷಬೀಜ ಬಿತ್ತಿ, ಧರ್ಮ ಮತ್ತು ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸುವವರೇ ನಿಜವಾದ ದೇಶದ್ರೋಹಿಗಳು ಎಂಬ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಇಂದು ದೇಶದಲ್ಲಿ ಯಾರು ಸಮಾಜದಲ್ಲಿ ದ್ವೇಷ ಬಿತ್ತುತ್ತಿದ್ದಾರೆ ಎಂಬುದನ್ನು ಜನರು ಮನಗಾಣಬೇಕು ಎಂದರು.

ಭಗವಾನ್ ಗೌತಮ ಬುದ್ಧರ ಕಾಲದಿಂದ 2,500 ವರ್ಷಗಳು, ಬಸವಣ್ಣನವರ ಕಾಲದಿಂದ ಸುಮಾರು 900 ವರ್ಷಗಳು ಹಾಗೂ ಸಂವಿಧಾನ ಜಾರಿಗೆ ಬಂದು 75 ವರ್ಷಗಳು ಕಳೆದಿವೆ. ಆದರೂ ಸಮಾಜದಲ್ಲಿ ಸಮಾನತೆ ಮತ್ತು ಸಾಮಾಜಿಕ ಬದಲಾವಣೆಯ ಕುರಿತು ಮಾತನಾಡುವ ಪರಿಸ್ಥಿತಿ ಮುಂದುವರಿದಿದೆ. ಸಮಾನತೆ ಮತ್ತು ಸ್ವಾಭಿಮಾನದ ಸಮಾಜ ನಿರ್ಮಾಣವಾಗಬೇಕಾದರೆ ಮಹನೀಯರ ಪ್ರತಿಮೆಗಳನ್ನು ಸ್ಥಾಪಿಸುವುದಷ್ಟೇ ಸಾಲದು, ಅವರ ತತ್ವ, ಆದರ್ಶ ಮತ್ತು ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ನಾನು ಹಾರ, ಶಾಲು, ತುರಾಯಿ ಸ್ವೀಕರಿಸುವುದಿಲ್ಲ
ನಾನು ಹಾರ, ಶಾಲು, ತುರಾಯಿ ಸ್ವೀಕರಿಸುವುದಿಲ್ಲ. ಅದರ ಬದಲಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವಂತೆ ಮನವಿ ಮಾಡುತ್ತೇನೆ. ಅವುಗಳನ್ನು ಸಂಗ್ರಹಿಸಿ ಅರಿವು ಕೇಂದ್ರಗಳಿಗೆ ನೀಡಲಾಗುತ್ತದೆ. ವ್ಯಕ್ತಿಪೂಜೆ ಬಿಟ್ಟು ಪುಸ್ತಕ ಓದುವ, ವೈಜ್ಞಾನಿಕ ಮತ್ತು ಸಾಮಾಜಿಕ ಚಿಂತನೆ ಬೆಳೆಸುವ ಸಂಸ್ಕೃತಿ ಬೆಳೆಸಬೇಕು ಎಂದು ಹೇಳಿದರು.

ಜೆಸಿಬಿ ಮೂಲಕ ಹಾರ ಹಾಕುವುದು, ಎಲ್ಲೆಡೆ ದೊಡ್ಡ ದೊಡ್ಡ ಪೋಸ್ಟರ್‌ಗಳನ್ನು ಹಾಕುವುದು ಮುಖ್ಯವಲ್ಲ. ಮಹನೀಯರ ವಿಚಾರಗಳನ್ನು ಅರಿತುಕೊಂಡು ಅವರ ಆದರ್ಶಗಳನ್ನು ಪಾಲಿಸುವುದು ಮುಖ್ಯ. ಶಿಕ್ಷಣ ಪಡೆದವರು ಪ್ರಶ್ನಿಸಬೇಕು, ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಬಿಜೆಪಿಯವರಿಗೆ ನನ್ನ ಸೂಟು, ಬೂಟು ಸಮಸ್ಯೆಯಲ್ಲ; ಅವರಿಗೆ ನನ್ನ ಘರ್ಜನೆಯೇ ದೊಡ್ಡ ಸಮಸ್ಯೆಯಾಗಿದೆ ಎಂದು ವ್ಯಂಗ್ಯವಾಡಿದರು.

ವಿಶ್ವದ ನಾಲ್ಕನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕೇಂದ್ರವನ್ನು ದಲಿತ ವ್ಯಕ್ತಿಯೊಬ್ಬರು ಮುನ್ನಡೆಸುತ್ತಿದ್ದಾರೆ ಎಂಬುದನ್ನು ಕೆಲವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಲಿತರು ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಬಾರದೇ? ಜನಪ್ರತಿನಿಧಿಗಳಾಗಬಾರದೇ? ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಸತ್ತಿನ ನೂತನ ಕಟ್ಟಡದ ಉದ್ಘಾಟನೆಗೆ ಆಹ್ವಾನಿಸದಿರುವುದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಸ್ವಚ್ಛಗೊಳಿಸುವಂತಹ ಘಟನೆಗಳು ಯಾವ ಮನಸ್ಥಿತಿಯನ್ನು ತೋರಿಸುತ್ತವೆ ಎಂದು ಪ್ರಶ್ನಿಸಿದರು.
ಮಹಿಳೆಯರಿಗೆ ಆಸ್ತಿ ಹಕ್ಕು
ಡಾ.ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ. ಸ್ವತಂತ್ರ ಭಾರತದ ಸಚಿವ ಸಂಪುಟದಲ್ಲಿ ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರದ ಆಳವಾದ ಜ್ಞಾನ ಹೊಂದಿದ್ದ ಏಕೈಕ ವ್ಯಕ್ತಿ ಅಂಬೇಡ್ಕರ್ ಒಬ್ಬರಾಗಿದ್ದರು. ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವರ 'ದಿ ಪ್ರಾಬ್ಲಂ ಆಫ್ ದಿ ರೂಪೀ' ಕೃತಿ ಸೇರಿದಂತೆ ಅವರ ಆರ್ಥಿಕ ಚಿಂತನೆಗಳು ಮಹತ್ವದ ಕೊಡುಗೆ ನೀಡಿವೆ. ಕಾರ್ಮಿಕ ಕಾನೂನುಗಳು, ಕನಿಷ್ಠ ವೇತನ, ಭವಿಷ್ಯ ನಿಧಿ ಸೇರಿದಂತೆ ಅನೇಕ ಕಾರ್ಮಿಕ ಹಿತದ ಕಾಯ್ದೆಗಳ ರೂಪಿಸುವಿಕೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಮಹಿಳೆಯರಿಗೆ ಆಸ್ತಿ ಹಕ್ಕು ಹಾಗೂ ಸಮಾನ ಅವಕಾಶಗಳ ವಿಚಾರದಲ್ಲಿಯೂ ಅವರ ಕೊಡುಗೆ ಸ್ಮರಣೀಯವಾಗಿದೆ ಎಂದರು.

ಸಂವಿಧಾನ ಸಿದ್ಧವಾಗಿದ್ದು ಸುಲಭವಾಗಿ ಅಲ್ಲ. ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ಅವರು ವಿವಿಧ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, 2 ವರ್ಷ, 11 ತಿಂಗಳು, 18 ದಿನಗಳ ಪರಿಶ್ರಮದ ಬಳಿಕ ಸಂವಿಧಾನ ಜಾರಿಗೆ ಬಂತು. ಸ್ವಾತಂತ್ರ್ಯ ಪೂರ್ವದಲ್ಲಿ ಎಲ್ಲರಿಗೂ ಸಮಾನ ಮತದಾನದ ಹಕ್ಕು ಇರಲಿಲ್ಲ. ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ಸೇರಿದಂತೆ ಸಮಾನ ಹಕ್ಕುಗಳನ್ನು ನೀಡಿದೆ ಎಂದು ವಿವರಿಸಿದರು.

ಯುವಕರು ವಾಟ್ಸ್‌ಆ್ಯಪ್ ವಿಶ್ವವಿದ್ಯಾಲಯದ ಮಾಹಿತಿಯನ್ನೇ ನಂಬಿ ಚರ್ಚೆ ಮಾಡಬಾರದು. ಪುಸ್ತಕಗಳನ್ನು ಓದಿ, ಇತಿಹಾಸ ಮತ್ತು ಅಂಕಿ-ಅಂಶಗಳನ್ನು ಅಧ್ಯಯನ ಮಾಡಿ ಮಾತನಾಡಬೇಕು. "ಕೆಲವರು ಚಲುವಾದಿಗಳಾಗಿ ಬೆಳೆದು ಮನುವಾದಿಗಳಾಗುತ್ತಿರುವುದು ಆತಂಕಕಾರಿ ಸಂಗತಿ. ಯಾವುದೇ ವಿಚಾರದ ಬಗ್ಗೆ ಆಳವಾದ ಅಧ್ಯಯನ ನಡೆಸಿ ಮಾತನಾಡಿದರೆ ಅದಕ್ಕೆ ಉತ್ತರ ನೀಡಲು ನಾವು ಸಿದ್ಧರಿದ್ದೇವೆ ಎಂದರು.
ಇತಿಹಾಸದ ವಿಚಾರದಲ್ಲಿ ದಾಖಲೆ ಮತ್ತು ಅಧ್ಯಯನ ಮುಖ್ಯ
ಸದನದಲ್ಲಿ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿದೆ ಎಂದು ಬಿಜೆಪಿಗರು ಹೇಳಿದ್ದರು. ಇದರ ತಿರುಗೇಟಿಗಾಗಿ ಅಂಬೇಡ್ಕರ್ ಅವರು ತಮ್ಮ ಸೋಲಿಗೆ ಆರೆಸ್ಸೆಸ್‌ನ ವೀರ ಸಾವರ್ಕರ್ ಕಾರಣ ಎಂದು ಹೇಳಿದ್ದರೆಂಬ ವಿಚಾರವನ್ನು ದಾಖಲೆ ಸಮೇತ ಸದನದಲ್ಲಿ ಪ್ರಸ್ತಾಪಿಸಿದ್ದೇನೆ. ಅದನ್ನು ಸುಳ್ಳು ಎಂದು ಹೇಳಿದವರಿಗೆ ರಾಷ್ಟ್ರೀಯ ದಾಖಲೆ ಸಂಗ್ರಹಾಗಾರದಲ್ಲಿರುವ ಪತ್ರದ ಕುರಿತು ತಿಳಿಸಿದ್ದೇನೆ. ಅದನ್ನ ಸ್ವತಃ ಮೋದಿಯವರೇ ಡಿಜಿಟಲೀಕರಣ ಮಾಡಿದ್ದಾರೆ. ಇತಿಹಾಸದ ವಿಚಾರಗಳನ್ನು ಮಾತನಾಡುವಾಗ ದಾಖಲೆ ಮತ್ತು ಅಧ್ಯಯನ ಮುಖ್ಯ ಎಂದು ಹೇಳಿದರು.

ಬಿಜೆಪಿ ನಾಯಕ ಸುನೀಲ್ ಕುಮಾರ್ ಅವರು 'ಕಾನ್ವೆಂಟ್ ದಲಿತ' ಎಂಬ ರೀತಿಯಲ್ಲಿ ಟೀಕೆ ಮಾಡುತ್ತಾರೆ. ಮತ್ತೊಬ್ಬರು ತಮ್ಮ ತಂದೆ ಒಂದು ಲೋಟ ಹಾಲು ಹೆಚ್ಚಾಗಿ ನೀಡಿದ್ದಾರೆ ಎಂದು ಹೇಳುತ್ತಾರೆ. ನಮ್ಮ ತಂದೆ ನಮಗೆ ಹೆಚ್ಚು ಹಾಲು ನೀಡಿದ್ದರೆ ಇವರಿಗೇಕೆ ಇಷ್ಟೊಂದು ಅಸಮಾಧಾನ ಎಂದು ಪ್ರಶ್ನಿಸಿದರು.

ಕೇಂದ್ರ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಅವರ ಹೆಸರನ್ನು ಉಲ್ಲೇಖಿಸಿದ ರೀತಿಯೂ ಅವಮಾನಕರವಾಗಿತ್ತು. ಇಂತಹ ಮನುವಾದಿ ಮನಸ್ಥಿತಿಗಳು ದೇಶವನ್ನು ಆಳಲು ಮುಂದಾಗಿರುವಾಗ ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಧ್ವನಿ ಎತ್ತುವುದು ಅಗತ್ಯ. ನಾನು ಯಾರಿಗೂ ಹೆದರುವುದಿಲ್ಲ. ಜನರ ಆಶೀರ್ವಾದ ಇರುವವರೆಗೆ ಇಂತಹ ಎಷ್ಟೇ ಸವಾಲುಗಳು ಎದುರಾದರೂ ಒಂದು ಹೆಜ್ಜೆಯೂ ಹಿಂದೆ ಇಡುವುದಿಲ್ಲ ಎಂದು ಹೇಳಿದರು.

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్