“ಕಲಾವಿದರ ಬದುಕಿಗೆ ಬಣ್ಣ ತುಂಬಬೇಕಾದ ಸರ್ಕಾರವೇ ಅವರ ಬದುಕನ್ನು ಕತ್ತಲೆಗೆ ತಳ್ಳಿದೆ.!’

mirrortvkannada.com
Date : 19 November 2026, 10:54 pm Posted By : MIRROR TV KANNADA

“ಕಲಾವಿದರ ಬದುಕಿಗೆ ಬಣ್ಣ ತುಂಬಬೇಕಾದ ಸರ್ಕಾರವೇ ಅವರ ಬದುಕನ್ನು ಕತ್ತಲೆಗೆ ತಳ್ಳಿದೆ.!’

ಕಲಾವಿದರ ಬದುಕಿಗೆ ಬಣ್ಣ ತುಂಬಬೇಕಾದ ಸರ್ಕಾರವೇ ಅವರ ಬದುಕನ್ನು ಕತ್ತಲೆಗೆ ತಳ್ಳಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸನಲ್ಲಿ ಟ್ವೀಟ್ ಮಾಡಿರುವ ಅವರು, ಕಲಾವಿದರ ಬದುಕಿಗೆ ಬಣ್ಣ ತುಂಬಬೇಕಾದ ಸರ್ಕಾರವೇ ಅವರ ಬದುಕನ್ನು ಕತ್ತಲೆಗೆ ತಳ್ಳಿದೆ! ಕಳೆದ 7 ತಿಂಗಳಿಂದ ಗೌರವಧನವಿಲ್ಲದೆ ಪರದಾಡುತ್ತಿರುವ 17 ಮಂದಿ ಅತಿಥಿ ಉಪನ್ಯಾಸಕರು! ಇದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವಲ್ಲದೆ ಮತ್ತೇನು, ಡಿ.ಕೆ. ಶಿವಕುಮಾರ್ ಅವರೇ ಎಂದು ಪ್ರಶ್ನೆ ಮಾಡಿದ್ದಾರೆ.
ಮೈಸೂರಿನ ಪ್ರತಿಷ್ಠಿತ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ)ದಲ್ಲಿ ಕಳೆದ 15-20 ವರ್ಷಗಳಿಂದ ತಮ್ಮ ಬದುಕನ್ನೇ ಮುಡಿಪಾಗಿಟ್ಟು ವಿದ್ಯಾರ್ಥಿಗಳಿಗೆ ವಿದ್ಯೆ ಧಾರೆ ಎರೆಯುತ್ತಿರುವ 17 ಮಂದಿ ಅತಿಥಿ ಉಪನ್ಯಾಸಕರಿಗೆ ಕಳೆದ ಏಳು ತಿಂಗಳಿಂದ ಗೌರವಧನ ಪಾವತಿಸಿಲ್ಲ. ತಿಂಗಳುಗಟ್ಟಲೆ ದುಡಿದರೂ ಸಂಬಳವಿಲ್ಲದೆ ಬದುಕು ಸಾಗಿಸುವುದೇ ದುಸ್ತರವಾಗಿರುವ ಈ ಶಿಕ್ಷಕರ ಗೋಳು ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಕೇಳಿಸುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಪೇಂಟಿಂಗ್, ಶಿಲ್ಪಕಲೆ, ಗ್ರಾಫಿಕ್ಸ್, ಮುದ್ರಣ, ಅನ್ವಯ ಕಲೆ, ಕಲಾ ಇತಿಹಾಸ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಉಪನ್ಯಾಸಕರಿಗೆ ತಮ್ಮ ಕುಟುಂಬದ ಭವಿಷ್ಯವನ್ನೇ ಭದ್ರಪಡಿಸಿಕೊಳ್ಳಲಾಗದ ಪರಿಸ್ಥಿತಿಯನ್ನು ಸೃಷ್ಟಿಸಿರುವುದು ನಾಚಿಕೆಗೇಡಿನ ಸಂಗತಿ.

ಇದು ಕೇವಲ ಏಳು ತಿಂಗಳ ಗೌರವಧನದ ಸಮಸ್ಯೆಯಲ್ಲ. ಕಳೆದ 15 ವರ್ಷಗಳಿಂದ ಕಾಯಂ ನೇಮಕಾತಿಯನ್ನೇ ಮಾಡದೆ, ಕೇವಲ ಐವರು ಕಾಯಂ ಸಿಬ್ಬಂದಿಯ ಬಲದಲ್ಲಿ ಇಂತಹ ಪ್ರತಿಷ್ಠಿತ ಸಂಸ್ಥೆಯನ್ನು ನಡೆಸುತ್ತಿರುವುದು ನಿಮ್ಮ ಸರ್ಕಾರದ ಶಿಕ್ಷಣ ಮತ್ತು ಕಲಾ ಕ್ಷೇತ್ರದ ಬಗೆಗಿನ ಬದ್ಧತೆಯನ್ನು ಪ್ರಶ್ನಿಸುವಂತಿದೆ. ಮುಂದಿನ ವರ್ಷ ಇಬ್ಬರು ಸಿಬ್ಬಂದಿ ನಿವೃತ್ತರಾದರೆ ಸಂಸ್ಥೆಯ ಸ್ಥಿತಿ ಏನಾಗಬಹುದು ಎಂಬ ಕನಿಷ್ಠ ಚಿಂತನೆಯೂ ಸರ್ಕಾರಕ್ಕಿಲ್ಲವೇ?

⬇ DOWNLOAD
×

Editor Reporter

Share ePaper Clip

Preparing image...

Share

Facebook
Twitter 
WhatsApp
Telegram
Email  

Share

 మరిన్ని వార్తలు

Share :

 నోటిఫికేషన్స్