ಐಫೋನ್ ಮೊಬೈಲ್‌ಗಳು ಎಂದರೆನೇ ಹಾಗೆ, ಅದರ ಮೇಲೆ ಜನರಿಗೆ ಇನ್ನಿಲ್ಲದ ಕ್ರೇಜ್. ಮೊದಲಿನಿಂದಲೇ ತನ್ನದೇ ಆದ ಫೀಚರ್, ಉತ್ತಮ ಸೆಕ್ಯೂರಿಟಿ ಹಾಗೂ ಬಳಕೆದಾರ ಸ್ನೇಹಿ ಆಗಿರುವ ಐಫೋನ್‌ನ ಸರಣಿ 'ಐಫೋನ್ 18 ಪ್ರೊ' (iPhone 18 Pro) ಮತ್ತು 'ಐಫೋನ್ 18 ಪ್ರೊ ಮ್ಯಾಕ್ಸ್' (iPhone 18 Pro Max)ಮೊಬೈಲ್ ಗಳ ಮಾರಾಟ ಭಾರತದಲ್ಲಿ ಇಂದು ಸೆಪ್ಟೆಂಬರ್ 18ರಿಂದ ಆರಂಭವಾಗಿದೆ. ವಿಶ್ವದಾದ್ಯಂತ ಕ್ರೇಜ್ ಸೃಷ್ಟಿಸಿರುವ ಈ ಆಪಲ್ ಐಫೋನ್ 18ಸರಣಿಗೆ (Apple Iphone 18 series mobile) ಭಾರತೀಯರು ಫೀದಾ ಆಗಿದ್ದಾರೆ. ಬೆಂಗಳೂರು, ನೊಯ್ಡಾ, ದೆಹಲಿ, ಮುಂಬೈ ಸೇರಿದಂತೆ ದೇಶದಲ್ಲಿ ಭರ್ಜರಿ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು, ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಖರೀದಿಸಿದ್ದಾರೆ.
ದುಬಾರಿ ಬೆಲೆಯದ್ದಾದರೂ ಸಹಿತ ಇಎಂಐ ಮೂಲಕವಾದ್ದರೂ ಖರೀದಿಸಬೇಕು ಎನ್ನುವಷ್ಟು ಕ್ರೇಜ್ ಸೃಷ್ಟಿಸಿರುವ ಮೊಬೈಲ್ ಎಂದರೆ ಅದು ಐಫೋನ್. ಈಗಾಗಲೇ ಐಫೋನ್ 18 ಮಾಡೆಲ್‌ಗಳನ್ನು ಬುಕ್ ಮಾಡಿದ್ದ ಗ್ರಾಹಕರಿಗಾಗಿ ದೇಶದ ವಿವಿಧ ಆಪಲ್ ಔಟ್‌ಲೆಟ್‌ಗಳು ಇಂದು ಬೆಳಗ್ಗೆ 8 ಗಂಟೆಯಿಂದಲೇ ಕಾರ್ಯಾರಂಭಗೊಂಡಿವೆ. ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಬೆಳಗ್ಗೆ 5 ಗಂಟೆಯಿಂದಲೇ ಗ್ರಾಹಕರು ಕ್ಯೂ ನಿಂತು, ಗಂಟೆಗಳ ವರೆಗೆ ಕಾದು ಐಫೋನ್ ಖರೀದಿಸಿದ್ದು ಕಂಡು ಬಂತು. ಗ್ರಾಹಕರು ಕ್ಯೂ ನಿಂತ ವಿಡಿಯೋ, ಐಫೋನ್ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ
ಇನ್ನೂ ಕರ್ನಾಟಕ ರಾಜಧಾನಿ ಬೆಂಗಳೂರಿಗೆ ಹರಿಯಾಣ, ದೆಹಲಿ ಮತ್ತು ಮುಂಬೈನಿಂದ ಜನರು ಐಫೋನ್ ಹೊಸ ಫೋನ್‌ಗಳನ್ನು ಖರೀದಿಸಲು ಆಗಮಿಸಿದ್ದಾರೆ. ಅಷ್ಟರ ಮಟ್ಟಿಗಿನ ಕ್ರೇಜ್ ಸೃಷ್ಟಿಯಾಗಿದೆ.
ಈ ಹಿಂದಿನ ಒಂದಷ್ಟು ಐಫೋನ್ ಸರಣಿ ಮೊಬೈಲ್‌ಗಳಿಗಿಂತ ಆಕರ್ಷಕವಾಗಿ, ವಿಶೇಷ ಫೀಚರ್ ಹೊಂದಿರುವ, ಮೊಬೈಲ್ ಪಡೆಯಲು ಜನರು ಕಾತರರಾಗಿದ್ದರು. ಅವರ ಕಾತರಿಕೆ ಇಂದು ಶುಕ್ರವಾರ ತೆರೆ ಬಿದ್ದಿದೆ. ಬೆಂಗಳೂರಿನ 'ಮಾಲ್ ಆಫ್ ಏಷ್ಯಾ'ದಲ್ಲಿರುವ 'ಇಮ್ಯಾಜಿನ್ ಆಪಲ್ ಪ್ರೀಮಿಯಂ ರೀಸೆಲ್ಲರ್' ಮಳಿಗೆಯ ಹೊರಗೆ ಉದ್ದನೆಯ ಸಾಲಿನಲ್ಲಿ ಗ್ರಾಹಕರು ನಿಂತುಕೊಂಡಿದ್ದರು.
ಬೆಂಗಳೂರು ಮಾತ್ರವಲ್ಲದೇ, ಉತ್ತರ ಪ್ರದೇಶದ ನೋಯ್ಡಾ, ದೆಹಲಿ, ಮುಂಬೈ ಮಹಾನಗರಗಳಲ್ಲೂ ಹೊಸ ಐಫೋನ್ ಸರಣಿ ಕೊಳ್ಳಲು ಗ್ರಾಹಕರು ಉತ್ಸುಕರಾಗಿದ್ದಾರೆ. ಕೆಲವು ಶಾಪ್‌ಗಳ ಮುಂದೆ ತಾವು ಬುಕ್ ಮಾಡಿದ್ದ ಮೊಬೈಲ್ ಖರೀದಿಗೆ ಮುಗಿಬಿದ್ದದ್ದು ಕಂಡು ಬಂತು.
ಗ್ರಾಹಕರು ಹೇಳಿದ್ದೇನು?
ಕ್ಯೂನಲ್ಲಿ ನಿಂತ ಗ್ರಾಹಕರೊಬ್ಬರು ''ಈ ಬಾರಿಯ ಅಪ್ಡೇಟೆಡ್ ಐಫೋನ್ ಸರಣಿ 18 ಮಾಡೆಲ್‌ಗಳಲ್ಲಿ ಕ್ಯಾಮೆರಾ ಮತ್ತು ಪ್ರೊಸೆಸರ್‌ನಲ್ಲಿ ಸುಧಾರಣೆಗಳು ಆಗಿವೆ. ಅದಕ್ಕಾಗಿಯೇ ನಾನು ನನ್ನ ಫೋನ್ ಅನ್ನು ಅಪ್‌ಗ್ರೇಡ್ ಮಾಡುತ್ತಿದ್ದೇನೆ. ನನ್ನ ಬಳಿ 'ಐಫೋನ್ 17 ಪ್ರೊ' ಇದೆ.ನಾನೀಗ 'ಐಫೋನ್ 18 ಪ್ರೊ'' ಅನ್ನು ಖರೀದಿಸಲು ಉತ್ಸುಕನಾಗಿದ್ದೇನೆ' ಎಂದು ತಿಳಿಸಿದ್ದಾರೆ.
ಬೆಂಗಳೂರು: ಬೆಳಿಗ್ಗೆ 5ರಿಂದಲೇ ಕ್ಯೂನಲ್ಲಿ ನಿಂತಿದ್ದೇನೆ!
ಬೆಂಗಳೂರಿನ ಮಾಲ್ ಆಫ್ ಏಷಿಯಾದಲ್ಲಿ ಆಫಲ್ ಸ್ಟೋರ್ ಮುಂದೆ ನಿಂತ ರಾಹುಲ್ ಎಂಬ ಗ್ರಾಹಕರು ಐಫೋನ್ ಕ್ರೇಜ್ ಕುರಿತು ಮಾತನಾಡಿದ್ದಾರೆ. "ನಾನು ಬೆಳಿಗ್ಗೆ 5 ಗಂಟೆಯಿಂದಲೇ ಇಲ್ಲಿ ಕಾಯುತ್ತಿದ್ದೇನೆ. ಇಲ್ಲಿ ದೊಡ್ಡ ಸರತಿ ಸಾಲು ಇತ್ತು. ಹರಿಯಾಣ, ದೆಹಲಿ ಮತ್ತು ಮುಂಬೈನಿಂದ ಜನರು ಕೇವಲ ಐಫೋನ್ ಖರೀದಿಸಲು ಬೆಂಗಳೂರಿಗೆ ಆಗಮಿಸಿದ್ದಾರೆ. ನಾನು ಬಹಳ ವರ್ಷಗಳಿಂದ ಐಫೋನ್‌ಗಳನ್ನು ಖರೀದಿಸುಸಿ ಬಳಸುತ್ತಿದ್ದೇನೆ. ನನ್ನ ಮೊದಲ ಐಫೋನ್ 'ಐಫೋನ್ 7' ಅಲ್ಲಿಂದ ಇಲ್ಲಿಯವರೆಗೆ ಐಫೋನ್ ಬಳಕೆ ಮಾಡುತ್ತಿದ್ದೇನೆ. ನಮಗೆಲ್ಲ ಐಫೋನ್ ಹೊಸ ಸರಣಿ ಬಿಡುಗಡೆಯು ಒಂದು ಹಬ್ಬದಂತೆ ಭಾಸವಾಗುತ್ತದೆ. ಪ್ರತಿ ವರ್ಷವೂ ನಾನು ಐಫೋನ್ ಖರೀದಿಸಲು ಪ್ರಯತ್ನಿಸುತ್ತೇನೆ' ಎಂದು ಹೇಳುವ ಮೂಲಕ ಅವರು ಎಲ್ಲರ ಹುಬ್ಬೆರುವಂತೆ ಮಾಡಿದ್ದಾರೆ.
ಮೊದಲ ಫೋಲ್ಡೇಬಲ್ 'ಐಫೋನ್ ಡ್ಯುಯೊ'
ಆ್ಯಪಲ್‌ನ 18 ಪ್ರೊ ಶ್ರೇಣಿಯ ಐಫೋನ್ ಮಾತ್ರವಲ್ಲದೇ, ವಾಚ್ ಸಿರೀಸ್ 12, ಏರ್ ಪಾಡ್ಸ್ 5, ಡಿಜಿಟಲ್ ಹಾಗೂ ಗೃಹೋಪಕರಣಗಳನ್ನು ಬಿಡುಗಡೆ ಮಾಡಿದೆ.ಇನ್ನೊಂದೆಡೆ 'ಐಫೋನ್ ಡ್ಯುಯೊ' (iPhone Duo) ಆಪಲ್‌ನ ಮೊದಲ ಫೋಲ್ಡೋಬಲ್ (ಮಡಚಬಹುದಾದ) ಆಕರ್ಷಕ ಮೊಬೈಲ್ ಅನ್ನು ಇದೇ ಸೆಪ್ಟೆಂಬರ್ 9ರಂದು ರಿಲೀಸ್ ಆಗಿದೆ. ಇದು ಐಫೋನ್ 18 ಸರಣಿಯೊಂದಿಗೆ ರಿಲೀಸ್ ಆಗಿದೆ. ಸದ್ಯ ಐಫೋನ್ ಮೊಬೈಲ್‌ಗಳ ವಿಶೇಷತೆ, ಕ್ಯಾಮೆರಾ, ಫೀಚರ್, ಬಣ್ಣ, ಖರೀದಿ ಭರಾಟೆಯು ಆನ್‌ಲೈನ್‌ನಲ್ಲಿ ಟ್ರೆಂಡ್ ಆಗುತ್ತಿದೆ.








