ಬಾಳೆಹೊನ್ನೂರು ರಂಭಾಪುರಿ ಮಠಕ್ಕೆ ಭೇಟಿ ನೀಡಿದ್ದ ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಅವರು ಮಂಗಳಾರತಿಗೆ ಕಾಣಿಕೆ ಹಾಕುವಾಗ 500ರ ನೋಟುಗಳು ನೆಲಕ್ಕೆ ಬಿದ್ದಿತು. ಕೊನೆಗೆ ಈ ಹಣ ನನ್ನದಲ್ಲ ಎಂದು ಎಲ್ಲವನ್ನೂ ಸಿಎಂ ಆರತಿ ತಟ್ಟೆ ಮತ್ತು ಹುಂಡಿಗೆ ಹಾಕಿದ ಪ್ರಸಂಗ ನಡೆಯಿತು.
ಸಿಎಂ ಆದ ಬಳಿಕ ಮೊದಲ ಬಾರಿಗೆ ಕಾಫಿನಾಡು ಮತ್ತು ರಂಭಾಪುರಿ ಮಠಕ್ಕೆ (Rambhapuri Matha) ಸಿಎಂ ಡಿಕೆಶಿ ಇಂದು ಭೇಟಿ ನೀಡಿದರು. ಕ್ಷೇತ್ರನಾಥ ವೀರಭದ್ರಸ್ವಾಮಿ ದರ್ಶನ ಪಡೆದರು. ರಂಭಾಪುರಿ ಮಠದಲ್ಲಿ ಮಂಗಳಾರತಿ ಕಾಣಿಕೆ ಹಾಕಲು ಕಂತೆಯಿಂದ ಹಣ ಎಳೆಯುವಾಗ 500 ರೂ. ಮುಖಬೆಲೆಯ ನೋಟುಗಳು ನೆಲಕ್ಕೆ ಬಿದ್ದವು. ಎಲ್ಲಾ ನೋಟುಗಳನ್ನ ಆಯ್ದುಕೊಂಡ ಸಿಎಂ, ಎಲ್ಲವನ್ನೂ ಆರತಿ ತಟ್ಟೆ ಮತ್ತು ಕಾಣಿಕೆ ಹುಂಡಿಗೆ ಹಾಕಿದರು. ರಂಭಾಪುರಿ ಮಠದಲ್ಲಿ ಶ್ರೀಗಳಿಂದ ಡಿಕೆಶಿಗೆ ಶಾಲು ಹೊದಿಸಿ ಆಶೀರ್ವಾದ ನೀಡಲಾಯಿತು.








