2028 ಚುನಾವಣೆ ಟಾರ್ಗೆಟ್: ಕಾಂಗ್ರೆಸ್‌ ಸಂಘಟನೆಗೆ ಬೃಹತ್‌ ಪ್ಲ್ಯಾನ್‌; 112 ಕಾರ್ಯದರ್ಶಿಗಳಿಗೆ 224 ಕ್ಷೇತ್ರಗಳ ಜವಾಬ್ದಾರಿ..

mirrortvkannada.com
Date : 13 November 2026, 9:55 pm Posted By : MIRROR TV KANNADA

2028 ಚುನಾವಣೆ ಟಾರ್ಗೆಟ್: ಕಾಂಗ್ರೆಸ್‌ ಸಂಘಟನೆಗೆ ಬೃಹತ್‌ ಪ್ಲ್ಯಾನ್‌; 112 ಕಾರ್ಯದರ್ಶಿಗಳಿಗೆ 224 ಕ್ಷೇತ್ರಗಳ ಜವಾಬ್ದಾರಿ..

ಕರ್ನಾಟಕದಲ್ಲಿ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸಲು ಕಾಂಗ್ರೆಸ್ಹೊಸ ಕಾರ್ಯತಂತ್ರ ರೂಪಿಸಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಿರುವ ಪಕ್ಷ, 112 ಕಾರ್ಯದರ್ಶಿಗಳು ಹಾಗೂ 112 ಕೋಆರ್ಡಿನೇಟರ್‌ಗಳನ್ನು ನಿಯೋಜಿಸಲು ಮುಂದಾಗಿದೆ. ಪ್ರತಿ ಕಾರ್ಯದರ್ಶಿಗೆ ಎರಡು ಕ್ಷೇತ್ರಗಳ ಜವಾಬ್ದಾರಿ ನೀಡಲಾಗಿದ್ದು, ಮುಂದಿನ ಒಂದೂವರೆ ವರ್ಷ ಕ್ಷೇತ್ರಗಳಲ್ಲಿ ನಿರಂತರವಾಗಿ ಸಂಘಟನಾ ಚಟುವಟಿಕೆ ನಡೆಸುವಂತೆ ಸೂಚಿಸಲಾಗಿದೆ. ಈ ಹೊಸ ಯೋಜನೆಯ ಬಗ್ಗೆ ಬಿ.ಕೆ. ಹರಿಪ್ರಸಾದ್‌ ನೀಡಿರುವ ಮಾಹಿತಿ ಕುತೂಹಲ ಮೂಡಿಸಿದೆ.
ಈ ಕುರಿತು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್‌ ಮಾತನಾಡಿ, ಒಟ್ಟು 112 ಕಾರ್ಯದರ್ಶಿಗಳಿಗೆ ತಲಾ ಎರಡು ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿ ನೀಡಲಾಗುತ್ತದೆ. ಪ್ರತಿಯೊಬ್ಬ ಕಾರ್ಯದರ್ಶಿಯೂ ತಮಗೆ ವಹಿಸಿದ ಎರಡು ಕ್ಷೇತ್ರಗಳಲ್ಲಿ ಒಂದೂವರೆ ವರ್ಷಗಳ ಕಾಲ ನಿರಂತರವಾಗಿ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇವರ ಜೊತೆಗೆ 112 ಕೋಆರ್ಡಿನೇಟರ್‌ಗಳೂ ಕಾರ್ಯನಿರ್ವಹಿಸಲಿದ್ದಾರೆ. ಕಾರ್ಯದರ್ಶಿಗಳು ಮತ್ತು ಕೋಆರ್ಡಿನೇಟರ್‌ಗಳ ಮೂಲಕ ತಳಮಟ್ಟದಿಂದ ಪಕ್ಷದ ಸಂಘಟನೆಯನ್ನು ಬಲಪಡಿಸುವುದು ನಮ್ಮ ಗುರಿಯಾಗಿದೆ ಎಂದರು.

ಕಾರ್ಯದರ್ಶಿಗಳ ನೇಮಕಾತಿಗೆ ಪಾರದರ್ಶಕ ವಿಧಾನ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಸಂಘಟನೆಯನ್ನು ಪುನರ್‌ರಚಿಸಿ, ಬಲಪಡಿಸಲು ಹೊಸ ರೀತಿಯ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಾದರಿಯಲ್ಲೇ ಕರ್ನಾಟಕದಲ್ಲಿಯೂ ಕೆಪಿಸಿಸಿ ಕಾರ್ಯದರ್ಶಿಗಳ ನೇಮಕಾತಿಗೆ ಪಾರದರ್ಶಕ ವಿಧಾನ ಅನುಸರಿಸಲಾಗಿದೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ದೇಶಾದ್ಯಂತ ಸುಮಾರು 800 ಮಂದಿಯನ್ನು ಆಹ್ವಾನಿಸಿ, ಕಾರ್ಯದರ್ಶಿ ಹುದ್ದೆಗಳಿಗೆ ಸಂದರ್ಶನ ನಡೆಸಿ ಈಗಾಗಲೇ ಪಟ್ಟಿ ಸಿದ್ಧಪಡಿಸಲಾಗಿದೆ. ಇದೇ ಮಾದರಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿಗಳ ನೇಮಕಾತಿಗೆ ಬಹಿರಂಗವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ರಾಜ್ಯದಾದ್ಯಂತ ಒಟ್ಟು 920 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ ಬೆಂಗಳೂರಿನಿಂದಲೇ 308 ಅರ್ಜಿಗಳು ಸಲ್ಲಿಕೆಯಾಗಿರುವುದು ವಿಶೇಷ.

ಎಲ್ಲಾ ಅರ್ಜಿದಾರರನ್ನು ಸಂದರ್ಶನ ಮಾಡುವ ಜವಾಬ್ದಾರಿಯನ್ನು ಹಿರಿಯ ನಾಯಕರ ನೇತೃತ್ವದ ಸಮಿತಿಗೆ ವಹಿಸಲಾಗಿತ್ತು. ಈ ಸಂದರ್ಶನ ಸಮಿತಿಯಲ್ಲಿ ಡಾ. ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್, ಬಿ.ಎಲ್. ಶಂಕರ್, ಎಚ್.ಕೆ. ಪಾಟೀಲ್, ತುಕಾರಾಂ, ಲೋಕಸಭಾ ಸದಸ್ಯರು, ನಜೀರ್ ಅಹಮದ್ ಹಾಗೂ ರಾಣಿ ಸತೀಶ್ ಸೇರಿದಂತೆ ಹಿರಿಯ ನಾಯಕರು ಇದ್ದರು.
112 ಕೆಪಿಸಿಸಿ ಕಾರ್ಯದರ್ಶಿಗಳನ್ನು ಆಯ್ಕೆ
ಸಂದರ್ಶನ ಪ್ರಕ್ರಿಯೆಯ ಮೂಲಕ ಒಟ್ಟು 112 ಕೆಪಿಸಿಸಿ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ 112 ಕಾರ್ಯದರ್ಶಿಗಳಿಗೆ ತಲಾ ಎರಡು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ನೀಡಲಾಗುತ್ತದೆ. ಈ ಕಾರ್ಯದರ್ಶಿಗಳು ತಮಗೆ ವಹಿಸಿರುವ ಕ್ಷೇತ್ರಗಳಲ್ಲಿ ಒಂದೂವರೆ ವರ್ಷಗಳ ಕಾಲ ಪೂರ್ಣ ಪ್ರಮಾಣದಲ್ಲಿ ಸಂಘಟನಾ ಕೆಲಸ ಮಾಡಬೇಕು. 112 ಕಾರ್ಯದರ್ಶಿಗಳ ಜೊತೆಗೆ 112 ಕೋಆರ್ಡಿನೇಟರ್‌ಗಳನ್ನೂ ನೇಮಕ ಮಾಡಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿಯೂ ವಿವಿಧ ಮುಖಂಡರನ್ನು ನೇಮಕ ಮಾಡುವ ಉದ್ದೇಶದಿಂದ ಸಂದರ್ಶನ ಪ್ರಕ್ರಿಯೆ ಮುಂದುವರಿಸಲಾಗಿದೆ.‌
ಸಮಾನ ಅವಕಾಶ ಕಲ್ಪಿಸುವ ಹೊಸ ಪ್ರಯತ್ನ
ಇಂತಹ ಬಹಿರಂಗ ಸಂದರ್ಶನ ಮತ್ತು ಅರ್ಜಿ ಆಹ್ವಾನ ಪ್ರಕ್ರಿಯೆಯನ್ನು ಕಾಂಗ್ರೆಸ್ ಪಕ್ಷದಲ್ಲಿ ಮೊದಲ ಬಾರಿಗೆ ಅನುಸರಿಸಲಾಗುತ್ತಿದೆ. ಅರ್ಜಿಗಳ ಸಂಖ್ಯೆಯನ್ನು ಗಮನಿಸಿದಾಗ ಪಕ್ಷದ ಕಾರ್ಯಕರ್ತರಲ್ಲಿ ಸಂಘಟನಾ ಕೆಲಸ ಮಾಡಲು ಅಪಾರ ಉತ್ಸಾಹ ಮತ್ತು ಆಸಕ್ತಿ ಇರುವುದು ಸ್ಪಷ್ಟವಾಗಿದೆ. ರಾಜಕೀಯ ಪಕ್ಷದ ಸಂಘಟನೆ ಮಾಡುವಾಗ ಹಲವು ವಿಧಾನಗಳನ್ನು ಅನುಸರಿಸಲಾಗುತ್ತದೆ. ಆದರೆ ಈ ಬಾರಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಹೊಸ ಪ್ರಯತ್ನ ಮಾಡಲಾಗಿದೆ.

ಯಾವುದೇ ಗುಂಪುಗಾರಿಕೆ, ವ್ಯಕ್ತಿಗತ ಇಷ್ಟಾನಿಷ್ಟಗಳು ಅಥವಾ ಲೈಕ್ಸ್ ಅಂಡ್ ಡಿಸ್ಲೈಕ್ಸ್‌ಗಳಿಗೆ ಅವಕಾಶ ನೀಡದೆ, ನಿಜವಾಗಿ ಕೆಲಸ ಮಾಡುವ ಸಾಮರ್ಥ್ಯ ಇರುವವರನ್ನು ಆಯ್ಕೆ ಮಾಡುವುದು ಈ ಪ್ರಕ್ರಿಯೆಯ ಉದ್ದೇಶವಾಗಿದೆ. ಈ ಹೊಸ ನೇಮಕಾತಿ ವಿಧಾನದಿಂದ ಪಕ್ಷದ ಸಂಘಟನೆ ಬಲಗೊಳ್ಳಲಿದೆ ಎಂಬ ವಿಶ್ವಾಸವಿದೆ. ಕಲಬುರಗಿ ವಿಭಾಗದ ಸಂದರ್ಶನ ಪ್ರಕ್ರಿಯೆ ನಡೆಸಲಾಗುವುದು. ಕಲಬುರಗಿ ವಿಭಾಗದ ವ್ಯಾಪ್ತಿಗೆ ಬರುವ ಬೀದರ್, ರಾಯಚೂರು, ಕಲಬುರಗಿ, ಬಳ್ಳಾರಿ, ಬಳ್ಳಾರಿ ಗ್ರಾಮಾಂತರ, ವಿಜಯನಗರ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಿಂದ ಒಟ್ಟು ಸುಮಾರು 111 ಅರ್ಜಿಗಳು ಸಲ್ಲಿಕೆಯಾಗಿವೆ.
ಅಧ್ಯಕ್ಷರ ನೇಮಕ; ವೀಕ್ಷಕರ ಅಭಿಪ್ರಾಯ
ಕಲಬುರಗಿ ವಿಭಾಗದ ಎಲ್ಲಾ ಅರ್ಜಿದಾರರ ಸಂದರ್ಶನ ನಡೆಸಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಈ ಪ್ರಕ್ರಿಯೆಯ ಉದ್ದೇಶ ಮತ್ತು ವಿವರಗಳನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ತಿಳಿಸುವ ಉದ್ದೇಶದಿಂದ ಈ ಮಾಹಿತಿ ಹಂಚಿಕೊಳ್ಳಲಾಗಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ಸಂಘಟನಾ ಪುನರ್‌ರಚನೆಯ ಭಾಗವಾಗಿ ಈಗಾಗಲೇ ಎಲ್ಲಾ ವೀಕ್ಷಕರು (Observers) ಬ್ಲಾಕ್ ಮಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರತಿ ಬ್ಲಾಕ್‌ಗೆ ಯಾರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬಹುದು ಎಂಬ ಕುರಿತು ವೀಕ್ಷಕರು ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.

ಈ ಪ್ರಕ್ರಿಯೆಯನ್ನು ಅಕ್ಟೋಬರ್ 31ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು. ಇದೀಗ ನವೆಂಬರ್ ತಿಂಗಳವರೆಗೆ ಅವಧಿ ವಿಸ್ತರಿಸಲಾಗಿದೆ. ಆದಷ್ಟು ಬೇಗ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು. ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳ ಪಟ್ಟಿಯನ್ನೂ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಬಿ ಕೆ ಹರಿಪ್ರಸಾದ್‌ ಹೇಳಿದರು.

⬇ DOWNLOAD
×

Editor Reporter

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్